ರಾಬರ್ಟ್‌ ಹೀರೊಯಿನ್‌ ಆಶಾ ಭಟ್‌ರ ಈ ಸೀಕ್ರೆಟ್‌ ನಿಮಗೆ ಗೊತ್ತಿಲ್ಲ

Published : May 31, 2022, 05:51 PM IST
ರಾಬರ್ಟ್‌ ಹೀರೊಯಿನ್‌ ಆಶಾ ಭಟ್‌ರ ಈ ಸೀಕ್ರೆಟ್‌ ನಿಮಗೆ ಗೊತ್ತಿಲ್ಲ

ಸಾರಾಂಶ

Asha Bhat: ಕನ್ನಡದ ರಾಬರ್ಟ್‌ ಚಿತ್ರದಿಂದ ನಾಯಕನಟಿಯಾಗಿ ಬೆಳಕಿಗೆ ಬಂಧ ಆಶಾ ಭಟ್‌ ಬಹುಮುಖ ಪ್ರತಿಭೆ. ನಟನೆ ಜೊತೆ, ನಾಟ್ಯ, ಹಾಡು, ತಬಲಾ ನುಡುಸಿವುದು, ಕರಾಟೆ ಸೇರಿದಂತೆ ನೂರೆಂಟು ಕಲೆಗಳನ್ನು ಬಲ್ಲವರು ಆಶಾ ಭಟ್‌. ಅವರ ಬಗೆಗಿನ ಕೆಲ ಅಪರೂಪದ ವಿಚಾರಗಳು ಈ ಲೇಖನದಲ್ಲಿದೆ.

ರಾಬರ್ಟ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಆಶಾಭಟ್ .ಮೊದಲ ಕನ್ನಡ ಸಿನಿಮಾದಲ್ಲೇ ಪ್ರೇಕ್ಷಕರ ಮೆಚ್ಚುಗೆ ಪಡೆದ ನಟಿ ಆಶಾಭಟ್.. ಮಿಸ್ ಸುಪ್ರಾನ್ಯಾಷನಲ್ ಆಗಿ ಆಯ್ಕೆಯಾಗಿದ್ದ ಆಶಾ ಭಟ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು..ಆರಂಭದಲ್ಲಿಯೇ ಬಾಲಿವುಡ್ ಸಿನಿಮಾದಲ್ಲಿ ಅಭಿನಯ ಮಾಡೋ ಚಾನ್ಸ್ ಗಿಟ್ಟಿಸಿರೋ ಆಶಾಭಟ್ ಅಲ್ಲಿಯೂ ಕೂಡ ತಾವು ಸೂಪರ್ ಆಕ್ಟರ್ ಅನ್ನೋದನ್ನ ಪ್ರೂವ್ ಮಾಡಿದ್ರು....ನಂತ್ರ ಸ್ಯಾಂಡಲ್ ವುಡ್ ಮೇಲೆ ಕಣ್ಣಿಟ್ಟ ಈ ನಟಿ, ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಆಕ್ಟ್ ಮಾಡೋ ಅವಕಾಶ ಗಿಟ್ಟಿಸಿಕೊಂಡೇ ಬಿಟ್ಟರೆ...ಆಶಾ ಭಟ್ ಸರಳತೆ, ಅಭಿನಯ ಹಾಗೂ ಕನ್ನಡದ ಮೇಲಿರೋ ಪ್ರೀತಿ ಕನ್ನಡಿಗರ ಮನಸ್ಸಿನಲ್ಲಿ ಆಶಾ ಭಟ್ ಗೆ ಜಾಗ ಸಿಗುವಂತೆ ಮಾಡಿಬಿಡ್ತು.

ಸಕಲ ಕಲಾವಲ್ಲಭೆ ಈ ನಟಿ:
ಮಿಸ್ ಸುಪ್ರಾನ್ಯಾಷನಲ್ ಆಗಿ ಗುರುತಿಸಿಕೊಂಡರೂ ಕೂಡ ಅಶಾ ಭಟ್ ಸರಳತೆಗೆ ತಲೆ ಭಾಗದವರಿಲ್ಲ...ಹೌದು ಅಷ್ಟರ ಮಟ್ಟಿಗೆ ಅಶಾ ಭಟ್ ಸಾದ  ಸೀದಾ ಹುಡುಗಿ..ಸುಧಾ ಮೂರ್ತಿಯವರನ್ನ ಸೂರ್ತಿಯಾಗಿ ತೆಗೆದುಕೊಂಡಿರೋ ಆಶಾಭಟ್ ಸದಾ ಸಿಂಪಲ್ ಆಗಿ ಇರಲು ಬಯಸುತ್ತಾರೆ...

