ಚಳಿ ಚಳಿ ತಾಳೆನು ಈ ಚಳಿಯಾ... ಹಾಡಿಗೆ ಹಿರಿಯ ನಟಿಯರ ಭರ್ಜರಿ ಡಾನ್ಸ್​: ಸುಸ್ತಾದ ಸೃಜನ್​ ಲೋಕೇಶ್​!

Published : Mar 08, 2025, 05:29 PM ISTUpdated : Mar 08, 2025, 06:58 PM IST
ಚಳಿ ಚಳಿ ತಾಳೆನು ಈ ಚಳಿಯಾ... ಹಾಡಿಗೆ ಹಿರಿಯ ನಟಿಯರ ಭರ್ಜರಿ ಡಾನ್ಸ್​: ಸುಸ್ತಾದ ಸೃಜನ್​ ಲೋಕೇಶ್​!

ಸಾರಾಂಶ

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಈ ವಾರ ವಿಶ್ವ ಮಹಿಳಾ ದಿನಾಚರಣೆ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಸೃಜನ್ ಲೋಕೇಶ್ ನಿರೂಪಣೆಯಲ್ಲಿ, ಗಿರಿಜಾ ಲೋಕೇಶ್, ಜಯಮಾಲಾ, ಅಂಬಿಕಾ, ವಿನಯ ಪ್ರಸಾದ್ ಭಾಗವಹಿಸಲಿದ್ದಾರೆ. ಯೋಗರಾಜ್ ಭಟ್ ಇಂದ್ರಜಿತ್ ಲಂಕೇಶ್ ಸ್ಥಾನವನ್ನು ತುಂಬಲಿದ್ದಾರೆ. ಹಿರಿಯ ನಟಿಯರು ಹಾಡುಗಳನ್ನು ಗುರುತಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ರಂಜಿಸಲಿದ್ದಾರೆ. ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಕಲರ್ಸ್​ ಕನ್ನಡದ ಮಜಾ ಟಾಕೀಸ್​ ಈ ಬಾರಿಯೂ ಸಕತ್​ ಹಾಸ್ಯದಿಂದ ಕೂಡಿದೆ. ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿರುವ ಈ ಷೋನಲ್ಲಿ  ವಿಶ್ವ, ಕುರಿ ಪ್ರತಾಪ್, ಪ್ರಿಯಾಂಕಾ ಶಿವಣ್ಣ ಇದ್ದಾರೆ.  ಇಂದ್ರಜಿತ್ ಲಂಕೇಶ್ ಸ್ಥಾನಕ್ಕೆ ಯೋಗರಾಜ್ ಭಟ್ ಎಂಟ್ರಿ ಆಗಿದೆ. ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಹಿರಿಯ ನಟಿಯರನ್ನು ಈ ಷೋಗೆ ಕರೆಸಲಾಗಿದೆ. ಅದರಲ್ಲಿ ಸೃಜನ್​ ಅವರ ಅಮ್ಮ ಗಿರೀಜಾ ಲೋಕೇಶ್​, ಹಿರಿಯ ನಟಿಯರಾದ ಜಯಮಾಲಾ, ಅಂಬಿಕಾ ಮತ್ತು ವಿನಯ ಪ್ರಸಾದ್​ ಅವರು ಬಂದಿದ್ದು, ಈ ಎಪಿಸೋಡ್​ ಸಕತ್​ ಎಂಜಾಯ್​ ಮಾಡುವ ಹಾಗಿದೆ ಎಂದು ಈಗ ಬಿಡುಗಡೆಯಾಗಿರುವ ಪ್ರೊಮೋದಿಂದ ನೋಡಬಹುದಾಗಿದೆ.

ಇದರಲ್ಲಿ, ಸೃಜನ್​ ಅವರು ಕೆಲವೊಂದು ಹಾಡುಗಳನ್ನು ಬರೆದು ಅದನ್ನು ಆ್ಯಕ್ಟ್​ ಮಾಡಿ ತೋರಿಸುವಂತೆ ಗಿರಿಜಾ ಲೋಕೆಶ್​ ಅವರಿಗೆ ಹೇಳಿದ್ದಾರೆ. ಆರಂಭದಲ್ಲಿ, ಈ ಲಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು... ಹಾಡು ಇದೆ. ಅದಕ್ಕೆ ಗಿರಿಜಾ ಅವರು ಸಕತ್​ ಆಗಿ ಆ್ಯಕ್ಟಿಂಗ್​ ಮಾಡುತ್ತಿದ್ದಂತೆಯೇ ಜಯಮಾಲಾ ಅವರು ಹಾಡನ್ನು ಹೇಳಿಯೇ ಬಿಟ್ಟಿದ್ದಾರೆ. ಕೆಲವೇ ಸೆಕೆಂಡುಗಳನ್ನು ಹಾಡನ್ನು ಗುರುತಿಸಿ ಸೃಜನ್​ ಲೋಕೇಶ್​ ಅವರು ಅಯ್ಯೋ ಎನ್ನುವ ಹಾಗೆ ಮಾಡಿದ್ರು. ಎರಡನೆಯದಾಗ ಬಣ್ಣಾ ನನ್ನ ಒಲವಿನ ಬಣ್ಣಾ ಹಾಡು. ಇದಕ್ಕೂ ಗಿರಿಜಾ ಅವರು ಪಿಚಕಾರಿ ಹಾಕುವಂತೆ ತೋರಿಸಿದಾಗ ಪುನಃ ಜಯಮಾಲಾ ಅವರೇ ಹಾಡನ್ನು ಹೇಳಿದರು.

