ಯಶ್‌ & ಯಶಸ್ ಹೆಂಡತಿಯರ ಹೋಲಿಕೆ ಸರಿಯೇ? ಏನ್ರೀ ಇದು, ಇವರಂತೆ ಯಾರಿಲ್ವಂತೆ!

Published : Nov 13, 2024, 07:57 PM ISTUpdated : Nov 13, 2024, 08:01 PM IST
ಯಶ್‌ & ಯಶಸ್ ಹೆಂಡತಿಯರ ಹೋಲಿಕೆ ಸರಿಯೇ? ಏನ್ರೀ ಇದು, ಇವರಂತೆ ಯಾರಿಲ್ವಂತೆ!

ಸಾರಾಂಶ

ರಾಧಿಕಾ ಪಂಡಿತ್ ಅವರು ಕಿರುತೆರೆ ಮೂಲಕ ನಟನೆ ಆರಂಭ ಮಾಡಿದ್ದಾರೆ. ಬಳಿಕ, '18ನೇ ಕ್ರಾಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ನಟಿ  ಅದಿತಿ ಪ್ರಭುದೇವ ಬಗ್ಗೆ ಹೇಳಬೇಕು ಎಂದರೆ, ದಾವಣೆಗೆರೆಯ ಈ ಚೆಲುವೆ ಓದಿದ್ದು 'ಗುಂಡ್ಯಾನ ಹೆಂಡತಿ' ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದವರು...

ಸ್ಯಾಂಡಲ್‌ವುಡ್ ಸಿಂಡ್ರೆಲಾ ಖ್ಯಾತಿಯ ನಟ ರಾಧಿಕಾ ಪಂಡಿತ್ (Radhika Pandit) ಹಾಗೂ ಅದಿತಿ ಪ್ರಭುದೇವ (Aditi Prabhudeva) ಮಧ್ಯೆ ಹೋಲಿಕೆ ಯಾಕೆ? ಯಾಕೆ ಎಂಬ ನಮ್ಮ ಪ್ರಶ್ನೆಗೆ ಉತ್ತರ ಕೊಡಲು ಯಾರಿದ್ದಾರೋ ಇಲ್ವೋ ಏನೋ! ಏಕೆಂದರೆ, ಸೋಷಿಯಲ್ ಮೀಡಿಯಾದಲ್ಲಿ ಅದಿತಿ ಹಾಗೂ ರಾಧಿಕಾ ಪಂಡಿತ್ ಈ ಇಬ್ಬರ ಫೋಟೋ ಒಟ್ಟಿಗೇ ಫೋಸ್ಟ್ ಮಾಡಿ ಹೋಲಿಸಿ ಮಾತನಾಡಿದ್ದಾರೆ. ಸರಿಯೋ ತಪ್ಪೋ ಎಂಬ ಚರ್ಚೆ ಬೇಡ, ಆದರೆ, ಏನಾದ್ರೂ ಇವರಬ್ಬರ ನಡುವೆ ಸಾಮ್ಯತೆ ಇದೆಯಾ? ನೋಡೋಣ, ಹಾಗೇ ಸುಮ್ಮನೆ..

ರಾಧಿಕಾ ಪಂಡಿತ್ ಅವರು ಕಿರುತೆರೆ ಮೂಲಕ ನಟನೆ ಆರಂಭ ಮಾಡಿದ್ದಾರೆ. ಬಳಿಕ, '18ನೇ ಕ್ರಾಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರೂ ಬಿಡುಗಡೆಯಾಗಿ ರಾಧಿಕಾ ಹೆಸರು ಕರ್ನಾಟಕದಲ್ಲಿ ಮನೆಮಾತಾಗಿದ್ದು 'ಮೊಗ್ಗಿನ ಮನಸ್ಸು' ಸಿನಿಮಾ. ಕಾಕತಾಳೀಯ ಎಂಬಂತೆ ಈ ಚಿತ್ರದ ಮೂಲಕವೇ ಯಶ್ ಕೂಡ ಹೆಸರು ಮಾಡಿದ್ದು. ಯಶ್ ನಟನೆಯ ಮೊದಲ ಚಿತ್ರ 'ಜಂಭದ ಹುಡುಗಿ'. ಆದರೆ, ಯಶ್ ಹೆಸರು ಮಾಡಿದ್ದು ಮಾತ್ರ ಮೊಗ್ಗಿನ ಮನಸ್ಸು ಮೂಲಕ ಎಂಬುದು ಗಮನಿಸಬೇಕಾದ ಸಂಗತಿ!

ಕೊನೆಗೂ ಬಯಲಾಯ್ತು ಸಿಲ್ಕ್ ಸ್ಮಿತಾ ಸಾವಿನ ರಹಸ್ಯ; ಯಾವ ಅನೈತಿಕ ಸಂಬಂಧಕ್ಕೆ ತೆತ್ತ ಬೆಲೆ?

