ಚೇತನ್ ಅಹಿಂಸಾ: ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ, ಅಲ್ವಾ ನಾರಾಯಣ ಮೂರ್ತಿಯವರೇ?

Published : Oct 28, 2023, 01:46 PM ISTUpdated : Oct 28, 2023, 02:35 PM IST
ಚೇತನ್ ಅಹಿಂಸಾ: ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ, ಅಲ್ವಾ ನಾರಾಯಣ ಮೂರ್ತಿಯವರೇ?

ಸಾರಾಂಶ

ಇಂಫೋಸಿಸ್ ನಾರಾಯಣ ಮೂರ್ತಿಯವರು 'ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು' ಎಂಬ ಸಲಹೆ ನೀಡಿದ್ದರು. ಅವರು ತಮ್ಮ ಮಾತಿಗೆ ಪೂರಕವಾಗಿ ಜರ್ಮನಿ, ಜಪಾನ್ ಉದಾಹರಣೆಯನ್ನೂ ನೀಡಿದ್ದರು. ಇದೀಗ ನಟ ಚೇತನ್ ನಾರಾಯಣಮೂರ್ತಿ ಅವರ ಹೇಳಿಕೆಯನ್ನು ಟೀಕಿಸಿ ಕಾಮೆಂಟ್ ಮಾಡಿದ್ದಾರೆ.

ಇಂಫೋಸಿಸ್ ನಾರಾಯಣ ಮೂರ್ತಿಯವರು ಇತ್ತೀಚೆಗೆ  ಒಂದು ಸಂದರ್ಭದಲ್ಲಿ,'ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು' ಎಂಬ ಸಲಹೆ ನೀಡಿದ್ದರು. ಚೇತನ್ ಅಹಿಂಸಾ ಇದಕ್ಕೂ ಕಾಮೆಂಟ್ ಮಾಡಿದ್ದಾರೆ. ನಟ ಚೇತನ್ ಹೆಚ್ಚುಕಡಿಮೆ ಎಲ್ಲ ವಿಷಯಕ್ಕೂ ಕಾಮೆಂಟ್ ಮಾಡುತ್ತಾರೆ, ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ ಎಂಬುದು ಹೊಸ ವಿಷಯವೇನೂ ಅಲ್ಲ. ಸೋಷಿಯಲ್ ಮೀಡಿಯಾ ಪ್ರಿಯರಿಗೆ ಚೇತನ್ ಅಹಿಂಸಾ ಬಗ್ಗೆ, ಅವರು ಫೊಸ್ಟ್ ಮಾಡುವ ಕಾಮೆಂಟ್‌ಗಳ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ.

ಇತ್ತೀಚೆಗೆ, ಇಂಫೋಸಿಸ್ ನಾರಾಯಣ ಮೂರ್ತಿಯವರು 'ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು' ಎಂಬ ಸಲಹೆ ನೀಡಿದ್ದರು. ಅವರು ತಮ್ಮ ಮಾತಿಗೆ ಪೂರಕವಾಗಿ ಜರ್ಮನಿ, ಜಪಾನ್ ಉದಾಹರಣೆಯನ್ನೂ ನೀಡಿದ್ದರು. ಇದೀಗ ನಟ ಚೇತನ್ ನಾರಾಯಣಮೂರ್ತಿ ಅವರ ಹೇಳಿಕೆಯನ್ನು ಟೀಕಿಸಿ ಕಾಮೆಂಟ್ ಮಾಡಿದ್ದಾರೆ. 'ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ: ಅಲ್ವಾ? ನಾರಾಯಣ ಮೂರ್ತಿಯವರೇ' ಎಂದು ನಟ ಚೇತನ್ ಅಹಿಂಸಾ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಚೇತನ್ ಪೋಸ್ಟ್‌ಗೆ ಬಹಳಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿವೆ. ಹೆಚ್ಚು ಕಡಿಮೆ ಎಲ್ಲರ ಅನಿಸಿಕೆ ಏನೆಂದರೆ ನಾರಾಯಣಮೂರ್ತಿಯವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಅವರು ಈ ಬಗ್ಗೆ ಸರ್ಕಾರ ರೂಲ್ಸ್ ಮಾಡಬೇಕು ಎಂದು ಹೇಳಿಲ್ಲ, ಅಥವಾ ತಮ್ಮ ಸಂಸ್ಥೆಯಲ್ಲಿ ಅಷ್ಟು ಕೆಲಸ ಮಾಡಬೇಕು ಎಂದು ಕೂಡ ಹೇಳಿಲ್ಲ . ಬದಲಾಗಿ, ದೇಶದ ಒಳಿತಿಗಾಗಿ ಜಪಾನ್-ಜರ್ಮನಿಗಳನ್ನು ಉದಾಹರಿಸಿ ಯುವಕರಿಗೆ ಕಿವಿಮಾತು ಹೇಳಿದ್ದಾರಷ್ಟೇ. ತಾವು ಉದ್ಧಾರ ಆಗಬೇಕು, ದೇಶವೂ ಬೆಲೆಯಬೇಕು ಎನ್ನುವವರು ಅವರ ಮಾತನ್ನು ಪಾಲಿಸಬಹುದು ' ಎಂದಿದ್ದಾರೆ ನೆಟ್ಟಿಗರು.

