ನೋಡುಗರಿಗೆ, ಕೇಳುಗರಿಗೆ ಅಸಹ್ಯ ಅನಿಸಬಾರದು; ಹಾಗೆ ಮಾತನಾಡಬೇಕು: ನಟ ಪ್ರಕಾಶ್ ರಾಜ್

By Shriram Bhat  |  First Published Feb 26, 2024, 7:24 PM IST

ಕಾಟೇರ ಸಿನಿಮಾ ಶೀರ್ಷಿಕೆ ವಿಚಾರವಾಗಿ ಶುರುವಾದ ದರ್ಶನ್-ಉಮಾಪತಿ ಗೌಡ ವಿವಾದ ಇದೀಗ ದೂರು ನೀಡುವವರೆಗೂ ತಲುಪಿದೆ. ನಿರ್ಮಾಪಕ ಉಮಾಪತಿ ಪರವಾಗಿ ಒಕ್ಕಲಿಗ ಸಮುದಾಯ ಒಟ್ಟಾಗಿ ದರ್ಶನ್‌ ವಿರುದ್ಧ ತಿರುಗಿ ಬಿದ್ದಿದೆ.


ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್‌ (Darshan) ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ (Umapathy Srinivas Gowda) ನಡುವಿನ 'ಕಾಟೇರ' ಸಿನಿಮಾ ಟೈಟಲ್ ವಿವಾದಕ್ಕೆ ನಟ ಪ್ರಕಾಶ್‌ ರಾಜ್‌ (Prakash Raj) ಪ್ರತಿಕ್ರಿಯಿಸಿದ್ದಾರೆ. 'ಇಬ್ಬರದೂ ಭಾಷೆ ತಪ್ಪಾಗಿದೆ, ಕೇಳೋಕೆ ಕಷ್ಟವಾಗುತ್ತೆ... ತುಂಬಾ ಜನರು ಸೇರಿರುವ ವೇದಿಕೆ ಮೇಲೆ ಆಡಿರುವ ಅಂಥ ಮಾತುಗಳನ್ನು ಕೇಳುವುದಕ್ಕೆ ಮುಜುಗರ ಆಗುತ್ತೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 'ನಮ್ಮ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್‌ ಹೇಗಿದ್ದರು, ಹೇಗೆ ಮಾತನಾಡಬೇಕು ಎಂದು ಅವರನ್ನು ನೋಡಿಯಾದರೂ ಕಲಿಯಬೇಕು' ಎಂದಿದ್ದಾರೆ.

ಕಾಟೇರ ಸಿನಿಮಾ ಶೀರ್ಷಿಕೆ ವಿಚಾರವಾಗಿ ಶುರುವಾದ ದರ್ಶನ್-ಉಮಾಪತಿ ಗೌಡ ವಿವಾದ (Darshan Umapathy Gowda Controversy) ಇದೀಗ ದೂರು ನೀಡುವವರೆಗೂ ತಲುಪಿದೆ. ನಿರ್ಮಾಪಕ ಉಮಾಪತಿ ಪರವಾಗಿ ಒಕ್ಕಲಿಗ ಸಮುದಾಯ ಒಟ್ಟಾಗಿ ದರ್ಶನ್‌ ವಿರುದ್ಧ ತಿರುಗಿ ಬಿದ್ದಿದೆ. 'ತಗಡು, ಗುಮ್ಮಿಸ್ಕೋತಿಯ' ಎಂಬ ಪದ ಬಳಕೆ ಮಾಡಿದ್ದಕ್ಕೆ ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಒಕ್ಕಲಿಗ ಸಮುದಾಯ ಪಟ್ಟು ಹಿಡಿದಿದೆ. ಇದೊಂದು ಕಡೆಯಾದರೆ, 'ಇವತ್ತು ಇವಳು, ನಾಳೆ ಅವಳು' ಎಂಬ ದರ್ಶನ್‌ ಮಾತಿಗೂ ಹಲವು ಮಹಿಳಾ ಸಂಘಟನೆಗಳೂ ಕೆಂಡ ಕಾರುತ್ತಿದ್ದಾರೆ.

Tap to resize

Latest Videos

ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು; ಜಸ್ಕರಣ್‌-ಅನುಶ್ರೀ ಫೋಟೋಗೆ ಬಂದೇಬಿಡ್ತು ಕಾಮೆಂಟ್!

'ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ಇಬ್ಬರ ಭಾಷೆಯೂ ಸರಿ ಇಲ್ಲ. ಕನ್ನಡ ಭಾಷೆಯನ್ನು ನೀವು ಅಪ್ಪಾಜಿ ಹತ್ರ ಕಲೀಬೇಕು. ಭಾಷೆ ಅಂದ್ರೆ ಬರೀ, ಕನ್ನಡ ಮಾತನಾಡೋದಲ್ಲ, ಅದರೊಳಗಿನ ವಿನಯ, ಅಗಾಧ ಜ್ಞಾನ, ನಿಮ್ಮ ಅನುಭವ, ನೀವು ಹೊರಗಡೆ ಆಡುವ ಮಾತಿನ ಮೂಲಕ ನಿಮ್ಮ ಮನದೊಳಗಿನ ಸೌಂದರ್ಯ ಹೊರಗಡೆಗೆ ಬರುತ್ತೆ. ಸುಮ್ನೆ ಮಾತನಾಡೋದಲ್ಲ. ಅದು ಕಿರಿಕಿರಿಯಾಗುತ್ತೆ. ಯಾರು ಏನು ಹೇಳಿದ್ರು ಅನ್ನೋದು ಮುಖ್ಯ ಅಲ್ಲ. ಇಬ್ಬರ ಭಾಷೆ ತಪ್ಪಾಗಿದೆ. ಕೇಳೋಕೆ ಕಷ್ಟವಾಗುತ್ತೆ. ಮುಜುಗರ ಆಗುತ್ತೆ. ನಮ್ಮಂಥವರಿಗಂತೂ ಮುಜುಗರ ಆಗುತ್ತೆ. ಸರಿ ಮಾಡ್ಕೋಬೇಕು.

