ಯೂಟ್ಯೂಬ್‌ಗೆ ‘ಸ್ವೀಟಿ’ ಸಿನಿಮಾ ಅಪ್‌ಲೋಡ್‌: ರಾಧಿಕಾ ದೂರು

Suvarna News   | Asianet News
Published : Sep 01, 2020, 10:51 AM ISTUpdated : Sep 01, 2020, 12:35 PM IST
ಯೂಟ್ಯೂಬ್‌ಗೆ ‘ಸ್ವೀಟಿ’ ಸಿನಿಮಾ ಅಪ್‌ಲೋಡ್‌: ರಾಧಿಕಾ ದೂರು

ಸಾರಾಂಶ

2013ರಲ್ಲಿ ರಾಧಿಕಾ ‘ಸ್ವೀಟಿ ನನ್ನ ಜೋಡಿ’ ಎಂಬ ಸಿನಿಮಾ ನಿರ್ಮಿಸಿದ್ದರು. ಇದರಲ್ಲಿ ಆದಿತ್ಯ ನಾಯಕನಾಗಿ ನಟಿಸಿದ್ದರೆ, ರಾಧಿಕಾ ನಾಯಕಿಯಾಗಿದ್ದರು. ಆದರೀಗ ನಿರ್ಮಾಪಕರ ಅನುಮತಿ ಪಡೆಯದೆ ಸಿನಿಮಾ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ತಾವು ನಟಿಸಿ, ನಿರ್ಮಿಸಿದ್ದ ಚಲನಚಿತ್ರವನ್ನು ಅಕ್ರಮವಾಗಿ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಟಿ ರಾಧಿಕಾ ಕುಮಾರಸ್ವಾಮಿ ಉತ್ತರ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2013ರಲ್ಲಿ ರಾಧಿಕಾ ‘ಸ್ವೀಟಿ ನನ್ನ ಜೋಡಿ’ ಎಂಬ ಸಿನಿಮಾ ನಿರ್ಮಿಸಿದ್ದರು. ಇದರಲ್ಲಿ ಆದಿತ್ಯ ನಾಯಕನಾಗಿ ನಟಿಸಿದ್ದರೆ, ರಾಧಿಕಾ ನಾಯಕಿಯಾಗಿದ್ದರು. ಆದರೀಗ ನಿರ್ಮಾಪಕರ ಅನುಮತಿ ಪಡೆಯದೆ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಡಾರ್ಲಿಂಗ್ ಕೃಷ್ಣ ಸಿನಿಮಾಗೆ NO ಅಂದ್ರಾ ರಾಧಿಕಾ ಕುಮಾರಸ್ವಾಮಿ?

3 ಕೋಟಿ ವೆಚ್ಚದಲ್ಲಿ ಸ್ವೀಟಿ ಸಿನಿಮಾ ಮಾಡಿದ್ದೆ. ಇತ್ತೀಚಿಗೆ ಯಾರೋ ಆ ಚಲನಚಿತ್ರವನ್ನು ಕಾನೂನು ಬಾಹಿರವಾಗಿ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿ ವಂಚಿಸಿದ್ದಾರೆ. ಈ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ರಾಧಿಕಾ ದೂರಿನಲ್ಲಿ ಒತ್ತಾಯಿಸಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡ ಸಿಇಎನ್‌ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ‌ ನಿರ್ಮಾಣದ ಸಿನಿಮಾ ಪೈರಸಿ ವಿಚಾರವಾಗಿ ದೂರು ನೀಡಿದ್ದಾರೆ. ಕಾನೂನು ಬಾಹಿರವಾಗಿ ಯೂಟ್ಯೂಬ್ ಗೆ ಚಲನಚಿತ್ರ ಅಪ್ಲೋಡ್(ಪೈರಸಿ) ಮಾಡಿದ್ದಾಗಿ ಆರೋಪಿಸಿದ್ದಾರೆ.

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ಮಂಗಳಮುಖಿಯರಿಗೆ ರಾಧಿಕಾ ಸಹಾಯ!

2013 ರಲ್ಲಿ ರಾಧಿಕ ಕುಮಾರಸ್ವಾಮಿ ನಟಿಸಿ ನಿರ್ಮಿಸಿದ್ದ ಸ್ವೀಟಿ ನನ್ನ ಜೋಡಿ ಸಿನಿಮಾ ಅಪ್ ಮಾಡಿದ ಕಿಡಿಗೇಡಿಗಳ ವಿರುದ್ದ ಕ್ರಮ ಜರುಗಿಸುವಂತೆ ದೂರಿನಲ್ಲಿ ಹೇಳಿದ್ರಾದಾರೆ.

ಉತ್ತರ ವಿಭಾಗದ CEN ಠಾಣೆಗೆ ದೂರು ನೀಡಿರುವ ರಾಧಿಕ ಕುಮಾರಸ್ವಾಮಿ ನಿರ್ಮಾಪಕರ ಅನುಮತಿ ಪಡೆಯದೆ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿರುವುದಾಗಿ ಆರೋಪಿಸಿದ್ದಾರೆ. ಮೂರು ಕೋಟಿ ವೆಚ್ಚದಲ್ಲಿ ಸ್ವೀಟಿ ನನ್ನ ಜೋಡಿ ಚಿತ್ರ ನಿರ್ಮಿಸಲಾಗಿತ್ತು. ರಾಧಿಕ ಕುಮಾರ ಸ್ವಾಮಿ ದೂರಿನ ಹಿನ್ನಲೆ ಎಫ್ಐಆರ್ ದಾಖಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?