ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್‌-ನಾಗೇಂದ್ರ; ನಟ ವಿಷ್ಣುವರ್ಧನ್!

Published : Mar 08, 2025, 05:29 PM ISTUpdated : Mar 08, 2025, 05:35 PM IST
ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್‌-ನಾಗೇಂದ್ರ; ನಟ ವಿಷ್ಣುವರ್ಧನ್!

ಸಾರಾಂಶ

ನಟ ವಿಷ್ಣುವರ್ಧನ್ ಅವರು ನಟಿ ಭಾರತಿಯವರನ್ನು ಲವ್ ಮಾಡಿದ್ದು ಹೇಗೆ? ಅವರಿಬ್ಬರ ಲವ್‌ಗೆ ಕಾರಣವೇನು? ಬರೀ ಲವ್ ಅಲ್ಲ, ಮದುವೆ ಕೂಡ ಆಗಲು ಯಾರು ಕಾರಣ, ಎಂಬ ಸಂಗತಿ ಹಲವರಿಗೆ ಗೊತ್ತಿಲ್ಲ.. ಮಾಹಿತಿ ಇಲ್ಲಿದೆ, ನೋಡಿ.. 

ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರು ನಟಿ ಭಾರತಿಯವರನ್ನು ಮದುವೆ ಆಗಿದ್ದು, ಸುಖ-ಸಂಸಾರ ಸಾಗಿಸಿದ್ದು, ಇಹಲೋಕ ತ್ಯಜಿಸಿದ್ದು ಎಲ್ಲವೂ ಬಹುತೇಕರಿಗೆ ಗೊತ್ತು. ಆದರೆ, ಅನೇಕರಿಗೆ ಗೊತ್ತಿಲ್ಲದ ಸಂಗತಿ ಒಂದಿದೆ. ಅದೇನೆಂದರೆ ನಟ ವಿಷ್ಣುವರ್ಧನ್ ಅವರು ನಟಿ ಭಾರತಿಯವರನ್ನು (Bharathi Vishnuvardhan) ಲವ್ ಮಾಡಿದ್ದು ಹೇಗೆ? ಅವರಿಬ್ಬರ ಲವ್‌ಗೆ ಕಾರಣವೇನು? ಬರೀ ಲವ್ ಅಲ್ಲ, ಮದುವೆ ಕೂಡ ಆಗಲು ಯಾರು ಕಾರಣ, ಎಂಬ ಸಂಗತಿ ಹಲವರಿಗೆ ಗೊತ್ತಿಲ್ಲ.. ಮಾಹಿತಿ ಇಲ್ಲಿದೆ, ನೋಡಿ.. 

ಹೌದು, ನಟ ವಿಷ್ಣುವರ್ಧನ್ ಹಾಗೂ ನಟಿ ಭಾರತಿಯವರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಮನೆ ಬೆಳಗಿದ ಸೊಸೆ, ಭಾಗ್ಯಜ್ಯೋತಿ, ದೇವರ ಗುಡಿ, ಮಕ್ಕಳ ಭಾಗ್ಯ, ಬಂಗಾರದ ಜಿಂಕೆ ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ಈ ಜೋಡಿ ನಟಿಸಿದ್ದಾರೆ. ಆದರೆ ಅವೆಲ್ಲವೂ ಮದುವೆಗಿಂತ ಮೊದಲು. ನಟ ವಿಷ್ಣುವರ್ಧನ್ ಹಾಗೂ ನಟಿ ಸಿನಿಮಾದಲ್ಲಿ ಲವ್ ಸೀನ್‌ ನಲ್ಲಿ ನಟಿಸಿದ್ದು ಸಹಜ. ಆದರೆ, ರಿಯಲ್‌ ಲೈಫ್‌ನಲ್ಲಿ ಈ ಜೋಡಿ ಲವ್ ಮಾಡಿ ಮದುವೆ ಆಗಲು ಒಂದು ಸಿನಿಮಾದ ಹಾಡು ಕಾರಣ..

ವಿಷ್ಣುವರ್ಧನ್‌ಗೆ 'ಕೈ ಕಡಗ' ಸಿಕ್ಕಿದ್ದು ಎಲ್ಲಿ? ಅದರ ಹಿಂದಿದೆ ಬಲು ರೋಚಕ ಕಹಾನಿ!