ಪ್ಯಾಟೆ ಸ್ಟೈಲ್ ಗೂ ಸೈ ಹಳ್ಳಿ ಹುಗ್ಗಿ ಆಗಲು ಜೈ:
ಆಶಾ ಭಟ್ ಮಿಸ್ ಸುಪ್ರಾನ್ಯಾಷನಲ್ , ಹೀರೋಯಿನ್ ಅನ್ನೋದನ್ನ ಬಿಟ್ಟು  ಪಕ್ಕಾ ಹಳ್ಳಿ ಹುಡುಗಿಯಾಗೋದಕ್ಕಲೂ ಸಿದ್ದರಿರ್ತಾರೆ...ಶಿವಮೊಗ್ಗ ಕಡೆ ಹೋದ್ರೆ ಅಲ್ಲಿಯ ಸ್ಟೈಲ್ ಗೆ ಒಗ್ಗಿಕೊಂಡು ಬಿಡ್ತಾರೆ..ಹಳ್ಳಿ ಸ್ಟೈಲ್ ನಲ್ಲಿ ಆಶಾಭಟ್ ಅಡಿಕೆ ಸುಳಿಯೋದನ್ನ ನೋಡೋದಕ್ಕೆ ಚೆಂದ ಅಂತಾರೆ ಅವ್ರ ಅಭಿಮಾನಿಗಳು...

ಸಂಪ್ರಾದಾಯ ಬದ್ದ ನಾಯಕಿಯೂ ಹೌದು: 
ಮಾಡೆಲ್ ಆಗಿ ವೃತ್ತಿ ಆರಂಭ ಮಾಡಿದ ನಂತ್ರ ಆಶಾಭಟ್ ಮುಂಬೈನಲ್ಲಿಯೇ ಉಳಿದುಕೊಂಡಿದ್ದಾರೆ...ಆದ್ರು ಕೂಡ ನಮ್ಮ ಭಾರತೀಯ ಸಂಪ್ರದಾಯ ಪದ್ದತಿಯನ್ನ ಎಂದಿಗೂ ಮರೆತಿಲ್ಲ...ಕೆಲಸದಲ್ಲಿ ಬಿಡುವಾದಾಗ ಶ್ರೀರಾಮಚಂದ್ರಪುರ ಮಠಕ್ಕೆ ಭೇಟಿಕೊಡುತ್ತಾರೆ ..ಹಾಗೇ ಗೋಶಾಲೆಗೂ ಭೇಟಿ ನೀಡಿ ಗೋವುಗಳ ಜೊತೆ ಒಂದಷ್ಟು ಸಮಯ ಕಳೆಯುತ್ತಾ ಆಶಾಭಟ್ ..

 

 

ಆಶಾ ಧ್ವನಿಯಲ್ಲಿ ಸುಮಧುರ ಹಾಡುಕೇಳಿದ್ದೀರ?:
ಇನ್ನು ಅಭಿನಯದ ಮಾತ್ರವಲ್ಲ ಆಶಾ ಭಟ್ ಸೂಪರಾಗಿ ಹಾಡನ್ನೂ ಹಾಡ್ತಾರೆ. ಅವ್ರ ಧ್ವನಿಗೆ ಮನಸೋತಿರೋ ಅಭಿಮಾನಿಗಳು ನಮಗಾಗಿ ಈ ಹಾಡನ್ನ ಹಾಡಿ. ಆ ಹಾಡನ್ನ ಹಾಡಿ ಅಂತ ಬೇಡಿಕೆಯನ್ನೂ ಇಡ್ತಾರೆ. ಇತ್ತೀಚಿನ ದಿನಗಳಲ್ಲಿ ತಾವೇ ಹಾಡಿದ ಹಾಡುಗಳಿಗೆ ವಿಡಿಯೋ ಶೂಟ್ ಕೂಡ ಮಾಡಿಸ್ತಿದ್ದಾರೆ ಆಶಾ ಭಟ್. ಇನ್ನು ಇತ್ತೀಚಿನ ದಿನಗಳಲ್ಲಿ ತಬಲ ಬಾರಿಸುವುದನ್ನ ಕಲಿಯುತ್ತಿದ್ದಾರೆ ರಾಬರ್ಟ್ ಬೆಡಗಿ.

