ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಗೆದ್ದಾಗಿದೆ. ಯಶ್ ಈಗ ಗುರಿ ಇಟ್ಟಿರೋದು ಪ್ಯಾನ್ ವರ್ಲ್ಡ್ ಜಗತ್ತು ಗಲ್ಲೋಕೆ. ಅದಕ್ಕಾಗೆ ಯಶ್ ಟಾಕ್ಸಿಕ್ ಕೆಲಸವನನ್ನ ಸಿಕ್ಕಾಪಟ್ಟೆ ಕಟ್ಟು ನಿಟ್ಟಾಗಿ ಶುರು ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಗೆದ್ದಾಗಿದೆ. ಯಶ್ ಈಗ ಗುರಿ ಇಟ್ಟಿರೋದು ಪ್ಯಾನ್ ವರ್ಲ್ಡ್ ಜಗತ್ತು ಗಲ್ಲೋಕೆ. ಅದಕ್ಕಾಗೆ ಯಶ್ ಟಾಕ್ಸಿಕ್ ಕೆಲಸವನನ್ನ ಸಿಕ್ಕಾಪಟ್ಟೆ ಕಟ್ಟು ನಿಟ್ಟಾಗಿ ಶುರು ಮಾಡಿದ್ದಾರೆ. ಆದ್ರೆ ಈ ಮಧ್ಯೆ ರಾಕಿಗೆ ದೊಡ್ಡ ಟೆನ್ಷನ್ ಒಂದು ಶುರುವಾಗಿದೆ. ಪ್ಯಾನ್ ವರ್ಲ್ಡ್ ನಲ್ಲಿ ಬರೊ ಟಾಕ್ಸಿಕ್ ಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಅಷ್ಟಕ್ಕು ಆ ಕಿಡಿಗೇಡಿಗಳು ಟಾಕ್ಸಿಕ್ ಗೆ ಮಾಡಿದ್ದೇನು ಗೊತ್ತಾ.? ಟಾಕ್ಸಿಕ್ ನ ಶೂಟಿಂಗ್ ನ ಯಶ್ ಲುಕ್ ನ ಲೀಕ್ ಮಾಡಿದ್ದಾರೆ. ನಿರ್ದೇಶಕ ರಾಜಮೌಳಿ, ಪ್ರಶಾಂತ್, ಮಣಿರತ್ನಂ ಸೇರಿದಂತೆ ಭಾರತೀಯ ಚಿತ್ರರಂಗದ ಯಾರೇ ಟಾಪ್ ಡೈರೆಕ್ಟರ್ ಆಗ್ಲಿ ಅವರಿಗೆ ಶೂಟಿಂಗ್ ಟೆನ್ಷನ್ ಇರೋದೆ ಸಿನಿಮಾ ಫೋಟೋ ವೀಡಿಯೋ ಲಿಕ್ ಆಗದೆ ಇರಲಿ. ಸಿನಿಮಾ ಮೇಲಿನ ಕುತೂಹಲ ಕರಗದೇ ಇರಲಿ ಅನ್ನೋದು.
ಅದಕ್ಕಾಗಿ ಬೇಕಾದ ಎಲ್ಲ ಕ್ರಮ ಕೈಗೊಂಡು ಚಿತ್ರೀಕರಣ ಮಾಡ್ತಾರೆ ಆದ್ರು ಕಣ್ತಪ್ಪಿಸಿ ಆಗ ಬಾರದ್ದೆಲ್ಲಾ ಆಗ್ಬಿಡುತ್ತೆ. ಇದೆ ಯೋಚನೆ ಯೋಜನೆಯಲ್ಲಿದ್ದ ಯಶ್ ಗೂ ದೊಡ್ಡ ಚಾಲೇಂಜ್ ತನ್ನ ಟಾಕ್ಸಿಕ್ ನ ಸೀಕ್ರೆಟ್ ಅನ್ನ ಕಾಪಾಡಿಕೊಳ್ಳೋಧೂ. ಈಗ ಶೂಟಿಂಗ್ ಸೆಟ್ ನಿಂದ ಹೊರ ಬಂದಿರೋ ಯಶ್ ಲುಕ್ ನ ಫೋಟೋ ರಾಕಿಗೆ ತಲೆ ನೋವು ತಂದಿದೆ. ಇದರ ವಿರುದ್ಧ ಕ್ರಮ ಕೈಗೊಳ್ಲೋ ಬಗ್ಗೆಯೂ ಟಾಕ್ಸಿಕ್ ಟೀಂ ಡಿಸೈಡ್ ಮಾಡಿದೆ. ಶೂಟಿಂಗ್ ಮುಗಿಯೋ ವರೆಗೆ ಟಾಕ್ಸಿಕ್ ತಂಟೆಗೆ ಬಂದ್ರೆ ಯಾರನ್ನೂ ಸುಮ್ಮನೆ ಬಿಡಲ್ಲ ಶೂಟಿಂಗ್ ಸೆಟ್ ನಿಂದ ಫೋಟೋ ವೀಡಿಯೋ ಲೀಕ್ ಮಾಡಿದ್ರೆ ಕಾನೂನು ಕ್ರಮ ಫಿಕ್ಸ್ ಎನ್ನುತ್ತಿದೆ. ಟಾಕ್ಸಿಕ್ ಮಹೂರ್ತ ಆಗಿದೆ.
