
ಕೆಲವು ತಿಂಗಳುಗಳಿಂದ ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ 'ಸು ಫ್ರಂ ಸೋ' ಸಿನಿಮಾ ( Su From So Movie ) ಉಸಿರು ಕೊಟ್ಟು ಎದ್ದು ನಿಲ್ಲುವಂತೆ ಮಾಡಿದೆ. ಈ ಮೂಲಕ ಕಂಟೆಂಟ್ ಕಿಂಗ್ ಎಂದು ಸಾಬೀತುಪಡಿಸಿದೆ. ಈ ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಮೊದಲು ಹೇಳಿರಲಿಲ್ಲ. ಇಷ್ಟು ವರ್ಷಗಳ ಕಾಲ ತುಳು ಚಿತ್ರರಂಗದಲ್ಲಿ ಕೃಷಿ ಮಾಡಿದ್ದ ಜೆಪಿ ತುಮಿನಾಡ್ ಅವರು ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿ ಅದೃಷ್ಟಪರೀಕ್ಷೆಗೆ ಇಳಿದಿದ್ದರು. ಒಟ್ಟಿನಲ್ಲಿ ಹೊಸಬರೇ ತುಂಬಿರೋ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸತನ ಕೊಟ್ಟಿದೆ. ಒಂದು ಸಿನಿಮಾ ಗೆಲ್ಲಲು ಯಾವೆಲ್ಲ ವಿಷಯಗಳು ಮುಖ್ಯ ಆಗುತ್ತವೆ ಎಂದು ಅಲಿಖಿತ ಮಾತುಗಳು ಕೇಳಿಬರುತ್ತಿದ್ದೆವೋ ಆ ಮಾತುಗಳನ್ನು ಈ ಸಿನಿಮಾ ಬ್ರೇಕ್ ಮಾಡಿದೆ. ಹಾಗಿದ್ರೆ ಈ ಸಿನಿಮಾ ಮುರಿದ ಅಲಿಖಿತ ನಿಯಮಗಳು ಯಾವುವು?
ಈ ಸಿನಿಮಾದಲ್ಲಿ ಗುರುಜಿ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ, ಭಾನು ಪಾತ್ರದಲ್ಲಿ ಸಂಧ್ಯಾ ಅರಕೆರೆ, ರವಿ ಅಣ್ಣ ಪಾತ್ರದಲ್ಲಿ ಶನೀಲ್ ಗೌತಮ್, ದಿಲೀಪ್ ರೈ, ಜೆಪಿ ತುಮಿನಾಡ್ ಅವರು ನಟಿಸಿದ್ದಾರೆ. ಪಕ್ಕಾ ಕಾಮಿಡಿ ಜಾನರ್ ಆದರೂ ಕೂಡ ಇಲ್ಲಿ ಒಂದಿಷ್ಟು ಭಾವನಾತ್ಮಕ ವಿಷಯಗಳು ಈ ಸಿನಿಮಾದ ತೂಕವನ್ನು ಹೆಚ್ಚಿಸುತ್ತದೆ. ಕರ್ನಾಟಕ, ಕೇರಳದಲ್ಲಿ ಕೂಡ ಭರ್ಜರಿ ಕಲೆಕ್ಷನ್ಸ್ ಮಾಡಿರೋ ಈ ಸಿನಿಮಾ ಬಹುತೇಕ ವೀಕ್ ಡೇಸ್‌ಗಳಲ್ಲಿ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ಈ ಸಿನಿಮಾದ ಹಾಡುಗಳು ಕೂಡ ಹಿಟ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.