ಆನ್‌ಲೈನ್‌ ಜಗತ್ತಿನ ಕರಾಳತೆಯನ್ನು ಬಿಚ್ಚಿಡುವ ಡಾರ್ಕ್‌ ವೆಬ್‌ ಸಿನಿಮಾ 'ಕಪಟಿ' ಟ್ರೇಲರ್‌ ಬಂತು!

Published : Mar 05, 2025, 05:22 PM ISTUpdated : Mar 05, 2025, 05:26 PM IST
ಆನ್‌ಲೈನ್‌ ಜಗತ್ತಿನ ಕರಾಳತೆಯನ್ನು ಬಿಚ್ಚಿಡುವ ಡಾರ್ಕ್‌ ವೆಬ್‌ ಸಿನಿಮಾ 'ಕಪಟಿ' ಟ್ರೇಲರ್‌ ಬಂತು!

ಸಾರಾಂಶ

ದಯಾಳ್ ಪದ್ಮನಾಭನ್ ನಿರ್ಮಾಣದಲ್ಲಿ ರವಿಕಿರಣ್ ಹಾಗೂ ಚೇತನ್ ಎಸ್ ಪಿ ನಿರ್ದೇಶಿಸಿರುವ ‘ಕಪಟಿ’ ಸಿನಿಮಾ ಟ್ರೇಲರ್‌ ಝಂಕಾರ್‌ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. 

ದಯಾಳ್ ಪದ್ಮನಾಭನ್ ನಿರ್ಮಾಣದಲ್ಲಿ ರವಿಕಿರಣ್ ಹಾಗೂ ಚೇತನ್ ಎಸ್ ಪಿ ನಿರ್ದೇಶಿಸಿರುವ ‘ಕಪಟಿ’ ಸಿನಿಮಾ ಟ್ರೇಲರ್‌ ಝಂಕಾರ್‌ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ರವಿಕಿರಣ್‌, ‘ಇದೊಂದು ಸೈಕಲಾಜಿಕಲ್ ಥ್ರಿಲ್ಲರ್. ಡಾರ್ಕ್ ವೆಬ್ ಬಗೆಗಿನ ಸಿನಿಮಾ ಆನ್‌ಲೈನ್‌ ಜಗತ್ತಿನ ಕರಾಳತೆಯನ್ನು ಬಿಚ್ಚಿಡುತ್ತದೆ. ಈ ಚಿತ್ರದಲ್ಲಿ ಕ್ಯಾಬ್ ಡ್ರೈವರ್, ಮೆಡಿಕಲ್ ವಿದ್ಯಾರ್ಥಿ ಹಾಗೂ ಫ್ಯಾಷನ್ ಡಿಸೈನರ್ ಮುಖ್ಯ ಪಾತ್ರಗಳು’ ಎಂದರು.

ನಿರ್ಮಾಪಕ ದಯಾಳ್‌ ಪದ್ಮನಾಭನ್‌, ‘ ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಡಾರ್ಕ್‌ ವೆಬ್‌ ಜಾನರ್‌ನ ಚಿತ್ರವಿದು. ಸಿನಿಮಾ ಗೆಲ್ಲುವ ವಿಶ್ವಾಸವಿದೆ’ ಎಂದರು. ನಾಯಕಿ ಸುಕೃತಾ ವಾಗ್ಲೆ ಪಾತ್ರದ ಬಗ್ಗೆ ವಿವರ ನೀಡಿದರು. ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
 

