ಕನ್ನಡ ಸಿನಿಮಾಗಳ ಜೊತೆಗೆ ತೆಲುಗಿನಲ್ಲಿಯೂ ಮಿಂಚುತ್ತಿದ್ದಾರೆ. ನಿಧಾನವಾಗಿಯೇ ತನ್ನ ಮಾರುಕಟ್ಟೆಯನ್ನು ಪರಭಾಷೆಯಲ್ಲೂ ವಿಸ್ತರಿಸಿಕೊಳ್ಳುತ್ತಿದ್ದಾರೆ. ಇದೀಗ ಝೀಬ್ರಾ ಮೂಲಕ ಮತ್ತೆ ತೆಲುಗಿಗೆ ಎಂಟ್ರಿ ಕೊಡುತ್ತಿರುವ ಈ ಸಿನಿಮಾ ಬಳಿಕ ಡಾಲಿ ಟಾಲಿವುಡ್‌ನಲ್ಲೇ ಬ್ಯುಸಿ ಆದರೂ ಅಚ್ಚರಿ ಇಲ್ಲ. ಈ ಬಗ್ಗೆ..
ಡಾಲಿ ಧನಂಜಯ (Dolly Dhananjay) ಅದ್ಭುತ ನಟ ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಹೀರೋ ..ವಿಲನ್.. ಯಾವುದೇ ಪಾತ್ರಕ್ಕಾದರೂ ಅದ್ಭುತವಾಗಿ ಜೀವತುಂಬುವ ನಟ ಡಾಲಿ. ಹಾಗಾಗಿಯೇ ಅಭಿಮಾನಿಗಳು ಅವರನ್ನು ನಟ ರಾಕ್ಷಸ ಎಂದು ಕರೆಯುತ್ತಾರೆ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಈ ನಟ ರಾಕ್ಷಸ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಸೂಪರ್ ಹಿಟ್ ತೆಲುಗಿನ ಪುಷ್ಟ ಸಿನಿಮಾದಲ್ಲಿ ಜಾಲಿ ರೆಡ್ಡಿಯಾಗಿ ಮಿಂಚಿದ್ದ ಡಾಲಿ ಇದೀಗ ಝೀಬ್ರ ಎನ್ನುವ ಮತ್ತೊಂದು ಸಿನಿಮಾ ಮೂಲಕ ಮತ್ತೊಮ್ಮೆ ತೆಲುಗು ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.
ಡಾಲಿ ಕನ್ನಡ ಸಿನಿಮಾಗಳ ಜೊತೆಗೆ ತೆಲುಗಿನಲ್ಲಿಯೂ ಮಿಂಚುತ್ತಿದ್ದಾರೆ. ನಿಧಾನವಾಗಿಯೇ ತನ್ನ ಮಾರುಕಟ್ಟೆಯನ್ನು ಪರಭಾಷೆಯಲ್ಲೂ ವಿಸ್ತರಿಸಿಕೊಳ್ಳುತ್ತಿದ್ದಾರೆ. ಇದೀಗ ಝೀಬ್ರ ಮೂಲಕ ಮತ್ತೆ ತೆಲುಗಿಗೆ ಎಂಟ್ರಿ ಕೊಡುತ್ತಿರುವ ಈ ಸಿನಿಮಾ ಬಳಿಕ ಡಾಲಿ ಟಾಲಿವುಡ್‌ನಲ್ಲೇ ಬ್ಯುಸಿ ಆದರೂ ಅಚ್ಚರಿ ಇಲ್ಲ. ಈ ಬಗ್ಗೆ ಬೇರೆ ಯಾರೋ ಹೇಳಿದ್ದರೆ ಕನ್ನಡಿಗರು ಶಾಕ್ ಆಗಬೇಕಾಗಿರಲಿಲ್ಲ ಆದ್ರೆ ಡಾಲಿ ತೆಲುಗಿನಲ್ಲಿ ಖ್ಯಾತ ನಟನಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು ಸೂಪರ್ ಸ್ಟಾರ್ ಚಿರಂಜೀವಿ.
undefined
ಯಶ್ & ಯಶಸ್ ಹೆಂಡತಿಯರ ಹೋಲಿಕೆ ಸರಿಯೇ? ಏನ್ರೀ ಇದು, ಇವರಂತೆ ಯಾರಿಲ್ವಂತೆ!
ಡಾಲಿ ನಟನೆಯ 'ಝೀಬ್ರಾ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಬಹುತೇಕ ತೆಲುಗು ಅವರೇ ಸೇರಿಕೊಂಡು ಮಾಡಿರುವ ಸಿನಿಮಾವಿದು. ಈ ಸಿನಿಮಾದ ಟ್ರೈಲರ್ ರಿಲೀಸ್ ಈವೆಂಟ್ ಅನ್ನು ವೈಜಾಕ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೆಗಾಸ್ಟಾರ್ ಚಿರಂಜೀವಿ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಮೊದಲ ಬಾರಿಗೆ ಡಾಲಿ ಸಿನಿಮಾದ ಈವೆಂಟ್ ಒಂದಕ್ಕೆ ಮೆಗಾಸ್ಟಾರ್ ಅತಿಥಿಯಾಗಿ ಬಂದಿದ್ದರು. ವೇದಿಕೆ ಏರಿ ಟ್ರೈಲರ್ ಲಾಂಚ್ ಮಾಡಿದ ಚಿರಂಜೀವಿ ಕನ್ನಡದ ಸ್ಟಾರ್ ಡಾಲಿ ಧನಂಜಯ ಅವರನ್ನು ಹಾಡಿಹೊಗಳಿದರು. ಈ ಸಿನಿಮಾ ಬಳಿಕ ಧನಂಜಯ ತೆಲುಗಿನಲ್ಲಿ ಸ್ಟಾರ್ ಆಗಿ ಸೆಟಲ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದ್ದಾರೆ.
'ಕನ್ನಡದ ನಟ ಧನಂಜಯ್ ಅದ್ಭುತ ನಟ, ಝೀಬ್ರ ಸಿನಿಮಾ ಬಳಿಕ ತೆಲುಗಿನಲ್ಲಿ ಮತ್ತಷ್ಟು ಖ್ಯಾತಿ ಗಳಿಸಲಿದ್ದಾರೆ, ಸ್ಟಾರ್ ಆಗಿ ತೆಲುಗಿನಲ್ಲಿಯೇ ಸೆಟಲ್ ಆಗಲಿದ್ದಾರೆ' ಎಂದು ಹೇಳಿದರು. ಮೆಗಾಸ್ಟಾಪ್ ಮಾತಿಗೆ ಮೂಕವಿಸ್ಮಿತನಾದ ಡಾಲಿ ಆಚ್ಚರಿಯಿಂದನೇ ಚಿರಂಜೀವಿ ಮಾತುಗಳನ್ನು ಕೇಳಿಕೊಳ್ಳುತ್ತಿದ್ದರು.
ಕೊನೆಗೂ ಬಯಲಾಯ್ತು ಸಿಲ್ಕ್ ಸ್ಮಿತಾ ಸಾವಿನ ರಹಸ್ಯ; ಯಾವ ಅನೈತಿಕ ಸಂಬಂಧಕ್ಕೆ ತೆತ್ತ ಬೆಲೆ?
ಅಂದಹಾಗೆ ಚಿರಂಜೀವಿ ಮಾತಿನಂತೆ ಡಾಲಿ ತೆಲುಗಿನಲ್ಲಿಯೇ ಜಾಸ್ತಿ ಸಿನಿಮಾಗಳನ್ನು ಮಾಡುವ ಪ್ಲಾನ್ ಕೂಡ ಹಾಕಿಕೊಂಡಿದ್ದರು ಅಚ್ಚರಿ ಇಲ್ಲ. ಉತ್ತಮ ಪಾತ್ರಗಳು ಬಂದರೆ ಖಂಡತವಾಗಿಯೂ ಡಾಲಿ ನೋ ಎನ್ನಲು ಸಾಧ್ಯವಿಲ್ಲ. ಒಂದುವೇಳೆ ಝೀಬ್ರ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡರೆ ಚಿರಂಜೀವಿ ಭವಿಷ್ಯ ಖಂಡಿತ ನಿಜವಾಗುವುದರಲ್ಲಿ ಎರಡು ಮಾತಿಲ್ಲ.
ಏನೆ ಆದರೂ ಕನ್ನಡದ ಕಲಾವಿದರು ಪರಭಾಷೆಯಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವುದನ್ನ ನೋಡುವುದೇ ಖುಷಿ. ಕನ್ನಡಿಗರ ಪ್ರೀತಿಯ ಡಾಲಿ ಕನ್ನಡ ಸಿನಿಮಾಗಳ ಜೊತೆಗೆ ಬೇರೆ ಭಾಷೆಯಲ್ಲೂ ಮಿಂಚುತ್ತಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎನ್ನುವುದೇ ಅಭಿಮಾನಿಗಳ ಆಸೆ.
ಡಾ ರಾಜ್ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ವಿಷ್ಣುಗೂ ಇದೇ ಗತಿಯಾಗಿತ್ತಾ?!