ಎಕ್ಸ್‌ಕ್ಯೂಸ್‌ಮೀ ಹೀರೋ ಸುನೀಲ್ ರಾವ್ ಅವರ ರೀ ಎಂಟ್ರಿ ಸಿನಿಮಾ ‘ತುರ್ತು ನಿರ್ಗಮನ’. ಚಿತ್ರ ಇದೇ ಜೂನ್ 24ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಎಕ್ಸ್‌ಕ್ಯೂಸ್‌ಮೀ ಹೀರೋ ಸುನೀಲ್ ರಾವ್ ಅವರ ರೀ ಎಂಟ್ರಿ ಸಿನಿಮಾ ‘ತುರ್ತು ನಿರ್ಗಮನ’. ಚಿತ್ರ ಇದೇ ಜೂನ್ 24ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಹೇಮಂತ್ ಕುಮಾರ್ ಈ ಚಿತ್ರ ನಿರ್ದೇಶಿದ್ದಾರೆ. ‘12 ವರ್ಷಗಳ ನಂತರ ಮತ್ತೆ ಚಿತ್ರದಲ್ಲಿ ನಟಿಸಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ ತುರ್ತು ನಿರ್ಗಮನ. ಯಾರೇ ನಟರು ಕೇಳಿದ್ದರೂ, ಬೇಡ ಎನ್ನಲು ಆಗದಂತಹ ಕತೆ ಇದು. ತುಂಬಾ ವರ್ಷಗಳ ನಂತರ ಒಳ್ಳೆಯ ಚಿತ್ರದಲ್ಲಿ ನಟಿಸಿದ ಖುಷಿ ಇದೆ’ ಎಂದರು ಸುನೀಲ್ ರಾವ್.
ಹೇಮಂತ್ ಕುಮಾರ್ ಅವರು ಈ ಹಿಂದೆ ಹೇಮಂತ್ ರಾವ್ ಅವರ ಬಳಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಕೆಲಸ ಮಾಡಿದವರು. ‘ಈ ರೀತಿಯ ಕತೆ ಆಧರಿಸಿ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ಚಿತ್ರತಂಡದ ಎಲ್ಲರ ಸಹಕಾರವನ್ನು ನೆನೆಯುತ್ತೇನೆ. ನಿಮ್ಮ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದೇನೆ ಎಂಬ ಭರವಸೆಯೊಂದಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತೇನೆ’ ಎಂದಿದ್ದು ನಿರ್ದೇಶಕರು. ಹಿತಾ ಚಂದ್ರಶೇಖರ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಸಲಾರ್; ತೂಕ ಇಳಿಸಿಕೊಳ್ಳುವಂತೆ ಪ್ರಭಾಸ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರಾ ಪ್ರಶಾಂತ್ ನೀಲ್?
‘ನಾವು ಬೇರೆ ಭಾಷೆಗಳಲ್ಲಿ ವಿಭಿನ್ನ ಕತೆಯ ಚಿತ್ರಗಳು ಬಂದರೆ ಹೋಗಿ ನೋಡುತ್ತೇವೆ. ತುರ್ತು ನಿರ್ಗಮನ ಕೂಡ ಒಂದು ಪ್ರಯೋಗಾತ್ಮಕ ಚಿತ್ರ. ಈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ’ ಎಂದು ಹಿತಾ ಚಂದ್ರಶೇಖರ್ ಕೇಳಿಕೊಂಡರು. ರಾಜ್ ಬಿ ಶೆಟ್ಟಿ ಇಲ್ಲಿ ಕ್ಯಾಬ್ ಡ್ರೈವರ್ ಪಾತ್ರ ಮಾಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಚಿತ್ರ ಬಿಡುಗಡೆ ಆದಾಗ ನಿರ್ದೇಶಕ ಹೇಮಂತ್ ಕುಮಾರ್ ಕಳುಹಿಸಿದ ಮೂರು ಪುಟಗಳ ಸಂಭಾಷೆಯನ್ನು ಆಡಿಷನ್‌ನಲ್ಲಿ ಹೇಳುವ ಮೂಲಕ ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿಆಯ್ಕೆ ಆದರಂತೆ. ಸಂಯುಕ್ತ ಹೆಗಡೆ ಕ್ರಿಕೆಟ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ.
ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಚಿತ್ರರಂಗಕ್ಕೆ ಬಂದ ಮೂವತ್ತು ವರ್ಷಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈ ಚಿತ್ರದಲ್ಲಿ ಮಾಡಿದ ಪಾತ್ರ ಹಿಂದೆ ಮಾಡಿಲ್ಲ. ನನ್ನ ಮೊದಲ ಸಿನಿಮಾ ಆನಂದ್ ಚಿತ್ರದಲ್ಲಿ ನಟಿಸಿದಾಗ ಆದ ಖುಷಿ ತುರ್ತು ನಿರ್ಗಮನ ಚಿತ್ರದಲ್ಲಿ ನಟಿಸಿದಾಗಲೂ ಆಯಿತು’ ಎಂದರು ನಟಿ ಸುಧಾರಾಣಿ. ಧೀರೇಂದ್ರ ದಾಸ್‌ಮೂಡ್ ಸಂಗೀತ, ಪ್ರಯಾಗ್ ಕ್ಯಾಮೆರಾ ಚಿತ್ರಕ್ಕಿದೆ.
KGF 2; OTTಯಲ್ಲಿ ದಾಖಲೆ ಬರೆಯಲು ಸಜ್ಜಾದ ರಾಕಿ ಭಾಯ್, ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಡೇಟ್ ಫಿಕ್ಸ್
ತುರ್ತು ನಿರ್ಗಮನ ಚಿತ್ರದಿಂದ ಅಪ್ಪುಗೆ ಗಾನ ನಮನ: ಸುನೀಲ್ ರಾವ್ ನಟನೆಯ ‘ತುರ್ತು ನಿರ್ಗಮನ’ ಸಿನಿಮಾ ಪುನೀತ್‌ರಾಜ್‌ಕುಮಾರ್ ಅವರಿಗೆ ಗಾನ ನಮನ ಸಲ್ಲಿಸಲಾಗಿದೆ. ‘ಜೀವ’ ಹೆಸರಿನ ಹಾಡಿನ ಮೂಲಕ ಅಪ್ಪು ಅವರ ಗುಣಗಳನ್ನು ಸಾರಲಾಗಿದೆ. ಶರತ್ ಭಗವಾನ್ ಹಾಡಿಗೆ ಡಾಸ್‌ಮೂಡ್ ಸಂಗೀತ. 16 ಮಂದಿ ಹಿನ್ನೆಲೆ ಗಾಯಕರು ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಚೇತನ್ ಎಸ್ ಮೂರ್ತಿ, ರಕ್ಷಿತ್ ಬಿ ಅವರು ರಚಿಸಿರುವ ಪುನೀತ್ ಅವರ ಸ್ಕೆಚ್‌ಗಳನ್ನು ಬಳಸಲಾಗಿದೆ. ಡಿವೋ ಯೂಟ್ಯೂಬ್ ಮ್ಯೂಸಿಕ್ ಚಾನಲ್‌ನಲ್ಲಿ ಹಾಡನ್ನು ನೋಡಬಹುದು.