ರಿಲೀಸ್ ಆಯ್ತು ಹೊಸ ಗಿರಿಗಳ ಬಿಚ್ಚಿಡುವ 'ಹರಿಕಥೆ ಅಲ್ಲ ಗಿರಿಕಥೆ'ಯ ಟ್ರೈಲರ್

Published : Jun 19, 2022, 12:40 PM IST
ರಿಲೀಸ್ ಆಯ್ತು ಹೊಸ ಗಿರಿಗಳ ಬಿಚ್ಚಿಡುವ 'ಹರಿಕಥೆ ಅಲ್ಲ ಗಿರಿಕಥೆ'ಯ ಟ್ರೈಲರ್

ಸಾರಾಂಶ

ಚಿತ್ರರಂಗದಲ್ಲಿ ಸದಾ ಒಂದಿಲ್ಲೊಂದು ಹೊಸಾ ಪ್ರಯೋಗಗಳನ್ನು ಮಾಡುತ್ತಾ ನಟನಾಗಿ, ನಿರ್ದೇಶಕನಾಗಿ ಸಕ್ರಿಯರಾಗಿದ್ದುಕೊಂಡು ತಮ್ಮದೇ ಆದ ವಿನೂತನ ಶೈಲಿಯನ್ನ ಪರಿಚಯಿಸಿದವರು ರಿಷಬ್‌ ಶೆಟ್ಟಿ. 

ಚಿತ್ರರಂಗದಲ್ಲಿ ಸದಾ ಒಂದಿಲ್ಲೊಂದು ಹೊಸಾ ಪ್ರಯೋಗಗಳನ್ನು ಮಾಡುತ್ತಾ ನಟನಾಗಿ, ನಿರ್ದೇಶಕನಾಗಿ ಸಕ್ರಿಯರಾಗಿದ್ದುಕೊಂಡು ತಮ್ಮದೇ ಆದ ವಿನೂತನ ಶೈಲಿಯನ್ನ ಪರಿಚಯಿಸಿದವರು ರಿಷಬ್‌ ಶೆಟ್ಟಿ. ಅತ್ತ ನಾಯಕನಾಗಿ ನಟಿಸುತ್ತಾ, ಇತ್ತ ನಿರ್ದೇಶಕನಾಗಿ ಜವಾಬ್ದಾರಿ ನಿರ್ವಹಿಸುತ್ತಾ ಹೊಸಬರಿಗೆ ಪ್ರೋತ್ಸಾಹಿಸುವ ರಿಷಬ್‌ ಇದೀಗ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಕಾಮಿಡಿ ಟ್ರ್ಯಾಕಿನಲ್ಲಿ ಭಿನ್ನ ಕಥೆಯನ್ನು ಆತ್ಮವಾಗಿಸಿಕೊಂಡಿರುವ ಈ ಸಿನಿಮಾ ಈಗಾಗಲೇ ನಾನಾ ದಿಕ್ಕಿನಲ್ಲಿ ಚರ್ಚೆ ಹುಟ್ಟು ಹಾಕಿದೆ. 

ಇತ್ತೀಚೆಗಷ್ಟೇ ಮೆಲೋಡಿಯಸ್ ಹಾಡು ಹಾಗೂ ಬವರಾಚಿ ಲಿರಿಕಲ್ ಸಾಂಗ್‌ನ ಮೂಲಕ ಎಲ್ಲರನ್ನ ತನ್ನತ್ತ ಸೆಳೆದಿತ್ತು. ಈಗ ಚಿತ್ರದಿಂದ ಹರಿತವಾದ ಹದವಾಗಿಸಿದ ಟ್ರೈಲರ್ ರಿಲೀಸ್ ಆಗಿ ಮತ್ತೊಮ್ಮೆ ಚಿತ್ರ ಕಣ್ತುಂಬಿಕೊಳ್ಳುವ ಕಾತುರತೆಯನ್ನ ಹೆಚ್ಚಿಸಿದೆ. ಈ ಚಿತ್ರ ಇದೇ ತಿಂಗಳ 23ರಂದು ತೆರೆಗಾಣಲಿದೆ. ರಿಲೀಸ್ ಆದ ಟ್ರೈಲರ್‌ನಲ್ಲಿ ರಿಶಬ್ ಶೆಟ್ಟಿಯವರು ನಿರ್ವಹಿಸಿರುವ ಡೈರೆಕ್ಟರ್ ಗಿರಿ ಪಾತ್ರದ ಜಲಕ್ ಇದೆ. ರಚನಾ ಇಂದರ್ ಮತ್ತು ತಪಸ್ವಿನಿ ನಾಯಕಿಯರಾಗಿ ರಿಶಬ್ ಶೆಟ್ಟಿ ಅವರಿಗೆ ಸಾಥ್ ಕೊಟ್ಟಿರುವ ಅವರವರ ಪಾತ್ರದ ಸಣ್ಣ ಸುಳಿವು ಕೊಟ್ಟಿದ್ದಾರೆ. 



