ದರ್ಶನ್-ರಚಿತಾ ರಾಮ್ ಕೂಡ ಇದೇ ಕೆಟಗರಿಗೆ ಸೇರಿದವ್ರು.. ಇವ್ರೆಲ್ಲಾ ಒಂದೇ ಥರದವ್ರು ನೋಡಿ..!

Published : Feb 26, 2025, 10:00 PM ISTUpdated : Feb 26, 2025, 10:21 PM IST
ದರ್ಶನ್-ರಚಿತಾ ರಾಮ್ ಕೂಡ ಇದೇ ಕೆಟಗರಿಗೆ ಸೇರಿದವ್ರು.. ಇವ್ರೆಲ್ಲಾ ಒಂದೇ ಥರದವ್ರು ನೋಡಿ..!

ಸಾರಾಂಶ

ಇಲ್ಲಿಯವರೆಗೂ ಅನೇಕರಿಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ.. ಶ್..! ಯಾರಿಗೂ ಹೇಳ್ಬೇಡಿ ಆಯ್ತಾ.. ಈ ನಟನಟಿಯರೆಲ್ಲಾ ಒಂದೇ ಗ್ರೂಫ್.. ಅಲ್ಲಿಂದಾನೇ ಎಲ್ರೂ ಬಂದಿರೋದು, ಒಂದೇ ಕಡೆ ಸೇರಿರೋದು.. ನದಿಗಳೆಲ್ಲಾ ಸಾಗರ ಸೇರೋ ಥರಾನೇ.. ಗುಟ್ಟು ರಟ್ಟಾಗಿದೆ.. 

ಕನ್ನಡ ಚಿತ್ರರಂಗದಲ್ಲಿ (Sandalwood) ಮೆರೆದಿರುವ ನಟಿನಟಿಯರು ಅನೇಕ.. ಡಾ ರಾಜ್‌ಕುಮಾರ್ (Dr Rajkumar) ಅವರಿಂದ ಮೊದಲಗೊಂಡು ವಿಷ್ಣುವರ್ಧನ್ ಸೇರಿದಂತೆ (Vishnuvardhan) ಇಂದಿನ ಅನೇಕ ಸ್ಟಾರ್ ನಟರು ಇದ್ದಾರೆ. ಫಂಡರಿಬಾಯಿ ಅವರಿಂದ ಬಂದು ಆರತಿ, ಭಾರತಿ ಸೇರಿದಂತೆ, ಲಕ್ಷ್ಮೀ, ಮಾಲಾಶ್ರೀ, ರಮ್ಯಾ, ರಾಧಿಕಾವರೆಗೂ ಸಾಕಷ್ಟು ನಟಿಯರ ಪಟ್ಟಿಯೇ ಇದೆ. ಆದರೆ, ಇವರೆಲ್ಲರಲ್ಲೂ ಒಮದು ಕೆಟಗರಿಯ ನಟನಟಿಯರು ಕನ್ನಡದಲ್ಲಿ ಮಿಂಚಿದ್ದಾರೆ. ಅವರು ಯಾರು, ಅದು ಯಾವ ಕೆಟಗರಿ ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ ನೋಡಿ.. 

ಕನ್ನಡ ಚಿತ್ರರಂಗದಲ್ಲಿ ಸೀರಿಯಲ್ ಮೂಲಕ ನಟನೆ ಆರಂಭಿಸಿ ಬಳಿಕ ಸಿನಮಾದಲ್ಲಿ ಚಾನ್ಸ್ ಗಿಟ್ಟಿಸಿ ಸ್ಟಾರ್ ಆದವರು ಒಂದು ದೊಡ್ಡ ಲಿಸ್ಟ್ ಇದೆ. ಅವರಲ್ಲಿ ಕೆಲವರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರಬಹುದು, ಆದ್ರೆ ಹಲವರ ಬಗ್ಗೆ ಗೊತ್ತೇ ಇಲ್ಲದಿರಬಹುದು. ಹಾಗಿದ್ದರೆ ಅವರೆಲ್ಲರೂ ಯಾರು? ನಟನೆಯನ್ನು ಕನ್ನಡ ಸೀರಿಯಲ್‌ನಿಂದ ಪ್ರಾರಂಭಿಸಿ, ಸಿನಿಮಾಗೆ ಕಾಲಿಟ್ಟು ಅಲ್ಲಿ ಸಕ್ಸಸ್ ಕಂಡ ಕನ್ನಡದ ತಾರೆಯರು ಎಂಬ ಬಗ್ಗೆ ಇಲ್ಲಿ ನೋಡೋಣ...

