
ಕನ್ನಡಿಗರ ವರನಟ, ಪದ್ಮಭೂಷಣ ಡಾ ರಾಜ್‌ಕುಮಾರ್ (Dr Rajkumar) ಬಗ್ಗೆ ಕನ್ನಡಿಗರಿಗೆ ಬಹಳಷ್ಟು ಸಂಗತಿ ಗೊತ್ತು. ಅಣ್ಣಾವ್ರ ಸಿನಿಮಾ ಜೀವನ ಹೇಗಿತ್ತು ಅಂತ ಎಲ್ಲರಿಗೂ ಗೊತ್ತು. ಆದರೆ, ನಿಜ ಜೀವನದಲ್ಲಿ ಡಾ ರಾಜ್‌ಕುಮಾರ್ ಹೇಗಿದ್ರು ಅನ್ನೋದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಡಾ ರಾಜ್‌ಕುಮಾರ್ ಅವರು ಮನೆಯಲ್ಲಿ ಹೇಗೆ ಇರುತ್ತಿದ್ದರು, ಅವರ ದಿನಚರಿ ಹೇಗೆ ಇರುತ್ತಿತ್ತು ಎಂಬುದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅವರು ತುಂಬಾ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು. ಅವರಿಗೆ ತುಂಬಾ ಜ್ಞಾಪಕ ಶಕ್ತಿ ಇತ್ತು. ಹೇಳುತ್ತಾ ಹೋದರೆ ಒಂದೆರಡಲ್ಲ...
ಒಮ್ಮೆ ಯಾರೋ ಒಬ್ಬರು 'ನೀವು ಕರ್ನಾಟಕದಲ್ಲಿ ಓಡಾಡಿದ ಜಾಗಗಳು ಎಷ್ಟು? ನಿಮಗೇನಾದ್ರೂ ನೆನಪಿದ್ಯಾ?' ಎಂದು ಅಣ್ಣಾವ್ರನ್ನು ಕೇಳಿದ್ದಾರೆ. ಅದಕ್ಕೆ ಡಾ ರಾಜ್‌ಕುಮಾರ್ ಅವ್ರು, ನಾನು ಸಾಕಷ್ಟು ಸ್ಥಳಗಳನ್ನು ಓಡಾಡಿದ್ದೇನೆ. ಕೆಲವು ಶೂಟಿಂಗ್‌ಗೆ ಹೋಗಿರೀ ಸ್ಥಳಗಳು, ಕೆಲವು ಹಾಗೇ ಕಾರ್ಯಕ್ರಮಗಳಿಗೆ ಹೋದ ಜಾಗಗಗಳು. ಇನ್ನೂ ಕೆಲವು ಸ್ಥಳಗಳನ್ನು ನಾನು ವೈಯಕ್ತಿತವಾಗಿ ಭೇಟಿ ನೀಡಿದ್ದಾನೆ. ಅವುಗಳಲ್ಲಿ ಕೆಲವು ಹೆಸರುಗಳು ನೆನಪಿವೆ. ಹೀಗೆ ಹೇಳಿದ ಡಾ ರಾಜ್ ಅವರು ಒಂದೇ ಸವನೇ 50ಕ್ಕೂ ಹೆಚ್ಚು ಜಾಗಗಳ ಹೆಸರುಗಳನ್ನು ಮಧ್ಯೆ ಉಸಿರು ಕೂಡ ತೆಗೆದುಕೊಳ್ಳದೇ ಹೇಳಿದ್ದಾರೆ. ಅದನ್ನು ಕೇಳಿ ಅಲ್ಲಿ ಪ್ರಶ್ನೆ ಕೇಳಿ ಉತ್ತರ ಕೇಳಿಸಿಕೊಂಡವರೇ ಶಾಕ್ ಆಗಿದ್ದಾರೆ.
19ನೇ ಪುಣ್ಯ ತಿಥಿ: ಅಣ್ಣಾವ್ರ ಈ ಸೀಕ್ರೆಟ್ ಇನ್ನೂ ಗೊತ್ತಿಲ್ವಾ?
