ತಿಂಗಳಿಗೆ 300 ರೂ. ಪಡೀತಿದ್ದ ಪ್ರಕಾಶ್​ ರಾಜ್​ಗೆ ವಿಲನ್ ತಂದ ಅದೃಷ್ಟ! ಮದ್ವೆ ವಿಷ್ಯ ಕೆದಕೋದಾ ನೆಟ್ಟಿಗರು?

By Suchethana D  |  First Published Jul 31, 2024, 1:44 PM IST

ಪ್ರಕಾಶ್​ ರಾಜ್​ ಅವರು ತಮ್ಮ ಪತ್ನಿ ಮತ್ತು ಮಗನ ಜೊತೆಗಿರುವ ಸುಂದರ ವಿಡಿಯೋ ವೈರಲ್​ ಆಗಿದ್ದರೆ ನೆಟ್ಟಿಗರು ಬೇರೆಯದ್ದೇ ವಿಷ್ಯ ಕೆದಕುತ್ತಿದ್ದಾರೆ. ಏನದು?
 


 ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಅವರು ಪ್ರತಿ ಚಿತ್ರದಲ್ಲೂ ತಮ್ಮ ಬಹುಮುಖತೆಯನ್ನು ಸಾಬೀತುಪಡಿಸಿದ್ದಾರೆ. ಆದರೆ ವರ್ಷಗಳಲ್ಲಿ ಅವರು ವಿವಾದಾತ್ಮಕ ದಕ್ಷಿಣ ಕಲಾವಿದರಲ್ಲಿ ಒಬ್ಬರೆಂದೇ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಕಲಾವಿದರು ಯಾವುದೇ ವಿವಾದಕ್ಕೆ ಒಳಗಾಗದೇ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿಯುತ್ತಾರೆ. ಆದರೆ  ನಟ ಪ್ರಕಾಶ್​ ರಾಜ್​ ಈ ಎಲ್ಲಾ ನಟರಿಗಿಂತಲೂ ಭಿನ್ನ ವ್ಯಕ್ತಿತ್ವ ಉಳ್ಳವರು. ಅವರು ಪ್ರಸ್ತುತ ಸನ್ನಿವೇಶದ ಕುರಿತು ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸದಾ ಪ್ರತ್ಯಕ್ಷ ಮತ್ತು ಪರೋಕ್ಷ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಸ್ವಲ್ಪ ಜನಪ್ರಿಯತೆ ಕುಗ್ಗಿತು ಎಂದಾಕ್ಷಣ, ಯಾವುದೋ ಕೆಟ್ಟ ಪೋಸ್ಟ್​ ಹಾಕಿ, ಟ್ರೋಲ್​ಗೆ ಒಳಗಾದರೂ ಸರಿ, ಒಟ್ಟಿನಲ್ಲಿ  ಸುದ್ದಿಯಲ್ಲಿ ಇರುವುದು ಇವರಿಗೆ ಇಷ್ಟ ಎಂದು ಹಲವರು ನಟನ ಕಾಲೆಳೆಯುವುದೂ ಇದೆ.  ಇಂಥ ಪೋಸ್ಟ್​ಗಳಿಗಾಗಿ ಒಂದಷ್ಟು ಮಂದಿಯಿಂದ ಹೊಗಳಿಸಿಕೊಳ್ಳುತ್ತಾರೆ. ಆದರೆ ಇದೇ ವೇಳೆ, ಇದೇ ಕಾರಣಕ್ಕೆ ಇವರಷ್ಟು ಕೆಟ್ಟ ಕಮೆಂಟ್​ಗಳನ್ನು ಹಾಗೂ ಟೀಕೆಗಳನ್ನು ಎದುರಿಸುವ ದಕ್ಷಿಣದ ನಟರೂ ಬೇರಾರೂ ಇಲ್ಲ ಎಂದೇ ಹೇಳಬಹುದು. ಕೆಲವು ವೇಳೆ ಕಾನೂನು ಕುಣಿಕೆಯೂ ಇವರ ಮೇಲೆ ಸುತ್ತುತ್ತಿದ್ದುದು ಉಂಟು. 

