ನಟಿಯರು ಮದ್ವೆ ಆದ್ಮೇಲೆ ಸಿನಿಮಾರಂಗದಿಂದ ದೂರ ಆಗೋದು ಬಹಳಷ್ಟು ನಟಿಯರ ವಿಷಯದಲ್ಲಿ ಸಾಮಾನ್ಯ ಸಂಗತಿ. ಆದ್ರೆ ಅವ್ರು ತೀರಿಕೊಂಡ ಮೇಲೆ ಅವ್ರು ಹೇಳಿದ ಮಾತುಗಳ ಅರ್ಥ ಗೊತ್ತಾಯ್ತು ..
ಕನ್ನಡತಿ, ಸ್ಟಾರ್ ನಟಿ ಸೌಂದರ್ಯ (Soundarya) ಬಗ್ಗೆ ಅದೆಷ್ಟು ಬೇಕಾದ್ರೂ ಹೇಳಬಹುದು. ಅವ್ರು ಸಿನಿಮಾ ರಂಗದಲ್ಲಿ ಇದ್ದಿದ್ದು ಬರೀ ಹತ್ತೇ ವರ್ಷ ಆಗಿದ್ದರೂ ಅವರು ಮಾಡಿ ಹೋಗಿರುವ ಸಾಧನೆ ಅಪಾರ. ದುರಾದೃಷ್ಟ ಎಂಬಂತೆ, ನಟಿ ಸೌಂದರ್ಯ ಅವರು 2004ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಆಗಿನ್ನೂ ಅವರಿಗೆ 31 ವರ್ಷ ಅಷ್ಟೇ. ಸೌಂದರ್ಯ ಬಗ್ಗೆ ಹೇಳಹೊರಟರೆ ಅದೇ ಒಂದಷ್ಟು ಸಿನಿಮಾ ಆಗುತ್ತದೆ ಎನ್ನಬಹುದು. ಅವರು ತೆಲುಗಿನಲ್ಲೇ ಬರೋಬ್ಬರಿ 100 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸೌಂದರ್ಯ ತಂದೆ ಕೆಎಸ್ ಸತ್ಯನಾರಾಯಣ ಅವರಿಗೆ ಮಗಳು ಅಂದ್ರೆ ಪಂಚಪ್ರಾಣ. ಅಷ್ಟೇ ಅಲ್ಲ, ಸೌಂದರ್ಯ ಅಲ್ಪಾಯುಷಿ, ಅವ್ರ ಸಾವಿನ ಬಗ್ಗೆ ಅವ್ರ ತಂದೆ ಸತ್ಯನಾರಾಯಣ ಅವರಿಗೆ ಮೊದಲೇ ಗೊತ್ತಿತ್ತು ಅಂತ ನಿರ್ಮಾಪಕ ತ್ರಿಪುರನೇನಿ ಚಿಟ್ಟಿಬಾಬು ಸಂದರ್ಶನದಲ್ಲಿ ಹೇಳಿದ್ದಾರೆ. ಈ ಚಿಟ್ಟಿಬಾಬುಗೆ ಸೌಂದರ್ಯ ಹಾಗೂ ಅವ್ರ ತಂದೆ ಜೊತೆ ಸಾಕಷ್ಟು ಪರಿಚಯ ಇತ್ತು. ಸೌಂದರ್ಯ ತಂದೆಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಜಾಸ್ತಿ. ಸೌಂದರ್ಯ ಇಂಡಸ್ಟ್ರಿಗೆ ಬರೋ ಮುಂಚೆನೇ ಅವ್ರ ಜಾತಕನ ಸತ್ಯನಾರಾಯಣ ಜ್ಯೋತಿಷಿಗಳ ಹತ್ರ ತೋರಿಸಿದ್ರಂತೆ.
ಎಲ್ಲ ಕಥೆಗಳೂ ಸುಖಾಂತ್ಯ ಕಾಣುವುದಿಲ್ಲ, ಮಿಸ್ ಯೂ ಕ್ವೀನ್; ಈ ಕ್ಲಿಪಿಂಗ್‌ಗೆ ಕಣ್ಣೀರೇ ಕಾಮೆಂಟ್..!
