
'ಟಗರುಪಲ್ಯ' ಸಿನಿಮಾದ ಕಥೆ ಶುರುವಾಗುವುದು ಸೂರ್ಯ ಹುಟ್ಟೋಕು ಮುಂಚೆ ಮತ್ತು ಕಥೆ ಮುಗಿಯುವುದು ಸಂಜೆ ಮಳೆ ಜೋರು ಹುಯ್ಯುವ ಹೊತ್ತಿಗೆ. ಕುಟುಂಬವೊಂದು ಊರ ದೇವರ ಹರಕೆ ತೀರಿಸಲು ಹೋದಾಗ ಏನೆಲ್ಲ ನಡೆಯುತ್ತದೆ ಅನ್ನೋದೇ ಕಥೆ. ಇದರಲ್ಲಿ ನಗು ಇದೆ, ಕಣ್ಣೀರಿದೆ. ಪ್ರೇಮಿಗಳ ವೇದನೆ ಇದೆ, ತಂದೆಯ ಚಿಂತನೆ, ಪೂಜಾರಪ್ಪನ ಬೋಧನೆ ಮತ್ತು ತಲೆ ಒದರದ ಟಗರು ನೀಡುವ ರೋದನೆ ಕೂಡ ಈ ಪಲ್ಯದಲ್ಲಿ ಅಡಕವಾಗಿದೆ. ನಿರ್ದೇಶಕ ' ಉಮೇಶ್ ಕೃಪ ಅವರು ಸಂಬಂಜ ಅನ್ನೋದು ದೊಡ್ದು ಕನ್ಲಾ' ಅನ್ನೋದನ್ನು ಒತ್ತಿ ಒತ್ತಿ ಹೇಳುತ್ತ, ನಗಿಸುತ್ತ ಭವ್ಯವಾದ ಸಂದೇಶ ನೀಡಿದ್ದಾರೆ. ಸಂಪೂರ್ಣ ಗ್ರಾಮೀಣ ಸ್ವಾದದ ಹಳ್ಳಿಯ ರಸಾನುಭವ ನೀಡುವ ಈ ಚಿತ್ರದಲ್ಲಿ ಮೊದಲಾರ್ಧವನ್ನು ಹಳ್ಳಿ ಜನರ ಪಾತ್ರಗಳೇ ಲವಲವಿಕೆಯಿಂದ ಮುನ್ನಡೆಸಿವೆ. ಭರಚುಕ್ಕಿ ಜಲಪಾತದ ವೈಭವ, ಮಂಡ್ಯ ಮದ್ದೂರು ಕೊಳ್ಳೆಗಾಲದ ಭಾಷೆ, ನೆಲದ ಸೊಬಗು ಚಿತ್ರದಲ್ಲಿದೆ. ಮುಗ್ಧ ಗ್ರಾಮೀಣ ಜನರ ಬದುಕಿನ ನೋಟ, ನಗರದ ಜನರ ಸಣ್ಣತನ, ಹಾಸ್ಯ, ಪ್ರೀತಿ ಎಲ್ಲವೂ ಇದೆ.
ಡಾಲಿ ಧನಂಜಯ್ ತಾವು ಬೆಳಿಯೋದಲ್ಲದೆ, ಗೆಳೆಯರನ್ನೂ ಬೆಳೆಸುತ್ತಾರೆ ಎನ್ನುವ ಮಾತು ಈ ಚಿತ್ರದಿಂದ ಸಾಬೀತಾಗಿದೆ. ನಟ ನಾಗಭೂಷಣ್‌ರನ್ನು(Nagabhushan) ಹೀರೋ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಮಗಳು(Amrutha Prem) ಇದೇ ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ಈ ಸಿನಿಮಾ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ರಂಗಾಯಣ ರಘು, ತಾರಾ ಅವರಂಥ ಹಿರಿಯ ನಟ-ನಟಿಯರೂ ಇದ್ದಾರೆ. ರಾಮಾ ರಾಮಾ ರೇ ಸರ್ಕಾರಿ ಹಿ.ಪ್ರಾ.ಶಾಲೆ, ಬಡವ ರಾಸ್ಕಲ್ ಮೊದಲಾದ ಸಿನಿಮಾಗಳಿಗೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಟಗರು ಪಲ್ಯಕ್ಕೆ ಸಖತ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಈಗಾಗಲೇ ಟಗರು ಪಲ್ಯ ಟೈಟಲ್ ಟ್ರ್ಯಾಕ್, ಸೂರ್ಯ ಕಾಂತಿ ಮತ್ತು ಇತ್ತೀಚೆಗಷ್ಟೆ ರಿಲೀಸ್ ಆದ ಜೋಗಿ ಪ್ರೇಮ್ ಹಾಡಿರೋ ಸಂಬಂಧ ಅನ್ನೋ ಹಾಡು . ಪ್ರತಿ ಹಾಡಿನಲ್ಲೂ ಅದ್ಭುತ ಸಾಹಿತ್ಯ ಬರೆದಿದ್ದಾರೆ ಡಾಲಿ ಧನಂಜಯ್(Dhananjay).