 

 

ನಾಟ್ಯರಾಣಿ ಅಂತಾನೂ ಕರಿತಾರೆ ಅಭಿಮಾನಿಗಳು:
ಆಶಾಭಟ್ ನಟನೆ, ಸಂಗೀತ ಮಾತ್ರವಲ್ಲ ನೃತ್ಯ ಮಾಡೋದ್ರಲ್ಲಿಯೂ ಫೇಮಸ್. ಅವರ ಇನ್ ಸ್ಟಾಗ್ರಾಂ ಓಪನ್ ಮಾಡಿದ್ರೆ ಅವ್ರ ಡ್ಯಾನ್ಸ್ ವಿಡಿಯೋಗಳು ಗಮನ ಸೆಳೆಯೋದ್ರಲ್ಲಿ ಡೌಟೇ ಇಲ್ಲ. ಭರತನಾಟ್ಯ, ಕಥಕ್ ಡ್ಯಾನ್ಸ್ ನಲ್ಲಿ ಪ್ರವೀಣೆಯಾಗಿದ್ದಾರೆ. 

ಸೂಪರ್ ಫಿಟ್ ಅಂಡ್ ಫೈನ್:
ಕಲಾ ಜಗತ್ತಿಗೆ ಕಾಲಿಟ್ಟ ಮೇಲೆ ಬಾಡಿಯನ್ನ ಸಖತ್ ಫಿಟ್ ಆಗಿ ಇಟ್ಟುಕೊಳ್ಳಬೇಕು ಅನ್ನೋದು ಕಾಮನ್ ವಿಚಾರ..ಆದ್ರೆ ಆಶಾ ಭಟ್ ಯೋಗ , ಜಿಮ್ ಅವೆಲ್ಲವನ್ನೂ ಸೇರಿದಂತೆ ಫಿಟ್ ಆಗುವುದಕ್ಕೆ ಹೊಸ ಹೊಸ ಆಕ್ಟಿವಿಟಿಯನ್ನ ಕಲಿಯುತ್ತಿರುತ್ತಾರೆ. ಬಾಕ್ಸಿಂಗ್, ಮಾರ್ಷನ್ ಆರ್ಟ್ಸ್, ಅಷ್ಟೇ ಯಾಕೆ ಆಗಾಗ ಮೋಟರ್ ರೇಸ್ ಕೂಡ ಟ್ರೈ ಮಾಡ್ತಾರೆ.

 

 

ಸೀರೆಯಲ್ಲಿ ಸೂಪರ್ ಮಾಡ್ರನ್ ಲುಕ್ ನಲ್ಲಿ ಹಾಟ್:
ಇನ್ನು ಆಶಾ ಭಟ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಮಾತನಾಡಲೇಬೇಕು. ಯೆಸ್ ಆಶಾ ಭಟ್ ಒಂದೇ ರೀತಿ ಕಾಸ್ಟ್ಯೂಮ್ಸ್ ಗಳಿಗೆ ಎಂದಿಗೂ ಫಿಕ್ಸ್ ಆದವರಲ್ಲ. ಎಲ್ಲಾ ರೀತಿ ಔಟ್ ಫಿಟ್ ಅನ್ನು ಟ್ರೈ ಮಾಡ್ತಾರೆ. ಸೀರೆಯಲ್ಲಿ ಪಕ್ಕಾ ಟ್ರೇಡಿಷನ್ ಆಗಿ ಕಾಣಿಸೋ ಈ ನಟಿಯನ್ನ ನೋಡಿದವ್ರೆಲ್ಲ ನಮ್ ಹುಡ್ಗಿ ಅಂತ ಕಮೆಂಟ್ ಮಾಡುವಷ್ಟು ಚೆಂದ ಕಾಣ್ತಾರೆ. ಇನ್ನು ಸಖತ್ ಫಿಟ್ ಆಗಿರೋದ್ರಿಂದ ಮಾಡ್ರನ್ ಔಟ್ ಫಿಟ್ ನಲ್ಲಿ ಹಾಟ್ ಆಗಿಯೋ ಕಾಣ್ತಾರೆ. ಒಟ್ಟಾರೆ ಇಂಥದ್ದು ಬರಲ್ಲ ಅನ್ನೋ ಈ ನಟಿಯನ್ನ ಸಕಲಕಲಾವಲ್ಲಭೆ ಅನ್ನದೇ ಇನ್ನೇನು ಹೇಳಲು ಸಾಧ್ಯ ಹೇಳಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?