ಇನ್ನು ಅದಿತಿ ಪ್ರಭುದೇವ ಬಗ್ಗೆ ಹೇಳಬೇಕು ಎಂದರೆ, ದಾವಣೆಗೆರೆಯ ಈ ಚೆಲುವೆ ಓದಿದ್ದು 'ಗುಂಡ್ಯಾನ ಹೆಂಡತಿ' ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದವರು. ಬಳಿಕ ಇವರು ನಾಗಕನ್ನಿಕೆ ಸಿರೀಯಲ್‌ನಲ್ಲಿ ಶಿವಾನಿ ಪಾತ್ರ ಮಾಡಿದ್ದರು. ಬಳಿಕ, ನಟ ಅಜಯ್ ರಾವ್‌ ಅವರ `ಧೈರ್ಯಂ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಸಿಂಗ, ಬಜಾರ್, ಬ್ರಹ್ಮಚಾರಿ, ಓಲ್ಡ್ ಮಾಂಕ್, ರಂಗನಾಯಕಿ, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.  

ನಟಿ ಆದಿತಿ ಪ್ರಭುದೇವ ಅವರು 2022ರ ನವೆಂಬರ್ 28ರಂದು ಉದ್ಯಮಿ ಯಶಸ್ (Yashas) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ನಟಿ ರಾಧಿಕಾ ಪಂಡಿತ್ ಅವರು 2016ರಲ್ಲಿ ನಟ ಯಶ್ (Rocking Star Yash) ಅವರನ್ನು ಮದುವೆಯಾಗಿದ್ದಾರೆ. ಅದಿತಿಗೆ ಒಬ್ಬಳು ಮಗಳಿದ್ದು ಇನ್ನೂ ಆರು ತಿಂಗಳ ಬಾಲೆ. ರಾಧಿಕಾಗೆ ಒಬ್ಬಳು ಮಗಳು ಹಾಗೂ ಒಬ್ಬಮಗ ಇದ್ದಾರೆ. ಈಗ ಇಬ್ಬರೂ ಸಿನಿಮಾ ನಟನೆಯಿಂದ ದೂರವಿದ್ದಾರೆ. ಆದರೆ, ಈ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. 

ಹಲವರಿಗೆ ಗೊತ್ತಿಲ್ಲ, ಡಾ ರಾಜ್‌ ಒಂದು ಸಿನಿಮಾ ನಿರ್ಮಾಣ ಮಾಡಿದ್ರು; ಯಾವುದು ಆ ಸಿನಿಮಾ?

ರಾಧಿಕಾ ಪಂಡಿತ್ ಹಾಗು ಅದಿತಿ ಪ್ರಭುದೇವ ಅವರಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದ್ದು, ಅದಕ್ಕೆ 'ರಾಧಿಕಾ ಪಂಡಿತ್ ಮತ್ತು ಅದಿತಿ ಪ್ರಭುದೇವ ಇವರಿಬ್ಬರ ತರ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಂಪ್ರದಾಯವನ್ನು ನಡೆಸಿಕೊಂಡು ಹೋಗುವವರು ಯಾರೂ ಇಲ್ಲ' ಎಂಬ ಶೀರ್ಷಿಕೆ ನೀಡಲಾಗಿದೆ. ಇದಕ್ಕೆ ಕೆಲವರು ಕಾಮೆಂಟ್ ಸೆಕ್ಷನ್‌ನಲ್ಲಿ ಒಪ್ಪಿಗೆ ಸೂಚಿಸಿದ್ದರೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. 

ಕೆಲವರು, ರಾಧಿಕಾ ಪಂಡಿತ್ ಹಾಗೂ ಅದಿತಿ ಪ್ರಭುದೇವ ಸಂಪ್ರದಾಯ ಪಾಲಿಸುತ್ತಿದ್ದಾರೆ ಓಕೆ, ಆದರೆ ಅವರಿಬ್ಬರ ಹೆಸರೇ ಯಾಕೆ? ನಟಿ ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ಪ್ರಿಯಾಂಕಾ ಉಪೇಂದ್ರ ಅವರಿಲ್ಲವೇ? ಇತ್ತೀಚಿನ ಪ್ರನೀತಾ ಸಹ ಹಾಗೇ ಇದ್ದಾರೆ ಎಂದಿದ್ದಾರೆ. ಅಭಿಪ್ರಾಯ ಭೇದಗಳು ಸಹಜ ಬಿಡಿ, ಅದಕ್ಯಾಕೆ ತಲೆಬಿಸಿ ಅಲ್ಲವೇ? ಅವರವರ ಭಾವ ಅವರವರ ಭಕ್ತಿ, ಏನಂತೀರಾ?

ಡಾ ರಾಜ್‌ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ವಿಷ್ಣುಗೂ ಇದೇ ಗತಿಯಾಗಿತ್ತಾ?!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?