ಕಾಳಿಂಗ ಸರ್ಪದ ಕತೆ ಹೇಳುವ ಸಿನಿಮಾ ತಿಮ್ಮನ ಮೊಟ್ಟೆಗಳು: ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ

Published : Jun 14, 2025, 10:46 AM IST
Timmana Mottegalu

ಸಾರಾಂಶ

ಚಿತ್ರವು ರಕ್ಷಿತ್ ತೀರ್ಥಹಳ್ಳಿ ಅವರ ಸ್ವರಚಿತ 'ಕಾಡಿನ ನೆಂಟರು' ಸಣ್ಣ ಕಥೆಯನ್ನು ಆಧರಿಸಿದ್ದು, ಮಾನವರು, ಪ್ರಕೃತಿ ಮತ್ತು ಪ್ರಾಣಿಗಳ ನಡುವಿನ ಹೆಣೆದುಕೊಂಡಿರುವ ಸಂಬಂಧದ ಕುರಿತು ಹೇಳುತ್ತದೆ.

ರಕ್ಷಿತ್‌ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರದ ಟ್ರೇಲರನ್ನು ನಿರ್ದೇಶಕ ಪಿ ಶೇಷಾದ್ರಿ, ಕೋಡ್ಲು ರಾಮಕೃಷ್ಣ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾ ಕುರಿತು ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ, ‘ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತ ಕತೆ ಈ ಚಿತ್ರದಲ್ಲಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಈ ಚಿತ್ರದ ಪ್ರಿಮೀಯರ್ ಶೋ ನಡೆದಿದೆ. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ’ ಎಂದರು.

ಚಿತ್ರವು ರಕ್ಷಿತ್ ತೀರ್ಥಹಳ್ಳಿ ಅವರ ಸ್ವರಚಿತ 'ಕಾಡಿನ ನೆಂಟರು' ಸಣ್ಣ ಕಥೆಯನ್ನು ಆಧರಿಸಿದ್ದು, ಮಾನವರು, ಪ್ರಕೃತಿ ಮತ್ತು ಪ್ರಾಣಿಗಳ ನಡುವಿನ ಹೆಣೆದುಕೊಂಡಿರುವ ಸಂಬಂಧದ ಕುರಿತು ಹೇಳುತ್ತದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಪಶ್ಚಿಮ ಘಟ್ಟಗಳ ಜೀವನದ ಸಾರವನ್ನು ಸೆರೆಹಿಡಿದಿದೆ. ಅಲ್ಲಿ ವಾಸಿಸುವ ಜನರ ಮೌಲ್ಯಗಳು, ಸರಳತೆ ಮತ್ತು ಸೂಕ್ಷ್ಮತೆಯನ್ನು ಎತ್ತಿ ತೋರಿಸುತ್ತದೆ. ಈ ಚಿತ್ರವು ಅಮೆರಿಕದ ಡಲ್ಲಾಸ್‌ನಲ್ಲಿ ಮೊದಲು ಪ್ರದರ್ಶನಗೊಂಡಿತು. ಅಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆದ ಬಳಿಕ ಕೋಲ್ಕತ್ತಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನ ಕಂಡಿತು. ದೆಹಲಿಯಲ್ಲಿ ನಡೆದ ದಾದಾಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿತು.

ಪಿ.ಶೇಷಾದ್ರಿ, ‘ನಾನು ಈ ಚಿತ್ರವನ್ನು ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ್ದೇನೆ. ಈಗಿನ ಪರಿಸ್ಥಿತಿಗೆ ತಕ್ಕಂತ ಕತೆ ಚಿತ್ರದಲ್ಲಿದೆ. ಇಂಥ ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರಬೇಕು’ ಎಂದರು. ಆದರ್ಶ್ ಅಯ್ಯಂಗಾರ್‌ ಈ ಸಿನಿಮಾ ನಿರ್ಮಿಸಿದ್ದಾರೆ. ಜೂನ್‌ 27ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಹಿರಿಯ ನಟ ಸುಚೇಂದ್ರ ಪ್ರಸಾದ್‌, ತಿಮ್ಮನ ಪಾತ್ರಧಾರಿ ಕೇಶವ್‌ ಗುತ್ತಳಿಕೆ, ಆಶಿಕಾ ಸೋಮಶೇಖರ್‌, ಪ್ರಗತಿ ಪ್ರಭು, ರಘು ರಾಮನಕೊಪ್ಪ ಹಾಗೂ ಸಂಗೀತ ನಿರ್ದೇಶಕ ಹೇಮಂತ್‌ ಜೋಯಿಷ್‌ ಹಾಜರಿದ್ದರು.

ಜೂ.27ರಂದು ಬಿಡುಗಡೆ: ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ವಿಶಿಷ್ಟ ಕಥಾಹಂದರದ ‘ತಿಮ್ಮನ ಮೊಟ್ಟೆಗಳು’ ಸಿನಿಮಾ ಜೂ. 27ರಂದು ಬಿಡುಗಡೆಯಾಗಲಿದೆ. ಆದರ್ಶ್ ಅಯ್ಯಂಗಾರ್ ನಿರ್ಮಿಸಿರುವ ಈ ಚಿತ್ರದ ಪ್ರೀಮಿಯರ್ ಶೋ ಈಗಾಗಲೇ ಅಮೆರಿಕಾದಲ್ಲಿ ನಡೆದಿದ್ದು, ಚಿತ್ರ ನೋಡಿದವರು ಮೆಚ್ಚುಗೆ ಸೂಚಿಸಿದ್ದಾರೆ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಕತೆಯುಳ್ಳ ಈ ಚಿತ್ರದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