ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷಗಳನ್ನು ಪೂರೈಸಿದ್ದು, ಹೊಂಬಾಳೆ ಫಿಲಂಸ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ 'ಕೆಜಿಎಫ್' ಚಿತ್ರದ ಸವಿ ನೆನಪಿನ ಕೆಲವು ಮೇಕಿಂಗ್ ತುಣುಕುಗಳನ್ನು ರಿಲೀಸ್ ಮಾಡಿದೆ.
ಸ್ಯಾಂಡಲ್‌ವುಡ್‌ನ (Sandalwood) ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' (KGF 2) ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆಕ್ಷನ್ ಕಟ್ ಹೇಳಿದ್ದಾರೆ. ಮುಖ್ಯವಾಗಿ 'ಕೆಜಿಎಫ್' (KGF) ಮೊದಲ ಭಾಗ ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ. ಹೌದು! 'ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷಗಳನ್ನು ಪೂರೈಸಿದೆ. ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದ 'ಕೆಜಿಎಫ್' ಮೊದಲ ಭಾಗ ಬಿಡುಗಡೆಯಾಗಿ 3 ವರ್ಷಗಳೇ ಕಳೆದರೂ ಈ ಚಿತ್ರದ ಕ್ರೇಜ್ ಮಾತ್ರ ಇನೂ ಕಡಿಮೆಯಾಗಿಲ್ಲ.
ಈ ವಿಶೇಷ ದಿನವನ್ನು 'ಕೆಜಿಎಫ್' ತಂಡ ನೆನಪು ಮಾಡಿಕೊಂಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ (Honbale Films) ತನ್ನ ಯೂಟ್ಯೂಬ್ ಚಾನೆಲ್ನಲ್ಲಿ 'ಕೆಜಿಎಫ್' ಚಿತ್ರದ ಸವಿ ನೆನಪಿನ ಕೆಲವು ದೃಶ್ಯಕಾವ್ಯದ ತುಣುಕುಗಳನ್ನು ರಿಲೀಸ್ ಮಾಡಿದೆ. 2 ನಿಮಿಷ 51 ಸೆಕೆಂಡ್ನ ಈ ವಿಡಿಯೋದಲ್ಲಿ 'ಕೆಜಿಎಫ್'ನ ಅದ್ದೂರಿ ಮೇಕಿಂಗ್, ಯಶ್ ಎಂಟ್ರಿ, ಗರುಡ ರಾಮ್ ಸನ್ನಿವೇಶಗಳು, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸ್ಟೈಲ್, ಭುವನ್ ಗೌಡ ಕ್ಯಾಮೆರಾ ವರ್ಕ್, ಸಾವಿರಾರು ಜನ ಜೂನಿಯರ್ ಕಲಾವಿದರು, ಹಿರಿಯ ನಟ ಅನಂತ್ ನಾಗ್ ಹಿನ್ನೆಲೆ ಧ್ವನಿ ಸೇರಿದಂತೆ ಯಶ್ ಕ್ಷಣ ಮಾತ್ರದಲ್ಲಿ ಫೈಯರ್ ಮಾಡುವ ಟ್ರೇಲರ್‌ನ ಕೊನೆ ಸೀನ್‌ಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ರವೀನಾ ಟಂಡನ್‌ಗೆ ವಿಶೇಷವಾಗಿ ವಿಶ್ ಮಾಡಿದ ಪ್ರಶಾಂತ್ ನೀಲ್
'ಕೆಜಿಎಫ್' ಸಕ್ಸಸ್ ಬಳಿಕ ಇದೀಗ ಇಡೀ ಭಾರತೀಯ ಚಿತ್ರರಂಗವೇ 'ಕೆಜಿಎಫ್ 2' ಚಿತ್ರಕ್ಕಾಗಿ ಕಾತುರದಿಂದ ಕಾದು ಕುಳಿತಿದೆ. ಈಗಾಗಲೆ ಬಿಡುಗಡೆಯಾಗಿರುವ 'ಕೆಜಿಎಫ್ 2' ಚಿತ್ರದ ಟೀಸರ್ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಅದರಂತೇ ಪ್ರೇಕ್ಷಕರು ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. 'ಕೆಜಿಎಫ್ 2' ಸಿನಿಮಾ ಮುಂದಿನ ವರ್ಷ ಏಪ್ರಿಲ್ 14ಕ್ಕೆ ವಿಶ್ವದಾದ್ಯಾಂತ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಮತ್ತೊಮ್ಮೆ ಯಾವ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ.
ಇತ್ತೀಚೆಗಷ್ಟೇ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸಂಜಯ್ದತ್ ಅವರ ಡಬ್ಬಿಂಗ್ ಮುಕ್ತಾಯಗೊಳ್ಳುವ ಮೂಲಕ ಎಲ್ಲಾ ಭಾಷೆಗಳ ಡಬ್ಬಿಂಗ್ ಕೆಲಸ ಮುಕ್ತಾಯಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದರು. ಅಧೀರಾ ಈಸ್ ಬ್ಯಾಕ್ 'ಕೆಜಿಎಫ್ 2' ಚಿತ್ರದ ಅಧೀರನ ಪಾತ್ರಕ್ಕೆ ಡಬ್ಬಿಂಗ್ ಮುಗಿದಿದೆ. ದೊಡ್ಡ ಪರದೆ ಮೇಲೆ ಮುಂದಿನ ವರ್ಷ ಏಪ್ರಿಲ್ 24ಕ್ಕೆ ಸಿಗೋಣ ಎಂದು ಪ್ರಶಾಂತ್ ನೀಲ್ ಟ್ವೀಟ್ (Tweet) ಮಾಡಿದ್ದರು.
KGF 2 Updates: ಅಧೀರ ಪಾತ್ರದ ಡಬ್ಬಿಂಗ್ ಮುಗಿಸಿದ ಸಂಜಯ್ ದತ್
ನಟ ಯಶ್ ಕೂಡ ಹಿಂದಿಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ ಎನ್ನಲಾಗುತ್ತಿದೆ. ರವಿ ಬಸ್ರೂರ್ (Ravi Basrur) ಸಂಗಿತ ಸಂಯೋಜನೆ ಚಿತ್ರಕ್ಕಿದ್ದು, ಪ್ರಕಾಶ್ ರಾಜ್ (Prakash Raj), ತೆಲುಗು ನಟ ರಾವ್ ರಮೇಶ್ (Rao Ramesh) ಮತ್ತು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಚಿತ್ರದ ಆಕರ್ಷಣೆಯಾಗಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರಮೀಕಾ ಸೇನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಅಭಿನಯಿಸಿದ್ದಾರೆ. ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ (SriNidhi Shetty) ನಟಿಸಿದ್ದಾರೆ.