ನಿಮ್ಮ ಮಗಳು ಸಿನಿಮಾ ರಂಗಕ್ಕೆ ಬಂದ್ರೆ ಸೋಲಿಲ್ಲದ ಹೀರೋಯಿನ್ ಆಗ್ತಾರೆ. ರಾಷ್ಟ್ರೀಯ ಮಟ್ಟದಲ್ಲೂ ಅವ್ರು ಮಿಂಚ್ತಾರೆ. ಆದ್ರೆ ಅವ್ರು ಇಂಡಸ್ಟ್ರಿಯಲ್ಲಿ ಹತ್ತು ವರ್ಷ ಮಾತ್ರ ಇರ್ತಾರೆ ಅಂತ ಜ್ಯೋತಿಷಿಗಳು ಹೇಳಿದ್ರಂತೆ. ಆದರೆ, ಸಾವಿನ ಬಗ್ಗೆ ಜ್ಯೋತಿಷಿ ನೇರವಾಗಿ ಹೇಳದಿದ್ದರೂ ಸೂಚನೆ ಕೊಟ್ಟುಬಿಟ್ಟಿದ್ದರು. ಅಷ್ಟೇ ಅಲ್ಲ, ಆ ಮೊದಲೇ 'ಹತ್ತು ವರ್ಷದ ನಂತರ ಸೌಂದರ್ಯಗೆ ದೊಡ್ಡ ಗಂಡಾಂತರ ಇದೆ' ಅಂತಾನೂ ಹೇಳಿದ್ರು. ಈ ವಿಷಯಗಳನ್ನ ಸತ್ಯನಾರಾಯಣ.. ನಿರ್ಮಾಪಕ ಚಿಟ್ಟಿಬಾಬು ಜೊತೆ ಹಂಚಿಕೊಂಡಿದ್ದರಂತೆ.
ಆದ್ರೆ ಜ್ಯೋತಿಷಿಗಳು ನಟಿ ಸೌಂದರ್ಯ ಅವ್ರಿಗೆ ಗಂಡಾಂತರ ಇರೋ ವಿಷಯವನ್ನು ಮಾತ್ರ ಪರೋಕ್ಷವಾಗಿ ಹೇಳಿದ್ರು. ಹತ್ತು ವರ್ಷದ ನಂತರ ಸೌಂದರ್ಯ ಇಂಡಸ್ಟ್ರಿಯಿಂದ ದೂರ ಆಗ್ತಾರೆ ಅಂತ ಮಾತ್ರ ಹೇಳೀದ್ರಂತೆ. ಆದರೆ, ಆಗಷ್ಟೇ ನಟಿ ಸೌಂದರ್ಯಗೆ ಮದುವೆ ಆಗಿತ್ತು. ಅದಕ್ಕೆ ಹಂಗೇ ಹೇಳಿದ್ರೇನೋ ಅಂತ ಅಂದ್ಕೊಂಡೆ. ಸಾಮಾನ್ಯವಾಗಿ ನಟಿಯರು ಮದ್ವೆ ಆದ್ಮೇಲೆ ಸಿನಿಮಾರಂಗದಿಂದ ದೂರ ಆಗೋದು ಬಹಳಷ್ಟು ನಟಿಯರ ವಿಷಯದಲ್ಲಿ ಸಾಮಾನ್ಯ ಸಂಗತಿ. ಆದ್ರೆ ಅವ್ರು ತೀರಿಕೊಂಡ ಮೇಲೆ ಅವ್ರು ಹೇಳಿದ ಮಾತುಗಳ ಅರ್ಥ ಗೊತ್ತಾಯ್ತು ಅಂತ ಚಿಟ್ಟಿಬಾಬು ಹೇಳಿದ್ದಾರೆ.