ತುಂಡುಡುಗೆ ತೊಟ್ಟು ಮೆಟ್ಟಿಲಿನಿಂದ ಜಾರಿಬಿದ್ದ ಕಂಗನಾ- ಸೊಂಟಕ್ಕೇನಾಯ್ತು? ವೈರಲ್​ ವಿಡಿಯೋಗೆ ಫ್ಯಾನ್ಸ್​ ಶಾಕ್​!

ಈಗ ನಿಜಕ್ಕೂ ಸೃಜನ್​ ಲೋಕೇಶ್​ ಅವರ ತಲೆ ತಿರುಗಿತು. ದಯವಿಟ್ಟು ಯೋಚನೆ ಮಾಡಿದಂತಾದ್ರೂ ಮಾಡಿ ಹೇಳಿ ಎಂದರು. ಅದಕ್ಕೆ ಯೋಗರಾಜ ಭಟ್ಟರು, ನೀನು ಇನ್ನೂ ಕಾಂಪೋಂಡರ್​ ಆಗಿರುವಾಗ, ಅವರು ಅದ್ಯಾವಾಗಲೋ ಡಾಕ್ಟರ್​ ಪಾರ್ಟು ಮಾಡಿ ಆಗಿದೆ ಕಣೋ ಎಂದರು. ಅದಕ್ಕೆ ಸೃಜನ್​ ಅವರು, ನಾನು ಈ ಎಪಿಸೋಡ್​ ಅನ್ನು ಎಳೆಯಬೇಕಲ್ಲ. ಇನ್ನೂ ಎಷ್ಟೊಂದು ಟೈಮ್​ ಇರುವಾಗಲೇ ಬೇಗ ಬೇಗ ಹೇಳಿಬಿಟ್ಟರೆ ತಮ್ಮ ಕಥೆ ಏನು ಎಂದು ತಮ್ಮ ಸಮಸ್ಯೆ ಹೇಳಿಕೊಂಡರು. ಕೊನೆಗೆ ಅವರು ಚಳಿ ಚಳಿ ತಾಳೆನು ಹಾಡನ್ನು ಗಿರಿಜಾ ಲೋಕೇಶ್ ಅವರಿಗೆ ತೋರಿಸಿದಾಗ, ಇಷ್ಟು ಸುಲಭದ ಹಾಡು ಬಿಡ್ತಾರಾ? ಅವರು ಆ್ಯಕ್ಟ್​ ಮಾಡುತ್ತಿದ್ದಂತೆಯೇ ಅಂಬಿಕಾ ಕೂಡಲೇ ಹೇಳಿಬಿಟ್ಟರು. ಕೊನೆಗೆ ಎಲ್ಲರೂ ಸೇರಿ ಈ ಹಾಡಿಗೆ ಡಾನ್ಸ್​ ಮಾಡಿ ಸೃಜನ್​ ಲೋಕೇಶ್​ ಅವರನ್ನು ಸುಸ್ತು ಮಾಡಿದರು.

ಆಗ, ಹಳೆಯ ಹಾಡು ಹಾಕಿ ತಪ್ಪು ಮಾಡಿದೆ ಎಂದ ಸೃಜನ್​ ಅವರು, ಮಾಡರ್ನ್​ ಹಾಡು ಹಾಕಿದರು. ಅದನ್ನು ಕೇಳಿದ ಅಂಬಿಕಾ ಅಂತೂ ಕಣ್ಣು ಕಣ್ಣು ಬಿಟ್ಟರು. ಜಯಮಾಲಾ ಅವರು ಈ ಹಾಡಿಗೂ ಅಡ್ಜಸ್ಟ್​ ಆಗಿಬಿಟ್ಟಿದ್ದರು. ಆದರೆ ಅರ್ಥವೇ ತಿಳಿಯದ ಈ ಹಾಡನ್ನು ಕೇಳಿ ಸುಸ್ತಾಗೋ ಸರದಿ ಅಂಬಿಕಾ ಅವರದ್ದಾಗಿತ್ತು. ಒಟ್ಟಿನಲ್ಲಿ ಈ ಷೋ ಸಕತ್​ ಎಂಟರ್​ಟೇನ್ ಆಗಿದೆ ಎನ್ನುತ್ತಿದೆ ಪ್ರೊಮೋ. ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ಅದನ್ನು ಟಿವಿಯಲ್ಲಿ ನೋಡುವ ಕಾತರದಲ್ಲಿದ್ದಾರೆ ಅಭಿಮಾನಿಗಳು. 

ಗಂಡಸ್ರಿಗೆ ಮದ್ವೆಯಾಗಿದೆ ಅಂತ ಗೊತ್ತಾಗೋ 3 ಲಕ್ಷಣ ಹೇಳಿದ್ರು ಯೋಗರಾಜ ಭಟ್ರು! ಒಪ್ತೀರಾ ಇದನ್ನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?