ನಟ ದರ್ಶನ್ ಹಾಗೂ ಸನ ತಿಮ್ಮಯ್ಯ ಜೋಡಿಯ ‘ಒಡೆಯ’ನಿಗೆ ಪ್ರೇಕ್ಷಕರು ಬಹುಪರಾಕ್ ಹಾಕುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಕಮರ್ಷಿಯಲ್ ಸಿನಿಮಾ. ದರ್ಶನ್ ಅವರ ಅಭಿಮಾನಿಗಳಿಗೆ ಸೀಮಿತವಾದ ಸಿನಿಮಾ ಎನ್ನುವ ಮಾತುಗಳನ್ನು ಸುಳ್ಳು ಮಾಡಿ ಎಲ್ಲ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ಇನ್ನೂ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳೂ ಕೂಡ ತಮ್ಮ ನೆಚ್ಚಿನ ನಟನ ಸಿನಿಮಾ ಯಶಸ್ವಿ ಪ್ರದರ್ಶನ ಆಗುತ್ತಿರುವುದಕ್ಕೆ ಸಂಭ್ರಮಿಸುತ್ತಿದ್ದಾರೆ.
‘ಈಗಾಗಲೇ 470ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಒಡೆಯ’ ಸಿನಿಮಾ ಪ್ರದರ್ಶನವಾಗುತ್ತಿದೆ. ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಚಿತ್ರದುರ್ಗ, ಮಂಡ್ಯ, ಬೆಂಗಳೂರು ಮುಂತಾದ ಏರಿಯಾಗಳಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಸಿನಿಮಾ ಗಳಿಕೆ ಮಾಡುತ್ತಿದೆ. ಇದೇ ರೀತಿ ಪ್ರದರ್ಶನ ಕಂಡರೆ ಸೋಮವಾರದ ಹೊತ್ತಿಗೆ ನಿರ್ಮಾಪಕರಿಗೆ ಲಾಭ ಬರುತ್ತದೆ. ಈಗ ಹಾಕಿರೋ ಬಂಡವಾಳ ವಾಪಸ್ಸು ಬಂದಿದೆ. ಆ ಮಟ್ಟಿಗೆ ಸಿನಿಮಾ ಯಶಸ್ಸಿನತ್ತ ಮುಖ ಮಾಡಿದೆ. ಒಂದು ವಾರದೊಳಗೆ 20 ರಿಂದ 22 ಕೋಟಿ ಗಳಿಕೆ ಮಾಡಿದ ಸಿನಿಮಾ ಹೆಗ್ಗಳಿಕೆಗೆ ಒಡೆಯ ಪಾತ್ರವಾಗಲಿದೆ’ ಎಂಬುದು ನಿರ್ದೇಶಕ ಎಂ ಡಿ ಶ್ರೀಧರ್ ಅವರ ಮಾತು.
'ಕುಚ್ಚಿಕು' ಸಾಂಗ್ ರೀಮೆಕ್; ಡಿ-ಬಾಸ್‌ಗೆ ಜೋಡಿಯಾಗಿ ಟೈಗರ್!
‘ನಮ್ಮ ಸಿನಿಮಾ ದರ್ಶನ್ ಅವರ ಅಭಿಮಾನಿಗಳ ಜತೆಗೆ ಎಲ್ಲ ವರ್ಗದ ಪ್ರೇಕ್ಷಕರು ನೋಡುತ್ತಿದ್ದಾರೆ. ಸಾಮಾನ್ಯವಾಗಿ ಗುರುವಾರ ಬಿಡುಗಡೆಯಾದ ಸಿನಿಮಾಗಳು ಮೊದಲ ದಿನ ಹೌಸ್‌ಫುಲ್ಲಾಗಲ್ಲ. ಆದರೆ, ‘ಒಡೆಯ’ ಸಿನಿಮಾ ಗುರುವಾರವೇ ಹೌಸ್‌ಫುಲ್ಲಾಗಿತ್ತು. ಶುಕ್ರವಾರದ ಹೊತ್ತಿಗೆ ಶೇ.90 ಭಾಗ ಗಳಿಕೆ ಇತ್ತು. ಈಗ ಎಲ್ಲ ಕಡೆ ಸಿನಿಮಾ ಪ್ರದರ್ಶನಾಗುತ್ತಿದೆ. ಸಿನಿಮಾ ನೋಡಿಕೊಂಡು ಹೋದವರೆಲ್ಲ ಒಳ್ಳೆಯ ಅಭಿಪ್ರಾಯಗಳನ್ನೇ ಹೇಳುತ್ತಿದ್ದಾರೆ. ಇದೇ ರೀತಿ ಯಶಸ್ವಿಯಾಗಿ ಪ್ರದರ್ಶನಗೊಂಡರೆ ಮೂರು ದಿನಗಳಲ್ಲಿ ನಾವು ಲಾಭದಲ್ಲಿರುತ್ತೇವೆ. ಒಳ್ಳೆಯ ಸಿನಿಮಾ ನಿರ್ಮಿಸಿದ್ದೇನೆಂಬ ಖುಷಿ ಅಂತೂ ಇದೆ. ಹೀಗಾಗಿ ಒಳ್ಳೆಯ ಸಿನಿಮಾ ನೋಡಬೇಕೆಂದುಕೊಳ್ಳುವವರಿಗೆ ‘ಒಡೆಯ’ ಸಿನಿಮಾ ಸೂಕ್ತ’ ಎಂಬುದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಮಾತು.