ಅದ್ದೂರಿ ಪ್ರೈವೇಟ್‌ ಜೆಟ್‌ನಲ್ಲಿ 45 ತಂಡ ದೇಶ ಸಂಚಾರ: ಫೋಟೋ ವೈರಲ್‌!

Published : Apr 16, 2025, 05:49 PM ISTUpdated : Apr 16, 2025, 05:53 PM IST
ಅದ್ದೂರಿ ಪ್ರೈವೇಟ್‌ ಜೆಟ್‌ನಲ್ಲಿ 45 ತಂಡ ದೇಶ ಸಂಚಾರ: ಫೋಟೋ ವೈರಲ್‌!

ಸಾರಾಂಶ

ಸ್ಟೈಲಿಶ್‌ ಪ್ರೈವೇಟ್‌ ಜೆಟ್‌ ಮುಂದೆ ನಿರ್ದೇಶಕ ಅರ್ಜುನ್‌ ಜನ್ಯಾ, ನಾಯಕ ನಟರಾದ ಶಿವರಾಜ್‌ಕುಮಾರ್‌, ಉಪೇಂದ್ರ, ನಿರ್ಮಾಪಕ ರಮೇಶ್ ರೆಡ್ಡಿ, ಗೀತಾ ಶಿವರಾಜ್‌ಕುಮಾರ್‌, ನಿರೂಪಕಿ ಅನುಶ್ರೀ ನಿಂತಿರುವ ಫೋಟೋ ಇದೀಗ ವೈರಲ್‌ ಆಗಿದ್ದು, ಕನ್ನಡ ಪ್ರೇಕ್ಷಕರು ರಮೇಶ್‌ ರೆಡ್ಡಿಯವರಿಗೆ ಶುಭ ಕೋರಿದ್ದಾರೆ. 

ತಮ್ಮ ನಿರ್ಮಾಣದ ‘ಗಾಳಿಪಟ 2’ ಬಿಡುಗಡೆಯಾದ ಸಂದರ್ಭದಲ್ಲಿ ‘ನಾನು ಈ ಸಲ ಪಾಸಾದೆ’ ಎಂದಿದ್ದರು ರಮೇಶ್‌ ರೆಡ್ಡಿ. ಇದೀಗ ಅವರು ದೊಡ್ಡ ಮಟ್ಟದ ಪರೀಕ್ಷೆ ಎದುರಿಸಲು ಮುಂದಾಗಿದ್ದಾರೆ. ಅದ್ದೂರಿಯಾಗಿ ‘45’ ಸಿನಿಮಾ ನಿರ್ಮಿಸಿರುವ ಅವರು ಇದೀಗ ಅದ್ದೂರಿ ಪ್ರಚಾರವನ್ನು ಆರಂಭಿಸಿದ್ದಾರೆ. ಇದೀಗ ಪ್ರೈವೇಟ್‌ ಜೆಟ್‌ನಲ್ಲಿ ಚಿತ್ರತಂಡವನ್ನು ಕರೆದುಕೊಂಡು ದೇಶಾದ್ಯಂತ ಪ್ರಚಾರ ಮಾಡಲು ಮುಂದಾಗಿದ್ದಾರೆ. 

ಮೊದಲನೇ ಹಂತದಲ್ಲಿ ತಂಡ ಮುಂಬೈ ತಲುಪಿದೆ. ಸ್ಟೈಲಿಶ್‌ ಪ್ರೈವೇಟ್‌ ಜೆಟ್‌ ಮುಂದೆ ನಿರ್ದೇಶಕ ಅರ್ಜುನ್‌ ಜನ್ಯಾ, ನಾಯಕ ನಟರಾದ ಶಿವರಾಜ್‌ಕುಮಾರ್‌, ಉಪೇಂದ್ರ, ನಿರ್ಮಾಪಕ ರಮೇಶ್ ರೆಡ್ಡಿ, ಗೀತಾ ಶಿವರಾಜ್‌ಕುಮಾರ್‌, ನಿರೂಪಕಿ ಅನುಶ್ರೀ ನಿಂತಿರುವ ಫೋಟೋ ಇದೀಗ ವೈರಲ್‌ ಆಗಿದ್ದು, ಕನ್ನಡ ಪ್ರೇಕ್ಷಕರು ರಮೇಶ್‌ ರೆಡ್ಡಿಯವರಿಗೆ ಶುಭ ಕೋರಿದ್ದಾರೆ. ‘45’ ಸಿನಿಮಾ ಆ.15ಕ್ಕೆ ತೆರೆಗೆ ಬರಲಿದೆ.

