ಮಂಡ್ಯದ ಗಂಡು ಅಂಬರೀಶ್‌ ಅದ್ಧೂರಿ 70ನೇ ಜನ್ಮದಿನ: ಸಮಾಧಿಗೆ ಪತ್ನಿ, ಪುತ್ರ ಪೂಜೆ!

Published : May 30, 2022, 03:00 AM IST
ಮಂಡ್ಯದ ಗಂಡು ಅಂಬರೀಶ್‌ ಅದ್ಧೂರಿ 70ನೇ ಜನ್ಮದಿನ: ಸಮಾಧಿಗೆ ಪತ್ನಿ, ಪುತ್ರ ಪೂಜೆ!

ಸಾರಾಂಶ

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್‌ ಅವರ 70ನೇ ಹುಟ್ಟುಹಬ್ಬದ ಸಂಭ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು. ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು, ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಂಬರೀಶ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ಬೆಂಗಳೂರು (ಮೇ.30): ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್‌ ಅವರ 70ನೇ ಹುಟ್ಟುಹಬ್ಬದ ಸಂಭ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು. ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು, ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಂಬರೀಶ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಸಂಸದರಾದ ಪತ್ನಿ ಸುಮಲತಾ ಅಂಬರೀಶ್‌, ನಟ ಅಭಿಷೇಕ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಹಿರಿಯ ನಟ ದೊಡ್ಡಣ್ಣ ಅವರು ಸಮಾಧಿಗೆ ಪೂಜೆ ಸಲ್ಲಿಸಿದರು.

ಅಂಬರೀಶ್‌ ಅವರ ಕಟೌಟ್‌ಗಳಿಂದ ಅಲಂಕಾರ ಮಾಡಿಕೊಂಡು ಬಂದಿದ್ದ ಆಟೋ ಚಾಲಕರು, ಅಂಬರೀಶ್‌ ಅವರ ಟೀ ಶರ್ಚ್‌ಗಳನ್ನು ಧರಿಸಿದ್ದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಅಂಬರೀಶ್‌ ಅವರ ಸಮಾಧಿಗೆ ತಿಳಿ ಬಿಳಿ ಹೂವುಗಳಿಂದ ವಿಶೇಷವಾಗಿ ಸಿಂಗಾರ ಮಾಡಲಾಗಿತ್ತು. ಜತೆಗೆ ಅಂಬಿ ಅವರಿಗೆ ಇಷ್ಟದ ಆಹಾರ ಖಾದ್ಯಗಳನ್ನು ಇಡಲಾಗಿತ್ತು. ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್‌ ಅವರು, ‘ಅಂಬರೀಶ್‌ ಅವರು ಇಲ್ಲ ಎಂದುಕೊಳ್ಳುವುದಕ್ಕಿಂತ ಅವರು ಒಂದು ದೊಡ್ಡ ಶಕ್ತಿಯಾಗಿ ನಮ್ಮ ಜತೆಗೇ ಇದ್ದಾರೆ ಎನ್ನುವ ಭಾವನೆ ಇದೆ. ಅವರೇ ನಿಂತು ನಮ್ಮನ್ನು ನಡೆಸುತ್ತಿದ್ದಾರೆ. 

ಅಂಬರೀಶ್ ಹುಟ್ಟುಹಬ್ಬದ ದಿನ ಮಗನ ಹೊಸ ಲುಕ್ ರಿವೀಲ್; ಅಭಿಷೇಕ್ ರೆಬಲ್ ಅವತಾರಕ್ಕೆ ಫ್ಯಾನ್ಸ್ ಫಿದಾ

