
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಅದ್ಯಾವ್ ರೇಂಜ್ಗೆ ಸದ್ದು ಮಾಡಿದೆ ಅನ್ನೋದು ಗೊತ್ತೇ ಇದೆ. ಅದ್ರಲ್ಲೂ ಈ ಟೀಸರ್ ಬಂದ ಮೇಲೆ ಅದರೊಳಗಿರೋ ಹಸಿಬಿಸಿ ದೃಶ್ಯದ ಬಗ್ಗೆ ಭಾರಿ ಚರ್ಚೆಯಾಗಿತ್ತು. ಆ ಸೀನ್ ನಲ್ಲಿರೋದು ನಟಾಲಿಯಾ ಬರ್ನ್ ಅನ್ನೋ ನಟಿ ಅಂದುಕೊಂಡ ರಾಕಿ ಫ್ಯಾನ್ಸ್ ಆಕೆಗೆ ಫಾಲೋವರ್ಸ್ ಆಗಿದ್ರು. ಈಗ ಆ ಚೆಲುವೆ ಟಾಕ್ಸಿಕ್ ಬಗ್ಗೆ ಒಂದು ಗುಟ್ಟು ಹೇಳಿದ್ದಾರೆ.
ಯೆಸ್ ರಾಕಿಂಗ್ ಯಶ್ ನಟನೆಯ ಟಾಕ್ಸಿಕ್ ಮೂವಿ ಟೀಸರ್ 2 ವಾರಗಳ ಹಿಂದೆ ರಿಲೀಸ್ ಆಗಿತ್ತು. ಟೀಸರ್ ನಲ್ಲಿ ರಾಯನ ಇಂಟ್ರೋಡಕ್ಷನ್ ನೋಡಿದವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ಬರೀ ಯುಟ್ಯೂಬ್ನಲ್ಲೇ ಟಾಕ್ಸಿಕ್ ಟೀಸರ್ 95 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಜೊತೆಗೆ ಈ ಟಾಕ್ಸಿಕ್ ಅಡ್ಡಾದಲ್ಲಿರೋರಿಗೆಲ್ಲಾ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.
ಹೌದು ಟಾಕ್ಸಿಕ್ ಟೀಸರ್ನಲ್ಲಿ ಯಶ್ ಜೊತೆ ಹಸಿ ಬಿಸಿಯಾಗಿ ಕಾಣಿಸಿಕೊಂಡ ಆ ಚೆಲುವೆ ಯಾರು ಅಂತ ಫ್ಯಾನ್ಸ್ ಹುಡುಕಾಟಕ್ಕೆ ಇಳಿದಿದ್ರು. ಅದು ನಟಾಲಿಯಾ ಬರ್ನ್ ಅಂದುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಫಾಲೋ ಮಾಡೋದಕ್ಕೆ ಶುರುಮಾಡಿದ್ರು. ಕೊನೆಗೆ ರಾಯನ ಜೊತೆ ಕಾರಿನಲ್ಲಿ ಇದ್ದ ಚೆಲುವೆ ಯಾರು ಎನ್ನುವ ಬಗ್ಗೆ ಸ್ವತಃ ನಿರ್ದೇಶಕಿ ಗೀತು ಮೋಹನ್ ದಾಸ್ ಸ್ಪಷ್ಟನೆ ನೀಡಿದ್ದರು. ಆಕೆ ನಟಾಲಿಯಾ ಬರ್ನ್ ಅಲ್ಲ ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್ಬಾಚ್ ಅನ್ನೋ ಅಧಿಕೃತ ಮಾಹಿತಿ ಹಂಚಿಕೊಂಡಿದ್ರು. ಒಟ್ಟಾರೆ ಕೆಲವರು ಕನ್ಫ್ಯೂಸ್ ಮಾಡಿಕೊಂಡ ಕಾರಣಕ್ಕೆ ನಟಾಲಿಯಾ ಬರ್ನ್ ಅವರಿಗೆ ಒಳ್ಳೆ ಪ್ರಚಾರ ಸಿಕ್ಕಿತ್ತು. ಇದೀಗ ನಟಾಲಿಯಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಯಶ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಹೌದು, ನಟಾಲಿಯಾ ಬರ್ನ್ ಟಾಕ್ಸಿಕ್ನಲ್ಲಿ ನಟಿಸಿದ್ದಾರೆ. ಆದ್ರೆ ರಾಯನ ಜೊತೆಗೆ ರೊಮ್ಯಾನ್ಸ್ ಮಾಡಿಲ್ಲ, ಬದಲಾಗಿ ಆ್ಯಕ್ಷನ್ ಸೀನ್ ಮಾಡಿದ್ದಾರೆ. ಕೆಲವು ಫ್ಯಾನ್ಸ್ ಕ್ರಿಯೇಟ್ ಮಾಡಿರೋ ಪೋಸ್ಟರ್ಗಳನ್ನ ಹಂಚಿಕೊಂಡಿರೋ ನಟಾಲಿಯಾ ಅಸಲಿ ಮ್ಯಾಟರ್ ಹೇಳಿದ್ದಾರೆ.
"ಟಾಕ್ಸಿಕ್ ಚಿತ್ರಕ್ಕಾಗಿ ಯಾರೆಲ್ಲಾ ಕಾಯ್ತಿದ್ದೀರಾ? ಯಶ್ ಜೊತೆ ಕೆಲಸ ಮಾಡಿದ್ದು ಅದ್ಭುತ ಮತ್ತು ಒಳ್ಳೆ ಅನುಭವ. ಗೀತಾ ಮೋಹನ್ ದಾಸ್ ಸೊಗಸಾಗಿ ನಿರ್ದೇಶಿಸಿದ್ದಾರೆ. ಕ್ರೇಜಿ ಆಕ್ಷನ್ ದೃಶ್ಯಗಳಲ್ಲಿ ನಟಿಸುವುದು. ಜೆಜೆ ಪೆರ್ರಿ ನಿರ್ದೇಶನದ ಆ್ಯಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದು ಖುಷಿ ಕೊಟ್ಟಿದೆ. ಯಶ್ ಅಭಿಮಾನಿಗಳು ಸೊಗಸಾದ ಫ್ಯಾನ್ಮೇಡ್ ಪೋಸ್ಟ್ ಮಾಡಿದ್ದಾರೆ. ಧನ್ಯವಾದಗಳು"
ಹೌದು ಟಾಕ್ಸಿಕ್ನಲ್ಲಿ ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸಿದ್ದೀನಿ ಅಂತ ಬರ್ನ್ ಹೇಳಿಕೊಂಡಿದ್ದಾರೆ. ಟಾಕ್ಸಿಕ್ನಲ್ಲಿ ಹಲವು ಹಾಲಿವುಡ್ ಕಲಾವಿದರು ಕೆಲಸ ಮಾಡಿದ್ದು, ಸಿನಿಮಾ ಇಂಗ್ಲೀಷ್ನಲ್ಲೂ ಮೂಡಿಬಂದಿದೆ. ಮಾರ್ಚ್ 17ಕ್ಕೆ ಟಾಕ್ಸಿಕ್ ವರ್ಲ್ ವೈಡ್ ತೆರೆಗೆ ಬರಲಿದ್ದು ಅಂದು ರಾಯನ ಜೊತೆಗಿನ ನಟಾಲಿಯಾ ಆ್ಯಕ್ಷನ್ ನೋಡೋದಕ್ಕೆ ಸಿಗಲಿದೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.