ನಾನಾ ನೀನಾ ನೋಡೋ ಬಿಡೋಣ, ಯಶ್-ಪ್ರಭಾಸ್ ಮಧ್ಯೆ ಭಾರೀ ಸ್ಟಾರ್ ವಾರ್‌ಗೆ ವೇದಿಕೆ ಸಜ್ಜು..!

By Shriram Bhat  |  First Published Jul 31, 2024, 3:31 PM IST

ಇದು ಯಶ್​​​​​​ಗಿರೋ ಕ್ಯಾಲಿಬರ್ ಅಂತ ಫ್ಯಾನ್ಸ್ ಹಬ್ಬ ಮಾಡಿದ್ರು. ಇದು ನಿಜಾ ಕೂಡ. ಯಶ್​ ಅಂದ್ರೆ ಈಗ ಇಡೀ ದೇಶ ಕೌತುಕದಿಂದ ನೋಡುತ್ತೆ. ಅದಕ್ಕೆ ಕಾರಣ ಕೆಜಿಎಫ್​​ ಸೀರಿಸ್​ನಲ್ಲಿ ಯಶ್​​ ಮಾಡಿದ್ದ ಮೋಡಿ ಮತ್ತು ದೊಡ್ಡ ಸಕ್ಸಸ್​.... 
 


ಒಬ್ರು ಸ್ಯಾಂಡಲ್​​ವುಡ್​​ನಿಂದ ಎದ್ದು ಬಂದು ನ್ಯಾಷನಲ್ ಸ್ಟಾರ್ ಆದವರು.. ಮತ್ತೊಬ್ರುಬ ಟಾಲಿವುಡ್​​ನಿಂದ ಗೆದ್ದು ಬಂದು ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಇಬ್ಬರದ್ದು ಒಂದೇ ಗುರಿ. ಭಾರತೀಯ ಚಿತ್ರರಂಗದಲ್ಲಿ ಸೌತ್​ ಸಿನಿಮಾ ಜಗತ್ತನ್ನ ಟಾಪ್​​​​ಗೆ ತಂದು ನಿಲ್ಲಿಸಬೇಕು ಅನ್ನೋದು. ಆದ್ರೆ ಈಗ ಆ ಇಬ್ಬರು ಸ್ಟಾರ್​ಗಳೇ ನಾನಾ ನೀನಾ ಅಂತ ಕಿತ್ತಾಟಕ್ಕೆ ತೊಡೆ ತಟ್ಟಿದ್ದಾರೆ. ಈ ವರ್ಷ ಪೂರ್ತಿ ಸೈಲೆಂಟ್ ಆಗಿದ್ದು, ಮುಂದಿನ ವರ್ಷ 2025ರಲ್ಲಿ ಇಬ್ಬರು ದೊಡ್ಡ ಸಂಗ್ರಮಾ ಒಂದಕ್ಕೆ ಸಜ್ಜಾಗಿದ್ದಾರೆ. 

ಅವರಿಬ್ಬರೇ ಟಾಲಿವುಡ್​​ ಡಾರ್ಲಿಂಗ್ ಪ್ರಭಾಸ್​​ ಹಾಗು ರಾಕಿಂಗ್ ಸ್ಟಾರ್ ಯಶ್... ! ಹೌದು, ಇಂಡಿಯನ್ ಸಿನಿ ಜಗತ್ತಿನ ಟಾಪ್​​ ಟ್ರೆಂಡರ್​ ಅಂದ್ರೆ ಈಗ ಯಶ್.. ರಾಕಿಂಗ್ ಸ್ಟಾರ್ ಯಶ್​ ಎಲ್ಲೇ ಹೋದ್ರು ಟಾಕ್ ಆಫ್​ ದಿ ಟೌನ್ ಆಗುತ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಯಶ್​​ ಇತ್ತೀಚೆಗೆ ಮಾಡಿಸಿಕೊಂಡಿದ್ದ ಒಂದೇ ಒಂದು ಹೇರ್​ಸ್ಟೈಲ್​.. ಈ ಹೇರ್​ಸ್ಟೈಲ್ ಇಡೀ ದೇಶದಲ್ಲಿ ಸೆನ್ಸೇಷನ್​ ಸೃಷ್ಟಿಸಿತ್ತು. 

Tap to resize

Latest Videos

undefined

ಹಿಂದಿಯ ಗೋವಿಂದ ಅಪ್ಪು ಬಗ್ಗೆ ಏನಂದ್ರು, ಜಗತ್ತಿಗೇ ಗೊತ್ತಿಲ್ಲದ ಸೀಕ್ರೆಟ್ ಒಂದು ಹೊರಬಿತ್ತು!