ಈ ಸಂಗತಿ ಅನೇಕರಿಗೆ ಗೊತ್ತಿಲ್ಲ..! ಹೌದು, ನಟ ವಿಷ್ಣುವರ್ಧನ್ ಅವರು ತಮ್ಮ ಆಪ್ತರಿಗೆ ಈ ಬಗ್ಗೆ ಹೇಳಿದ್ದರು. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ತಮ್ಮ ಆಪ್ತರಾದ ಪತ್ರಕರ್ತರಿಗೆ ಕೂಡ ಈ ಸಂಗತಿಯನ್ನು ತಮಾಷೆಯಾಗಿ ಹೇಳಿದ್ದರು ನಟ ವಿಷ್ಣುವರ್ಧನ್. ಇದನ್ನು ನಟ ವಿಷ್ಣುವರ್ಧನ್ ಅವರು ತಮಾಷೆಯಾಗಿ ಹೇಳಿದ್ದರೂ ಕೂಡ ಅದು ಸತ್ಯ ಸಂಗತಿಯೇ ಆಗಿದೆ. ನಟ ವಿಷ್ಣು ಅವರನ್ನು ಹತ್ತಿರದಿಂದ ಬಲ್ಲವರು ಒಂದು ಮಾತು ಹೇಳುತ್ತಾರೆ, ಅದೇನೆಂದರೆ.. 

ವಿಷ್ಣುವರ್ಧನ್ ಅಂತರ್ಮುಖಿ, ಯಾರೊಂದಿಗೂ ಹೆಚ್ಚು ಮಾತನಾಡೋದಿಲ್ಲ ಎಂಬ ಮಾತು ನಿಜವಾದರೂ, ಅವರಿಗೆ ಹಾಸ್ಯ ಪ್ರಜ್ಞೆ ಸಾಕಷ್ಟಿತ್ತು. ಕೆಲವೊಮ್ಮೆ ಅವರು ಶೂಟಿಂಗ್‌ ಸೆಟ್‌ನಲ್ಲಿ ಹಾಸ್ಯ ಮಾಡಿ ತಾವು ಸುಮ್ಮನೇ ಏನೂ ಹೇಳಿಯೇ ಇಲ್ಲ ಎಂಬಂತೆ ಕುಳಿತುಬಿಡುತ್ತಿದ್ದರಂತೆ. ನಟಿ ಲಕ್ಷ್ಮೀ ಸೇರಿದಂತೆ ಅನೇಕರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಮಾಡಿದ ತಮಾಷೆಗೆ ನಾವು ನಗುತ್ತಿದ್ದರೆ ಅವರು ತಲ್ಷಣವೇ ಸೀರಿಯಸ್ ಆಗಿಬಿಡುತ್ತಿದ್ದರು. ಇದ್ರಿಂದ ನಾವು ನಿರ್ದೇಶಕರಿಂದ ಬೈಸಿಕೊಂಡಿದ್ದು ಇದೆ ಹಲವರು ಹೇಳಿಕೊಂಡಿದ್ದಾರೆ. 

'ದಿ ಡೆವಿಲ್' ಸೆಕೆಂಡ್ ಶೆಡ್ಯೂಲ್ ಶುರು, ಮುಂದಿನವಾರ ದರ್ಶನ್ ಶೂಟಿಂಗ್‌ನಲ್ಲಿ ಭಾಗಿ!

ಅಂದರೆ, ನಟ ವಿಷ್ಣುವರ್ಧನ್ ಅವರಿಗೆ ಸೈಲೆಂಟಾಗಿ ಇರುವಂತೆ ಇಷ್ಟವಾದವರ ಜೊತೆ ಮಾತನಾಡಲೂ ಕೂಡ ಬರುತ್ತಿತ್ತು. ಅದರಂತೆ, ಅವರೇ ಒಮ್ಮೆ ಹೀಗೆ ಹೇಳಿಕೊಂಡಿದ್ದಾರೆ. 'ನಾನು ಭಾರತಿಯವರನ್ನು ಲವ್ ಮಾಡಲು, ಮದುವೆ ಆಗಲು ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ ಅವರೇ ಕಾರಣ.. ಅವ್ರು ಬರೆದು ಸಂಗೀತ ನೀಡಿರುವ 'ಮಾಮರವೆಲ್ಲೋ ಕೋಗಿಲೆಯೆಲ್ಲೋ ಹಾಡಿನಿಂದಲೇ ನಾನು ಭಾರತಿಯವರನ್ನು ಇಷ್ಟಪಟ್ಟು, ಬಳಿಕ ಲವ್ ಆಗಿ ಮ್ಯಾರೇಜ್ ಕೂಡ ಆಯ್ತು. ಆ ಹಾಡಿನ ಶೂಟಿಂಗ್, ಆ ಹಾಡಿನ ಸಾಹಿತ್ಯವೇ ನಮ್ಮಿಬ್ಬರನ್ನೂ ಗಂಡ-ಹೆಂಡತಿ ಮಾಡಿದ್ದು..' ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್