
ಕೆಜಿಎಫ್ ಬಿಗ್ ಹಿಟ್ ನಂತರ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಾಡುವ ಮಾತು, ಹೇಳಿಕೆ, ಫ್ಯಾಮಿಲಿ ವಿಚಾರ ಎಲ್ಲದರ ಬಗ್ಗೆಯೂ ಒಂದು ಗಮನವಿದ್ದೇ ಇರುತ್ತದೆ. ಅವರಾಡುವ ಕೆಲವು ಮಾತುಗಳು ಬಹಳ ಇಷ್ಟವಾಗಿ ಬಿಡುವಂತಿರುತ್ತದೆ.
ಹಸಿಬಿಸಿ ಸೀನ್‌ಗಳಲ್ಲಿ ನಟಿಸುವಾಗ ಈ ನಟನಿಗೆ ಕೈ ಕಾಲು ನಡುಗುತ್ತಂತೆ!
ಇತ್ತೀಚಿಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ಮಾತನಾಡುತ್ತಾ, ಇಷ್ಟು ದಿನ ಎಲ್ಲೇ ಹೋದರೂ ಎಲ್ಲರೂ ನನ್ನ ಬಗ್ಗೆ, ನನ್ನ ಹೆಂಡತಿ ರಾಧಿಕಾ ಬಗ್ಗೆ ಕೇಳುತ್ತಿದ್ದರು. ಇದೀಗ ಮಗಳು ಐರಾ ಬಗ್ಗೆ ಕೇಳುತ್ತಿದ್ದಾರೆ. ಎಲ್ಲಿಯೇ ಹೋದರೂ ಐರಾ...ಐರಾ ಎನ್ನುತ್ತಾರೆ. ಅವಳನ್ನು ನೋಡಲು ಮನೆಯವರೆಗೆ ಹುಡುಕಿಕೊಂಡು ಬರುತ್ತಾರೆ. 'ನೋಡಿ ಯಾವತ್ತೂ ಲೈಫಲ್ಲಿ ಈ ತಪ್ಪು ಮಾಡಬೇಡಿ. ಅವರಾಗಿಯೇ ಏನಾದ್ರೂ ಸಾಧಿಸಿದ ಮೇಲೆ ಗೌರವ ಕೊಡಿ. ಸೆಲಬ್ರಿಟಿ ಮಕ್ಕಳು ಅಂತ ಗೌರವ ಕೊಡಬೇಡಿ. ಅವರೇನು ಕೆಲಸ ಮಾಡಿರ್ತಾರೆ ಅದಕ್ಕೆ ಗೌರವ ಕೊಡಿ. ನನ್ನ ಮಕ್ಕಳೇ ಆಗಿರಬಹುದು. ಬೆಳೆದು ದೊಡ್ಡವರಾಗಿ ಒಳ್ಳೆ ಕೆಲಸ ಮಾಡಿದಾಗ ಗೌರವ ಕೊಡಿ. ಅಲ್ಲಿಯವರೆಗೂ ಎಲ್ಲಾ ಮಕ್ಕಳು ಒಂದೇ. ಪ್ರೀತಿ ತೋರ್ಸಿ ಅಷ್ಟೇ' ಎಂದು ಹೇಳಿದ್ದಾರೆ.
ಯಶ್ ಈ ಮಾತು ಹೇಳಿದ್ದೇ ಹೇಳಿದ್ದೇ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಒಂದು ಮಾತು ಅಭಿಮಾನಿಗಳ ಮನ ಗೆದ್ದಿದೆ.
ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.