ಯಶ್ 'ಟಾಕ್ಸಿಕ್' ಜೊತೆಗೆ ಕರ್ನಾಟಕದ ಚಿತ್ರಮಂದಿರಗಳಲ್ಲಿ ಕಿರಣ್ ರಾಜ್ ಸಪ್ರೈಸ್ ಬೋನಸ್!

Published : Aug 25, 2026, 11:47 AM IST
Kiran Raj

ಸಾರಾಂಶ

ಇಡೀ ಜಗತ್ತು ಸದ್ಯಕ್ಕೆ 'ಟಾಕ್ಸಿಕ್ ಮಯ'. ನಾಳೆಯಿಂದ, ಅಂದರೆ 26 ಆಗಸ್ಟ್ 2026ರಿಂದ ವಿಶ್ವದಾದ್ಯಂತ ಬಿಡುಗಡೆಯಾಗ್ತಿರೋ ಯಶ್ ಟಾಕ್ಸಿಕ್ ಸಿನಿಮಾದ ಜೊತೆಗೆ ಕರ್ನಾಟಕದಾದ್ಯಂತ ಕಿರಣ್ ರಾಜ್ ಅಭಿನಯದ 'ಜಾಕಿ 42' ಕೂಡ ಕಮಾಲ್ ಮಾಡಲಿದೆ. ಹೇಗೆ ನೋಡಿ..

ಇಡೀ ಜಗತ್ತು ಸದ್ಯಕ್ಕೆ 'ಟಾಕ್ಸಿಕ್ ಮಯ' ಎನ್ನಲೇಬೇಕು. ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್...ಎಲ್ಲೆಲ್ಲೂ ಟಾಕ್ಸಿಕ್ ದೇ ಟಾಕ್. ನಾಳೆಯಿಂದ, ಅಂದರೆ 26 ಆಗಸ್ಟ್ 2026ರಿಂದ ವಿಶ್ವದಾದ್ಯಂತ ಬಿಡುಗಡೆಯಾಗ್ತಿರೋ ಯಶ್ ಟಾಕ್ಸಿಕ್ ಸಿನಿಮಾದ ಜೊತೆಗೆ ಕರ್ನಾಟಕದಾದ್ಯಂತ ಕಿರಣ್ ರಾಜ್ ಅಭಿನಯದ 'ಜಾಕಿ 42' ಚಿತ್ರದ ಥಿಯೇಟರಿಕಲ್ ಟ್ರೈಲರ್ ಪ್ರದರ್ಶನವಾಗ್ತಿದೆ.. ಯಶ್ ಜೊತೆ ಕಿರಣ್ ರಾಜ್‌ ಕಮಾಲ್‌ನ ರುಚಿ ಕೂಡ ನೋಡಬಹುದು.

ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ 'ಜಾಕಿ 42' ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ. ಕುದುರೆ ರೇಸ್ ಹಿನ್ನೆಲೆಯ ಕಥಾಹಂದರದ ಚಿತ್ರ. ಗುಣಮಟ್ಟದ ಮೇಕಿಂಗ್ ಹಾಗೂ ವಿಶಿಷ್ಠವಾದ ಸ್ಕ್ರೀಪ್ಲೇಯ ಚಿತ್ರವಿದು ಎಂದು ಹೇಳ್ತಿರೋ ಚಿತ್ರತಂಡ, ಟಾಕ್ಸಿಕ್ ನೋಡೋ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಲಿದೆ.. ಹಾಗೂ ಥಿಯೇಟರಲ್ಲೇ ಜಾಕಿ 42 ಸಿನಿಮಾವನ್ನ ನೋಡ್ಬೇಕು ಅಂತ ಪ್ರೇರೇಪಿಸಲಿದೆಯಂತೆ.

ಜಾಕಿ 42 ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರೋ ಜಾಕಿ 42 ಚಿತ್ರದ ಎರಡು ಹಾಡುಗಳು ಗಮನ ಸೆಳೆದಿದ್ದು, ಟಾಕ್ಸಿಕ್ ಸಿನಿಮಾದ ಥಿಯೇಟರ್‌ಗಳಲ್ಲಿ ಟ್ರೈಲರ್ ಪ್ರದರ್ಶಿಸೋ ಮೂಲಕ ಪ್ರಚಾರವನ್ನ ಆರಂಭಿಸಿದ್ದಾರೆ ಜಾಕಿ 42 ಟೀಮ್.

ಅಂದಹಾಗೆ, ಸದ್ಯದಲ್ಲೇ ಮತ್ತೊಂದು ಹಾಡಿನ ಬಿಡುಗಡೆಗೆ ಅಣಿಯಾಗಿರೋ ಚಿತ್ರತಂಡ, ರಿಲೀಸ್ ಡೇಟ್ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ನಿಗದಿ ಮಾಡೋ ಯೋಜನೆಯಲ್ಲಿದೆ... ಅದೇನೆ ಇದ್ರೂ ಟಾಕ್ಸಿಕ್ ನೋಡೋ ಕನ್ನಡ ಪ್ರೇಕ್ಷಕರಿಗೆ ಥಿಯೇಟರ್ ಗಳಲ್ಲಿ ಜಾಕಿ 42 ಅಚ್ಚರಿ ಕಾದಿದೆ. ಕನ್ನಡದ ಒಂದು ಜಾಗತಿಕ ಸಿನಿಮಾ ನೋಡುವಾಗ ಈ ಮೂಲಕ ಮತ್ತೊಂದು ಸಿನಿಮಾದ ಥಿಯೇಟರಿಕಲ್ ಟ್ರೈಲರ್ ನೋಡಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿಕೊಳ್ಳಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Anjali Sudhakar: ಮನೆಯಲ್ಲಿ ದುಡ್ಡೇ ಇಲ್ಲದಾಗ ಗಾಳಿಯಲ್ಲಿ ಹಾರಿಬಂದ 5 ರೂ! ರಾಯರ ಮಹಿಮೆಯ ರೋಚಕ ಘಟನೆ ನೆನೆದ ಅಂಜಲಿ
ನಾಚಿಕೆಯ ನೋಟ, ಮುದ್ದಾದ ನಗು: ಸೀರೆಯಲ್ಲಿ ಆಶಿಕಾ ರಂಗನಾಥ್ ಸೌಂದರ್ಯಕ್ಕೆ ನೆಟ್ಟಿಗರು ಫಿದಾ