ದೆವ್ವದ ಜೊತೆ ಫಸ್ಟ್​ ನೈಟ್​ ಹೇಗಿತ್ತು? ಟೀಸರ್​ನಲ್ಲಿದೆ ಇದರ ಗುಟ್ಟು: 'ಒಳ್ಳೆ ಹುಡುಗ' ಪ್ರಥಮ್​ ಹೇಳಿದ್ದೇನು?

'ಒಳ್ಳೆ ಹುಡುಗ' ಪ್ರಥಮ್​ ಅವರ ಫಸ್ಟ್​ ನೈಟ್​ ವಿತ್​ ದೆವ್ವ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಏನಿದರ ಕಥೆ?
 


ಬಿಗ್​ಬಾಸ್​ ಖ್ಯಾತಿಯ ಪ್ರಥಮ್​ ಅವರು ತಮ್ಮ ಮದುವೆಯ ದಿನವೇ, ಫಸ್ಟ್ ನೈಟ್ ವಿತ್ ದೆವ್ವ (First Night With Devva) ಚಿತ್ರದ ಬಗ್ಗೆ ಘೋಷಿಸಿ ಸಕತ್​ ಸುದ್ದಿಯಾಗಿದ್ದರು.  ಪ್ರಥಮ್​ ಅವರು ಅತ್ತ ನಿಜ ಜೀವನದಲ್ಲಿ ಮದ್ವೆಯಾಗಿದ್ದರೆ, ಇತ್ತ ಅವರ   ಫಸ್ಟ್ ನೈಟ್ ವಿತ್ ದೆವ್ವ ಅನ್ನೋ ಸಿನಿಮಾ ಶುರು ಮಾಡಿದ್ದರು. . ತಮ್ಮ ಮದುವೆಯ ದಿನವೂ ಅಸಲಿ ಪತ್ನಿಯ ಜೊತೆಗಿನ ಫೋಟೋ ಹಾಕಿಕೊಳ್ಳುವ ಬದಲು ಪ್ರಥಮ್​ ಅವರು ಸಿನಿಮಾ ಪ್ರಮೋಷನ್​ ಮಾಡಿಕೊಳ್ಳಲು ಸಿನಿಮಾದ ಹೀರೊಯಿನ್​ ನಿಖಿತಾ ಜೊತೆ ಫೋಟೋ ಶೇರ್​ ಮಾಡಿಕೊಂಡಿದ್ದರು. ಆದ್ದರಿಂದ ಇವರ ರಿಯಲ್​ ಪತ್ನಿ ಹಾಗೂ ರೀಲ್​ ಪತ್ನಿಯ ನಡುವೆ ಕನ್​ಫ್ಯೂಸ್​ ಆಗಿರುವ ಫ್ಯಾನ್ಸ್​, ಮದುವೆಯ ದಿನವೇ ಈ ಫೋಟೋ ನೋಡಿ ನಾಯಕಿಯನ್ನೇ ಮದುಮಗಳು ಎಂದು ತಿಳಿದು ಮದುವೆಯ ಶುಭ ಹಾರೈಸುತ್ತಿದ್ದರು. 

ಇದೀಗ ಫಸ್ಟ್​ ನೈಟ್​ ವಿತ್​ ದೆವ್ವದ ಟೀಸರ್​ ಬಿಡುಗಡೆಯಾಗಿದೆ. ಇದು  ಹಾರರ್ ವಿತ್ ಕಾಮಿಡಿ  ಸಿನಿಮಾ. ನಿಖಿತಾ, ಮಾನ್ಯ ಸಿಂಗ್ ನಾಯಕಿಯರು. ಹಿರಿಯ ನಟ ಶ್ರೀನಿವಾಸ ಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಥಮ್ ಬರೆದ ಕತೆಗೆ ನಿರ್ದೇಶಕ ಪಿ.ವಿ.ಆರ್ ಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.   ಈ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಳೆದ ನವೆಂಬರ್ ನಲ್ಲಿ ಈ ಚಿತ್ರ ಆರಂಭವಾಗಿತ್ತು. ಚಿತ್ರ ಆರಂಭವಾದ ತಕ್ಷಣ ಮೊದಲು ಬರುವ ಸನ್ನಿವೇಶವೇ ಮದುವೆ ದೃಶ್ಯ. ಮದುವೆಯನ್ನು ಬಹಳ ಆಸೆಯಿಂದ ಆದ ಹುಡುಗನಿಗೆ ತನ್ನ ಮೊದಲರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ? ಎಂಬುದೆ ಚಿತ್ರದ ಕಥಾಸಾರಾಂಶ.

Latest Videos

ಮದ್ವೆ ದಿನವೂ ಮೂವಿ ಹೆಂಡ್ತಿ ಫೋಟೋ ಹಾಕಿ ಅಭಿಮಾನಿಗಳನ್ನು ಕನ್​ಫ್ಯೂಸ್​ ಮಾಡಿದ ಪ್ರಥಮ್!

