
ಸ್ಯಾಂಡಲ್ ವುಡ್ (Sandalwood) ಕ್ಯೂಟ್ ಕಪಲ್ ಎಂದೇ ಮಿಲನಾ ನಾಗರಾಜ್ (Milana Nagaraj) ಹಾಗೂ ಡಾರ್ಲಿಂಗ್ ಕೃಷ್ಣ (Darling Krishna) ಹೆಸರು ಪಡೆದಿದ್ದಾರೆ. ಈಗಾಗಲೇ ಮುದ್ದಾದ ಪರಿಯನ್ನು ಮನೆಗೆ ಬರ ಮಾಡಿಕೊಂಡಿರುವ ಮಿಲನಾ ನಾಗರಾಜ್ ಹಾಗೂ ಕೃಷ್ಣ, ಸಿನಿಮಾ ಜೊತೆ ಪೇರೆಂಟಿಂಗ್ ಎಂಜಾಯ್ ಮಾಡ್ತಿದ್ದಾರೆ. ಇಂದು ಡಾರ್ಲಿಂಗ್ ಕೃಷ್ಣ ಬರ್ತ್ ಡೇ ಆಚರಿಸಿಕೊಳ್ತಿದ್ದಾರೆ. ಕೃಷ್ಣ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಗ್ರ್ಯಾಂಡ್ ಪಾರ್ಟಿ ಮಾಡಿ, ಕೇಕ್ ಕತ್ತರಿಸಿ ಗಿಫ್ಟ್ ನೀಡ್ತಾರೆ ಮಿಲನಾ ನಾಗರಾಜ್ ಅಂದ್ಕೊಂಡ್ರೆ ಸ್ಕ್ರಿಪ್ಟ್, ಸ್ಕ್ರಿಪ್ಟ್ ಅಂತ ಕೃಷ್ಣ ಅವರಿಗೆ ಕಾಟ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಮಿಲನಾ ವಿಡಿಯೋ ಒಂದನ್ನು ಹಂಚಿಕೊಂಡು ಭಿನ್ನವಾಗಿ ಕೃಷ್ಣ ಅವರಿಗೆ ವಿಶ್ ಮಾಡಿದ್ದಾರೆ. ಜೊತೆಗೆ ಲವ್ ಮಾಕ್ ಟೇಲ್ 3 ಸ್ಕ್ರಿಪ್ಟ್ ರೆಡಿಯಾಗಿದೆ ಎಂಬ ಗುಡ್ ನ್ಯೂಸ್ ನೀಡಿದ್ದಾರೆ.
ವಿಡಿಯೋ ಆರಂಭದಲ್ಲಿ ಕೃಷ್ಣ ಅವರು ನೆಚ್ಚಿನ ನಾಯಿ ಮರಿ ಜೊತೆ ಆಟ ಆಡ್ತಿದ್ದಾರೆ. ಅಲ್ಲಿಗೆ ಬರೋ ಮಿಲನಾ, ಸ್ಕ್ರಿಪ್ಟ್ ಯಾವಾಗ ಕೇಳ್ತಾರೆ. ಮಗಳ ಜೊತೆ ಕೃಷ್ಣ ಆಟ ಆಡೋಕೂ ಮಿಲನಾ ಬಿಡೋದಿಲ್ಲ. ಮಗಳು ಅಪ್ಪ ಅನ್ನೋಕೆ ಲೇಟಿದೆ, ಸ್ಕ್ರಿಪ್ಟ್ ರೆಡಿ ಆಯ್ತಾ ಕೇಳ್ತಾರೆ. ಅಷ್ಟೇ ಅಲ್ಲ ತಿಂಡಿ ತಿನ್ನೋಕು ಬಿಡದೆ ಕಾಡುವ ಮಿಲನಾ ನಾಗರಾಜ್, ಲ್ಯಾಪ್ ಟಾಪ್ ಮುಂದೆ ಕುಳಿತ್ರೂ ಬಿಡೋದಿಲ್ಲ. ಕ್ರಿಕೆಟ್ ಪ್ರಾಕ್ಟೀಸ್ ಗೆ ಬಂದ ಕೃಷ್ಣನ ಹಿಂದೇ ಬರೋ ಮಿಲನಾ, ಆಟ ಆಡಿದ್ದು ಸಾಕು, ಸ್ಕ್ರಿಪ್ಟ್ ಬರೀರಿ ಅಂತಾರೆ. ಇದಕ್ಕೆ ಕೃಷ್ಣ, ಸ್ಕ್ರಿಪ್ಟ್ ರೆಡಿ ಇದೆ, ಮನೆಯಲ್ಲಿದೆ, ಹೋಗಿ ನೋಡು ಅಂತಿದ್ದಂತೆ, ಕೊಹ್ಲಿ ಅಂತ ಕೃಷ್ಣ ಅವರನ್ನು ಕರೆಯುವ ಮಿಲನಾ, ಹ್ಯಾಪಿ ಬರ್ತ್ ಡೇ ವಿಶ್ ಮಾಡ್ತಾರೆ. ಇದೇ ಟೈಂನಲ್ಲಿ, ಕೃಷ್ಣ ಅವರಿಗೆ ಕೊಹ್ಲಿ ಇಷ್ಟ. ಕೊಹ್ಲಿ ಅಂತ ಕರೆದ್ರೆ ಖುಷಿಯಾಗುತ್ತೆ ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಆದ್ರೆ ಗಿಫ್ಟ್ ಮಾತ್ರ ಕೊಡೋದಿಲ್ಲ. ಕ್ರಿಕೆಟ್ ಆಡೋಕೆ ಪರ್ಮಿಶನ್ ಕೊಟ್ಟಾಯ್ತಲ್ಲ, ಅದೇ ಗಿಫ್ಟ್ ಅಂತಾರೆ. ಆಗ ಕೃಷ್ಣ, ಮದುವೆ ಆದ್ರೆ ಎಲ್ಲ ಗೊತ್ತಾಗುತ್ತೆ ಅಂತ ಗೊಣಗ್ತಾ ಕ್ರಿಕೆಟ್ ಪ್ರಾಕ್ಟೀಸ್ ಗೆ ಹೊರಡ್ತಾರೆ.
ಈ ವಿಡಿಯೋ ಪೋಸ್ಟ್ ಮಾಡಿದ ವಿಲನಾ, ದೊಡ್ಡ ಪರದೆಯ ಮೇಲೆ ಕಥೆಗಳಿಗೆ ಜೀವ ತುಂಬುವ, ನಮ್ಮ ಜೀವನವನ್ನು ಸಂತೋಷದಿಂದ ತುಂಬಿರುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಪ್ರೀತಿ @darling_krishnaa. ನಿಮ್ಮ ಸಮರ್ಪಣೆ ಮತ್ತು ಉತ್ಸಾಹ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ನಿಮ್ಮ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶೀರ್ಷಿಕೆ ಹಾಕಿದ್ದಾರೆ.
ಮಿಲನಾ ಈ ಪೋಸ್ಟ್ ಗೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಕ್ಯೂಟ್ ಕಪಲ್ ಎನ್ನುವ ಕಮೆಂಟ್ ಬಂದಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ಶುಭಾಶಯಗಳ ಸುರಿಮಳೆಯಾಗಿದೆ. ಲವ್ ಮಾಕ್ ಟೇಲ್ 3ಗೆ ನಾವೆಲ್ಲ ಕಾಯ್ತಿದ್ದೆವೆ. ಬೇಗ ಬರಲಿ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಜೂನ್ 12, 1985ರಂದು ಕೃಷ್ಣ ಜನಿಸಿದ್ದು, ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವ್ರ ಹುಟ್ಟುಹಬ್ಬದ ದಿನ ಫಾದರ್ ಸಿನಿಮಾ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಈ ಸಿನಿಮಾದಲ್ಲಿ ಪ್ರಮುಖ ರೋಲ್ ನಿಭಾಯಿಸಲಿದ್ದಾರೆ. ಇನ್ನು ಮಿಲನಾ ಆರಾಮ್ ಅರವಿಂದ್ ಸ್ವಾಮಿಯಲ್ಲಿ ಕಾಣಿಸಿಕೊಂಡಿದ್ದ, ಮಾಕ್ಟೇಲ್ 3 ತಯಾರಿಯಲ್ಲಿದ್ದಂತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.