
ಕನ್ನಡ ಕಿರುತೆರೆ ನಟಿ, ಬರಹಗಾರತಿ ರಂಜನಿ ರಾಘವನ್ ಈ ವರ್ಷ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ನಟಿಯರು ಐರನ್ ಲೆಗ್, ನೆಗೆಟಿವ್ ಟ್ರೋಲ್ ಹಾಗೂ ನಟಿಯರನ್ನು ಟಾರ್ಗೆಟ್ ಮಾಡುತ್ತಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ.
'ಎಲ್ಲೆಡೆ ಬದಲಾವಣೆಗಳು ಆಗುತ್ತಿದೆ. ನಮಗೂ ಸ್ಕ್ರಿಪ್ಟ್ ಹೇಳಿ ಅನ್ನೋ ಪರಿಸ್ಥಿತಿಗೆ ನಾಯಕಿಯರು ಬರುತ್ತಿದ್ದಾರೆ. ಮುಂದೆ ಸಿನಿಮಾದಲ್ಲಿ ಹಾಕಿಕೊಳ್ಳುವುದೇ ದೊಡ್ಡ ವಿಚಾರ ಆಗಿತ್ತು. ಸಾಕಷ್ಟು ಹೆಣ್ಣುಮಕ್ಕಳು ಬರವಣಿಗೆ, ನಿರ್ದೇಶನಕ್ಕೆ ಬರಬೇಕು ಆಗ ಬದಲಾವಣೆಗಳನ್ನು ಕಾಣಬಹುದು. ಪ್ರತಿಯೊಂದು ಮನೆಯಲ್ಲಿ ಹೀರೋ ಇರುತ್ತಾಳೆ. ತುಂಬಾ ಜನ ಹೆಣ್ಣುಮಕ್ಕಳು ಬರವಣಿಗೆಗೆ ಬರಬೇಕು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಂಜನಿ ಮಾತನಾಡಿದ್ದಾರೆ.
2ನೇ ಮದ್ವೆ ಆಗೋ ಆಲೋಚನೆ ಬಂದಿದ್ದು ಸುಳ್ಳುಲ್ಲ, ಆ ವ್ಯಕ್ತಿ ಸರಿ ಅಂದ್ರೆ ಚಿರು ಒಪ್ಪಿಗೆ ಕೊಡ್ತಾನೆ: ಮೇಘನಾ ರಾಜ್
'ನಾನು ಬೆಳೆದುಬಿಟ್ಟಿದ್ದೀನಿ ನನಗೆ ಇಷ್ಟು ದುಡ್ಡು ಕೊಡಿ ಎಂದು ಕೇಳುವ ಮಟ್ಟಕ್ಕೆ ನಾನು ಬೆಳೆದಿಲ್ಲ ಸಿನಿಮಾದಲ್ಲಿ. ಒಳ್ಳೆ ಒಳ್ಳೆ ಪಾತ್ರಗಳು ಸಿಕ್ಕರೆ ನಟಿಸಬೇಕು ಅನ್ನೋದು ಅಷ್ಟೇ ತಲೆಯಲ್ಲಿ ಇರುವುದು. ಕೆಲವೊಮ್ಮೆ ಸಪೋರ್ಟಿಂಗ್ ಆರ್ಟಿಸ್ಟ್‌ಗಳು ಕೂಡ ಹೀರೋಗಿಂತ ಹೆಚ್ಚು ಪೇಮೆಂಟ್ ತೆಗೆದುಕೊಳ್ಳುತ್ತಾರೆ. ಸಂಭಾವನೆ ಅನ್ನೋದು ಅವರವರ ಜರ್ನಿ ಮೇಲೆ ಬಿಟ್ಟಿದ್ದು' ಎಂದು ರಂಜನಿ ರಾಘವನ್ ಹೇಳಿದ್ದಾರೆ
ದುಡ್ಡು ಕೊಡ್ತಾರೆ ಎಂತ ಪ್ರಮೋಷನ್ ಮಾಡೋಕೆ ಆಗಲ್ಲ, ಇದುವರೆಗೂ ಕೆಟ್ಟ ಪದ ಬಳಸಿಲ್ಲ: ಧನರಾಜ್
'ಯಾರೋ ಒಬ್ಬರನ್ನು ನೆಗೆಟಿವ್ ಆಗಿ ಬ್ರಾಂಡ್ ಮಾಡುವುದು ಕೆಟ್ಟದು. ಯಾರು ಯಾವತ್ತು ಬೇಕಿದ್ದರೂ ತಮ್ಮ ಜರ್ನಿಯನ್ನು ಶುರು ಮಾಡಬಾರದು. 10 ಸಿನಿಮಾ ಫ್ಲಾಪ್ ಆಗಿ 1 ಹಿಟ್ ಕೊಟ್ಟವರು ಇದ್ದಾರೆ, ಆರಂಭದಿಂದ ಹಿಟ್ ಕೊಟ್ಟು ಮನೆಗೆ ಹೋಗಿರವವರು ಇದ್ದಾರೆ. ಇಲ್ಲಿ ಯಾರೂ ಗೋಲ್ಡನ್ ಲೆಗ್ ಐರನ್ ಲೆಗ್ ಅಂತ ಇಲ್ಲ. ಟ್ರೋಲ್‌ಗಳನ್ನು ರಶ್ಮಿಕಾ ಮಂದಣ್ಣ ನಿರ್ಲಕ್ಷ್ಯ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಅವರು ಅವರ ಪಾಡಿಗೆ ಇದ್ದಾರೆ ನಾವು ಸುಮ್ಮನೆ ಮಾತನಾಡುತ್ತಿರುವುದು. ಅವರು ಎಲ್ಲಿ ಹೋಗಬೇಕು ಏನು ಮಾಡಬೇಕು ಅಂತ ಕ್ಲಾರಿಟಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ ನಾವು ಮಾತನಾಡಿ ಉಪಯೋಗವಿಲ್ಲ' ಎಂದಿದ್ದಾರೆ ರಂಜನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.