ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಮೊದಲ ಪುತ್ರಿಗೆ ಇಂದು ಮೊದಲ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮೇಘನಾ ಪುತ್ರ ರಾಯನ್ ತಂಗಿಯ ಜೊತೆ ಮಾತನಾಡಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಮೇಘನಾ ರಾಜ್ ಸದ್ಯ ತತ್ಸಮ ತತ್ಭದ ಚಿತ್ರದ ಖುಷಿಯಲ್ಲಿದ್ದಾರೆ. ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ, ಕೆಲ ವರ್ಷಗಳ ಗ್ಯಾಪ್ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ, ಧ್ರುವಾ ಸರ್ಜಾ ಅವರು ಕೆಲ ದಿನಗಳ ಹಿಂದೆ ಎರಡನೆಯ ಮಗುವಿನ ಅಪ್ಪ ಆಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್‌ನಲ್ಲಿ ಪತ್ನಿ ಪ್ರೇರಣಾ ಶಂಕರ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಪುಟ್ಟ ಕೃಷ್ಣನ ಆಗನದಲ್ಲಿದ್ದ ದಂಪತಿಗೆ ಮುದ್ದು ಕೃಷ್ಣನೇ ಹುಟ್ಟಿದ್ದಾನೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡಿದ್ದರು. "ಮಗು ಜನಿಸಿದೆ. ನಾರ್ಮಲ್ ಡೆಲಿವರಿ' ಎಂದು ಬರೆದುಕೊಂಡಿದ್ದರು. ಅಂದಹಾಗೆ ಧ್ರುವಾ ಅವರಿಗೆ ಮೊದಲ ಮಗು ಹೆಣ್ಣು. ಕಳೆದ ವರ್ಷದ ಅಕ್ಟೋಬರ್ 2ರಂದು ಹುಟ್ಟಿರುವ ಪುಟಾಣಿಗೆ ಇಂದು ಒಂದನೇ ಹುಟ್ಟುಹಬ್ಬದ ಸಂಭ್ರಮ. ಈ ಪಾಪುವಿಗೆ ಇನ್ನೂ ನಾಮಕರಣ ಮಾಡಲಿಲ್ಲ.
ಎಲ್ಲರಿಗೂ ತಿಳಿದಿರುವಂತೆ ಧ್ರುವ ಸರ್ಜಾ ಅವರಿಗೆ ಅಣ್ಣ ಚಿರಂಜೀವಿ ಸರ್ಜಾ ಎಂದರೆ ತುಂಬಾ ಪ್ರೀತಿ. ಸಹೋದರರಕ್ಕಿಂತಲೂ ಹೆಚ್ಚಾಗಿ ಇವರು ಸ್ನೇಹಿತರಂತೆ ಇದ್ದವರು. ಹೃದಯಾಘಾತದಿಂದ ಎಳೆ ವಯಸ್ಸಿನಲ್ಲಿಯೇ ಚಿರು ಈ ಲೋಕ ಬಿಟ್ಟು ಹೋದರು. ಕನಕಪುರ ಫಾರ್ಮ್‌ಹೌಸ್‌ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಸಮಾಧಿ ಮಾಡಲಾಗಿದೆ. ಚಿರಂಜೀವಿ ಸರ್ಜಾ ಮೇಲಿನ ಪ್ರೀತಿಯಿಂದ ಧ್ರುವ ಅವರು ಸಮಾಧಿ ಸಮೀಪವೇ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು. ಇನ್ನು ಅಣ್ಣನ ಸಮಾಧಿ ಬಳಿ ಧ್ರುವ ಸರ್ಜಾ ಅವರು ಮಗಳ ಜೊತೆಗೆ ಒಂದಷ್ಟು ಸಮಯ ಕಳೆಯುತ್ತಿರುತ್ತಾರೆ. ಚಿರಂಜೀವಿ ಸರ್ಜಾ ಸಮಾಧಿ ಧ್ರುವ ಸರ್ಜಾ ಅವರು ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಅಣ್ಣನ ಮೇಲೆ ಧ್ರುವ ಇಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದಾರೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಗಳ ಜೊತೆ ಮೇಘನಾ ರಾಜ್ ಫೋಟೋ ವೈರಲ್; ಕಣ್ಮಣಿ ಎಂದು ಕರೆಯಲು ಕಾರಣವೇನು?
