ವಿಕ್ರಾಂತ್‌ ರೋಣ ಮಲಯಾಳಂ ವಿತರಣೆ ಹಕ್ಕು ಪಡೆದ ದುಲ್ಕರ್‌ ಸಲ್ಮಾನ್‌

By Vaishnavi ChandrashekarFirst Published Jul 14, 2022, 10:36 AM IST
Highlights

ಜುಲೈ 28 ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ ಸಿನಿಮಾದ ಮಲಯಾಳಂ ಭಾಷೆಯ ವಿತರಣೆ ಹಕ್ಕನ್ನು ದುಲ್ಕರ್ ಸಲ್ಮಾನ್ ಖರೀದಿಸಿದ್ದಾರೆ. 
 

ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಮಲಯಾಳಂ ವಿತರಣೆ ಹಕ್ಕನ್ನು ಖ್ಯಾತ ನಟ ದುಲ್ಕರ್‌ ಸಲ್ಮಾನ್‌ ಪಡೆದುಕೊಂಡಿದ್ದಾರೆ. ವೇಫರರ್‌ ಫಿಲಂಸ್‌ ಬ್ಯಾನರ್‌ನಡಿ ಅವರು ಈ ಸಿನಿಮಾ ವಿತರಣೆ ಮಾಡಲಿದ್ದಾರೆ. ತಮಿಳಿನಲ್ಲಿ ಜೀ ಸ್ಟುಡಿಯೋಸ್‌ ಸಿನಿಮಾ ವಿತರಣೆ ಹಕ್ಕು ಪಡೆದುಕೊಂಡಿದೆ. ತೆಲುಗಿನಲ್ಲಿ ಕಾಸ್ಮೋಸ್‌ ಎಂಟರ್‌ಟೈನ್‌ಮೆಂಟ್‌ ಈ ಚಿತ್ರವನ್ನು ವಿತರಣೆ ಮಾಡಲಿದೆ. ಹಿಂದಿಯಲ್ಲಿ ಸಲ್ಮಾನ್‌ ಫಿಲಂಸ್‌ ಸಿನಿಮಾ ಪ್ರಸ್ತುತ ಪಡಿಸಲಿದೆ. ಜು. 28ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಅನೂಪ್‌ ಭಂಡಾರಿ ನಿರ್ದೇಶನ, ಜಾಕ್‌ ಮಂಜುನಾಥ್‌ ನಿರ್ಮಾಣದಲ್ಲಿ ಹೊರಬರುತ್ತಿರುವ ಚಿತ್ರವಿದು.

ಮತ್ತೊಂದು ಹಾಡು ರಿಲೀಸ್:

ಈ ಹಾಡಿನಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ಹೇ ಫಕೀರಾ...ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಅನೂಪ್ ಭಂಡಾರಿ ಅವರೆ ಸಾಹಿತ್ಯ ರಚಿಸಿದ್ದಾರೆ. ಹೇ ಫಕೀರಾ ಹಾಡಿಗೆ ಸಂಚಿತ್ ಹೆಗ್ಡೆ, ಚಿನ್ಮಯಿ ಶ್ರೀಪಾದ, ಅಜನೀಶ್ ಮತ್ತು ಅನೂಪ್ ಭಂಡಾರಿ ಧ್ವನಿ ನೀಡಿದ್ದಾರೆ.

30 ದೇಶ 1200 ಸ್ಕ್ರೀನ್ ನಲ್ಲಿ ವಿಕ್ರಾಂತ್ ರೋಣನ ಅಬ್ಬರ, ಆರ್ಭಟಕ್ಕೆ ಶುರುವಾಯ್ತು ಕೌಂಟ್ ಡೌನ್

ಹೇ ಫಕೀರಾ ಹಾಡು ಕನ್ನಡ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬಂದಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಹೇ ಫಕೀರಾ ಹಾಡು ರಿಲೀಸ್ ಆಗಿದೆ. ರಿಲೀಸ್ ಆಗಿ ಕೆಲವೇ ಸಿನಿಮಾದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದಿದೆ. ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ಇಂಟ್ರುಡಕ್ಷನ್ ಹಾಡು ಇದ್ದ ಹಾಗಿದೆ. ನಿರೂಪ್ ಸಂಜೀವ್ ಗಂಭೀರ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಜು ಊರಿಗೆ ಬರುವ ಹಾಡು ಇದಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. 