ಕೆಟ್ಟ ಚಟಗಳಿಲ್ಲದ ಸಾಫ್ಟ್ ಫ್ಯಾಮಿಲಿ ಬಾಯ್; ಸಮಂತಾ ಮಾತಿಗೆ ಮುಗುಳ್ನಕ್ಕ ವಿಜಯ್ ದೇವರಕೊಂಡ

ಅಪ್ಪಾಜಿ (Dr Rajkumar) ಅವರು ಹೇಗೆ ಮಾತಾಡ್ತಿದ್ರು? ಅವರ ನಿಲುವುಗಳು ಏನಿದ್ದವು ಎಂಬುದು ಮುಖ್ಯ ಅಲ್ಲ. ಆದರೆ ಅವರ ಭಾಷೆಯಲ್ಲಿದ್ದ ಧೀಮಂತಿಕೆ. ಒಂದು ಘನತೆ, ಒಂದು ಗಾಂಭೀರ್ಯ, ಒಂದು ಪ್ರೀತಿ, ಅಗಾಧ ಜ್ಞಾನ, ಅನುಭವಕ್ಕೆ ತಕ್ಕಹಾಗೆ ಇತ್ತು. ಅದನ್ನು ನಾವೆಲ್ಲರೂ ಪಾಲಿಸಬೇಕು. ನೋಡುಗರಿಗೆ, ಕೇಳುಗರಿಗೆ ಅಸಹ್ಯ ಅನಿಸಬಾರದು. ಜನರ ಪ್ರೀತಿ ಕಲಾವಿದನಿಗೆ ಸಿಕ್ತಾ ಸಿಕ್ತಾ ಹೋದಂತೆ, ಅವನು ಸುಂದರವಾಗಬೇಕೇ ಹೊರತು ಅಸಹ್ಯ ಆಗಬಾರದು. ಯಾರು ಸರಿ, ಯಾರದ್ದು ತಪ್ಪು ಎಂಬುದು ಮುಖ್ಯ ಅಲ್ಲ. ಒಬ್ಬ ಪ್ರೇಕ್ಷಕನಾಗಿ, ಒಬ್ಬ ಪ್ರಜೆಯಾಗಿ, ಒಂದು ಕುಟುಂಬದ ಸದಸ್ಯನಾಗಿ ನನಗೆ ಆ ಭಾಷೆ ಇಷ್ಟ ಆಗಿಲ್ಲ. 

ಕರ್ನಾಟಕದಲ್ಲಿದ್ದ ಜಮೀನು ಕಳೆದುಕೊಂಡ್ವಿ, ಚೆನ್ನೈನಲ್ಲಿ ಚಿಕ್ಕ ಮನೆಯಲ್ಲಿದ್ವಿ; ಎಸ್‌ಎಸ್‌ ರಾಜಮೌಳಿ

ಅದರಲ್ಲೂ ಮುಖ್ಯವಾಗಿ ವೇದಿಕೆ ಮೇಲೆ ಯಾವಾಗಲೂ ಚೆನ್ನಾಗಿಯೇ ಮಾತನಾಡಬೇಕು. ಯಾರೋ ಏನೋ ಮಾತನಾಡ್ತಾರೆ ಅಂತ ಹಾಗೇ ನಾವೂ ಮಾತನಾಡೋಕೆ ಆಗಲ್ಲ. ಜನ ನಮ್ಮನ್ನು ಪ್ರೀತಿಯಿಂದ ಒಂದು ಸ್ಥಾನದಲ್ಲಿ ನಿಲ್ಲಿಸಿರ್ತಾರೆ. ಅವರಿಗೆ ನಾವು ನಟರು, ಕಲಾವಿದರು ಮಾದರಿಯಾಗಬೇಕು. ನಮ್ಮ ಮಾತುಗಳ ಮೂಲಕ, ನಮ್ಮ ಅನುಭವಗಳ ಮೂಲಕ, ನಾವು ಹಂಚಿಕೊಳ್ಳುವ ವಿಷಯದ ಮೂಲಕವೇ ಜನ ನಮ್ಮನ್ನು ಅಳೆಯುತ್ತಾರೆ, ಅರಿಯುತ್ತಾರೆ. ಪ್ರೇಕ್ಷಕರು ಎಲ್ಲರಿಗೂ ಮೇಲ್ಮಟ್ಟದ ಸ್ಥಾನ ಕೊಡಲ್ಲ. ನಿಮ್ಮ ಮಾತುಗಳನ್ನು ಕೇಳುವಷ್ಟು ಜನ ಅಲ್ಲಿದ್ದಾಗ, ಭಾಷೆಯ ಮೇಲೆ ಹಿಡಿತ ಇರಬೇಕು. ಅದಕ್ಕಾಗಿ ನಿಮ್ಮ ಅಂತರಂಗದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು' ಎಂದಿದ್ದಾರೆ ಪ್ರಕಾಶ್‌ ರಾಜ್.‌

click me!