ಅಷ್ಟೊಂದು ಹೆಸರುಗಳನ್ನು ಡಾ ರಾಜ್‌ಕುಮಾರ್ ಅವರು ನೆನಪಿಟ್ಟುಕೊಂಡಿದ್ದಾರೆ ಎಂಬ ಸಂಗತಿ ನಿಜವಾಗಿಯೂ ಅಚ್ಚರಿ ಮೂಡಿಸುತ್ತದೆ. ಕಾರಣ, ಅಷ್ಟೊಂದು ಹೆಸರುಗಳನ್ನು ಸಾಮಾನ್ಯ ಮನುಷ್ಯರು ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ. ಆದರೆ, ಡಾ ರಾಜ್‌ಕುಮಾರ್ ಅವರು ಸಾಮಾನ್ಯರಲ್ಲ, ಅಸಾಮಾನ್ಯರು. ಅದಕ್ಕೇ ಅವರಿಂದ ಅದು ಸಾಧ್ಯವಾಗಿದೆ ಎನ್ನಬಹುದು. ಹೌದು, ಡಾ ರಾಜ್‌ಕುಮಾರ್ ಅವರಿಗೆ ಅತಿಯಾದ ನೆನಪಿನ ಶಕ್ತಿ ಇತ್ತು, ಭಾಷಾ ಜ್ಞಾನ ಇತ್ತು, ಅತಿಯಾದ ಉಚ್ಛಾರ ಸ್ಪಷ್ಟತೆ ಇತ್ತು, ಧ್ವನಿ ಚೆನ್ನಾಗಿತ್ತು, ಯೋಗ-ಯೋಗಾಸನ ಮಾಡಿ ದೇಹ-ಮನಸ್ಸುಗಳನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ಇವೆಲ್ಲಾ ಇರೋದ್ರಿಂದಲೇ ಅವರು ಅಷ್ಟೊಂದು ಎತ್ತರಕ್ಕೆ ಏರಲು ಸಾಧ್ಯವಾಯ್ತು.
ಇಲ್ನೋಡಿ, ಡಾ ರಾಜ್‌ಕುಮಾರ್ ದ್ವಿತೀಯ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಅವರು ಸಂದರ್ಶನವೊಂದರಲ್ಲಿ ಡಾ ರಾಜ್‌ಕುಮಾರ್ ಅವರ ಹಲವು ಸೀಕ್ರೆಟ್‌ಗಳನ್ನು ಹಂಚಿಕೊಂಡಿದ್ದಾರೆ. 'ಅಪ್ಪಾಜಿ (ಡಾ ರಾಜ್‌ಕುಮಾರ್) ಅವರನ್ನು ನಾನು 30 ವರ್ಷಕ್ಕೂ ಹೆಚ್ಚು ಕಾಲ ದಿನಾಲೂ ನೋಡಿದ್ದೇನೆ. ಅವರ ದಿನಚರಿ, ವೃತ್ತಿ, ಪ್ರವೃತ್ತಿ ಎಲ್ಲವನ್ನೂ ನಾನು ಚೆನ್ನಾಗಿ ಅರಿತಿದ್ದೇನೆ. ನನಗೆ ಬುದ್ದಿ ಬಂದಾಗಿನಿಂದ ನಾನು ನೋಡಿದಂತೆ ಅವರು ಮುಂಜಾನೆ 3 ಗಂಟೆಗೇ ಎದ್ದೇಳುತ್ತಿದ್ದರು. ಲೈಟ್ ಹಾಕದೇನೇ ಮೆಲ್ಲಗೆ ಎದ್ದು ಹೋಗಿ, ಸ್ನಾನ ಮಾಡಿ, ಪೂಜೆ ಮಾಡಿ ಆಮೇಲೆ ಯೋಗ ಮಾಡೋಕೆ ಕುಳಿತುಕೊಳ್ತಾ ಇದ್ರು.. ಯೋಗ ಮುಗಿದ್ಮೇಲೆ ಬಟ್ಟೆಯಿಂದ ಮೈನೆಲ್ಲಾ ವರಸ್ಕೊಂಡು, ಬಳಿಕ ಕಾರಿನ ಹತ್ರ ಬರ್ತಾ ಇದ್ರು, ಶೂಟಿಂಗ್ ಹೋಗೋದಕ್ಕೆ.
ಸಿಕಂದರ್ ಸೋಲು ಮರೆತು ಮತ್ತೆ ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್..!