ಈಗ ಧ್ರುವ ಅವರ ಮೊದಲ ಮಗುವಿನ ಒಂದನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇಡೀ ಕುಟುಂಬ ತೇಲಾಡುತ್ತಿದೆ. ಈ ಸಂದರ್ಭದಲ್ಲಿ ಚಿರು ಮತ್ತು ಮೇಘನಾ ಅವರ ಪುತ್ರ ರಾಯನ್ ತನ್ನ ತಂಗಿಯ ಜೊತೆ ಮಾತನಾಡುತ್ತಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿದ್ದು, ಸೋ ಕ್ಯೂಟ್ ಎನ್ನುತ್ತಿದ್ದಾರೆ ಫ್ಯಾನ್ಸ್. ಅಣ್ಣನನ್ನು ತದೇಕ ಚಿತ್ತದಿಂದ ನೋಡುತ್ತಿರುವ ಪುಟಾಣಿ ತನ್ನದೇ ತೊದಲು ಭಾಷೆಯಲ್ಲಿ ಅಣ್ಣನಿಗೆ ಉತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರಾಯನ್ ಕೂಡ ಅದರ ಜೊತೆ ಮಾತುಕತೆಯಲ್ಲಿ ತೊಡಗಿದ್ದಾನೆ. ಮೇಘನಾ ರಾಜ್ ಮಗಳನ್ನು ಎತ್ತಿಕೊಂಡಿದ್ದು, ಮಗನಿಗೆ ಏನು ಮಾತನಾಡಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಈ ಕ್ಯೂಟ್ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇನ್ನು ಪತಿಯನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಮೇಘನಾ, ತನ್ನ ಪುತ್ರನ ಜೊತೆಗೆ ಧ್ರುವ ಅವರ ಮಕ್ಕಳ ಪಾಲನೆಯಲ್ಲಿಯೂ ತೊಡಗಿದ್ದಾರೆ. ಇದೇ ವೇಳೆ ಕೆಲ ದಿನಗಳ ಹಿಂದೆ ನಟಿ ಮೇಘನಾ (Meghana Raj) , ಪತಿಯನ್ನು ಕಳೆದುಕೊಂಡ ಬಳಿಕ ಮಗನನ್ನು ನೋಡಿಕೊಂಡ ಬಗ್ಗೆ ಹೇಳಿ ಭಾವುಕರಾಗಿದ್ದರು. 'ನಾಲ್ಕು ತಿಂಗಳ ಅಂತರದಲ್ಲಿ ಮರಣ ಮತ್ತು ಜನನ ನೋಡಿದ್ದೀನಿ. ಆ ಸಮಯವನ್ನು ಹೇಗೆ ಎದುರಿಸಿದೆ ಗೊತ್ತಿಲ್ಲ ಆದರೆ ನನಗೆ ಮಗು ಹುಟ್ಟುತ್ತದೆ ನನ್ನ ಎಲ್ಲಾ ಗಮನ ಮಗು ಮೇಲೆ ಇರಬೇಕು ಎಂದು ಮಾತ್ರ ಗೊತ್ತಿತ್ತು. ಮೆಡಿಕಲ್ ಆಗಿ ಕೆಲವರು ಹೇಳುತ್ತಾರೆ ಅಥವಾ ನನಗೆ ಅನಿಸುತ್ತಿತ್ತೋ ಗೊತ್ತಿಲ್ಲ ಆ ಸಮಯದಲ್ಲಿ ನನಗೆ ಶಕ್ತಿ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಆದರೆ ತಾಯಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವಿನಲ್ಲಿದ್ದರೆ ಗರ್ಭದಲ್ಲಿರುವ ಮಗು ಒಂದು ವಿಶೇಷ ಹಾರ್ಮೋನ್ ರಿಲೀಸ್ ಮಾಡುತ್ತದೆ ಆ ಹಾರ್ಮೋನ್‌ನಿಂದ ನನಗೆ ಶಕ್ತಿ ಬಂತು. ಸಿನಿಮಾರಂಗಕ್ಕೆ ನಾನು ಮತ್ತೆ ಬರಬೇಕು ಸಿನಿಮಾ ಮಾಡಬೇಕು ಜೀವನ ಚೆನ್ನಾಗಿ ನಡೆಸಬೇಕು ಅನ್ನೋದಕ್ಕೆ ಶಕ್ತಿ ಕೊಟ್ಟಿದ್ದು ರಾಯನ್' ಎಂದು ಮೇಘನಾ ರಾಜ್ ಹೇಳಿದ್ದರು.
ಹೃದಯಾಘಾತ ಉಂಟಾದಾಗ ಸಿಪಿಆರ್ನಿಂದ ಜೀವ ಉಳಿಸಿ: ನಟಿ ಮೇಘನಾ ರಾಜ್ ಸಂದೇಶ