ಮದುಮಗಳಾದ ಅನುಶ್ರೀ: ವಿಡಿಯೋ ನೋಡಿ ಅಮರಶಿಲ್ಪಿ ಜಕ್ಕಣ್ಣ ಬೆರಗಾದನಂತೆ, ರವಿವರ್ಮ ಮೈ ಮರೆತನಂತೆ!
ಇದೀಗ ಟಗರು ಪಲ್ಯ ತಂಡವನ್ನು ಆ್ಯಂಕರ್ ಅನುಶ್ರೀ ಅವರು ಮೀಟ್ ಮಾಡಿದ್ದು ಮಾತುಕತೆ ನಡೆಸಿದ್ದಾರೆ. ಚಿತ್ರದಲ್ಲಿನ ಡೈಲಾಗ್ಗಳನ್ನು ಹೇಳಿದ್ದಾರೆ. ಈ ವೇಳೆ ಡಾಲಿ ಧನಂಜಯ್ ಅವರು, ಅನುಶ್ರೀ ಅವರ ಬಳಿ ಹೋಗಿ ಬಂದರೆ, ಚಿತ್ರ ಸಕ್ಸಸ್ ಆಗುತ್ತದೆ ಎನ್ನುವ ಮಾತಿದೆ. ಆದರೆ ಅನುಶ್ರೀ ನೋಡಿದರೆ ಸಿಗುವುದೇ ಇಲ್ಲ ಎಂದು ತಮಾಷೆ ಮಾಡಿದರು. ಆಗ ಅನುಶ್ರೀ ಅವರು ತಮ್ಮ ಎಂದಿನ ಹಾಸ್ಯದ ಮಾತಿನಂತೆ ಒಹೋ ಹಾಗಿದ್ದರೆ ನನಗೆ ಅಷ್ಟೊಂದು ಡಿಮಾಂಡಾ, ನಾನು ಎಲ್ಲರಿಗೂ ಅಷ್ಟೊಂದು ಸ್ಫೂರ್ತಿನಾ ಎಂದು ಕೇಳುತ್ತಾರೆ. ಅದಕ್ಕೆ ಕೂಡಲೇ ಡಾಲಿ ಧನಂಜಯ ಅವರು, ಯಾಕೆ ಹೇಳಿ, ನೀವು ಸಿಂಗಲ್ ಅಲ್ವಾ ಎಂದು ತಮಾಷೆ ಮಾಡಿದ್ದಾರೆ. ಆಗ ಇಡೀ ತಂಡದಲ್ಲಿ ನಗುವಿನ ಅಲೆ.
ಈ ಡೈಲಾಗ್ ಕೇಳಿ ನೆಟ್ಟಿಗರೂ ಸುಮ್ಮನೇ ಕುಳಿತಿಲ್ಲ. ಅನುಶ್ರೀ ಮೇಡಂ ಮದ್ವೆ ಯಾವಾಗ ಅಂತ ಮಾಮೂಲಿನಂತೆ ಕಾಲೆಳೆಯುತ್ತಿದ್ದಾರೆ. ಇದಾದ ಬಳಿಕ ಸಂಬಂಜ ಅನ್ನೋದು ದೊಡ್ದು ಕನ್ಲಾ ಎಂಬ ಡೈಲಾಗ್ ಹೇಳಿದ್ದಾರೆ.
'ಟಗರು ಪಲ್ಯ' ನೋಡಿ ಖುಷಿ ಪಟ್ಟ ಸ್ಯಾಂಡಲ್‌ವುಡ್ ಮಂದಿ: ಸಿನಿಮಾಗೆ ತಾರೆಯರ ರಿವ್ಯೂ ಹೇಗಿದೆ ಗೊತ್ತಾ ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.