ಕುಡಿಯದ ಭಾವನ ಕುಡಿಸಿದ ಹೆಂಡತಿ, ಸು ಫ್ರಮ್ ಸೋ ಪುಷ್ಪರಾಜ್ ಬಿಯರ್ ಗುಟುಕು ರಿವೀಲ್

Published : Nov 08, 2026, 03:17 PM IST
actor pushparaj bolar family

ಸಾರಾಂಶ

ಸು ಫ್ರಮ್ ಸೋ ಸಿನಿಮಾದಲ್ಲಿ ಭಾವ ಪ್ರತಿ ಸೀನ್‌ನಲ್ಲೂ ಫುಲ್ ಟೈಟ್. ಇಷ್ಟೇ ಅಲ್ಲ ಅತ್ಯಂತ ನೈಜ ಅಭಿನಯವಾಗಿತ್ತು. ಆದರೆ ಈ ಭಾವ ಕುಡಿಯೋದೇ ಇಲ್ಲ. ಇತ್ತೀಚೆಗೆ ಭಾವ ಕುಡಿತ ಆರಂಭಿಸಿದ್ದಾರೆ. ಅದು ಕೂಡ ಹೆಂಡತಿಗಾಗಿ.

ಬೆಂಗಳೂರು (ನ.08) ಸು ಫ್ರಮ್ ಸೋ ಸಿನಿಮಾ ಸ್ಯಾಂಡಲ್‌ವುಡ್ ಅತ್ಯಂತ ಸೂಪರ್ ಹಿಟ್ ಸಿನಿಮಾ. ಪ್ರತಿ ಪಾತ್ರ ಕೂಡ ಜನರನ್ನು ನಗಿಸಿತ್ತು. ಈ ಪೈಕಿ ಬಂದರೋ ಬಂದರೋ ಭಾವ ಬಂದರು ಹಾಡು ಮಾತ್ರವಲ್ಲ, ಈ ಭಾವ ಕೂಡ ಎಲ್ಲರ ಫೇವರಿಟ್. ಹಳ್ಳಿಯಲ್ಲಿ ಪ್ರತಿ ಕುಟುಂಬದಲ್ಲಿ ಈ ರೀತಿಯ ಭಾವ ಇದ್ದೇ ಇರುತ್ತಾರೆ. ಫುಲ್ ಟೈಟಾಗಿ ತೂರಾಡುವ ಭಾವನ ಅಭಿನಯ ಅತ್ಯಂತ ಸಹಜ ಹಾಗೂ ನೈಜವಾಗಿತ್ತು. ವಿಶೇಷ ಅಂದರೆ ಸು ಫ್ರಮ್ ಸೋ ಸಿನಿಮಾದಲ್ಲಿ ಈ ರೀತಿ ಕುಡಿದು ತೂರಾಡುವ ಪಾತ್ರ ಮಾಡುವಾಗ ಭಾವ ಅಲಿಯಾಸ್ ಪುಷ್ಪರಾಜ್ ಬೋಳಾರ್ ಮದ್ಯ ಕುಡಿಯುತ್ತಿರಲಿಲ್ಲ. ಇದೀಗ ಹೆಂಡತಿ ಒತ್ತಾಯಕ್ಕೆ, ಹೆಂಡತಿಗಾಗಿ ಭಾವ ಬಿಯರ್ ಆರಂಭಿಸಿದ್ದಾರೆ.

