ಕನ್ನಡಿಗರಿಗೆ ಸರ್ಪ್ರೈಸ್‌; ಸಮಂತಾರನ್ನು ಕರ್ಕೊಂಡು ಬಂದ್ರು ಸುದೀಪ್!

By Suvarna News  |  First Published Dec 16, 2019, 10:00 AM IST

ಕಿಚ್ಚ ಸುದೀಪ್‌ ಹಾಗೂ ಅನೂಪ್‌ ಭಂಡಾರಿ ಕಾಂಬಿನೇಷನ್‌ ಹೊಸ ಸಿನಿಮಾ ‘ಫ್ಯಾಂಟಮ್‌’ ಜನವರಿಯಲ್ಲಿ ಸೆಟ್ಟೇರುವುದು ಗ್ಯಾರಂಟಿ ಆಗಿದೆ. ಈಗಾಗಲೇ ಚಿತ್ರತಂಡ ಸ್ಕಿ್ರಪ್ಟ್‌ ವರ್ಕ್ ಮುಗಿಸಿ, ಲೊಕೇಷನ್‌ ಹಂಟಿಂಗ್‌ ಶುರು ಮಾಡಿದೆ. ಮಹಾರಾಷ್ಟ್ರದ ಮಹಾಬಲೇಶ್ವರ ಅರಣ್ಯದಲ್ಲಿ ಸೆಟ್‌ ಹಾಕಿ ಚಿತ್ರೀಕರಣ ನಡೆಸುವ ಆಲೋಚನೆ ಕೂಡ ಚಿತ್ರತಂಡಕ್ಕಿದೆ


‘ಫ್ಯಾಂಟಮ್‌’ ಚಿತ್ರದಲ್ಲಿ ಸುದೀಪ್‌ ಅವರ ಜತೆಗೆ ನಿರೂಪ್‌ ಭಂಡಾರಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹುಭಾಷಾ ತಾರೆ ಸಮಂತಾ ಅಕ್ಕಿನೇನಿ ಈ ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆಯೂ ದಟ್ಟವಾಗಿದೆ. ಸುದೀಪ್‌ ಮತ್ತು ಸಮಂತಾ ಈಗ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

ಫೇಸ್‌ಬುಕ್‌ ಲೋಕಕ್ಕೆ ಕಾಲಿಟ್ಟ ಕಿಚ್ಚ ಸುದೀಪ್!

Tap to resize

Latest Videos

ಸುದೀಪ್‌ ಅಳಿಯ ಸಂಚಿತ್‌ ನಟಿಸಬೇಕಿತ್ತು!

ಚಿತ್ರದ ನಿರ್ಮಾಪಕ ಜಾಕ್‌ ಮಂಜು ಈ ಕುರಿತು ಮಾತನಾಡಿದ್ದಾರೆ. ‘ಚಿತ್ರದಲ್ಲಿ ಒಂದು ಪ್ರಮುಖ ಪಾತ್ರಕ್ಕೆ ಸುದೀಪ್‌ ಅವರ ಅಳಿಯ ಸಂಚಿತ್‌ ಅವರನ್ನು ಆಯ್ಕೆ ಮಾಡಿಕೊಳ್ಳೋಣ ಅಂತ ಡಿಸೈಡ್‌ ಮಾಡಿಕೊಂಡಿದ್ದೆವು. ಆದರೆ ಸಂಚಿತ್‌ಗಾಗಿಯೇ ಪ್ರತ್ಯೇಕ ಸಿನಿಮಾ ಮಾಡಬೇಕೆನ್ನುವ ಕಾರಣಕ್ಕೆ ಅವರನ್ನು ಡ್ರಾಪ್‌ ಮಾಡಿ, ಆ ಪಾತ್ರಕ್ಕೆ ಬೇರೆಯವರನ್ನು ತರಬೇಕೆಂದು ತೀರ್ಮಾನಿಸಲಾಯಿತು. ಆಗ ನಮಗೆ ಸೂಕ್ತ ಎನಿಸಿದ್ದು ನಿರೂಪ್‌. ಸದ್ಯಕ್ಕೆ ಚಿತ್ರದ ಪಾತ್ರವರ್ಗದಲ್ಲಿ ಸುದೀಪ್‌ ಸರ್‌ ಬಿಟ್ಟರೆ ನಿರೂಪ್‌ ಫೈನಲ್‌ ಆಗಿದ್ದಾರೆ’ ಎನ್ನುತ್ತಾರೆ ಜಾಕ್‌ ಮಂಜು.

'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?

ಸಮಂತಾ ಬರುವರೇ!

ಚಿತ್ರದಲ್ಲಿ ಸುದೀಪ್‌ ಜೋಡಿಯಾಗಿ ಸಮಂತಾ ಅವರನ್ನು ತರಬೇಕೆನ್ನುವ ಆಲೋಚನೆ ಚಿತ್ರತಂಡಕ್ಕಿದೆ. ಸಮಂತಾ ಈ ಚಿತ್ರಕ್ಕೆ ಓಕೆ ಹೇಳಿದರೆ ಕನ್ನಡಕ್ಕೆ ಅವರು ಎಂಟ್ರಿಯಾಗಲಿದ್ದಾರೆ. ಮದುವೆಯಾದ ಮೇಲೆ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇದು ಸುದೀಪ್‌ ಅಭಿನಯದ ಸಿನಿಮಾ ಎನ್ನುವ ಬ್ರಾಂಡ್‌ ಇದೆ. ತೆಲುಗಿನ ‘ಈಗ’ ಸಿನಿಮಾದ ಪರಿಚಯ ಹಾಗೂ ರಾರ‍ಯಪೋ ಮೂಲಕ ಕನ್ನಡಕ್ಕೆ ಬಂದರೂ ಅಚ್ಚರಿ ಪಡಬೇಕಿಲ್ಲ.

click me!