ಕರ್ನಾಟಕದಲ್ಲಿ ನಮ್ಮದು ಶೆಟ್ಟಿ ಗ್ಯಾಂಗ್‌, ಶೆಟ್ಟಿ ಮಾಫಿಯಾ ಅಂತಾರೆ; ಬಾಲಿವುಡ್‌ ಮಾಧ್ಯಮಕ್ಕೆ ರಾಜ್‌ ಬಿ ಶೆಟ್ಟಿ ಹೇಳಿಕೆ!

Published : Aug 05, 2025, 02:46 PM IST
su from so movie raj b shetty

ಸಾರಾಂಶ

Raj B Shetty On Shetty's In Sandalwood: ಸ್ಯಾಂಡಲ್‌ವುಡ್‌ನಲ್ಲಿ ಮಂಗಳೂರಿನವರು, ಅವರ ಜನರಿಗೆ ಬೆಂಬಲ ಕೊಡ್ತಾರೆ ಎಂಬ ಆರೋಪ ಇದೆ. ಈ ಬಗ್ಗೆ ನಟ ರಾಜ್‌ ಬಿ ಶೆಟ್ಟಿ ಅವರು ಮಾತನಾಡಿದ್ದಾರೆ. 

ನಟ ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ, ಪ್ರಮೋದ್‌ ಶೆಟ್ಟಿ ಅವರೆಲ್ಲರೂ ಸ್ನೇಹಿತರು. ತಮ್ಮ ಸಿನಿಮಾಗಳಲ್ಲಿ ಮಂಗಳೂರಿನವರನ್ನು ಹಾಕಿಕೊಳ್ತಾರೆ, ಅವರಿಗೆ ಪ್ರಾಧಾನ್ಯತೆ ಜಾಸ್ತಿ. ರಿಷಬ್‌ ಶೆಟ್ಟಿ ಸಿನಿಮಾದಲ್ಲಿ ಪ್ರಮೋದ್‌ ಇದ್ದೇ ಇರುತ್ತಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಸು ಫ್ರಂ ಸೋ ಸಿನಿಮಾ ನಟ ರಾಜ್‌ ಬಿ ಶೆಟ್ಟಿ ಅವರು The Hollywood Reporter India ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ರಕ್ಷಿತ್‌ ಶೆಟ್ಟಿ ಪ್ರೆಸೆಂಟ್‌ ಮಾಡ್ತೀನಿ ಎಂದ್ರು!

“ನಾನು 'ಚಾರ್ಲಿ' ಸಿನಿಮಾಕ್ಕೋಸ್ಕರ ಬರೆದೆ. ಅದರ ಬಳಿಕ 'ಕಾಂತಾರ' ಸಿನಿಮಾಕ್ಕೋಸ್ಕರ ಭಾಗಶಃ ಬರೆದೆ. ನಂತರ 'ಗರುಡ ಗಮನ ವೃಷಭ ವಾಹನ' ಸಿನಿಮಾ ಸ್ಕ್ರಿಪ್ಟ್‌ ಮಾಡಿದೆ. ಅಷ್ಟರಲ್ಲಿ ಲಾಕ್‌ಡೌನ್ ಆಗಿತ್ತು. ನಮ್ಮ ಸಿನಿಮಾ ಸಿದ್ಧವಾಗಿತ್ತು. ನಾನು ಅದನ್ನು ರಕ್ಷಿತ್‌ ಶೆಟ್ಟಿಗೆ ತೋರಿಸಿದೆ. ಅವರು ಮರುದಿನದ ಫೋನ್‌ ಮಾಡಿ "ನಾನು ಈ ಸಿನಿಮಾವನ್ನು ಪ್ರಸ್ತುತಪಡಿಸಬಹುದಾ?" ಎಂದು ಕೇಳಿದರು. ಆಗ ನಾನು ನೀವು ಜವಾಬ್ದಾರಿ ತಗೋತೀರಾ ಅಂತ ಹೇಳ್ತೀರಾ ಅಂದ್ರೆ ಒಳ್ಳೆಯದು, ನಿರಾಳ" ಎಂದು ಹೇಳಿದೆ.

ನಮ್ಮ ತಂಡದವರಿಗೆ ಸಿನಿಮಾ ಮೇಲೆ ಪ್ರೀತಿಯಿದೆ!