ಇದು ಯಶ್​​​​​​ಗಿರೋ ಕ್ಯಾಲಿಬರ್ ಅಂತ ಫ್ಯಾನ್ಸ್ ಹಬ್ಬ ಮಾಡಿದ್ರು. ಇದು ನಿಜಾ ಕೂಡ. ಯಶ್​ ಅಂದ್ರೆ ಈಗ ಇಡೀ ದೇಶ ಕೌತುಕದಿಂದ ನೋಡುತ್ತೆ. ಅದಕ್ಕೆ ಕಾರಣ ಕೆಜಿಎಫ್​​ ಸೀರಿಸ್​ನಲ್ಲಿ ಯಶ್​​ ಮಾಡಿದ್ದ ಮೋಡಿ ಮತ್ತು ದೊಡ್ಡ ಸಕ್ಸಸ್​.... 
 
'ರಾಕಿ ಭಾಯ್' ಎದುರು ಅಖಾಡಕ್ಕೆ ಧುಮುಕಿದ ನಟ ಪ್ರಭಾಸ್‌..! ಯಶ್​ ಸಕ್ಸಸ್ ಆಟಕ್ಕೆ ಬ್ರೇಕ್​​ ಹಾಕೋಕೆ ರೆಡಿ ಎಂದ ಡಾರ್ಲಿಂಗ್! 

ಆದ್ರೆ ಈಗ ಮ್ಯಾಟರ್​ ಬೇರೆಯದ್ದೇ ಇದೆ. ನ್ಯಾಷನಲ್ ಸ್ಟಾರ್​ ಯಶ್ ವಿರುದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್​ ಅಖಾಡಕ್ಕೆ ಧುಮುಕಿದ್ದಾರೆ. ಯಶ್​ರ ಸಕ್ಸಸ್​​ ಆಟಕ್ಕೆ ಬ್ರೇಕ್​ ಹಾಕೋದಕ್ಕೆ ರೆಡಿ ಎಂದಿದ್ದಾರೆ ಪ್ರಭಾಸ್​.. ಯಶ್​ರನ್ನ ಬಾಕ್ಸಾಫೀಸ್​ನಲ್ಲಿ ಕೆಡವಲು ದೊಡ್ಡ ಕೆಡ್ಡಾ ತೋಡಿದ್ದಾರೆ ಪ್ರಭಾಸ್.. 
 
ಪ್ಯಾನ್ ವರ್ಲ್ಡ್​ 'ಟಾಕ್ಸಿಕ್' ಚಿತ್ರಕ್ಕೆ ಪ್ರಭಾಸ್​ ಟಕ್ಕರ್..! ಟಾಕ್ಸಿಕ್ ಎದುರು ತೊಡೆ ತಟ್ಟಿದ 'ದಿ ರಾಜಾ ಸಾಬ್' 

ಟ್ರಾಪ್ ಆಗೋದು ಆಮೇಲೆ ಒದ್ದಾಡೋದು ನಂಗೆ ಆಗಿಬರಲ್ಲ: ಶಾಕಿಂಗ್ ಹೇಳಿಕೆ ಕೊಟ್ಟ ಯಶ್..!

ರಾಕಿ ಭಾಯ್‌ ಯಶ್ 'ಕೆಜಿಎಫ್: ಚಾಪ್ಟರ್ 2 ಸಿನಿಮಾದ ನಂತರ ಸಂಪೂರ್ಣ ಗಮನವನ್ನು 'ಟಾಕ್ಸಿಕ್' ಸಿನಿಮಾದ ಮೇಲೆ ಕೊಟ್ಟಿದ್ದಾರೆ. ಟಾಕ್ಸಿಕ್ ಶೂಟಿಂಗ್ ಶುರುವಾಗೋ ಮೊದಲೇ ​ಈ ಸಿನಿಮಾವನ್ನ ಅಳೆದು ತೂಗಿ ಪ್ಲಾನ್ ಮಾಡಿದ್ದ ಯಶ್​, 2025ರ ಏಪ್ರಿಲ್ 10ರಂದು ತೆರೆಗೆ ತರಬೇಕೆಂಬುದು  ನಿರ್ಧಾರಿಸಿ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಮಾಡಿದ್ದಾರೆ. ಆದರೆ ಈಗ ಯಶ್‌ಗೆ ಟಕ್ಕರ್ ಕೊಡೋದಕ್ಕೆ ನಟ ಪ್ರಭಾಸ್ ದಿ ರಾಜಾ ಸಾಬ್​ ಆಗಿ ಸಜ್ಜಾಗಿದ್ದಾರೆ.

 'ದಿ ರಾಜಾ ಸಾಬ್' ಸಿನಿಮಾ ಕೂಡ 2025ರ ಏಪ್ರಿಲ್ 10ರಂದೇ ತೆರೆಗೆ ತರೋದಾಗಿ ಪ್ರಭಾಸ್ ಅನೌನ್ಸ್ ಮಾಡಿದ್ದಾರೆ. ತೆರೆ ಮೇಲೆ ಒಂದೇ ದಿನ ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ.!