ಕಾರಿನ ಹತ್ರ ಬಂದ್ಮೇಲೆ 'ಪಾರ್ವತಿ ಟೈಮ್ ಎಷ್ಟು ಆಗಿದೆ' ಅಂತ ಅಪ್ಪಾಜಿ ಕೇಳ್ತಾ ಇದ್ರು. ಅಗ ಅಮ್ಮ 'ಕರೆಕ್ಟಾಗಿ 7.45 ಆಗಿದೆ ರೀ' ಅಂತಾ ಇದ್ರು. ಆದ್ರೆ, ಅಪ್ಪ ಬೆಳಿಗ್ಗೆ ಏಳೋದಕ್ಕಾಗ್ಲೀ ಅಥವಾ ಸ್ನಾನ, ಪೂಜೆ ಹಾಗೂ ಯೋಗ ಮಾಡೋದಕ್ಕಾಗ್ಲೀ ಯಾವತ್ತೂ ಟೈಮ್ ನೋಡ್ತಾ ಇರ್ಲಿಲ್ಲ. ಆದ್ರೂ ಕೂಡ, ಬೆಳಿಗ್ಗೆ ಕರೆಕ್ಟಾಗಿ 3 ಕ್ಕೆ ಏಳ್ತಾ ಇದ್ರು, 7.45 ಕ್ಕೆ ಅವರು ಸರಿಯಾಗಿ ತಮ್ಮ ದೈನಂದಿನ ಕೆಲಸ ಮಾಡಿ ಮುಗಿಸ್ತಾ ಇದ್ರು. ಅಷ್ಟು ಸರಿಯಾಗಿ ಅಪ್ಪಾಜಿ ದಿನಾಲೂ ತಮ್ಮ ಟೈಂ ಅನ್ನು ಮ್ಯಾನೇಜ್ ಮಾಡ್ತಾ ಇದ್ದರು ಅನ್ನೋದು ಅಚ್ಚರಿ ಎನ್ನಿಸಿದರೂ ಸತ್ಯ.
ಮನೆಯಿಂದ ಹೊರಗೆ ಹೋಗುವಾಗ, ಮನೆಯಲ್ಲಿ ಇರೋ ಎಲ್ಲಾ ದೇವರುಗಳಿಗೆ ನಮಸ್ಕಾರ ಮಾಡಿ, ಮನೆ ಬಳಿ ಇರೋ ಗಿಡಗಳನ್ನು, ನಾಯಿ, ಹಸುವನ್ನು ಮಾತನಾಡಿಸಿಕೊಂಡು, ಬಳಿಕ ಶೂಟಿಂಗ್‌ಗೆ ಹೋಗ್ತಾ ಇದ್ರು. ಹಾಗೇ, ಸಾಯಂಕಾಲ 6 ಗಂಟೆಗೆ ಮನೆಗೆ ಬಂದವ್ರು ಅಷ್ಟೇ, ಹಸು, ನಾಯಿನ, ಗಿಡಗಳನ್ನು ಮಾತನ್ನಾಡಿಸಿಕೊಂಡು, ದೇವರ ಮನೆಗೆ ಹೋಗ್ಬಿಟ್ಟು ಮೆಡಿಟೇಶನ್ ಮಾಡಿ ಮನೆಯ ಒಳಕ್ಕೆ ಬರ್ತಾ ಇದ್ರು. ಅದಾದ್ಮೇಲೆ ಊಟ ಮಾಡ್ಕೊಂಡು ಸರಿಯಾಗಿ 8 ಗಂಟೆಗೆ ನಿದ್ದೆ ಮಾಡ್ತಾ ಇದ್ರು. ಅಪ್ಪಾಜಿ ಈ ಅಭ್ಯಾಸವನ್ನು ಯಾವತ್ತೂ ತಪ್ಪಿಸಿಲ್ಲ. ನಾನು 35 ವರ್ಷ ಅದನ್ನು ಕಣ್ಣಾರೆ ನೋಡಿದೀನಿ.
'ಜೈಲರ್ 2'ನಲ್ಲಿ ರಜನಿಕಾಂತ್ ಜೊತೆ ಇನ್ನೊಬ್ರು ಇರೋದು ಪಕ್ಕಾ.. ನಿರೀಕ್ಷೆ ನಿಜವಾಗಿದೆ!