ಅಂದಹಾಗೆ  ಟೀಸರ್ ಆರಂಭವಾಗುವುದೇ  ಫೇಕ್​ ಪ್ರಮೋಷನ್​ನೊಂದಿಗೆ. ಈ ಕುರಿತು ಚಿತ್ರತಂಡದವರು ಸೂಚನೆ ನೀಡಿದ್ದಾರೆ. ‘ಯಾವುದೇ ಸುಳ್ಳು ಪ್ರಚಾರದ ಮೂಲಕ ನಾವು ಜನರನ್ನು ಯಾಮಾರಿಸುವ ಕೆಲಸ ಮಾಡಲ್ಲ. ಕನ್ನಡ ಚಿತ್ರರಂಗವನ್ನು ಫೇಕ್​ ರಾಕ್ಷಸರಿಂದ ಕಾಪಾಡಿ’ ಎಂದು ತಿಳಿಸಲಾಗಿದೆ. ಅಷ್ಟಕ್ಕೂ ಈ ರೀತಿ ಸಂದೇಶ ಕೊಡುವ ಹಿಂದೆಯೂ ಕಾರಣ ಇದೆ ಎಂದು ಇದಾಗಲೇ  ಪ್ರಥಮ್​ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.  ‘ಈ ಮೊದಲು ದಿನವೊಂದಕ್ಕೆ  ಲಕ್ಷ ಲಕ್ಷ ವೀವ್ಸ್​ ಅಂತಿದ್ದರು. ಬರುಬರುತ್ತಾ ಅದು  ಒಂದು ಗಂಟೆಗೆ 10 ಲಕ್ಷ ವೀವ್ಸ್​ ಎನ್ನುತ್ತಾರೆ, ಇನ್ನೂ ಕೆಲವರು ಇನ್ನೂ ಮುಂದಕ್ಕೆ ಹೋಗಿ  ಅರ್ಧ ಗಂಟೆಗೆ 5 ಮಿಲಿಯನ್​ ಅಂತೆಲ್ಲಾ  ಹಾಕಿಕೊಳ್ತಾರೆ. ಇಂಥ ಫೇಕ್​ ರಾಕ್ಷಸರಿಂದ ಚಿತ್ರರಂಗವನ್ನು ಕಾಪಾಡಬೇಕು. ಇತ್ತೀಚೆಗೆ ಪೇಯ್ಡ್​ ಪ್ರಮೋಷನ್​, ಫೇಕ್​ ಪ್ರಮೋಷನ್​ ಆಗುತ್ತಿದೆ ಎಂದಿದ್ದರು.

ಇನ್ನು, ಫಸ್ಟ್ ನೈಟ್ ವಿತ್ ದೆವ್ವದ ಕುರಿತು ಹೇಳುವುದಾದರೆ,  ಈ ಸಿನಿಮಾಗೆ ಪಿವಿಆರ್​ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ನವೀನ್ ಬೀರಪ್ಪ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಥಮ್​ ಜೊತೆ ನಿಖಿತಾ, ಜೀವಿತಾ, ಸುಷ್ಮಿತಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರದ ಕುರಿತು ಮಾತನಾಡಿರುವ ಪ್ರಥಮ್​, ಈ ಚಿತ್ರದಲ್ಲಿ ನಗುವಿಗೆ ಬರವಿಲ್ಲ. ಹಾರಾರ್, ಕಾಮಿಡಿ, ಆಕ್ಷಮ್ ಹಾಗೂ ಸೆಂಟಿಮೆಂಟ್​ ಎಲ್ಲವೂ ಇದೆ ಎಂದಿದ್ದರು. ಅಂದಹಾಗೆ ಈ ಚಿತ್ರಕ್ಕೆ  ಕಥೆ, ಚಿತ್ರಕಥೆ ಬರೆದವರು ಪ್ರಥಮ್​ ಅವರೇ.   ನಿಖಿತ ಪತ್ನಿಯ ಪಾತ್ರ ಮಾಡಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರಮೇಶ್ ಭಟ್, ಹರೀಶ್ ರಾಜ್ ಮುಂತಾದವರು ಚಿತ್ರದಲ್ಲಿದ್ದಾರೆ.  ನವೆಂಬರ್​ನಲ್ಲಿ ಚಿತ್ರದ ಶೂಟಿಂಗ್​ ಆರಂಭವಾಗಿತ್ತು. ಶೀಘ್ರದಲ್ಲಿಯೇ ಇದು ಪೂರ್ಣಗೊಂಡಿದೆ.  ಮುಂದಿನ ತಿಂಗಳು ತೆರೆಗೆ ಬರುವ ನಿರೀಕ್ಷೆ ಇದೆ. 

ರಾಮಲಲ್ಲಾ ಪ್ರತಿಷ್ಠಾಪನೆಗೆ ಪ್ರಥಮ್​ ಧಮಾಕಾ: ರಜೆ, ಡಬಲ್​ ಸಂಬಳ ಜೊತೆ ವಿಮಾನದಲ್ಲಿ ಅಯೋಧ್ಯೆ ದರ್ಶನ!
 

click me!