ಬಟ್ ಏನಂದ್ರೆ, ಪ್ರಾಬ್ಲಂ ದೊಡ್ಡದಾಗಿದ್ದಾಗ ಸುಮ್ನೆ ಇದ್ಬಿಡಿ.. ಹೋಗ್ತಾ ಹೋಗ್ತಾ ಹೋಗ್ತಾ ಚಿಕ್ಕದಾಗುತ್ತಾ ಹೋಗುತ್ತೆ.. ಕೊನೆಗೆ ಅದು, ಕರೆಕ್ಟಾಗಿ ಟಾರ್ಗೆಟ್‌ಗೇ ಹೊಡಿತೀರಾ..
ಕನ್ನಡದ ಸ್ಟಾರ್ ನಟ ದರ್ಶನ್ (Actor Darshan) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಕನ್ನಡ ನಾಡಿನಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಜೀವನದಲ್ಲಿ ಕಹಿ ಘಟನೆಯೊಂದು ನಡೆದುಹೋಗಿದೆ. ಕೊಲೆ ಆರೋಪಿ ಸ್ಥಾನದಲ್ಲಿ ನಿಂತು ಜೈಲು ಕಂಬಿಯ ಹಿಂದೆ ಕುಳಿತುಕೊಳ್ಳುವಂತಾಗಿದೆ.
ಕೋಟಿಗಿಂತ ಹೆಚ್ಚು ಅಭಿಮಾನಿಗಳು, ಕೋಟಿ ಕೋಟಿ ದುಡ್ಡು ಇದ್ದರೂ ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿದೆ. ಈ ಸಮಯದಲ್ಲಿ ನಟ ದರ್ಶನ್ ಈ ಮೊದಲು ಮಾತನಾಡಿದ್ದ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ದರ್ಶನ್ ಮಾತನಾಡುತ್ತ 'ಒಂದ್ ಸಲ ಹಿಂಗೆ, ಕುರುಕ್ಷೇತ್ರ ನಡೆದಾಗ ಏನೋ ಒಂದ್ ಪ್ರಾಬ್ಲಂ ನಂಗೆ.. ಏನೇ ಆಗ್ಲಿ ಪ್ಲೈಟ್ ಹತ್ಲೇ ಬೇಕು, ಬರ್ಲೇ ಬೇಕು ಬೆಂಗಳೂರಿಗೆ ನಾನು.. ಮ್ಯಾಟರ್ ಹಂಗಿತ್ತು ನಂಗೆ..
ಚಂದನ್ ಶೆಟ್ಟಿಗೆ ಚಿರಂಜೀವಿ ಸರ್ಜಾ ಏನ್ ಮಾಡಿದ್ರು? ಗುಟ್ಟು ರಟ್ಟು ಮಾಡಿದಾರೆ ರ್‍ಯಾಪಿಡ್ ರಶ್ಮಿ!
ನಾನೇನೋ ಮಾಡ್ದೆ, ಸರಿ ಪುಶ್ ಆಯ್ತು ಪುಶ್ ಆಯ್ತು ಪುಶ್ ಆಯ್ತು.. ಲಾಸ್ಟ್ ಫ್ಲೈಟೂ ಮಿಸ್ ಆಗೋಯ್ತು.. ಯಾಕೆ ಅಂದ್ರೆ ಶೂಟಿಂಗ್ ನಡಿತಾ ಇತ್ತು.. ಆಗ ಬಿಟ್ಬಿಟ್ಟೆ, ನಾಳೆನಾದ್ರೂ ಎದ್ದೋಗೋಣ ಅಂತ. ಒನ್ಸ್ ಯೋಚ್ನೆ ಮಾಡಿದೆ, ಹೌದು ನಾನ್ಯಾಕೆ ಇಷ್ಟೊಂದು ದೊಡ್ಡದು ಮಾಡಿದೆ ಇದನ್ನ? ಒಂದ್ ವಾರ ಬಿಡೋಣ ಇದ್ನ ಅಂತ' ಯೋಚ್ನೆ ಮಾಡಿದೆ.. ಇವತ್ತು ಪ್ರಾಬ್ಲಂ ಇಷ್ಟು ದೊಡ್ಡದಿರುತ್ತೆ ನಿಮ್ಗೆ.. ನಾಳೆ ಅದು ಸ್ವಲ್ಪ ಚಿಕ್ಕದಾಗುತ್ತೆ, ನಾಡಿದ್ದು ಅದು ಇನ್ನೂ ಸ್ವಲ್ಪ ಹೆಚ್ಚು ಚಿಕ್ಕದಾಗುತ್ತೆ.. ದಿಗಳು ಕಳಿತಾ ಇದ್ದಂಗೆ ಅದು ಚಿಕ್ಕದಾಗುತ್ತಾ ಹೋಗಿ ಒಂದಿನ ಅದು ತುಂಬಾ ಚಿಕ್ಕದಾಗುತ್ತೆ..
ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!
