ಯಶ್‌ ಪುತ್ರನಿಗೆ ನಾಮಕರಣ; ವಿಡಿಯೋ ರಿಲೀಸ್‌!

Published : Sep 01, 2020, 10:04 AM ISTUpdated : Sep 01, 2020, 11:46 AM IST
ಯಶ್‌ ಪುತ್ರನಿಗೆ ನಾಮಕರಣ; ವಿಡಿಯೋ ರಿಲೀಸ್‌!

ಸಾರಾಂಶ

ಸದ್ದಿಲ್ಲದೇ ರಾಕಿಂಗ್‌ ಸ್ಟಾರ್ ಯಶ್‌ ಮತ್ತು ರಾಧಿಕಾ ಪಂಡಿತ್ ತಮ್ಮ ಮುದ್ದು ಮಗನಿಗೆ ನಾಮಕರಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್‌ ಮಾಡಿದ ವಿಡಿಯೋ ಇದು

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಜೂನಿಯರ್‌ Yಗೆ ಹೆಸರಿಟ್ಟಿದ್ದಾರೆ. ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿ ಚರ್ಚಿಸುತ್ತಿದ್ದು, ಇದೀಗ ಸ್ಪೆಷಲ್ ನೇಮ್‌ ರಿವೀಲ್ ಆಗಿದೆ.

ಜೂನಿಯರ್‌ ರಾಕಿಂಗ್ ಸ್ಟಾರ್‌ಗೆ 'ಯಥರ್ವ್ ಯಶ್` ಎಂದು ನಾಮಕರಣ ಮಾಡಲಾಗಿದೆ. ಈ ಪೋಸ್ಟ್‌ ಜೊತೆ ಮಗನ ಹೆಸರಿನ ಅರ್ಥವನ್ನೂ ಯಶ್ ತಿಳಿಸಿದ್ದು, ಯಥರ್ವ್ ಎಂದರೆ 'ನಮ್ಮನ್ನು ಪೂರ್ಣಗೊಳಿಸುವಾತ' ಎಂದು ಬರೆದಿದ್ದಾರೆ.

 ಹಾಸನದ ತಮ್ಮ ತೋಟದ ಮನೆಯಲ್ಲೇ ಪರಿಸರದ ಮಧ್ಯೆ ನಾಮಕರಣ ಕಾರ್ಯಕ್ರಮ ನಡೆಸಿದ್ದು, ಮನೆ ಮಂದಿ ಮಾತ್ರ ನಾಮಕರಣದಲ್ಲಿ ಭಾಗಿಯಾಗಿದ್ದಾರೆ.

"

ಈ ಹಿಂದಿಯೂ ಬೇಬಿ ಐರಾ ಹೆಸರು ತುಂಬಾನೇ ಕುತೂಹಲ ಹುಟ್ಟಿಸಿತ್ತು. ಬೆಂಗಳೂರಿನ ತಾಜ್‌ ಹೊಟೇಲ್‌ನಲ್ಲಿ ಐರಾ ನಾಮಕರಣ ನಡೆದಿತ್ತು ಹಾಗೂ ಒಂದು ವರ್ಷದ ಬರ್ತಡೇಯನ್ನು ಫನ್‌ ವರ್ಲ್ಡ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು. ರವಿ ಬಸ್ರೂರ್ ಸಂಯೋಜಿಸಿದ್ದ ಹಾಡಿನೊಂದಿಗೆ ವಿಡಿಯೋ ಶೇರ್ ಮಾಡಲಾಗಿತ್ತು.

ಇನ್ನು ಜೂನಿಯರ್‌ಗೆ ಏನೆಲ್ಲಾ ವಿಶೇಷತೆ ಇರುತ್ತದೆ ಎಂದು ಕುತೂಹಲವಿತ್ತು. ಇಂದು ಜೂನಿಯರ್‌ ವಿಡಿಯೋ ನೋಡಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್ ಸೋದರಳಿಯ ಸಂಚಿತ್ ಸಂಜೀವ್‌ ‘ಮ್ಯಾಂಗೋ ಪಚ್ಚ’ ಈಗ ಒಟಿಟಿಯಲ್ಲಿ: ಎಲ್ಲಿ ನೋಡಬಹುದು?
ಕನಸು ಕಂಡವರು ನಿರ್ಮಾಪಕರಾದರು, ಕತೆ ಬರೆದವರು ಸಿಎಂ ಪಾತ್ರ ಮಾಡಿದರು: 'ಕಾಮನ್‌ ಮ್ಯಾನ್‌'