ಇದರ ಇವರು ತಮ್ಮ ಪತ್ನಿ ಮತ್ತು ಮಗನ ಜೊತೆಗೆ ಇರುವ ವಿಡಿಯೋ ಒಂದು ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದರಲ್ಲಿ ಪ್ರಕಾಶ್​ ರಾಜ್​ ಹೇಗೆ ಮೇಲಕ್ಕೆ ಬಂದರು ಎನ್ನುವುದನ್ನು ತಿಳಿಸಲಾಗಿದೆ. ಪ್ರಕಾಶ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಸ್ಟೇಜ್ ಶೋಗಳಿಗೆ ತಿಂಗಳಿಗೆ 300 ರೂಪಾಯಿ ಪಡೆಯುತ್ತಿದ್ದರು. ಬೀದಿನಾಟಕಗಳ ಮೂಲಕ ಪ್ರಸಿದ್ಧರಾಗಿದ್ದರು. ಇವರು  2000 ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ತಮ್ಮ ಏಳನೆಯ ತರಗತಿಯಿಂದಲೇ ಪ್ರಕಾಶ್​  ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ.  

Latest Videos

undefined

ಮಾಧುರಿ ಮದ್ವೆ ವಿಷ್ಯ ತಿಳಿದಾಗ ನನ್ನಪ್ಪ ಬಾತ್‌ರೂಮ್‌ನಲ್ಲಿ.... ಆ ದಿನ ನೆನೆದ ದೀಪಿಕಾ ಪಡುಕೋಣೆ

ಇದಾದ ಬಳಿಕ ಅವರ ಕೈ ಹಿಡಿದಿದ್ದು ವಿಲನ್​ ರೋಲ್​ಗಳು. ವಿಲನ್​ ಪಾತ್ರಗಳಿಂದ ಫೇಮಸ್​ ಆದರು. ಕನ್ನಡ ಮಾತ್ರವಲ್ಲದೇ ಹಿಂದಿ ಸೇರಿದಂತೆ ಕೆಲ ಭಾಷೆಗಳಲ್ಲಿಯೂ ವಿಲನ್​ ರೋಲ್​ನಲ್ಲಿ ಮಿಂಚಿದರು. ಸಿಂಘಂ, ಕಲ್ಕಿ, ಅನ್ನಿಯನ್ ಮತ್ತು ದಬಾಂಗ್ 2 ಚಿತ್ರಗಳಲ್ಲಿನ ಅವರ ಪಾತ್ರಗಳನ್ನು ಅಭಿಮಾನಿಗಳು ತಮ್ಮ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾರೆ. ಅವರ ಖಳನಾಯಕನ ಪಾತ್ರ ಎಷ್ಟರ ಮಟ್ಟಿಗೆ ಫೇಮಸ್ ಆಯಿತು ಎಂದರೆ ಅವರು ಖಳನಾಗಿ ನಟಿಸಿದ ಚಿತ್ರಗಳಲ್ಲಿ ಹೀರೋಗಿಂತಲು ಸಕತ್​ ಫೇಮಸ್​ ಆದರು. ಅದೇ  ಅವರ ಯಶಸ್ಸಿನ ಮಂತ್ರವಾಯಿತು. ಪ್ರಕಾಶ್​ ರಾಜ್​ ಅವರನ್ನು ಸೋಷಿಯಲ್​  ಮೀಡಿಯಾದಲ್ಲಿ ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಈಗಲೂ ಪತ್ನಿ ಮತ್ತು ಮಗನ ಜೊತೆಗಿನ ವಿಡಿಯೋ ವೈರಲ್​ ಆದಾಗಲೂ ಹಲವಾರು ಮಂದಿ ಇವರು ಸಿನಿಮಾದಲ್ಲಷ್ಟೇ ಅಲ್ಲ, ರಿಯಲ್​ನಲ್ಲಿಯೂ ವಿಲನ್ನೇ ಎನ್ನುತ್ತಿದ್ದಾರೆ. ಇನ್ನು ಇವರ ಮದುವೆಯನ್ನು ಕಮೆಂಟ್​ನಲ್ಲಿ ಎಳೆದುತಂದು ಟ್ರೋಲ್  ಕೂಡ ಮಾಲಾಗುತ್ತಿದೆ. ಇನ್ನು ಕೆಲವರು ಪ್ರಧಾನಿ ವಿರುದ್ಧ ಟ್ವೀಟ್​ ಮಾಡಿ ಪ್ರತಿ ಟ್ವೀಟ್​ಗೆ 300 ಗಳಿಸ್ತಿದ್ದಾರೆ ಎಂದ್ರೆ, ಮತ್ತೆ ಕೆಲವರು ಗಾಂಧಿ ಫ್ಯಾಮಿಲಿ ಪರ ಟ್ವೀಟ್​ ಮಾಡಿ ದುಡ್ಡು ಮಾಡ್ತಾ ಇದ್ದಾರೆ ಎಂದಿದ್ದಾರೆ. ಇನ್ನು ಹಲವರು ಇವರ ನಟನೆಯನ್ನು ಕೊಂಡಾಡಿದ್ದಾರೆ.