ಯಶ್ ಅವರ 'ಟಾಕ್ಸಿಕ್' ಮತ್ತು ಪ್ರಭಾಸ್ ಅವರ 'ದಿ ರಾಜಾ ಸಾಬ್' ಸಿನಿಮಾಗಳೆರಡೂ ಪ್ಯಾನ್ ಇಂಡಿಯಾ ಚಿತ್ರಗಳಾಗಿವೆ. ಆದರೆ ಇವೆರಡೂ ಸಿನಿಮಾಗಳ ಜಾನರ್ ಮಾತ್ರ ಕಂಪ್ಲೀಟ್ ಬೇರೆ ಬೇರೆ. 70ರ ದಶಕದ ಡ್ರಗ್ಸ್, ಅಂಡರ್‌ವರ್ಲ್ಡ್, ಗ್ಯಾಂಗ್‌ಸ್ಟರ್ ಕಥೆಯನ್ನು 'ಟಾಕ್ಸಿಕ್' ಸಿನಿಮಾ ಹೊಂದಿದೆ. ಮಲಯಾಳಂನ ಗೀತು ಮೋಹನ್‌ದಾಸ್ ಆ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 

ಮಾಲಾಶ್ರೀ-ರವಿಚಂದ್ರನ್ ಮಧ್ಯೆ 'ರಾಮಾಚಾರಿ' ವೇಳೆ ಯಾಕೆ ಸಮಸ್ಯೆ ಆಗಿತ್ತು, ಪರಿಹಾರ ಹೇಗಾಯ್ತು..?

ಆದ್ರೆ 'ದಿ ರಾಜಾ ಸಾಬ್' ಹಾರರ್ ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನ ಸಿನಿಮಾ. ಈ ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳು ಒಂದೇ ದಿನ ತೆರೆಕಾಣೊದಕ್ಕೆ ಸಿದ್ಧವಾಗುತ್ತಿವೆ. ಹೀಗಾಗಿ ಯಶ್​ ಪ್ರಭಾಸ್ ಇಬ್ಬರಿಗೂ ಪ್ಯಾನ್ ಇಂಡಿಯಾ ಬಾಕ್ಸಾಫೀಸ್​ ಗೆಲ್ಲೋ ತಾಕತ್ತು ಇರೋದ್ರಿಂದ ಗಲ್ಲಾ ಪೆಟ್ಟಿಗೆಯಲ್ಲಿ ದೊಡ್ಡ ಕ್ಲಾಶ್ ಆಗುತ್ತೆ ಅಂತ ಈಗಲೇ ಚರ್ಚೆ ಶುರುವಾಗಿದೆ. 

ಡಾರ್ಲಿ ಪ್ರಭಾಸ್​ ಸಕ್ಸಸ್​ ರೇಟ್ ಚನ್ನಾಗಿದೆ. 'ಬಾಹುಬಲಿ' ಬಳಿಕ ಪ್ರಭಾಸ್ ನಟಿಸಿದ ಒಂದಿಷ್ಟು ಸಿನಿಮಾಗಳು ದೊಡ್ಡ ಸಕ್ಸಸ್ ಆಗದೇ ಇದ್ರು 'ಕಲ್ಕಿ 2898 ಎಡಿ' ಸಿನಿಮಾ ದೊಡ್ಡ ಗೆಲುವನ್ನ ಪ್ರಭಾಸ್​ಗೆ ತಂದು ಕೊಟ್ಟಿದೆ. ಇದೀಗ 'ದಿ ರಾಜಾ ಸಾಬ್' ಮೂಲಕ ಪುನಃ ಪ್ಯಾನ್ಸ್‌ಗೆ ರಂಜಿಸಲು ಬರುತ್ತಿದ್ದಾರೆ ಪ್ರಭಾಸ್.

ಹಂಸಲೇಖಾ-ರವಿಚಂದ್ರನ್ ಕಿತ್ತಾಟಕ್ಕೆ ಮೂಲ ಕಾರಣ ಬಿಚ್ಚಿಟ್ಟ ಲಹರಿ ವೇಲು: ಹೀಗೂ ಉಂಟೇ ಗುರೂ...! 

ಆ ಕಡೆ ಯಶ್​​ ಕೆಜಿಎಫ್​ ಚಾಪ್ಟರ್​2 ಮೂಲಕ ಪ್ರೇಕ್ಷಕರನನ್ನ ರಂಜಿಸಿ ಗೆದ್ದು​ ಮೂರು ವರ್ಷ ಆಗಿವೆ. ಹೀಗಾಗಿ ಸಕ್ಸಸ್​ ಟ್ರ್ಯಾಕ್​ನಲ್ಲಿ ಪ್ರಭಾಸ್​​ ಹಾಗು ಮತ್ತೆ ದೊಡ್ಡ ಬಿಗ್ ಹಿಟ್ ಕೊಡೋ ಕನಸ್ಸು ಕಾಣುತ್ತಿರೋ ಯಶ್​​ ಮಧ್ಯೆ ಮೆಗಾ ಫೈಟ್ ಆಗಿ ಯಾರು ಗೆಲ್ಲುತ್ತಾರೆ ಅನ್ನೋ ನಿರೀಕ್ಷೆ ಶುರುವಾಗಿದೆ. 

click me!