ಏನೇ ಹೇಳಿ ಕುಡಿಯುವ ಗಂಡ ಅಂದರೆ ಹೆಂಡತಿ ಪಿತ್ತ ನೆತ್ತಿಗೇರುತ್ತೆ. ಇವತ್ತು ಆಫೀಸ್ ಪಾರ್ಟಿ, ಗೆಳಯನ ಬರ್ತ್‌ಡೇ ಹಾಗಾಗಿ ಕುಡಿದೆ, ಸ್ವಲ್ಪ ಕುಡಿದೆ ಏನೇ ಹೇಳಿದರೂ ಕುಡಿದರೆ ಕತೆ ಮುಗಿತು. ಆದರೆ ಸು ಫ್ರಮ್ ಸೋ ಭಾವನ ಕತೆ ಸಂಪೂರ್ಣ ಉಲ್ಟ. ಭಾವ ಕುಡಿಯೋದೇ ಇಲ್ಲ. ಇದೀಗ ಹೆಂಡತಿ ಹೇಳಿದ ಕಾರಣ ಬಿಯರ್ ಆರಂಭಿಸಿದ್ದಾರೆ. ಪುಷ್ಪರಾಜ್ ಬೋಳಾರ್ ಸಣ್ಣದಾಗಿ ಬಿಯರ್ ಆರಂಭಿಸಿದ್ದು, ಹೆಂಡತಿ ಹೇಳಿದ ಬಳಿಕವಷ್ಟೇ.

ಏನಿದು ಬಿಯರ್ ಆರಂಭಿಸಿದ ಘಟನೆ

ಸು ಫ್ರಮ್ ಸೋ ಭಾವ ಅಲಿಯಾಸ್ ಪುಷ್ಪರಾಜ್ ಬೋಳಾರ್ ಮದ್ಯ ಮುಟ್ಟುತ್ತಿರಲಿಲ್ಲ. ಸಿನಿಮಾ, ನಾಟಕ ಮೂಲಕ ಗಮನಸೆಳೆದಿರುವ ಬೋಳಾರ್ ಶಿಸ್ತಿನ ಜೀವನ. ಸು ಫ್ರಮ್ ಸೋ ಸಿನಿಮಾ ಬಳಿಕ ಪುಷ್ಪರಾಜ್ ಬೋಳಾರ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಹಲವು ರಾಜ್ಯಗಳಲ್ಲಿ ಭಾರಿ ಜನಪ್ರಿಯರಾಗಿದ್ದಾರೆ. ಅತೀ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ನಮ್ಮ ಕುಟುಂಬದಲ್ಲೂ ನಿಮ್ಮಂತ ಭಾವ ಇದ್ದಾರೆ ಎಂದು ಹೇಳಿದವರು ಹಲವರಿದ್ದಾರೆ. ಸು ಫ್ರಮ್ ಸೋ ಸಿನಿಮಾ ಬಳಿಕ ಹಲವು ಪಾರ್ಟಿ, ಕಾರ್ಯಕ್ರಮಗಳಿಗೆ ಪುಷ್ಪರಾಜ್‌ಗೆ ಆಹ್ವಾನ ಬರುತ್ತಿದೆ. ಹೀಗಾಗಿ ಕಾರ್ಯಕ್ರಮ, ಪಾರ್ಟಿಯಲ್ಲಿ ಪಾಲ್ಗೊಂಡಾಗ ಮದ್ಯ ಇದ್ದೇ ಇರುತ್ತೆ. ಆದರೆ ಪುಷ್ಪರಾಜ್ ಬೋಳಾರ್ ಊಟ ಮಾಡಿ ಬರುತ್ತಿದ್ದರು. ಮದ್ಯ ಮಾತ್ರ ಮುಟ್ಟುತ್ತಿರಲಿಲ್ಲ.