ಹೀಗೆ ನಡ್ಯುತ್ತೆ ನಮ್ ಎಲ್ಲರ ಜೀವನದಲ್ಲಿ.. ಹಾಗೆ ನೋಡಿದ್ರೆ ನಾನು ಆತುರದಲ್ಲಿ ಕೆಲವೊಮ್ಮೆ ತಪ್ಪು ಮಾಡಿದೀನಿ.. ತಪ್ಪು ಅಂದ್ರೆ, ನಿಮ್ಮದು ತಪ್ಪೇ ಇರಲ್ಲ, ಇನ್ಯಾವನದೋ ತಪ್ಪು ಇರುತ್ತೆ.. ಅದ್ರೆ ನಾನು ನಿಮ್ ಫ್ರೆಂಡ್‌ಶಿಪ್ ಕಳ್ಕೋತೀನಿ.. ಯಾಕಂದ್ರೆ ನಾನು ಮೊದ್ಲು ನಿಮ್ ಹಿಡ್ಕೊತೀನಿ.. ನಿಮ್ಮಿಂದ ಅಲ್ಲಿಗ್ ಹೋಗ್ತೀನಿ.. ಯಾಕೆ ಅಂದ್ರೆ ನಾನು ಅವ್ನ ಇನ್ನೂ ಹುಡುಕ್ತಾ ಇದೀನಿ..
ಡಾ ರಾಜ್‌ಗೆ ಯಾರೋ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಮಾಡಿ ಸಿನಿಮಾ ಗೆಲ್ಲಿಸಿದ್ದು ಯಾರು..?
ಯಾಕಂದ್ರೆ, ನನ್ ಫ್ರಸ್ಟ್ರೇಶನ್ ದೊಡ್ಡದಾಗಿರುತ್ತಲ್ಲಾ..! ಬಟ್ ಏನಂದ್ರೆ, ಪ್ರಾಬ್ಲಂ ದೊಡ್ಡದಾಗಿದ್ದಾಗ ಸುಮ್ನೆ ಇದ್ಬಿಡಿ.. ಹೋಗ್ತಾ ಹೋಗ್ತಾ ಹೋಗ್ತಾ ಚಿಕ್ಕದಾಗುತ್ತಾ ಹೋಗುತ್ತೆ.. ಕೊನೆಗೆ ಅದು, ಕರೆಕ್ಟಾಗಿ ಟಾರ್ಗೆಟ್‌ಗೇ ಹೊಡಿತೀರಾ.. ಕೊನೆಗೆ ನೀವು ಯಾವನು ತಪ್ಪು ಮಾಡಿದ್ನೋ ಅವ್ನೇ ಹಿಡಿತೀರಾ.. ಆವತ್ತು ಅಂದ್ಕೊಂಡೆ, ಹೌದಲ್ಲ, ಇದು ಚೆನ್ನಾಗಿದ್ಯಲ್ಲಾ!, ಯಾಕೆ ತಲೆ ಕೆಡಿಸ್ಕೋಬೇಕು? ಅದಕ್ಕೇ, ಇವತ್ತು ಏನೇ ಪ್ರಾಬ್ಲಂ ಬಂದ್ರೂ, ಏ, ನೋಡ್ಕೊಳ್ಳೋಣ..ಇನ್ನೊಂದ್ ವಾರ ಹೋಗ್ಲಿ ಅಂತ ಬಿಟ್ಬಿಡ್ತೀನಿ' ಅಂದಿದ್ರು ನಟ ದರ್ಶನ್.
ಕೆಜಿಎಫ್ ಸ್ಟಾರ್ ಯಶ್ ನ್ಯೂ ಹೇರ್ ಸ್ಟೈಲ್ ನೋಡಿ ನೀವಿನ್ನೂ ಫಿದಾ ಆಗಿಲ್ವಾ, ನೋಡಿ ಬೇಗ..!
ಆದರೆ ಇವತ್ತು ನಟ ದರ್ಶನ್ ಅವರಿಗೆ ಏನಾಗಿದೆ ಎಂದು ಬಹುತೇಕ ಎಲ್ಲರಿಗೂ ಗೊತ್ತು. ಅವರು ಅನುಸರಿಸುತ್ತಿದ್ದ ಯಾವುದೇ ಸ್ಟ್ರಾಟಜಿ ಕೆಲಸ ಮಾಡುತ್ತಿಲ್ಲ. ಅವರ ಯೋಚನೆ, ಯೋಜನೆ ಎಲ್ಲವನ್ನೂ ಮೀರಿ ಏನೋ ಘಟನೆ ನಡೆದುಹೋಗಿದೆ. ಯಾವುದೋ ಉದ್ದೇಶಕ್ಕೆ ಏನೋ ಮಾಡಲು ಹೋಗಿ ಏನು ನಡೆಯಬಾರದಿತ್ತೋ ಅದು, ಅದೇನೋ ನಡೆದುಹೋಗಿದೆ. ಉದ್ದೇಶಪೂರ್ವಕ ಎನ್ನಲಾಗದಿದ್ದರೂ ಕಹಿ ಘಟನೆಯಂತೂ ನಡೆದುಹೋಗಿದೆ. ಅಂಬರೀಷ್ ಅಭಿನಯದ 'ಏನೋ ಮಾಡಲು ಹೋಗಿ, ಏನು ಮಾಡಿದೆ ನೀನು..' ಎಂಬ ಹಾಡಿನ ಸಾಲು ನಟ ದರ್ಶನ್ ಪರಿಸ್ಥಿತಿಯನ್ನು ನೋಡಿದರೆ ಬೇಡಬೇಡವೆಂದರೂ ನೆನಪಿಗೆ ಬರುತ್ತದೆ.
ಸುಳ್ಳು ಸುತ್ತಾಡ್ತಿತ್ತಾ ಇಷ್ಟೊಂದು ಕಾಲ, ರಾಮಾಯಣ ಅಲ್ಲ ಕೆಜಿಎಫ್‌ಗೇ ಯಶ್‌ಗೆ ಆ ಪಟ್ಟ ಸಿಕ್ಕಿತ್ತು..!