ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಸಾ.ರಾ.ಗೋವಿಂದು, ಭಾ.ಮ. ಹರೀಶ್‌ ಸೆಣಸಾಟ

By Govindaraj SFirst Published May 29, 2022, 3:00 AM IST
Highlights

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2022-23ನೇ ಸಾಲಿನ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳ ಸ್ಥಾನಕ್ಕೆ ಶನಿವಾರ ವಾಣಿಜ್ಯ ಮಂಡಳಿಯ ಬಳಿಯ ಗಂಗರಾಜು ಕಲ್ಯಾಣ ಮಂಟಪ ಆವರಣದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರಾದ ಸಾ.ರಾ. ಗೋವಿಂದು ಹಾಗೂ ಭಾ.ಮ. ಹರೀಶ್‌ ಸ್ಪರ್ಧಿಸಿದ್ದರು.

ಬೆಂಗಳೂರು (ಮೇ.29): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2022-23ನೇ ಸಾಲಿನ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳ ಸ್ಥಾನಕ್ಕೆ ಶನಿವಾರ ವಾಣಿಜ್ಯ ಮಂಡಳಿಯ ಬಳಿಯ ಗಂಗರಾಜು ಕಲ್ಯಾಣ ಮಂಟಪ ಆವರಣದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರಾದ ಸಾ.ರಾ. ಗೋವಿಂದು ಹಾಗೂ ಭಾ.ಮ. ಹರೀಶ್‌ ಸ್ಪರ್ಧಿಸಿದ್ದರು.

ಶನಿವಾರ ಮಧ್ಯಾಹ್ನ 2 ಗಂಟೆಗೆ ಶುರುವಾದ ಮತದಾನ ಸಂಜೆ 6 ಗಂಟೆವರೆಗೂ ನಡೆಯಿತು. ಕಳೆದ ವರ್ಷ ಜೈರಾಜ್‌ ಅವರು ಅಧ್ಯಕ್ಷರಾಗಿದ್ದರು. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಕಾಂಕ್ಷಿಗಳು ಸ್ಪರ್ಧಿಸಿದ್ದರಿಂದ ಕಳೆದ ಬಾರಿಗಿಂತಲೂ ಈ ಬಾರಿ ಚುನಾವಣೆಯ ಕಾವು ಜೋರಾಗಿತ್ತು. ಇಬ್ಬರ ನಡುವೆ ಪ್ರಬಲ ಸ್ಪರ್ಧೆ ನಡೆಯಿತು.

Karnataka Film Chamber Of Commerce: ಫಿಲಂ ಚೇಂಬರ್‌ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ

ಸಾ.ರಾ.ಗೋವಿಂದು ಅವರ ಬೆಂಬಲಿತ ಅಭ್ಯರ್ಥಿಗಳಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಕರಿಸುಬ್ಬು, ವಿತರಕರ ವಲಯದಿಂದ ಪಿ.ಎಸ್‌. ಜ್ಞಾನೇಶ್ವರ್‌ ಐತಾಳ್‌, ಪ್ರದರ್ಶಕರ ವಲಯದಿಂದ ಜಿ.ಪಿ. ಕುಮಾರ್‌ ಸ್ಪರ್ಧಿಸಿದ್ದರು. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಕೆ.ಎಂ. ವೀರೇಶ್‌, ವಿತರಕರ ವಲಯದಿಂದ ಎಂ.ಎನ್‌. ಕುಮಾರ್‌, ಪ್ರದರ್ಶಕರ ವಲಯದಿಂದ ಎಲ್‌.ಸಿ. ಕುಶಾಲ್‌ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸುರಿ ಅವರು ಸ್ಪರ್ಧಿಸಿದ್ದರು.

ಅದೇ ರೀತಿ ಭಾ.ಮ.ಹರೀಶ್‌ ಅವರ ಬೆಂಬಲಿತ ಅಭ್ಯರ್ಥಿಗಳಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಜೈ ಜಗದೀಶ್‌, ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್‌ ಹೆಚ್‌.ಸಿ, ಪ್ರದರ್ಶಕರ ವಲಯದಿಂದ ರಂಗಪ್ಪ ಕೆ.ಓ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಹಿರಿಯ ನಟ ಸುಂದರ್‌ ರಾಜ್‌, ವಿತರಕರ ವಲಯದಿಂದ ಪಾರ್ಥಸಾರಥಿ ಕೆ ಹಾಗೂ ಗೌರವ ಖಜಾಂಚಿ ಸ್ಥಾನಕ್ಕೆ ನಿರ್ಮಾಪಕ ಟಿ.ಪಿ. ಸಿದ್ಧರಾಜು ಸ್ಪರ್ಧಿಸಿದ್ದರು.

Karnataka Film Chamber Of Commerce: ಬೇಡಿಕೆಗಳಿಗೆ ಸಮ್ಮತಿಸಿದ ಸಿಎಂಗೆ ಚಿತ್ರರಂಗದಿಂದ ಧನ್ಯವಾದ

ಈ ಬಾರಿ ಚುನಾವಣೆಯಲ್ಲಿ ಎಲ್ಲಾ ವಲಯಗಳಿಂದ 1700 ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದು, ಒಟ್ಟು 1176 ಮತಗಳು ಚಲಾವಣೆಯಾಗಿವೆ. ಚುನಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸುತ್ತ ಬಿಗಿ ಪೊಲೀಸ್‌ ಬಂದೋಬಸ್‌್ತ ಆಯೋಜಿಸಲಾಗಿತ್ತು.

click me!