ಸಿನಿಮಾ ನೋಡಲು ನಾನು ಕಾಯುತ್ತಿದ್ದೇನೆ: ಅರ್ಜುನ್ ಜನ್ಯ ನಿರ್ದೇಶಿಸಿ, ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿರುವ ಚಿತ್ರವಿದು. ಬಹು ಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವ ಸಿನಿಮಾ ಇದಾಗಿದೆ. ಉಪೇಂದ್ರ, ‘ಶೂಟಿಂಗ್ ಆರಂಭವಾಗುವ ಮೊದಲೇ ಕತೆಯನ್ನು ಅನಿಮೇಷನ್‌ ಮೂಲಕ ಹೇಳೋದನ್ನುನಾನು ಹಾಲಿವುಡ್ ಚಿತ್ರರಂಗದಲ್ಲಿ ಕೇಳಿದ್ದೆ. ಆದರೆ, ಅರ್ಜುನ್ ಜನ್ಯಾ ಅವರು ಕನ್ನಡದಲ್ಲೂ ಆ ಸಾಹಸ ಮಾಡಿದ್ದಾರೆ. ಅನಿಮೇಷನ್‌ನಲ್ಲಿ ಯಾವ ರೀತಿ ಹೇಳಿದ್ದರೋ ಅದೇ ರೀತಿ ಚಿತ್ರವನ್ನೂ ಮಾಡಿದ್ದಾರೆ. ನಿರ್ದೇಶಕರ ಈ ಸಾಹಸಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಬೆಂಬಲವಾಗಿ ನಿಂತಿದ್ದಕ್ಕೆ ಸಿನಿಮಾ ಆಗಿದೆ’ ಎಂದರು.

ಶಿವಣ್ಣ ಘೋಷಿಸಿದ 'ಸೋಲ್‌ ಸ್ಟಾರ್‌' ಬಿರುದು ನಿರಾಕರಿಸಿದ ರಾಜ್‌ ಬಿ ಶೆಟ್ಟಿ: ಕಾರಣವೇನು?

ರಾಜ್ ಬಿ ಶೆಟ್ಟಿ, ‘ನಾನು ಉಪೇಂದ್ರ ಅವರ ‘ಎ’ ಚಿತ್ರದ ಪೋಸ್ಟರ್ ಅನ್ನು ಬೆರಗಿನಿಂದ ನೋಡಿದ್ದೆ. ಅವರ ಅಭಿಮಾನಿ ನಾನು. ಈಗ ಅವರ ಜತೆಗೇ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಕನ್ನಡಿಗರು ಹೆಮ್ಮೆ ಪಡುವಂತಹ ಸಿನಿಮಾ ‘45’. ಈ ಸಿನಿಮಾದಲ್ಲಿ ನಟಿಸಿದ್ದು ನನಗೂ ಹೆಮ್ಮೆಯಿದೆ’ ಎಂದರು. ರಮೇಶ್ ರೆಡ್ಡಿ, ‘ಕತೆಯನ್ನು ಅನಿಮೇಷನ್‌ನಲ್ಲಿ ನೋಡಿದ ಮೇಲೆ ತುಂಬಾ ಇಷ್ಟವಾಯಿತು. ದೊಡ್ಡ ನಟರು ಒಟ್ಟಿಗೆ ನನ್ನ ಚಿತ್ರದಲ್ಲಿ ನಟಿಸಿರುವುದು ನನ್ನ ಭಾಗ್ಯ. ಈ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ ಹೆಸರು ಮಾಡುವ ನಂಬಿಕೆ ಇದೆ’ ಎಂದರು. ಅರ್ಜುನ್ ಜನ್ಯ, ‘ಎಲ್ಲರ ಸಹಕಾರದಿಂದ 106 ದಿನಗಳ ಶೂಟಿಂಗ್ ಮುಗಿಸಿದ್ದೇನೆ. ಸದ್ಯದಲ್ಲೇ ಚಿತ್ರಕ್ಕೆ ಸಿಜಿ ಕೆಲಸ ಶುರುವಾಗಲಿದೆ’ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