ನಟ ದರ್ಶನ್‌ (Darshan) ಅವರಿಂದಲೇ ಪ್ರಾರಂಭಿಸೋಣ ಅಲ್ಲವೇ..? ದರ್ಶನ್ ಮೊದಲು ಬಣ್ಣ ಹಚ್ಚಿದ್ದು 'ಅಂಬಿಕಾ' ಸೀರಿಯಲ್‌ನಲ್ಲಿ. ಎಸ್‌ ನಾರಾಯಣ್ ನಿರ್ದೇಶನದ ಈ ಅಂಬಿಕಾ ಸೀರಿಯಲ್ ಅಂದು ಸಾಕಷ್ಟು ಫೇಮಸ್ ಆಗಿತ್ತು. ಈ ಸೀರಿಯಲ್‌ನಲ್ಲೇ ಇಂದಿನ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ ಮೊದಲು ಬಣ್ಣ ಹಚ್ಚಿದ್ದು. ಇನ್ನು ನಟ ಕಿಚ್ಚ ಸುದೀಪ್ (Kichcha Sudeep) ಅವರು ಮೊದಲು ನಟಿಸಿರುವ ಧಾರಾವಾಹಿ ಪ್ರೇಮದ ಕಾದಂಬರಿ. ನಟ ಗೋಲ್ಡನ್ ಸ್ಟಾರ ಗಣೇಶ್ (Golden Star Ganesh) ಕೂಡ ಕಿರುತೆರೆಯ ಕೊಡುಗೆ. 

ಇನ್ನು ಸದ್ಯ ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಯಾಗಿರುವ ನಟ ಯಶ್ (Rocking Star Yash) ಹಾಗೂ ರಾಧಿಕಾ ಪಂಡಿತ್ (Radhika Pandit) ಇಬ್ಬರೂ ನಂದ ಗೋಕುಲ ಧಾರಾವಾಹಿಯಲ್ಲೇ ಮೊದಲು ಬಣ್ಣ ಹಚ್ಚಿದ್ದು.. ಇನ್ನು, ಇಂದು ಕಳೆದ ದಶಕಗಳಿಂದಲೂ ಸ್ಟಾರ್ ನಟಿ ಎನ್ನಿಸಿಕೊಂಡಿರುವ ನಟಿ ರಚಿತಾ ರಾಮ್ (Rachita Ram) ಅವರು 'ಅರಸಿ' ಸೀರಿಯಲ್ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಅದಿತಿ ಪ್ರಭುದೇವ್ (Aditi Prabhudeva) ಕೂಡ ಇದೇ ಸಾಲಿಗೆ ಸೇರಿದ್ದಾರೆ. 'ಗುಂಡ್ಯಾನ ಹೆಂಡ್ತಿ' ಸೀರಿಯಲ್ ಇವರ ಮೊದಲು ನಟಸಿದ್ದು. 

ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರು ಕೃಷ್ಣ ರುಕ್ಮಿಣಿ ಸೀರಿಯಲ್‌ನಲ್ಲಿ ಬಣ್ಣ ಹಚ್ಚಿ, ಬಳಿಕ ಸಿನಿಮಾಗೆ ಬಂದವರು. ನಟ ರಿಷಿ (Rishi) ಕೂಡ 'ಅನುರೂಪ' ಸೀರಿಯಲ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಇನ್ನು ನಟಿ ಮಯೂರಿ ಅವರು 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಬಂದವರು. ಇನ್ನೂ ಅನೇಕರು ಇದ್ದಾರೆ. ಆದರೆ, ಅಲ್ಲಿ ಕಾಲಿಟ್ಟು ಇಲ್ಲಿ ಬಂದು ಹೆಸರು ಮಾಡಿರುವ ಸ್ಟಾರ್‌ಗಳಲ್ಲಿ ಇವರೆಲ್ಲರೂ ಪ್ರಮುಖರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?