ಮನೆ ಊಟ ಸಿಗುತ್ತಿಲ್ಲ, ಸೌಕರ್ಯವಿಲ್ಲದ ರೂಮ್; ಗೀತಾ ಶಿವರಾಜ್‌ಕುಮಾರ್ ಕೆಲಸ ಮೆಚ್ಚಿದ ಧನುಷ್!

Published : Jan 05, 2024, 10:42 AM IST
ಮನೆ ಊಟ ಸಿಗುತ್ತಿಲ್ಲ, ಸೌಕರ್ಯವಿಲ್ಲದ ರೂಮ್; ಗೀತಾ ಶಿವರಾಜ್‌ಕುಮಾರ್ ಕೆಲಸ ಮೆಚ್ಚಿದ ಧನುಷ್!

ಸಾರಾಂಶ

ಕ್ಯಾಪ್ಟನ್ ಮಿಲ್ಲರ್ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡ ಧನುಷ್. ಶಿವಣ್ಣ ಎನರ್ಜಿಗೆ ಫಿದಾ....

ತಮಿಳು ಆಕ್ಷನ್ ಥ್ರಿಲ್ಲರ್ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಸಂಕ್ರಾಂತಿ ಹಬ್ಬದಂದು ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ನಾಯಕ ನಟ ಸಿಂಪಲ್ ಸ್ಟಾರ್ ಧನುಷ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಮೆರಗು ಹೆಚ್ಚಿಸಲು ಸಹೋದರನ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಸಹೋದರನ ಪಾತ್ರವಾದರೂ ಪ್ರಮುಖ ಪಾತ್ರ ಅಂತಾರೆ ಚಿತ್ರತಂಡ. ಅರುಣ್ ಮಥೇಶ್ವರನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಸೆಂದಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಬಂಡವಾಳ ಹಾಕಿದ್ದಾರೆ. ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. 

ಇತ್ತೀಚಿಗೆ ಚೆನ್ನೈನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ವೇದಿಕೆ ಮೇಲೆ ಶಿವಣ್ಣ ಮಾತನಾಡಿ ಸಖತ್ ಎನರ್ಜಿಯಿಂದ ಡ್ಯಾನ್ಸ್ ಮಾಡಿದ್ದರು. ಅಲ್ಲದೆ ವೇದಿಕೆಯಿಂದ ಕೆಳಗೆ ಇಳಿದು ಧನುಷ್‌ ಜೊತೆ ಕೂಡ ಹೆಜ್ಜೆ ಹಾಕಿದ್ದರು. ಇದಾದ ಮೇಲೆ ಧನುಷ್ ಶಿವಣ್ಣ ಮತ್ತು ಗೀತಕ್ಕ ಬಗ್ಗೆ ಮಾತನಾಡಿದ್ದಾರೆ.

Shivarajkumar 'ಕ್ಯಾಪ್ಟನ್ ಮಿಲ್ಲರ್'ನಲ್ಲಿ ಧನುಷ್ ಜತೆ ಶಿವಣ್ಣ; ಡೇಟ್ಸ್‌ ಫುಲ್‌ ಇದ್ದರೂ NO ಹೇಳಲು ಮನಸ್ಸಿಲ್ಲ

'ನಿಮ್ಮ ಮನಸ್ಸಿಗೆ ನಿಮ್ಮ ಪ್ರೀತಿಗೆ ನಿಮ್ಮ ಬೆಂಬಲಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಅಕ್ಕರೆಗೆ ನಾನು ದೊಡ್ಡ ಅಭಿಮಾನಿ. ಎಷ್ಟು ಸಲ ವೇದಿಕೆ ಏರಿದರು ನಗುತ್ತಾ ಮಾಡುತ್ತೀರಿ. ಪ್ರತಿ ಸಲವೂ ನಿಮ್ಮನ್ನು ನೋಡಿ ಖುಷಿ ಪಡುವೆ. ಸುಮ್ಮನೆ ವೇದಿಕೆ ಮೇಲೆ ಮಾತನಾಡಬೇಕು ಅಂತ ಮಾತನಾಡುತ್ತಿಲ್ಲ. ನಿಜ ಹೇಳಬೇಕು ಅಂದ್ರೆ ನೀವು ನಕ್ಕಾಗ ನಿಮ್ಮ ಮುಖದಲ್ಲಿ ಅಪ್ಪ ಕಾಣಿಸುತ್ತಾರೆ. ನಿಮ್ಮ ತಮ್ಮ ಕೂಡ ಕಾಣಿಸುತ್ತಾರೆ. ನಿಜಕ್ಕೂ ಮೂವರು ಸೇರಿ ನಗುವಂತೆ ಕಾಣಿಸುತ್ತದೆ' ಎಂದು ಧನುಷ್ ಮಾತನಾಡಿದ್ದಾರೆ. ಧನುಷ್ ಮಾತುಗಳನ್ನು ಕೇಳಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.

ಲೀಲಾವತಿ ಅಮ್ಮ ತುಂಬಾ ಸ್ಟ್ರಾಂಗ್;ವಿನೋದ್ ರಾಜ್ ಕೈ ಬಿಗಿಯಾಗಿ ಹಿಡಿದು ಕುಳಿತ ಶಿವಣ್ಣ !

'ಅಪ್ಪನ ಹೆಸರು ಉಳಿಸುವುದು ಹೇಗೆ ಏನು ಅಂತ ನಿಮ್ಮನ್ನು ನೋಡಿ ಕಲಿಯಬೇಕು ಸರ್. ನನ್ನ ಮಕ್ಕಳನ್ನು ನಿಮ್ಮನ್ನು ನೋಡಿ ಕಲಿಯುತ್ತಾರೆ ಅಂದುಕೊಂಡಿದ್ದೇನೆ. ನನ್ನ ಮಕ್ಕಳ ಜೊತೆ ನೀವು ಕ್ರಿಕೆಟ್ ಆಡಿದ್ದು ನಾವು ಹೋಗಿ ಒಟ್ಟಿಗೆ ಊಟ ಮಾಡಿದ್ದು..ಯಾವ ಕ್ಷಣವೂ ಮರೆಯುವುದಕ್ಕೆ ಆಗಲ್ಲ. ಸಿನಿಮಮಾ ಚಿತ್ರೀಕರಣದ ಸಮಯದಲ್ಲಿ ನನಗೆ ಮನೆ ಊಟ ಸಿಗುತ್ತಿಲ್ಲ ಅಂದಾಗ...ಅಲ್ಲದೆ ನಾವೇನು ಅಷ್ಟು ಸೌಕರ್ಯ ಇರುವ ರೂಮ್‌ನಲ್ಲಿ ಇರಲಿಲ್ಲ. ಆ ರೂಮಿನಲ್ಲಿ ಯಾವ ಕೊರತೆ ಇಲ್ಲದಂತೆ ಕಿಚನ್ ರೆಡಿ ಮಾಡಿಬಿಟ್ಟರು ಮೇಡಂ (ಗೀತಾ ಶಿವರಾಜ್‌ಕುಮಾರ್). ನನಗೆ ಒಳ್ಳೆ ಊಟ ಹಾಕಿದ್ದೀರಿ ಗೀತಾ ಮೇಡಂ ಅದನ್ನು ಮರೆಯುವುದಿಲ್ಲ. ನಿಮ್ಮಿಬ್ಬರಿಗೆ ಧನ್ಯವಾದಗಳು' ಎಂದು ಧನುಷ್ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?