ಈ ಮಹೂರ್ಥದಲ್ಲಿ ಸಿನಿಮಾದ ಫಸ್ಟ್ ಶಾಟ್ಗೆ ಯಶ್ ಸೆಟ್ಬಾಯ್ನಿಂದಲೇ ಕ್ಲ್ಯಾಪ್ ಮಾಡಿಸಿದ್ರು. ಆದರೆ ಈಗ ಅದೇ ಸೆಟ್ನಿಂದಲೇ ಟಾಕ್ಸಿಕ್ ಶೂಟಿಂಗ್ ಫೋಟೋಗಳು ಲೀಕ್ ಆಗಿವೆ. ಹೀಗಾಗೆ ಯಶ್ ಗರಂ ಆಗಿದ್ದು, ಮುಂದೆ ಯಾರಾದ್ರು ಹೀಗೆ ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳೋ ಬಗ್ಗೆ ತಮ್ಮ ತಂಡದ ಜೊತೆ ಮಾತಾಡಿದ್ದಾರಂತೆ. ಟಾಕ್ಸಿಕ್ ವರ್ಕ್ ಶುರು ಮಾಡಿ ಕೆಲವೇ ದಿನ ಆಗಿದೆ. ಈ ಸಿನಿಮಾದಲ್ಲಿ ದಿಗ್ಗಜ ಟೆಕ್ನೀಷಿಯನ್ಸ್ , ಸ್ಟಾರ್ ಕಾಸ್ಟ್ ಇದ್ದಾರೆ. ಒಂದು ಅಂದಾಜಿನ ಪ್ರಕಾರ ಭಾರತೀಯ ಚಿತ್ರರಂಗದ 14 ಕ್ಕು ಹೆಚ್ಚು ಜನ ಸ್ಟಾರ್ಸ್ ನಟಿಸುತ್ತಿದ್ದಾರೆ.
ಟಾಕ್ಸಿಕ್ ಕೆಜಿಎಫ್ ರೀತಿಯೆ ಆಕ್ಷನ್ ಧಮಾಕ ಇರೋ ಸಿನಿಮಾ ಆಗಿರೋದ್ರಿಂದ ಹಾಲಿವುಡ್ ಟಾಪ್ ಟೆಕ್ನೀಶಿಯನ್ಸ್ ಕೆಲಸ ಮಾಡುತ್ತಿದ್ದಾರೆ. ಇದೀಗ ಟಾಕ್ಸಿನ್ ಶೂಟಿಂಗ್ ಅಂಗಳಕ್ಕೆ ಹಾಲಿವುಡ್ ನ ಫೇಮಸ್ ಸ್ಟಂಟ್ ಮಾಸ್ಟರ್ ಜೆ ಜೆ ಪೆರ್ರಿ ಎಂಟ್ರಿ ಕೊಟ್ಟಿದ್ದಾರೆ. ಜೆ ಜೆ ಪೆರಿ ಶೂಟಿಂಗ್ ಸೆಟ್ ನಲ್ಲಿರೋ ಫೋಟೋಗಳು ವೈರಲ್ ಆಗುತ್ತಿವೆ. ಟಾಕ್ಸಿಕ್ ಗೀತು ಮೋಹನ್ ದಾಸ್ ಡೈರೆಕ್ಷನ್ ಸಿನಿಮಾ. ಕೆವಿಎನ್ ಪ್ರೊಡಕ್ಷನ್ ಹಾಗು ಯಶ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದ್ರೆ ಈ ಸಿನಿಮಾಗೆ ಕ್ಯಾಮೆರಾ ಹಿಡಿಯೋದು ಯಾರು ಅನ್ನೋ ಕುತೂಹಲ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಚಿತ್ರರಂಗದಲ್ಲಿ ಒಗ್ಗಟ್ಟಿಲ್ವಾ?: ರಾಕ್ಲೈನ್, ದೊಡ್ಡಣ್ಣ ಯಾರಿಗಾಗಿ ಕಲಾವಿದರ ಸಂಘದಲ್ಲಿ ಪೂಜೆ ಮಾಡಿಸುತ್ತಿದ್ದಾರೆ?
ಕೆಜಿಎಫ್ ಗೆ ಕ್ಯಾಮೆರಾ ಕೈ ಚಳಕ ತೋರಿಸಿದ್ದ ಭುವನ್ ಗೌಡ ಯಶ್ ರ ಫೇವರಿಟ್ ಕ್ಯಾಮೆರಾ ಮನ್. ಆದ್ರೆ ಟಾಕ್ಸಿಕ್ ಗೆ ಭುವನ್ ಛಾಯಗ್ರಹಕರಲ್ಲ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಪತಿ ರಾಜೀವ್ ರವಿ. ಹಿಂದಿಯ ಕಾಮಾಟಿಪುರಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ರಾಜೀವ್ ರವಿ ಈಗ ಟಾಕ್ಸಿಕ್ನಲ್ಲಿ ಕ್ಯಾಮೆರಾ ಕೈಚಳಕ ತೋರಿಸಿ ಅದಿನ್ನೇಗೆ ಮೋಡಿ ಮಾಡುತ್ತಾರೋ ಕಾದು ನೋಡಬೇಕು.