ಹೆಂಡತಿ ಜೊತೆ ಕಾರ್ಯಕ್ರಮದಲ್ಲಿ ಬೋಳಾರ್

ವಿಶೇಷ ಪಾರ್ಟಿಗೆ ಪುಷ್ಪರಾಜ್ ಬೋಳಾರ್‌ಗೆ ಆಹ್ವಾನ ನೀಡಲಾಗಿತ್ತು. ಕುಟುಂಬ ಸಮೇತ ಬರುವಂತೆ ಮನವಿ ಮಾಡಲಾಗಿತ್ತು. ಹೀಗಾಗಿ ಪುಷ್ಪರಾಜ್ ಬೋಳಾರ್ ತಮ್ಮ ಪತ್ನಿ ಜೊತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಪಾರ್ಟಿ ಮುಗಿಸಿ ಮನೆಗೆ ಮರಳಿದ್ದರು. ಮರು ದಿನ ಪತ್ನಿ ತನ್ನ ಗೆಳತಿಯರು ಸೇರಿದಂತೆ ಆಪ್ತರಿಗೆ ಕರೆ ಮಾಡಿ ಸೆಲೆಬ್ರೆಟಿಗಳೇ ತುಂಬಿದ್ದ ಪಾರ್ಟಿಯಲ್ಲಿ ಹಾಜರಾಗಿದ್ದ ಕುರಿತು ಹೇಳಿದ್ದರು. ಈ ವೇಳೆ ಪತ್ನಿಯ ಗೆಳತಿಯರು, ಇತರರು, ನಿಮ್ಮ ಪತಿ( ಭಾವ) ಪಾರ್ಟಿಯಲ್ಲಿ ಕುಡಿಯುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪುಷ್ಪರಾಜ್ ಬೋಳಾರ್ ಪತ್ನಿ, ಇಲ್ಲ ಕುಡಿಯುವುದಿಲ್ಲ ಎಂದಿದ್ದಾರೆ. ಸೆಲೆಬ್ರೆಟಿಗಳು, ಉದ್ಯಮಿಗಳು ಸೇರಿದಂತೆ ದೊಡ್ಡ ಪಾರ್ಟಿಗಳಲ್ಲಿ ಸ್ವಲ್ಪವೂ ಕುಡಿದಿಲ್ಲ ಎಂದರೆ ಮರ್ಯಾದಿ ಇರುವುದಿಲ್ಲ ಎಂದು ಪತ್ನಿಯ ಆಪ್ಚರು, ಗೆಳತಿಯರು ಸೂಚಿಸಿದ್ದಾರೆ.

ಈ ಮಾತು ಕೇಳಿಸಿಕೊಂಡ ಪತ್ನಿ, ನೇರವಾಗಿ ಪುಷ್ಪರಾಜ್ ಬಳಿ ಮನವಿ ಮಾಡಿದ್ದಾರೆ. ಈಗ ಎಲ್ಲವೂ ಇದೆ , ಆದರೆ ಮರ್ಯಾದಿ ಇಲ್ಲ ಎಂದರೆ ಹೇಗೆ? ಹೀಗಾಗಿ ಪಾರ್ಟಿಯಲ್ಲಿ ಕನಿಷ್ಠ ಒಂದು ಬಿಯರ್ ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಭಾವ ಇದೀಗ ಬಿಯರ್ ಆರಂಭಿಸಿದ್ದಾರೆ. ಪಾರ್ಟಿ ಸೇರಿದಂತೆ ಔತಣಕೂಟಗಳಲ್ಲಿ ಒಂದು ಬಿಯರ್ ಗುಟುಗು ಮೂಲಕ ಪಾರ್ಟಿಯಲ್ಲಿ ಮಿಂಚುತ್ತಿದ್ದಾರೆ. ಈ ವಿಶೇಷ ಘಟನೆಯನ್ನು ಸ್ವತಃ ಸು ಫ್ರಮ್ ಸೋ ಭಾವ ಬಹಿರಂಗಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಪ್ರೇಮದ ಊರಲಿ' ವಸಂತ ಆಗಿ ಮಿಂಚ್ತಿರೋ ರಮಿಕಾ ಶಿವು 'ನೀನಾದೆ ನಾ' ವೇದಾ ಅಂತ ಗೊತ್ತಿದ್ಯಾ?
ಒಮ್ಮೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದ ಡಾ ರಾಜ್‌ಕುಮಾರ್ ಮತ್ತೆ ಪರಭಾಷೆಗೆ ಹೋಗಿಲಿಲ್ಲ ಏಕೆ?