ಅಭಿಮಾನಿಗಳು, ಚಿತ್ರರಂಗ ಅವರ ಮೇಲೆ ಇಟ್ಟಿರುವ ಪ್ರೀತಿಗೆ ನಮ್ಮ ಕುಟುಂಬ ಋುಣಿ ಆಗಿರುತ್ತದೆ. ಜನರ ಪ್ರೀತಿಯೇ ಅಂಬಿ ಅವರನ್ನು ದೊಡ್ಡ ಶಕ್ತಿಯನ್ನಾಗಿ ರೂಪಿಸಿದೆ’ ಎಂದರು. ಅಭಿಷೇಕ್‌ ಮಾತನಾಡಿ, ‘ಪ್ರತಿ ವರ್ಷ ನಮ್ಮ ತಂದೆ ಹುಟ್ಟು ಹಬ್ಬ ಬಂದರೆ ಖುಷಿ ಆಗುತ್ತದೆ. ಅಭಿಮಾನಿಗಳೇ ಮುಂದೆ ನಿಂತು ಎಲ್ಲ ಸಿದ್ಧತೆಗಳನ್ನು ಮಾಡುತ್ತಾರೆ. ಅವರು ಇಲ್ಲ ಎನ್ನುವ ನೋವು ದೂರ ಮಾಡಿದ್ದು, ಅಭಿಮಾನಿಗಳ ಈ ಪ್ರೀತಿಯೇ. ಅವರು ಸಂಪಾದಿಸಿರುವ ಅಭಿಮಾನ ನೋಡಿದರೆ ಹೆಮ್ಮೆ ಆಗುತ್ತದೆ’ ಎಂದು ಹೇಳಿದರು.

ಕೇಕ್ ಕತ್ತರಿಸಿ ಭಾವುಕ ಸಾಲು ಬರೆದ ಪತ್ನಿ ಸುಮಲತಾ: ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ ಇಂದು (ಮೇ 29). ರಾಜ್ಯದಾದ್ಯಂತ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಕೂಡ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ ಇಂದು (ಮೇ 29). ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಆಚರಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಕೂಡ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸಂಪೂರ್ಣ ಮನೆಯನ್ನು ಹೂವಿನಿಂದ ಅಲಂಕಾರ ಮಾಡಿರುವ ಸುಮಲತಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

'ಬ್ಯಾಡ್‌ ಮ್ಯಾನರ್ಸ್‌' ಅಡ್ಡದಲ್ಲಿ ಅಭಿಷೇಕ್‌, ಸೂರಿ ಜೊತೆ ಡಾಲಿ ಧನಂಜಯ್!

ಕೇಕ್ ಕತ್ತರಿಸಿ ಪತಿಯ ಹುಟ್ಟುಹಬ್ಬ ಆಚರಿಸಿದ ಸುಮಲತಾ ವಿಶೇಷ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಆಕಾಶಕ್ಕೆ ಯಾವುದೇ ಮಿತಿ ಇಲ್ಲ. ಅಂಬರೀಷ್ ಎಂದರೆ ಆಕಾಶದ ದೇವರು. ಹಾಗಾಗಿ ನಿಮ್ಮ ಪ್ರೀತಿಗೂ ಕೂಡ ಮಿತಿ ಇಲ್ಲ’ ಎಂದು ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ಸಾಕಷ್ಟು ನೆನಪುಗಳು, ಜೀವಮಾನಕ್ಕಾಗುವಷ್ಟು ಖುಷಿ ಮತ್ತು ಅಪರಿಮಿತವಾದ ಪ್ರೀತಿಯನ್ನು ನೀಡಿ ನೀವು ನಮ್ಮನ್ನು ಬಿಟ್ಟು ಹೋದ್ರಿ’ ಎಂದು ಸುಮಲತಾ ಹೇಳಿದ್ದಾರೆ. ‘ವಿಶಾಲ ಹೃದಯದ ವ್ಯಕ್ತಿಗೆ 70 ವರ್ಷ ಎಂಬುದು ಸಣ್ಣ ಸಂಖ್ಯೆ. ನೀವು ಯಾವಾಗಲೂ ಜೀವಂತವಾಗಿರುತ್ತೀರಿ. ಅಂಬಿ ಫಾರೆವರ್. ಅಂಬಿ ಅಮರ’ ಎನ್ನುತಾ ಪ್ರೀತಿಯ ಪತಿಯ ಹುಟ್ಟುಹಬ್ಬವನ್ನು ಸುಮಲತಾ ಆಚರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