ಅಕೌಂಟ್‌ ಹ್ಯಾಕ್‌ ಆಗಬಹುದು: ‘ಡಾರ್ಕ್‌ ನೆಟ್‌ ಎಂಬುದು ನಮ್ಮ ಊಹೆಗೂ ನಿಲುಕದ ಭಯಾನಕ ಜಗತ್ತು. ನಾವು ಇದರ ಬಗ್ಗೆ ಸರ್ಜ್‌ ಕೊಟ್ಟರೂ ನಮ್ಮ ಅಕೌಂಟ್‌ ಹ್ಯಾಕ್‌ ಆಗುವ ಸಾಧ್ಯತೆ ಇದೆ. ಆ ಮಟ್ಟಿಗೆ ಇದು ಅಪಾಯಕಾರಿ.’ ಹೀಗಂದಿದ್ದು ನಟಿ ಸುಕೃತಾ ವಾಗ್ಲೆ. ಅವರ ನಟನೆಯ ಡಾರ್ಕ್‌ ನೆಟ್್‌ ಕಥಾಹಂದರದ ಸೈಕಲಾಜಿಕಲ್‌ ಥ್ರಿಲ್ಲರ್‌ ‘ಕಪಟಿ’ ಆಗಸ್ಟ್‌ 23ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತ ಸುದ್ದಿಗೋಷ್ಠಿಯಲ್ಲಿ ಸುಕೃತಾ, ‘ನಾನು ಸಿನಿಮಾ ಜಗತ್ತಿಗೆ ಗುಡ್‌ಬೈ ಹೇಳಿ ಉಡುಪಿಯಲ್ಲಿ ಎಲ್‌ಎಲ್‌ಬಿ ಮಾಡ್ತಾ ಆರಾಮವಾಗಿದ್ದೆ. ಆ ಹೊತ್ತಿಗೆ ಈ ಸಿನಿಮಾ ಆಫರ್‌ ಬಂತು. ನಿರ್ದೇಶಕರು ಇದು ಮಹಿಳಾ ಪ್ರಧಾನ ಚಿತ್ರ ಅಂದಾಗ, ರಿಸ್ಕ್‌ ಅಲ್ವಾ ಅಂತ ಕೇಳಿದ್ದೆ. ಆದರೆ ನಿರ್ದೇಶಕರಿಗೆ ಗೆಲ್ಲುವ ವಿಶ್ವಾಸ ಇದೆ’ ಎಂದರು.

ಅಂದು 'ಮುಂಗಾರು ಮಳೆ'.. ಇಂದು 'ಮನದ ಕಡಲು': ಮಾ.7ಕ್ಕೆ ಯೋಗರಾಜ ಭಟ್ಟರ ಸಿನಿಮಾದ ಟೈಟಲ್‌ ಟ್ರ್ಯಾಕ್‌ ರಿಲೀಸ್

ಮುಖ್ಯ ಪಾತ್ರದಲ್ಲಿ ನಟಿಸಿರುವ ಸಾತ್ವಿಕ್‌, ‘ಉಡುಪಿಯಲ್ಲಿ ರಂಗಭೂಮಿಯಲ್ಲಿದ್ದುಕೊಂಡು ಪೇಂಟಿಂಗ್‌, ಇಂಟೀರಿಯರ್‌ ಡಿಸೈನಿಂಗ್‌ ಮಾಡ್ತಿದ್ದ ನನಗೆ ಬೆಂಗಳೂರು, ಚಿತ್ರರಂಗ ಎರಡೂ ಹೊಸತು’ ಎಂದರು. ನಿರ್ಮಾಪಕ ದಯಾಳ್‌ ಪದ್ಮನಾಭ್‌, ‘ಯಾವ ಭಾಷೆಯಲ್ಲಿ ಸಿನಿಮಾ ಮಾಡಿದರೂ ನನ್ನ ಐಡೆಂಟಿಟಿ ಕನ್ನಡ ಚಿತ್ರರಂಗ’ ಎಂದು ಹೆಮ್ಮೆಯಿಂದ ಘೋಷಿಸಿದರು. ನಿರ್ದೇಶಕರಾದ ಚೇತನ್‌ ಹಾಗೂ ರವಿ, ಡಾರ್ಕ್‌ ನೆಟ್‌ನ ಕರಾಳ ಜಗತ್ತನ್ನು ವಿವರಿಸಿದರು. ಡಾರ್ಲಿಂಗ್‌ ಕೃಷ್ಣ ಟೀಸರ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟ ದೇವ್‌ ದೇವಯ್ಯ ಚಿತ್ರದ ಮುಖ್ಯಪಾತ್ರದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