ತನುಷ್ ಶಿವಣ್ಣ ಅಭಿನಯ, ಲವ ನಿರ್ದೇಶನದ 'ಬಾಸ್'​ ಸಿನಿಮಾ ವಿರುದ್ಧ ನೋಟಿಸ್ ಜಾರಿ; ಎಷ್ಟು ಪುಟಗಳ ನೋಟಿಸ್ ಗೊತ್ತಾ?

Published : Mar 16, 2026, 06:22 PM IST
Tanush Shivnna

ಸಾರಾಂಶ

ದರ್ಶನ್ ಅವರ ರಿಯಲ್​ಲೈಫ್ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಸದ್ಯ ಸೆನ್ಸಾರ್​ಆಗುತ್ತಿರುವ ಬಾಸ್ ಸಿನಿಮಾ ವಿರುದ್ಧ ನೋಟಿಸ್ ಜಾರಿಯಾಗಿದ್ದು ಚಿತ್ರತಂಡಕ್ಕೆ ಸಹಜವಾಗಿಯೇ ಆತಂಕ ಶುರುವಾಗಿದೆ. ಸೆನ್ಸಾರ್ ಸರ್ಟಿಫಿಕೇಟ್​ಬರುವ ಮುನ್ನವೇ ದರ್ಶನ್​ಪರ ವಕೀಲರಿಂದ ನೋಟೀಸ್ ಜಾರಿಯಾಗಿದೆ.

ಬಾಸ್‌ಗೆ ಸಂಕಷ್ಟ?

ಸ್ಯಾಂಡಲ್‌ವುಡ್‌ನ ಮುಂಬರುವ ಸಿನಿಮಾವೊಂದು ವಿವಾದಕ್ಕೆ ಗುರಿಯಾಗಿದೆ. ಲವ ನಿರ್ದೇಶನದ 'ಬಾಸ್'​ಸಿನಿಮಾ ವಿರುದ್ಧ ನೋಟಿಸ್​ ಜಾರಿ ಮಾಡಲಾಗಿದೆ. ತನುಷ್ ಶಿವಣ್ಣ (Tanusha Shivanna) ನಟನೆಯ ಬಾಸ್ ಸಿನಿಮಾ ಟೀಂ ಈಗ ಕಾನೂನು ಸಂಕಷ್ಟು ಎದುರಿಸುತ್ತಿದೆ. ದರ್ಶನ್ ಪರ ವಕೀಲರಿಂದ ಸೆನ್ಸಾರ್​ಮಂಡಳಿಗೆ​‘ಬಾಸ್' ಸಿನಿಮಾ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.

ನೋಟೀಸ್ ​ಜಾರಿ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಜೈಲು ಸೇರಿರೋದು ಗೊತ್ತೇ ಇದೆ. ಈ ಸಿನಿಮಾ ಇದೇ ಕೊಲೆ ಕೇಸ್‌ಗೆ ಸಂಬಂಧಿಸಿದ ಚಿತ್ರ ಎಂದು ಆರೋಪಿಸಿ ಇದೀಗ ನೋಟೀಸ್​ ಜಾರಿ ಮಾಡಲಾಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಬಾಸ್ ಚಿತ್ರದ ಬಾಸ್ (Boss) ಟೀಸರ್ ಕೂಡ ಅದೇ ಅನುಮಾನ ಹುಟ್ಟುಹಾಕಿದೆ. ಹೀಗಾಗಿ ಬಾಸ್ ಚಿತ್ರ ವಿವಾದಕ್ಕೆ ಗುರಿಯಾಗಿದ್ದು ಕಾನೂನು ಸಂಕಷ್ಟಕ್ಕೆ ಗುರಿಯಾಗಿದೆ.

ದರ್ಶನ್ ಅವರ ರಿಯಲ್​ಲೈಫ್ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಸದ್ಯ ಸೆನ್ಸಾರ್​ಆಗುತ್ತಿರುವ ಬಾಸ್ ಸಿನಿಮಾ ವಿರುದ್ಧ ನೋಟಿಸ್ ಜಾರಿಯಾಗಿದ್ದು ಚಿತ್ರತಂಡಕ್ಕೆ ಸಹಜವಾಗಿಯೇ ಆತಂಕ ಶುರುವಾಗಿದೆ. ಸೆನ್ಸಾರ್ ಸರ್ಟಿಫಿಕೇಟ್​ಬರುವ ಮುನ್ನವೇ ದರ್ಶನ್​ಪರ ವಕೀಲರಿಂದ ನೋಟೀಸ್ ಜಾರಿಯಾಗಿದೆ.

ಸೆನ್ಸಾರ್ ಮಾಡದಂತೆ ನೋಟಿಸ್ ಜಾರಿ

ಸೆಕ್ಷನ್​5B, ಸಿನಿಮಾಟೋಗ್ರಾಫ್​ACT 1952 ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಕೋರ್ಟ್​ನಲ್ಲಿ ಕೇಸ್​ ಇರೋದ್ರಿಂದ ಸೆನ್ಸಾರ್ ಮಾಡದಂತೆ ನೋಟಿಸ್ ಜಾರಿ ಮಾಡಲಾಗಿದೆ. U ಅಥವಾ UA ಅಥವಾ A ಅಥವಾ S ಸರ್ಟಿಫಿಕೇಟ್​ನೀಡದಂತೆ ಕೋರಲಾಗಿದೆ. ರಿಲೀಸ್ ಮಾಡಲು ಸಿದ್ಧವಾಗಿದ್ದ ‘ಬಾಸ್’​ ಸಿನಿಮಾ ವಿರುದ್ಧ ನೋಟಿಸ್ ಜಾರಿ ಮಾಡಿದ ದರ್ಶನ್ ಪರ ವಕೀಲರಿಂದ, ಇದೀಗ ಚಿತ್ರತಂಡದ ತಲೆನೋವು ಅನುಭವಿಸುವಂತಾಗಿದೆ. ಅಂದಹಾಗೆ, ದರ್ಶನ್​ ಪರ ವಕೀಲರು ಸೆನ್ಸಾರ್ ಮಂಡಳಿಗೆ ಸುಮಾರು 50 ಪುಟಗಳ ನೋಟಿಸ್ ನೀಡಿದ್ದಾರೆ. ಮುಂದೇನು ಎಂಬ ಕುತೂಹಲ ಇದೀಗ ಮನೆಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದ ಈ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದೇ ಪ್ರೀತಿ ಸೋತಿದ್ರಿಂದ
ಕನ್ನಡ ನಿರ್ದೇಶಕ, ನಿರ್ಮಾಪಕರು ಕಿಚ್ಚ ಸುದೀಪ್ ಪ್ರತಿಭೆ ಬಳಸಿಕೊಳ್ಳುತ್ತಿಲ್ಲವೇಕೆ: ಕಾರಣವೇನು?