ಸರಿ ಹೋಗಲ್ವ?!.. ಧನ್ವೀರ್ ಗೌಡ 'ವಾಮನ' ಟ್ರೈಲರ್ ಲಾಂಚ್ ವೇಳೆ ದರ್ಶನ್ ಫ್ಯಾನ್ಸ್ ಪುಂಡಾಟ!
ಈ ಬಗ್ಗೆ ಚಿಟ್ಟಿಬಾಬು 'ನಟಿ ಸೌಂದರ್ಯ ಮದುವೆ ಆದ್ಮೇಲೆ ಅವ್ರನ್ನ ಒಂದು ಸಾರಿ ಭೇಟಿ ಮಾಡಿದ್ದೆ. 'ನಿಮ್ಮ ಅಪ್ಪ ಹೇಳಿದ ಹಾಗೇ ಎಲ್ಲಾನೂ ನಿಮ್ಮ ಜೀವನದಲ್ಲಿ ನಡೀತಾ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಗುರುತು ಸಿಗುತ್ತೆ ಅಂತ ಹೇಳಿದ್ರು. ಅಮಿತಾಬ್ ಬಚ್ಚನ್, ಚಿರಂಜೀವಿ, ರಜನೀಕಾಂತ್, ಮೋಹನ್ ಲಾಲ್ ಹೀಗೆ ಎಲ್ಲಾ ಭಾಷೆಗಳ ಸ್ಟಾರ್ ಹೀರೋಗಳ ಜೊತೆ ಆಕ್ಟ್ ಮಾಡಿದ್ರಿ. ಇನ್ನೇನಿದ್ರೂ ಒಂದೇ.. ಇಂಡಸ್ಟ್ರಿಯಿಂದ ದೂರ ಇದ್ದು ನಿಮ್ಮ ಫ್ಯಾಮಿಲಿ ಜೊತೆ ಸಮಯ ಕಳಿತೀರಿ..' ಅಂತ ಹೇಳಿದ್ರಂತೆ.
ಚಿಟ್ಟಿಬಾಬು ಮಾತಿಗೆ ನಟಿ ಸೌಂದರ್ಯ 'ಅಷ್ಟೊಂದು ಮಾತು ಅಂದ್ರೇನು ಸಾರ್..?' ಅಂತ ಕೇಳಿದ್ರಂತೆ. ಅದಕ್ಕೆ ಚಿಟ್ಟಿಬಾಬು 'ನಮ್ಮ ಅಪ್ಪ ಹೇಳಿದ್ದು ಎಲ್ಲಾನೂ ನಡೆದಿದೆ. ಇದೊಂದೇ ಮಾತು ತಪ್ಪು ಅಂತ ಪ್ರೂವ್ ಮಾಡ್ತೀನಿ. ಸಾಯೋವರೆಗೂ ಸಿನಿಮಾ ರಂಗದಲ್ಲೇ ಇರ್ತೀನಿ ಅಂತ ಹೇಳಿದ್ರಂತೆ. ಆದರೆ, ಬಹುಶಃ 'ಮೇಲೆ ಆಕಾಶದಲ್ಲಿ ತಥಾಸ್ತು ದೇವತೆಗಳು 'ಹಾಗೇ ಆಗ್ಲಿ' ಅಂತ ಆಶೀರ್ವಾದ ಮಾಡಿದ್ರೋ ಏನೋ, ನಟಿಯಾಗಿ ಇರೋವಾಗಲೇ ಅವ್ರು ತೀರಿಕೊಂಡ್ರು' ಅಂತ ಚಿಟ್ಟಿಬಾಬು ಹೇಳಿದ್ದಾರೆ.
ಶಿವರಾಜ್‌ಕುಮಾರ್‌ಗೆ 'ಬಾರಿಸಿ' ಎಂದಿದ್ದ ಡಾ ರಾಜ್‌ಕುಮಾರ್.. ಸಿಹಿ ಕಹಿ ಚಂದ್ರು ಹೊಡೆದ್ರು, ಆದ್ರೆ..