ಇನ್ನು ಇವರ ವೈವಾಹಿಕ ಜೀವನದ ಕುರಿತು ಹೇಳುವುದಾದರೆ,  1994 ರಲ್ಲಿ ಲಲಿತಾ ಕುಮಾರಿ ಅವರನ್ನು ವಿವಾಹವಾದರು. ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಿದ್ದು ಎಂಬ ಒಬ್ಬ ಮಗ ಇದ್ದ. ಅದರೆ ಮಗ ಸಿದ್ದು ಚಿಕ್ಕವಯಸ್ಸಿನಲ್ಲಿ ನಿಧನ ಹೊಂದಿದ. ಲಲಿತಾ ಜೊತೆ ಪ್ರಕಾಶ್ ರಾಜ್ 15 ವರ್ಷಗಳ ಕಾಲ ಸಂಸಾರ ಮಾಡಿದ್ರು. 2009 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಮಗ ಬೇಕು ಎಂಬ ಕಾರಣ ಕೊಟ್ಟು ಡಿವೋರ್ಸ್​ ಪಡೆದ ಬಳಿಕ 2010ರಲ್ಲಿ  ಪೋನಿ ವರ್ಮಾ ಅವರನ್ನು  ಮದುವೆಯಾದರು ಎನ್ನಲಾಗಿದೆ. ಪ್ರಕಾಶ್ ಮತ್ತು ಪೋನಿ ದಂಪತಿಗೆ ಒಬ್ಬ ಮಗನಿದ್ದಾನೆ. ಇಬ್ಬರೂ ಮತ್ತೊಮ್ಮೆ ಮದುವೆಯಾಗಬೇಕೆಂದು ಮಗ ವೇದಾಂತ್ ಬಯಸಿದ್ದ. ಮಗನ ಆಸೆಯನ್ನು ಈಡೇರಿಸಲು ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮತ್ತೊಮ್ಮೆ ಮದುವೆಯಾದರು. ಈ ಮದುವೆಯಲ್ಲಿ ಪ್ರಕಾಶ್ ಅವರ ಮೊದಲ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೂ ಕೂಡ ಭಾಗಿಯಾಗಿದ್ದರು. ಈಗ ಇವರ ಸಂಬಳದ ವಿಷಯ ಪ್ರಸ್ತಾಪ ಆಗುತ್ತಲೇ ಮದುವೆ, ಡಿವೋರ್ಸ್​ ವಿಷಯವನ್ನು ಕೆದಕುತ್ತಿದ್ದಾರೆ ನೆಟ್ಟಿಗರು! 
ಕುಷ್ಠರೋಗಿ ಎಂದು ಶಾಲೆಯಿಂದ ಬಹಿಷ್ಕರಿಸಿದ್ದ ನಟಿ ಬಾಲಿವುಡ್​​ ಸೂಪರ್​ ಸ್ಟಾರ್​! ಡಿಂಪಲ್​ ಕಥೆಯೇ ರೋಚಕ

click me!