“ನಮ್ಮ ಸಂಬಂಧ ಸಿನಿಮಾ ಮೂಲಕ ಆರಂಭವಾಯಿತಾದರೂ, ಸ್ನೇಹ ತುಂಬ ಆಳವಿದೆ ಎಂದು ನನಗೆ ಅನಿಸುತ್ತದೆ. ಆ ತಂಡದ ನಿರ್ದೇಶಕರು ಎಲ್ಲರೂ ತುಂಬಾ ಪ್ರಾಮಾಣಿಕರು. ಅವರು ಸಿನಿಮಾವನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ. ಅವರು ಉತ್ತಮವಾದ, ಮಹತ್ವದ ವಿಷಯಗಳನ್ನು ಸಿನಿಮಾದ ಮೂಲಕ ಹೊರತರಬೇಕು ಎಂಬ ಆಸೆ ಹೊಂದಿದ್ದಾರೆ. ಈ ಟೀಂ ನಡುವೆ ಯಾವುದೇ ಸ್ಪರ್ಧೆ ಇಲ್ಲ. ಇಲ್ಲಿ ಯಾರು ಮೊದಲು, ಯಾರು ಎರಡನೇ ಎಂಬ ಮಾತು ಬರೋದೆ ಇಲ್ಲ” ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

ರಕ್ಷಿತ್‌ ಶೆಟ್ಟಿ ಮೆಸೇಜ್‌ ಮಾಡಿದ್ರು!

“ಇಂದು ಕೂಡ ರಕ್ಷಿತ್ ಶೆಟ್ಟಿ ನನಗೆ "ನಾನು ಸಿನಿಮಾ ನೋಡಿದೆ. ಈ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುತ್ತಿದ್ದೇನೆ. ಅಭಿನಂದನೆಗಳು” ಎಂದು ಮೆಸೇಜ್‌ ಮಾಡಿದ್ದಾರೆ. ಚಿತ್ರರಂಗದಲ್ಲಿ ಇಂತಹ ಶುದ್ಧವಾದ ಸಂಬಂಧಗಳು ಸಿಗೋದು ಅಪರೂಪ. ಆದರೆ ಈ ಜನರೊಂದಿಗೆ ನಾನು ಭ್ರಷ್ಟರಹಿತ, ನಿಷ್ಕಳಂಕ ಸಂಬಂಧ ಹೊಂದಿದ್ದೇನೆ. ಹೀಗಾಗಿ "ನೋಡು, ನನಗೆ ಈ ಐಡಿಯಾ ಇದೆ, ನಿನ್ನ ಅಭಿಪ್ರಾಯವೇನು?" ಅಂತ ನಾನು ಕೇಳಬಹುದು.ಅವರು ಕೂಡ ಹಾಗೆ ಕೇಳುತ್ತಾರೆ. ನಾವು ಪರಸ್ಪರ ಪ್ರೇಕ್ಷಕರಾಗಿದ್ದೇವೆ.

ಶೆಟ್ಟಿ ಗ್ಯಾಂಗ್‌ ಅಂತ ಕರೆಯುತ್ತಾರೆ!

“ನಾನು ಸಿನಿಮಾಕ್ಕೆ ಬರೋದಕ್ಕೂ ಮೊದಲು, ರಕ್ಷಿತ್ ಶೆಟ್ಟಿ ಅವರ ಅಭಿಮಾನಿಯಾಗಿದ್ದೆ. ಇದೊಂದು ಅಪರೂಪದ ಸಂಬಂಧ. ಕರ್ನಾಟಕದಲ್ಲಿ ಹೆಚ್ಚು ಜನರು ಇದನ್ನು “ಶೆಟ್ಟಿ ಮಾಫಿಯಾ” ಅಥವಾ “ಶೆಟ್ಟಿ ಗ್ಯಾಂಗ್” ಅಂತ ಕರೆಯುತ್ತಾರೆ. ನೀವೂ ಕೂಡ ಒಂದು ಗ್ಯಾಂಗ್ ರಚಿಸಿ, ಯಾರು ನಿಮ್ಮನ್ನು ಏಕಾಂಗಿಯಾಗಿ ಓಡಾಡು ಅಂತ ಹೇಳಿದ್ದಾರೆ? ನಿಮಗೆ ಎಲ್ಲ ಖ್ಯಾತಿ ಮತ್ತು ಯಶಸ್ಸು ಬೇಕು, ಆದರೆ ನೀವು ಸಹಯೋಗ ಮಾಡಲು ಸಿದ್ಧವಿಲ್ಲ ಅಂದ್ರೆ ಅದು ನಮ್ಮ ತಪ್ಪು ಅಲ್ಲ” ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

ಅನೇಕ ತಿಂಗಳುಗಳ ಬಳಿಕ ಥಿಯೇಟರ್‌ನತ್ತ ಜನರು ಮುಖ ಮಾಡಲು ʼಸು ಫ್ರಂ ಸೋʼ ಸಿನಿಮಾ ಕಾರಣವಾಗಿದೆ. ಕರ್ನಾಟಕದಾದ್ಯಂತ ಈ ಸಿನಿಮಾ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಅಂದಹಾಗೆ ಕೇರಳದಲ್ಲಿ ಕೂಡ ಈ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ತಂಡ ಸೇರಿದಂತೆ ಕನ್ನಡ ಚಿತ್ರರಂಗ ಹಾಗೂ ವೀಕ್ಷಕರಲ್ಲಿಯೂ ನಗೆ ಮೂಡಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