ಅಪ್ಪಾಜಿ ಸಮ್ನೆ ರಾಜ್‌ಕುಮಾರ್ ಆಗಿಲ್ಲ. ಅದರ ಹಿಂದೆ ಅಷ್ಟೇ ದೊಡ್ಡ ತ್ಯಾಗ ಇತ್ತು, ಡೆಡಿಕೇಶನ್ ಇತ್ತು. ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ಅಷ್ಟೊಂದು ಸಂಯಮ ಹಾಗೂ ಶಿಸ್ತು ಪಾಲಿಸ್ತಾ ಇದ್ರು.. ಹುಶಾರು ತಪ್ಪಿದ್ರೂ ಕೂಡ ಅವ್ರು ಒಂದು ದಿನ ಕೂಡ ಈ ಅಭ್ಯಾಸ ತಪ್ಸಿಲ್ಲ ಅಪ್ಪಾಜಿ. ಅವ್ರು ಕೇವಲ ಸಿನಿಮಾ ಮಾಡಿದ್ದು ಮಾತ್ರ ಅಲ್ಲ, ಅದಕ್ಕಾಗಿಯೇ ಅವ್ರ ಜೀವನವನ್ನ ಮುಡಿಪಾಗಿ ಇಟ್ಬಿಟ್ರು.
ನಮಗೆ, ಅಂದ್ರೆ ಎಲ್ಲ ಮಕ್ಕಳಿಗೆ ಮದುವೆ ಆದ್ಮೇಲೆ ಕೂಡ ನಾವೆಲ್ಲಾ, ನಮ್ಮ ತಂದೆ, ನಮ್ಮ ತಾಯಿ, ತಮ್ಮ, ನಾನು-ನನ್ ಹೆಂಡ್ತಿ, ನನ್ ದೊಡ್ಡ ಮಗ ಎಲ್ಲರೂ ಒಂದೇ ರೂಮಲ್ಲಿ ಮಲಗ್ತಿದ್ವಿ.. ಕಾರಣ, ಕುಟುಂಬ ಅಂದ್ಮೇಲೆ ನಮ್ಮ ಮನೆಯವ್ರು ಎಲ್ರೂ ಮಲಗಿದಾಗ ಕೂಡ ಕೂಗಳತೆ ದೂರದಲ್ಲಿ ಇರ್ಬೇಕು ಅಂತ.. ಅಷ್ಟೇ ಅಲ್ಲ, ಕರೆಂಟ್ ಖರ್ಚು ಕಡಿಮೆ ಆಗುತ್ತೆ ಅಂತ.. ಅಲ್ಲೇ ಇರೋದ್ರಿಂದ ಯಾರೇ ಕರೆದ್ರೂ ಸಿಗ್ತಾರೆ ಅನ್ನೋ ಗ್ಯಾರಂಟಿ ನಮ್ಗೆ ಎಲ್ರಲ್ಲೂ ಇರ್ತಿತ್ತು. ಅದ್ರಿಂದ ನಮ್ಮಲ್ಲಿ ಬಾಂಡಿಂಗ್ ಕೂಡ ತುಂಬಾ ಜಾಸ್ತಿನೇ ಇತ್ತು.
ಮೋದಿ ಜೊತೆ ಯಶ್, ಅಂದಿನ ಮಾತುಕತೆ ಈಗ್ಯಾಕೆ ಮತ್ತೆ ವೈರಲ್ ಆಗ್ತಿದೆ?.. ಏನ್ ಮ್ಯಾಟರ್..?
ನಾವು ಎಷ್ಟು ಅನ್ಯೋನ್ಯವಾಗಿ ಇದ್ವಿ ಅಂದ್ರೆ, ಸತ್ತು ಸ್ವರ್ಗ ನೋಡ್ಬೇಕಾಗಿಲ್ಲ, ಬದುಕಿದ್ದಾಗ್ಲೇ ನೋಡ್ಬಹುದು ಅಂತ ನಮ್ಮ ಅಪ್ಪಾಜಿ ತೋರಿಸಿಕೊಟ್ಟು ಹೋಗಿದಾರೆ. ಅಷ್ಟೇ ಅಲ್ಲ, ಕುಟುಂಬದ ಜೊತೆ ಬಾಂಧವ್ಯ ಹೇಗೆ ಇರ್ಬೇಕು ಅನ್ನೋದನ್ನ ಕೂಡ ನಾವು ನಮ್ಮ ಅಪ್ಪಾಜಿನ ನೋಡಿನೇ ಕಲಿತ್ಕೊಂಡಿದ್ದು.. ಬೆಳಿಗ್ಗೆ 3 ಗಂಟೆಗೇ ಎದ್ದೇಳ್ತಾ ಇದ್ರು. .' ಅಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.