ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತು ಇಷ್ಟು ಚೆನ್ನಾಗಿ ಅಂತ ಗೊತ್ತಿರಲಿಲ್ಲ: ಸುದೀಪ್

Published : Jun 26, 2023, 12:14 PM ISTUpdated : Jun 26, 2023, 12:15 PM IST
ನನ್ನ ಮಗಳು ಚೆನ್ನಾಗಿ ಹಾಡ್ತಾಳೆ ಅಂತ ಗೊತ್ತು ಇಷ್ಟು ಚೆನ್ನಾಗಿ ಅಂತ ಗೊತ್ತಿರಲಿಲ್ಲ: ಸುದೀಪ್

ಸಾರಾಂಶ

ಹಾಲಿವುಡ್‌ ಸಿನಿಮಾ ರೀತಿ ಹಾಡಿದ ಸಾನ್ವಿ ಸುದೀಪ್. ವೇದಿಕೆ ಮೇಲೆ ಮೆಚ್ಚುಗೆ ವ್ಯಕ್ತ ಪಡಿಸಿದ ಕಿಚ್ಚ....

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್‌ ಸಂಜೀವ್‌ ಜಿಮ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಟೈಟಲ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ಸುದೀಪ್ ಕುಟುಂಬ, ಡಾ. ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್,ಗುರು ಕಿರಣ್ ಸೇರಿದಂತೆ ದೊಡ್ಡ ಜನರೇ ಸೇರಿದರು. ಜಿಮ್ಮಿ ಚಿತ್ರದ ಮತ್ತೊಂದು ಸ್ಪೆಷಾಲಿಟಿ ಏನೆಂದರೆ ಸುದೀಪ್ ಪುತ್ರಿ ಹಾಲಿವುಡ್ ಗಾಯಕಿ ರೀತಿ ಹಾಡಿರುವುದು.

ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿ ಬಿಡುವಿನ ಸಮಯದಲ್ಲಿ ಹಾಡುವುದು, ಪೇಯಿಂಟಿಂಗ್ ಮಾಡುವುದು ಸಖತ್ ಎಂಜಾಯ್ ಮಾಡುತ್ತಾರೆ. ಮಗಳಿಗೆ ಇರುವ ವಿಭಿನ್ನ ಕಲೆ ಬಗ್ಗೆ ಈಗಾಗಲೆ ಅನೇಕ ಸಲ ಸುದೀಪ್ ಹೆಮ್ಮೆಯಿಂದ ಮಾತನಾಡಿದ್ದರು. ಜಿಮ್ಮಿ ವೇದಿಕೆ ಮೇಲೂ ಚಿತ್ರಕ್ಕೆ ಹಾಡಿರುವ ಹಾಡನ್ನು ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಧ್ವನಿ ಮತ್ತು ಸ್ಟೈಲ್ ವೈರಲ್ ಆಗುತ್ತಿದೆ. 

ಸುದೀಪ್‌ ಪುತ್ರಿ Instagram ಖಾತೆ ಪಬ್ಲಿಕ್; ಫೋಟೋ ನೋಡಿ!

'ನನ್ನ ಮಗಳು ಸಾನ್ವಿ ಸಿನಿಮಾದಲ್ಲಿ ಹಾಡು ಹಾಡಿರುವುದು coincidence. ಇದು ಸಂಪೂರ್ಣ ಆಕೆ ನಿರ್ಧಾರ ನಂದೇನೂ ಇಲ್ಲ ಇದರಲ್ಲಿ. ವಾಸುಕಿ ಅವರು ಹಾಡಿಸುತ್ತಿರುವಾಗ ನನ್ನ ಬಳಿಇ ಬಂದು ಹಾಡುತ್ತಿರುವೆ ಎಂದು ಹೇಳಿದರು. ಹಾಡಿ ಬಂದು ತೋರಿಸಿದರು ತುಂಬಾ ಚೆನ್ನಾಗಿ ಹಾಡಿದ್ದಾರೆ ತುಂಬಾ ಪ್ರೋಫೆಶನಲ್ ಆಗಿ ಹಾಡಿದ್ದಾರೆ. ಮಗಳ ಬಳಿ ಹಾಡಿಸಿರುವುದಕ್ಕೆ ವಾಸುಕಿ ವೈಭವ್ ಅವರಿಗೆ ಧನ್ಯವಾದಗಳನ್ನು ಹೇಳುವೆ. ನನ್ನ ಮಗಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತು ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಿರಲಿಲ್ಲ, ಇಷ್ಟು ಚೆನ್ನಾಗಿ ಹಾಡಿಸಿರುವುದಕ್ಕೆ ಥ್ಯಾಂಕ್ಯೂ. ತುಂಬಾ ಹೆಮ್ಮೆ ಫೀಲ್ ಆಗುತ್ತಿದೆ ಸಾನ್ವಿ' ಎಂದು ಸುದೀಪ್ ಮಾತನಾಡಿದ್ದಾರೆ. 

ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ದ್ವೇಷ ಮಾಡ್ತಾರೆ; ನೆಪೋಟಿಸಂ ಬಗ್ಗೆ ಕಿಚ್ಚ ಸುದೀಪ್ ಪುತ್ರಿಯ ಮಾತು

' ಸಂಚಿತ್ ಸಿನಿಮಾ ಮಾಡುತ್ತಿರುವ ಜರ್ನಿಯನ್ನು ಪದಗಳಲ್ಲಿ ವರ್ಣಿಸಲು ಆಗದು ಏಕೆಂದರೆ ಚಿತ್ರದ ಕಾಸ್ಪ್ಯೂಮ್ ಧರಿಸಿದ ಮೊದಲ ದಿನ, ಚಿತ್ರಕ್ಕೆ ಮಾಡಿಸಿಕೊಂಡ ಹೊಸ ಹೇರ್‌ ಕಟ್  ಎಲ್ಲಾ ನೋಡಿರುವೆ. ನನ್ನ ಅಣ್ಣ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ನಂಬಲಾಗದು. ಇದೊಂದು ಕ್ರೇಜಿ ಫೀಲಿಂಗ್ ತುಂಬಾ ಹೆಮ್ಮೆಯಾಗುತ್ತಿದೆ. ಎರಡು ದಿನಗಳ ಕಾಲ ಟೀಸರ್ ಚಿತ್ರೀಕರಣ ನಡೆಯಿತ್ತು ಆಗ ಸಂಚಿತ್‌ ಜೊತೆಗೆ ನಾನಿದ್ದೆ.ನಿನ್ನ ಶ್ರಮವನ್ನು ನಾನು ನೋಡಿರುವೆ...ಈ ಜರ್ನಿ ಬಗ್ಗೆ ಮಾತನಾಡಿದರೆ ಭಾವುಕಳಾಗುವೆ ಏಕೆಂದರೆ ಸಂಚಿತ್ ಜೊತೆ ಆಟವಾಡಿಕೊಂಡು ಬೆಳೆದವಳು ನಾನು ಖಂಡಿತಾ ದೊಡ್ಡ ಮಟ್ಟದಲ್ಲಿ ಅಣ್ಣ ಸಾಧನೆ ಮಾಡುತ್ತಾನೆ ಅನ್ನೋ ನಂಬಿಕೆ ನನಗಿದೆ' ಎಂದು ಅಣ್ಣನ ಸಿನಿಮಾ ಬಗ್ಗೆ ಸಾನ್ವಿ ಮಾತನಾಡಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಕೂಡ ಆಗಮಿಸಿದ್ದರು. ವಾಸುಕಿ ಹಾಗೂ ಸಾನ್ವಿ ಮ್ಯಾಜಿಕಲ್ ಮ್ಯೂಸಿಕ್ ಅದ್ಭುತವಾಗಿದೆ ಎಂದು ಖುಷಿ ವ್ಯಕ್ತ ಪಡಿಸಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichcha Sudeep: 'ಲಾಡು ತಿನ್ನುವ ಸಮಯದಲ್ಲಿ ಮೆಣಸಿನಕಾಯಿ ಯಾಕೆ' ಎಂದಿರೋ ಕಿಚ್ಚ ಸುದೀಪ್!
ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​