
ನಟ ರಾಜ್ ಬಿ ಶೆಟ್ಟಿ, ಜೆಪಿ ತುಮಿನಾಡ್ ನಟನೆಯ 'ಸು ಫ್ರಂ ಸೋ ಸಿನಿಮಾ'ದಲ್ಲಿ ( 'Su From So Movie' ) ಭಾನು ಪಾತ್ರ ಸಾಕಷ್ಟು ಜನರ ಮನಸ್ಸು ಗೆದ್ದಿದೆ. ಫುಲ್ ಕಾಮಿಡಿ ಇರುವ ಈ ಚಿತ್ರದಲ್ಲಿ ರವಿ ಅಣ್ಣ ಹಾಗೂ ಭಾನು ಕಾಂಬಿನೇಶನ್ ಅನೇಕರಿಗೆ ಇಷ್ಟ ಆಗಿದೆ. ಈ ಬಗ್ಗೆ ಭಾನು ಪಾತ್ರಧಾರಿ ಸಂಧ್ಯಾ ಅರಕೆರೆ ಪತಿ ಶೋಧನ್ ಬಸ್ರೂರು, ಹಾಗೂ ಅವರ ಅತ್ತೆ ಏನು ಹೇಳಿದ್ದಾರೆ. ಈ ಬಗ್ಗೆ ಫಸ್ಟ್ ಡೇ ಫಸ್ಟ್ ಶೋ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
“ಪಾತ್ರ ಚೆನ್ನಾಗಿದೆ ಅಂತ ಹೇಳಿದ್ದಳು. ಆದರೆ ಕಥೆಯನ್ನು ಮಾತ್ರ ಬಿಟ್ಟುಕೊಡಲಿಲ್ಲ. ಸಿನಿಮಾ ನೋಡಿ ಎಂದಿದ್ದಳು. ಸಿನಿಮಾ ನೋಡಿದ ನಂತರದಲ್ಲಿ ನಾನು ಅವಳಿಗೆ ಏನೂ ಹೇಳಲಿಲ್ಲ, ಅದಾಗಿ ಮರುದಿನ ನಿರೀಕ್ಷೆಗೂ ಮೀರಿ ನಟಿಸಿದ್ದೀಯಾ ಅಂತ ಹೇಳಿದೆ. ನಿಜಕ್ಕೂ ಸಂಧ್ಯಾ ನಟನೆ ಇಷ್ಟ ಆಯ್ತು. ಕಾಮಿಡಿ ಜಾನರ್ ಸಿನಿಮಾದಲ್ಲಿ ಅದರಾಚೆಗಿನ ಪಾತ್ರವು ಎದ್ದು ಕಂಡಿದೆ. ಇಷ್ಟುದಿನಗಳ ಕಾಲ ಎಮೋಶನಲ್ ಪಾತ್ರ ಮಾಡ್ತಿದ್ದ ಸಂಧ್ಯಾ ಇಲ್ಲಿ ಬ್ಯಾಲೆನ್ಸ್ ಆಗಿ ನಟಿಸಿದ್ದಾಳೆ. ಭಾನು ಪಾತ್ರ ಸ್ವಲ್ಪ ಆಚೆ ಈಚೆ ಆದರೂ ಕೂಡ ಅದು ಬೇರೆ ಸ್ವರೂಪ ಪಡೆದುಕೊಳ್ಳುವುದು. ರವಿ ಅಣ್ಣ ಪಾತ್ರ ಬಿಲ್ಡ್ ಮಾಡಿದ ರೀತಿ ಚೆನ್ನಾಗಿದೆ. ಆ ಪಾತ್ರ ಬಹಳ ಮಜವಾಗಿದೆ. ನಾನು ಪಾತ್ರ ಮಾಡಬಹುದಿತ್ತು ಅಂತ ಅನಿಸಿದೆ. ನಿಜಕ್ಕೂ ಆ ಪಾತ್ರ ನೋಡುವಾಗ ಗಂಟಲು ಕಟ್ಟಿತ್ತು” ಎಂದು ಶೋಧನ್ ಹೇಳಿದ್ದಾರೆ.
“ಸಿನಿಮಾ ನೋಡುವಾಗ ನನ್ನ ಅತ್ತೆ ಪಕ್ಕದಲ್ಲೇ ಕೂತಿದ್ರು. ರವಿ ಅಣ್ಣ, ಭಾನು ನೋಡಿ ನಾಚಿಕೊಳ್ಳುವಾಗ ನಮ್ಮತ್ತೆ ನನ್ನ ನೋಡಿ ನಗ್ತಿದ್ರು. ಆಗ ನಾನು ನೀವು ಯಾಕೆ ಈ ದೃಶ್ಯಕ್ಕೆ ನಗ್ತೀರಿ, ಅದು ನಿಮ್ಮ ಸೊಸೆ ಅಂತ ಹೇಳಿದ್ದೆ” ಎಂದಿದ್ದಾರೆ ಭಾನು ಪಾತ್ರಧಾರಿ ಸಂಧ್ಯಾ ಅರಕೆರೆ.
'ಟೋಬಿ', 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾಕ್ಕೆ ಆಡಿಷನ್ ಕೊಟ್ಟು ಸಂಧ್ಯಾ ಆಯ್ಕೆಯಾಗಿದ್ದರು. ಇದಾದ ಬಳಿಕ ಅವರಿಗೆ ಮತ್ತೆ ರಾಜ್ ಬಿ ಶೆಟ್ಟಿಯಿಂದ ಮತ್ತೆ 'ಸು ಫ್ರಂ ಸೋ' ಸಿನಿಮಾದ ಆಫರ್ ಬಂದಿತ್ತು. ಜೆಪಿ ತುಮಿನಾಡ್ ಅವರು ತುಳು ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಕನ್ನಡದಲ್ಲಿ ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ.
ರವಿ ಅಣ್ಣ ಪಾತ್ರದಲ್ಲಿ ಶನೀಲ್ ಗೌತಮ್ ನಟಿಸಿದ್ದಾರೆ. ಶನೀಲ್ ಅವರು ಈ ಹಿಂದೆ 'ಕಾಂತಾರ' ಸಿನಿಮಾದಲ್ಲಿ ಕೂಡ ನಟಿಸಿದ್ದರು. ಆ ಚಿತ್ರದಲ್ಲಿ ಅವರು ಬುಳ್ಳ ಪಾತ್ರದಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.