ಶಿವಣ್ಣ ಮಾಡಿದ್ದು ಇಷ್ಟ ಆಗ್ದೇ ರೀಶೂಟ್​ ಮಾಡಿಸಿದ್ದ ಡಾ.ರಾಜ್​! 'ಗೌರಮ್ಮಾ ನಿನ್ನ ಗಂಡ' ಹಾಡಿನ ಘಟನೆ ನೆನೆದ ಸುಧಾರಾಣಿ

Published : Feb 27, 2025, 12:30 PM ISTUpdated : Feb 27, 2025, 12:45 PM IST
ಶಿವಣ್ಣ ಮಾಡಿದ್ದು ಇಷ್ಟ ಆಗ್ದೇ ರೀಶೂಟ್​ ಮಾಡಿಸಿದ್ದ ಡಾ.ರಾಜ್​! 'ಗೌರಮ್ಮಾ ನಿನ್ನ ಗಂಡ' ಹಾಡಿನ ಘಟನೆ ನೆನೆದ ಸುಧಾರಾಣಿ

ಸಾರಾಂಶ

1987ರ ಮನಮೆಚ್ಚಿದ ಹುಡುಗಿ ಚಿತ್ರದ 'ಗೌರಮ್ಮಾ ನಿನ್ನ ಗಂಡ ಯಾರಮ್ಮಾ' ಹಾಡಿನ ಚಿತ್ರೀಕರಣದ ಬಗ್ಗೆ ಸುಧಾರಾಣಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮೇಲುಕೋಟೆಯಲ್ಲಿ ಮೊದಲಿಗೆ ಚಿತ್ರೀಕರಣ ನಡೆದರೂ, ಡಾ. ರಾಜ್‌ಕುಮಾರ್‌ಗೆ ಇಷ್ಟವಾಗದ ಕಾರಣ ಮದ್ರಾಸ್‌ನಲ್ಲಿ ಸೆಟ್ ಹಾಕಿ ಮರುಚಿತ್ರೀಕರಣ ಮಾಡಲಾಯಿತು. ಈ ಹಾಡಿನಿಂದಾಗಿ ಸುಧಾರಾಣಿಗೆ ಪಾರ್ವತಿ ಪಾತ್ರಗಳು ಹೆಚ್ಚಾಗಿ ಸಿಕ್ಕವು.

1987ರಲ್ಲಿ ತೆರೆ ಕಂಡ ಮನಮೆಚ್ಚಿದ ಹುಡುಗಿ ಚಿತ್ರ ಸೂಪರ್​ ಹಿಟ್​ ಆಗಿತ್ತು. ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ ಅಭಿನಯದ ಚಿತ್ರವದು. ಅದರಲ್ಲಿನ  ಗೌರಮ್ಮಾ ನಿನ್ನ ಗಂಡ ಯಾರಮ್ಮಾ ಹಾಡು ಇಂದಿಗೂ ಜನಜನಿತ. ಈ ಹಾಡಿನಲ್ಲಿ ಶಿವರಾಜ್​ ಕುಮಾರ್​ ಮತ್ತು ಸುಧಾರಾಣಿಯ ಶಿವ-ಪಾರ್ವತಿಯ ಗೆಟಪ್​ ನೋಡಬಹುದು. ಆದರೆ ಈ ಹಾಡಿನ ಶೂಟಿಂಗ್​ನ ರೋಚಕ ಪಯಣವನ್ನು ತೆರೆದಿಟ್ಟಿದ್ದಾರೆ ನಟಿ ಸುಧಾರಾಣಿ. ನಿನ್ನೆ ಶಿವರಾತ್ರಿಯ ದಿನದಂದು ತಮ್ಮ ಈ ಹಾಡಿನ ಬಗ್ಗೆ ನೆನಪು ಮಾಡಿಕೊಂಡು ಮೆಲುಕು ಹಾಕಿದ್ದಾರೆ ನಟಿ. ಈ ಚಿತ್ರದ ಫೋಟೋ ಒಂದು ಅಂದಿನ ದಿನಪತ್ರಿಕೆಯಲ್ಲಿ ಪಬ್ಲಿಷ್​ ಆಗಿತ್ತು. ಅದನ್ನು ತಮ್ಮ ಹಿರಿಯ ಅಣ್ಣ ಕಟ್​ ಮಾಡಿ ಇಟ್ಟುಕೊಂಡಿದ್ದನ್ನು ಜೋಪಾನ ಮಾಡಿ ಇಟ್ಟುಕೊಂಡಿರುವ ಸುಧಾರಾಣಿ ಅದನ್ನು ತೋರಿಸುತ್ತಾ ಈ ಹಾಡಿನ ಶೂಟಿಂಗ್​ ಬಗ್ಗೆ ನೆನಪಿಸಿಕೊಂಡಿದ್ದಾರೆ.