‘ವಿಕ್ರಾಂತ್‌ ರೋಣ ಕತೆ ನನಗೆ ಮೊದಲು ಹೇಳಿದ್ದು ಪ್ರಿಯಾ. ಈ ಕತೆ ನೀನು ಮಾಡಬೇಕು ಎಂದರು. ನಾನು ಕೂತು ಕತೆ ಕೇಳಿದೆ. ಎಕ್ಸೈಟ್‌ ಆದೆ. ಪ್ರತಿಯೊಂದು ಕತೆಗೂ ಒಂದು ಉದ್ದೇಶ ಇರುತ್ತದೆ. ಈ ಕತೆಯ ಉದ್ದೇಶ ಬಹಳ ಇಷ್ಟವಾಯಿತು. ಸಿನಿಮಾ ಮಾಡೋಣ ಎಂದುಕೊಂಡೆ. ನನಗಿಂತ ಮೊದಲು ಜಾಕ್‌ ಮಂಜುನಾಥ್‌ ಕತೆ ಕೇಳಿದ್ದರು. ಮಾಡ್ತೀಯಾ ಎಂದೆ. ಅವನು ಸಣ್ಣ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದ. ಆದರೆ ಈ ಬಾರಿ ನನಗೆ ಸ್ವಲ್ಪ ದೊಡ್ಡ ಕನಸು ಕಾಣೋ ಆಸೆ ಹುಟ್ಟಿತ್ತು. ಇಂಡಿಯಾನಾ ಜೋನ್ಸ್‌, ಟಾರ್ಜಾನ್‌, ಜುಮಾಂಜಿ ಥರದ ಸಿನಿಮಾಗಳನ್ನು ಇಷ್ಟಪಟ್ಟವನು ನಾನು. ಹೊಸ ಜಗತ್ತು ಸೃಷ್ಟಿಸುವ ಅವಕಾಶ ಇಲ್ಲಿತ್ತು. ದೊಡ್ಡದು ಮಾಡೋಣ ಅಂತಲೇ ಹೇಳಿದೆ. ಎಲ್ಲರೂ ಒಪ್ಪಿಕೊಂಡರು. ಒಂದು ಸಣ್ಣ ಯೋಚನೆಯಾಗಿ ಹುಟ್ಟಿದ್ದು ಇಷ್ಟುದೊಡ್ಡದಾಗಿ ಬೆಳೆದಿದೆ’ ಎಂದಾಗ ಸುದೀಪ್‌ ಒಬ್ಬ ವಿಷನರಿ ಥರ ಕಾಣಿಸುತ್ತಾರೆ.

ಫೀಸ್ ಕಟ್ಟಲು ಪರದಾಡುತ್ತಿದ್ದ ಶಾಲಾ ಮಕ್ಕಳ ನೆರವಿಗೆ ಧಾವಿಸಿದ ಕಿಚ್ಚ ಸುದೀಪ್

ಕೊನೆಗೆ ಫಿಲಾಸಫಿಕಲ್‌ ಆಗಿ ಎರಡು ಸಾಲು ಹೇಳಿದರು. ಈ ಸಾಲಿನಲ್ಲಿ ಸುದೀಪ್‌ ದಕ್ಕಿದರೆ ಸಂತೋಷ.

‘ನನಗೆ ಬೇರೆ ಯಾರೂ ಕತೆ ಬರೆಯದೇ ಇದ್ದಾಗ ನನಗೆ ನಾನೇ ಕತೆ ಬರೆದೆ. ನಿರ್ದೇಶನ ಮಾಡಿದೆ. ಅವರಿವರು ಬಿಟ್ಟಕತೆ ನನಗೆ ಬರುತ್ತಿತ್ತು. ಹಾಗಾಗಿ ಬದುಕುವುದಕ್ಕೋಸ್ಕರ, ಉಳಿಯುವುದಕ್ಕೋಸ್ಕರ ನಿರ್ದೇಶನ ಮಾಡಿದೆ. ನಾವು ಗೆಲುವನ್ನು ನಿಭಾಯಿಸಬೇಕಿಲ್ಲ. ಸೋಲನ್ನು ನಿಭಾಯಿಸಬೇಕು. ಅದು ನನಗೆ ಗೊತ್ತಿದೆ. ಸಾಕಷ್ಟುಸೋಲುಗಳನ್ನು ನೋಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಸಿನಿಮಾವನ್ನು ಪ್ರೀತಿಸುತ್ತೇನೆ. ಸಿನಿಮಾ ಬಿಟ್ಟರೆ ನನಗೆ ಬೇರೆ ಐಡೆಂಟಿಟಿಯೇ ಇಲ್ಲ. ಆ ಸಿನಿಮಾಗೆ ಏನು ಅರ್ಹತೆ ಇದೆಯೋ ಅದಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗುತ್ತದೆ. ಪ್ರಕೃತಿಯೇ ಅದನ್ನು ನಿರ್ಧರಿಸುತ್ತದೆ. ನಾವು ಕಾಯುತ್ತೇವೆ.’

click me!