ಪ್ರಮೋದ್ ಶೆಟ್ಟಿ ಕೂಡಾ ಪೊಲೀಸ್ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು ಟ್ರೈಲರ್ ನೋಡಿದ್ರೆನೇ ನಗುವಿನ ಟಾನಿಕ್ ಸಿಗತ್ತೆ ಅಂದ್ರೆ ಸಿನೆಮಾ ಇನ್ನಷ್ಟು ನಗುವಿನ ಹೊನಲನ್ನ ಹರಿಸತ್ತೆ ಅನ್ನೊದು ಗೊತ್ತಾಗತ್ತೆ. ರಿಲೀಸ್ ಆದ ಟ್ರೈಲರ್‌ಗೆ ವ್ಯಾಪಕವಾದ ಬೆಂಬಲ ಎಲ್ಲೆಡೆ ವ್ಯಕ್ತವಾಗ್ತಿದ್ದು, ಟ್ರೈಲರ್ ಚಿತ್ರಪ್ರೇಮಿಗಳಿಗೆ ಹದವಾಗಿ ಹುರಿದು ತಲುಪಿಸುವುದರಲ್ಲಿ ಚಿತ್ರತಂಡ ಯಶಸ್ಸು ಸಾಧಿಸಿದೆ. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದು, ಪ್ರೇಕ್ಷಕರನ್ನ ಮನರಂಜಿಸೋದ್ರಲ್ಲಿ ಯಾವ ಮೋಸವೂ ಇಲ್ಲ. ಅಂತೆಯೇ ರಿಷಬ್‌ರಿಗೂ ವೃತ್ತಿಯಾನದ ಹೊಸ ಅನುಭವ ಈ ಸಿನೆಮಾದ ಮೂಲಕ ಆಗೋದು ನಿಶ್ಚಯ. 



ಇದೊಂದು ಹಾಸ್ಯ ಪ್ರಧಾನ ಚಿತ್ರವೆಂಬ ಸುಳಿವಿನೊಂದಿಗೆ ಈ ಚಿತ್ರದ ಕಥೆ ಭಿನ್ನಾತಿಭಿನ್ನವಾಗಿದೆ ಅನ್ನೋದು ಅಷ್ಟೇ ಸತ್ಯ. ಹರಿಕಥೆ ಅಲ್ಲ ಗಿರಿಕಥೆಯಲ್ಲಿ ಚೆಂದದ ತಾರಾಬಳಗ, ಪ್ರತಿಭಾವಂತ ತಾಂತ್ರಿಕ ವರ್ಗದಿಂದ ಹದಗೊಂಡಿದೆ. ಶ್ರೀನಿವಾಸ ಗೌಡ, ರತ್ನ, ರಾಕೇಶ್, ಬಸಿಲ್ ಮುಂತಾದವರು ಅಸಿಸ್ಟೆಂಟ್ ಡೈರೆಕ್ಟರುಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಚಿತ್ರಗಳನ್ನು ಕೊಡಮಾಡಿರುವ ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಚಿತ್ರ ಹರಿತವಾದ ಟ್ರೈಲರ್‌ನಲ್ಲಿ ಮೋಡಿ ಮಾಡ್ತಿದ್ದು, ಸಿನೆಮಾ ನೋಡುವ ಕಾತುರತೆಯನ್ನ ಹೆಚ್ಚಿಸುತ್ತಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್