ಈ ಹಾಡಿನ ಶೂಟಿಂಗ್​ ಹಿಂದೆ ದೊಡ್ಡ ಕಥೆಯಿದೆ. ಬಹುಶಃ ಯಾರೂ ಇದನ್ನು ಎಲ್ಲಿಯೂ ಹೇಳಿಲ್ಲ ಅನಿಸತ್ತೆ ಎನ್ನುತ್ತಲೇ ಅದನ್ನು ನೆನಪಿಸಿಕೊಂಡಿದ್ದಾರೆ. ಆಗೆಲ್ಲಾ ಹೆಚ್ಚಾಗಿ ಇನ್​ಡೋರ್​  ಶೂಟಿಂಗ್​ಗಳೇ  ಇರುತ್ತಿದ್ದವು. ಬೇಕಾದ ದೃಶ್ಯಗಳನ್ನು ಸ್ಟುಡಿಯೋದಲ್ಲಿಯೇ ಸೆಟ್​ಅಪ್​ ಮಾಡಲಾಗುತ್ತಿತ್ತು. ಆದರೆ ಗೌರಮ್ಮಾ ನಿನ್ನ ಗಂಡ ಯಾರಮ್ಮಾ ಹಾಡಿಗೆ ಮೇಲುಕೋಟೆಯಲ್ಲಿ ಔಟ್​ಡೋರ್​ ಶೂಟಿಂಗ್​ ಮಾಡಲಾಗಿತ್ತು. ಅಲ್ಲಿ ನಾಯಕ ಮತ್ತು ನಾಯಕಿ ಶಿವ-ಪಾರ್ವತಿ ಡ್ರೆಸ್​ ಮಾಡಲಾಗಿತ್ತು. ಕೆಲ ದಿನಗಳು ಅಲ್ಲಿಯೇ ಎಲ್ಲಾ ಶೂಟಿಂಗ್​ ಆದ ಮೇಲೆ ಪ್ಯಾಕಪ್​ ಮಾಡಿಕೊಂಡು ಬೆಂಗಳೂರಿಗೆ ವಾಪಸ್​ ಆದಾಗ ಡಾ.ರಾಜ್​ಕುಮಾರ್​ ಅದನ್ನು ನೋಡಿದರಂತೆ. ಆದರೆ ಶಿವರಾಜ್​  ಕುಮಾರ್​ ಮತ್ತು ಪಾರ್ವತಮ್ಮ ಅವರಿಗೆ ಶಿವರಾಜ್​ ಕುಮಾರ್​ ಮಾಡಿದ್ದು ಇಷ್ಟ ಆಗಿಲ್ಲ ಎಂದ ಸುಧಾರಾಣಿ ಇದಕ್ಕೆ ತಮಗೆ ಕಾರಣ ನೆನಪಿಲ್ಲ. ಆದರೆ ಹೊಸದಾಗಿ ಶೂಟಿಂಗ್​ ಮಾಡುವಂತೆ ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ನೇರಪ್ರಸಾರದಲ್ಲಿ ಬಂದ ಸುಧಾರಾಣಿ ವೀಕ್ಷಕರಿಗೆ ಕೊಟ್ಟಿದ್ದಾರೆ ಬಿಗ್‌ ಆಫರ್! ಏನದು ನೋಡಿ...