ಸೋಷಿಯಲ್ ಮೀಡಿಯಾಗಳಲ್ಲಿ ಚೇತನ್ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳಲ್ಲಿ ಹೆಚ್ಚಾಗಿ ನೆಗೆಟವ್ ಇವೆ. 'ಎಷ್ಟು ಜನರಿಗೆ ನೀನು ಉದ್ಯೋಗದ ಅವಕಾಶ ಕೊಟ್ಟಿದ್ದೀಯ? ಎಷ್ಟು ಜನ ಶ್ರೀಮಂತರನ್ನು ನೀನು ಸೃಷ್ಟಿಸಿದ್ದೇಯ? ಭಾರತ ದೇಶಕ್ಕೆ ಎಷ್ಟು ಹಣ ಸಂಪಾದನೆ ಮಾಡಿ ಕೊಟ್ಟಿದ್ದೀಯ?
ಭಾರತ ದೇಶಕ್ಕೆ ಎಷ್ಟು ತೆರಿಗೆ ಕಟ್ಟಿದ್ದೀಯ? ನಾರಾಯಣ ಮೂರ್ತಿ ಅವರ ಪಾದ ಧೂಳಿಗೂ ನೀನು ಸಮನಲ್ಲ, ಬಾಯಿಗೆ ಬಂದ ಹಾಗೆ ಮಾತನಾಡಬೇಡ, ಬಂದ ದಾರಿಗೆ ಸುಂಕವಿಲ್ಲದಂತೆ ನೀನು ನಿನ್ನ ದೇಶಕ್ಕೆ ಹಿಂತಿರುಗಿ ಹೋಗು" ಎಂದು ಒಬ್ಬರು ಬರೆದಿದ್ದಾರೆ.

ಟ್ರೈಲರ್ ರಿಲೀಸ್, 'ಸಪ್ತ ಸಾಗರದಾಚೆ ಎಲ್ಲೋ B'ಸಿನಿಮಾ ಬಿಡುಗಡೆ ಕನ್ಫರ್ಮ್

ಅದೇ ಪೋಸ್ಟ್‌ಗೆ ಇನ್ನೊಬ್ಬರು 'ರೈತರು ದಿನದ 24 ಗಂಟೆ ಕೆಲಸ ಮಾಡ್ತಾರೆ, ಅವರಿಂದಲೇ ದೇಶದ ಜನ ಸುಖವಾಗಿರೊದಿಕ್ಕೆ ಸದ್ಯ. ಸೈನಿಕರು ಹಗಲು ರಾತ್ರಿ ಆನ್ನದೇ ದುಡಿತ್ತಿರೋದಿಕ್ಕೆ ದೇಶದ ಜನ ನೆಮ್ಮದಿಯಿಂದ ನಿದ್ದೆ ಮಾಡ್ತಿರೋದು ನಾರಾಯಣಮೂರ್ತಿಯವರು ಹೇಳಿದ್ರೋಲ್ಲಿ ತಪ್ಪಿಲ್ಲ.. ಅವರು ಇನ್ಫೋಸಿಸ್ ಗೆ ಕೆಲಸ ಮಾಡಿ ಅಂತ ಹೇಳ್ತಿಲ್ಲ ನೀವು ನೀವು ಆಯ್ಕೆ ಮಾಡಿಕೊಂಡಿರೋ ಕೆಲಸನ ಸಮಯ ವ್ಯರ್ಥ ಮಾಡದೇ ಮಾಡಿ ಅಂತ' ಎಂದಿದ್ದಾರೆ ಇನ್ನೊಬ್ಬರು ನೆಟ್ಟಿಗರು. 

ರಣರಂಗವಾಯ್ತು ಬಿಗ್ ಬಾಸ್ ಮನೆ, ಡಾಮಿನೇಟ್ ಮಾಡೋಕೆ ಯಾವಳೋ ಅವ್ಳು ತನಿಶಾ ವಿರುದ್ಧ ಹರಿಹಾಯ್ದ ನಮ್ರತಾ!

'ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡರು' ಎಂಬ ಗಾದೆ ಚೇತನ್‌ ಅವರಿಗಾಗಿಯೇ ಮಾಡಿದ್ದಾ?' ಎಂದಿದ್ದಾರೆ ಮಗದೊಬ್ಬರು. ಯಾರಿಗೆ ಗೊತ್ತು ಸತ್ಯ? ಗೊತ್ತಿದ್ದವರು ಹೇಳಲಿಕ್ಕೊಂದು ಅವಕಾಶ ಸಿಕ್ಕಿದೆ, ನೋಡಿ ವಿಚಾರಮಾಡಿ!


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!