 ಆದರೆ ಔಟ್​ಡೋರ್​ನಲ್ಲಿ ಅದು ಸಾಧ್ಯವಾಗಿರಲಿಲ್ಲ. ಆಗೆಲ್ಲಾ ಸ್ಟುಡಿಯೋ ಶೂಟಿಂಗ್​ ಎಂದರೆ ಆಗಿನ ಮದ್ರಾನ್​ (ಚೆನ್ನೈ) ಸ್ಟುಡಿಯೋಕ್ಕೇ ಹೋಗುವ ಅನಿವಾರ್ಯತೆ ಇತ್ತು. ಅದರಂತೆಯೇ ಗೌರಮ್ಮಾ... ಹಾಡಿಗೂ ಅಲ್ಲೇ ಸೆಟ್​ ರೆಡಿ ಮಾಡಲಾಯಿತು ಎಂದಿದ್ದಾರೆ ಸುಧಾರಾಣಿ. ಮೊದಲು ತಾವು ಕೆಂಪು ಡ್ರೆಸ್​ ಹಾಕಿಕೊಂಡಿದ್ವಿ. ಆದರೆ ನಂತರ ಡ್ರೆಸ್​ ಕಲರ್​ ಕೂಡ ಚೇಂಜ್​ ಮಾಡಲಾಯಿತು. ಸಂಪೂರ್ಣ ಬದಲಾವಣೆ ಮಾಡಿದ ಮೇಲೆ ರೀಶೂಟ್​ ಮಾಡಲಾಯಿತು. ಈಗ ಚಿತ್ರದಲ್ಲಿ ನೀವೇನು ನೋಡಿದ್ದೀರೋ ಅದು ಬದಲಾದ ಮೇಲೆ ಮಾಡಿದ ಶೂಟಿಂಗ್​ ಎಂದಿದ್ದಾರೆ. ಆದರೆ ಒರಿಜಿನಲ್​ ಶೂಟಿಂಗ್ ಅಂದರೆ ಮೇಲುಕೋಟೆಯಲ್ಲಿ ಮಾಡಿದ ಶೂಟಿಂಗ್​ನ ಫೋಟೋ ಇನ್ನೂ ತಮ್ಮ ಬಳಿ ಜೋಪಾನ ಆಗಿ ಇರುವುದನ್ನು ತೋರಿಸಿದ್ದಾರೆ.

ಇದು ಸಿನಿಮಾದಲ್ಲಿ ಮೊದಲ ಬಾರಿಗೆ ಪಾರ್ವತಿ ರೂಪದಲ್ಲಿ ಕಾಣಿಸಿಕೊಂಡಿದ್ದು ಎಂದಿರುವ ಸುಧಾರಾಣಿ, ಅಲ್ಲಿಂದ ಹಲವಾರು ಚಿತ್ರಗಳಲ್ಲಿ ಪಾರ್ವತಿ ರೋಲ್​ ಸಿಕ್ಕಿತು. ಆದ್ದರಿಂದ ನನಗೆ ಇಂದಿಗೂ ಕೆಲವರು  ಪರ್ಮನೆಂಟ್​ ಪಾರ್ವತಿ ಅಂತನೇ ಹೇಳ್ತಾರೆ. ಆಗ ತುಂಬಾ ಸಣ್ಣಗಿದ್ದೆ. ಆನಂದ್​, ವಿಜಯೋತ್ಸವ ಚಿತ್ರದ ಬಳಿಕ ಏಕಾಏಕಿ ಎತ್ತರ ಬೆಳೆದುಬಿಟ್ಟು ಕಡ್ಡಿಯಂತಾಗಿದ್ದೆ. ಅದಕ್ಕೇ ನಮ್ಮ ಮನೆಯವರೆಲ್ಲರೂ ಆಗ ಎನಿಮಿಕ್​ ಪಾರ್ವತಿ ಎಂದೇ ಕರೆಯುತ್ತಿದ್ದರು. ಒಟ್ಟಿನಲ್ಲಿ ಪಾರ್ವತಿ ಎನ್ನುವ ಹೆಸರು ನನಗೆ ಬಂದುಬಿಟ್ಟಿತ್ತು ಎಂದು ನೆನಪಿಸಿಕೊಂಡಿದ್ದಾರೆ. 

ಸುಧಾರಾಣಿಯ ಕ್ರಷ್‌ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