ಈಗ ಬೇಬಿ ಬಂಪ್ ಸೀಸನ್, ಮಗುವಿನ ನಿರೀಕ್ಷೆಯಲ್ಲಿ ಈ ಮೋಹಕ ಸ್ಯಾಂಡಲ್​ವುಡ್​ ನಟಿಯರು!

By Shriram Bhat  |  First Published Jul 31, 2024, 3:02 PM IST

ಈಗ ಸ್ಯಾಂಡಲ್​ವುಡ್​ ಬ್ಯೂಟಿಫುಲ್ ಕಪಲ್​​ ಅಂದ್ರೆ ನೆನಪಾಗೋದು ಹರ್ಷಿಕಾ ಪೂಣಚ್ಚ ಹಾಗು ಭುವನ್ ಗೌಡ. ತುಂಬಾ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿತ್ತು. ಕೊಡವ ಸಂಪ್ರದಾಯದಂತೆ ಕೊಡಗಿನಲ್ಲೇ ಅದ್ಧೂರಿಯಾಗಿ ಮದುವೆ ಆಗಿದ್ರು...


ಪ್ರತಿಯೊಬ್ಬ ಹೆಣ್ಣಿಗೂ ತಾಯಿ ಆದಾಗ್ಲೆನೇ ಆಕೆಯ ಬದುಕಿಗೊಂದು ಅರ್ಥವಂತೆ. ಹಾಗಾಗಿನೇ ಆ ತಾಯ್ತನದ ಸಂಭ್ರಮಕ್ಕೆ ಹೆಣ್ಣುಕುಲ ಮಿಡಿಯೋದು. ಆ ಗಳಿಗೆಗಾಗಿ ಕಾಯೋದು, ಅದನ್ನ ಸಂಭ್ರಮಿಸೋದು. ಅಂತಹ ಕ್ಷಣಕ್ಕಾಗಿ ಕಾಯುತ್ತಿದ್ದಾರೆ ಸ್ಯಾಂಡಲ್​ವುಡ್​ನ ಈ ಐದು ಜನ ನಟಿಯರು. ಯಾಕಂದ್ರೆ ಅವರೆಲ್ಲಾ ಈಗ ಗರ್ಭಿಣಿಯರು. ಹೀಗಾಗಿ ಸ್ಯಾಂಡಲ್​ವುಡ್​ನಲ್ಲಿ ಈಗ ಬೇಬಿ ಸೀಸನ್ ಶುರುವಾಗಿದೆ. 

Tap to resize

Latest Videos

ಹೌದು, ಸ್ಯಾಂಡಲ್​ವುಡ್​ನಲ್ಲಿ ಗ ಬೇಬಿ ಸೀಸನ್. ಯಾಕಂದ್ರೆ ಕೊಡಗಿನ ಸುಂದರಿ ಹರ್ಷಿಕಾ ಪೂಣಚ್ಚ. ಮಂಡ್ಯ ಬ್ಯೂಟಿ ಮಿಲನಾ ನಾಗರಾಜ್, ಮಿಲ್ಕಿ ಬ್ಯೂಟಿ ಪ್ರಣಿತಾ ಸುಭಾಷ್​, ಹಾಗು ಕಿರುತೆರೆ ಸುಂದರಿಯರಾದ ಗೊಂಬೆ ನೇಹಾ ಗೌಡ, ಚಿನ್ನು ಕವಿತಾ ಗೌಡ ಈಗ ತುಂಬಿ ಗರ್ಭಿಣಿಯರು. 

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣಿತಾ..!

ನಟಿ ಪ್ರಣಿತಾ ಸುಭಾಷ್ ಎರಡನೇ ಬಾರಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಪ್ರಣೀತಾ ಈಗ ಎರಡನೇ ಸಲ ಅಮ್ಮನಾಗುತ್ತಿದ್ದಾರೆ. ಪ್ರಣಿತಾ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದು, ಸಕೆಂಡ್ ರೌಂಡ್, ಪ್ಯಾಂಟ್ ಫಿಟ್ ಆಗುತ್ತಿಲ್ಲ ಎಂದು ಪ್ಯಾಂಟ್ ಬಟನ್ ಓಪನ್ ಮಾಡಿ ಬೇಬಿ ಬಂಪ್ ರಿವೀಲ್ ಮಾಡಿದ್ದಾರೆ. 

ಆರು ತಿಂಗಳ ಗರ್ಭಿಣಿ ನಟಿ ಹರ್ಷಿಕಾ ಪೂಣಚ್ಚ..!

ಹಿಂದಿಯ ಗೋವಿಂದ ಅಪ್ಪು ಬಗ್ಗೆ ಏನಂದ್ರು, ಜಗತ್ತಿಗೇ ಗೊತ್ತಿಲ್ಲದ ಸೀಕ್ರೆಟ್ ಒಂದು ಹೊರಬಿತ್ತು!

ಈಗ ಸ್ಯಾಂಡಲ್​ವುಡ್​ ಬ್ಯೂಟಿಫುಲ್ ಕಪಲ್​​ ಅಂದ್ರೆ ನೆನಪಾಗೋದು ಹರ್ಷಿಕಾ ಪೂಣಚ್ಚ ಹಾಗು ಭುವನ್ ಗೌಡ. ತುಂಬಾ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿತ್ತು. ಕೊಡವ ಸಂಪ್ರದಾಯದಂತೆ ಕೊಡಗಿನಲ್ಲೇ ಅದ್ಧೂರಿಯಾಗಿ ಮದುವೆ ಆಗಿದ್ರು. ಈಗ ಹರ್ಷಿಕಾ ಮತ್ತು ಭುವನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತೋಷ ವಿಷಯವನ್ನ ಸ್ಪೆಷಲ್ ಫೋಟೋ ಶೂಟ್ ಮೂಲಕ ಹಂಚಿಕೊಂಡಿದ್ದಾರೆ. ಹರ್ಷಿಕಾ ಪೂಣಚ್ಚ ಈಗ ಆರು ತಿಂಗಳು ಗರ್ಭಿಣಿ.. 

ತಾಯ್ತನದ ಸಂಭ್ರಮದಲ್ಲಿ ಲವ್ ಮಾಕ್ಟೆಲ್ ಮಿಲನಾ ನಾಗರಾಜ್.!

ತಾಯ್ತನದ ಸಂಭ್ರಮದಲ್ಲಿ ನಟಿ ಮಿಲನಾ ನಾಗರಾಜ್​ ಕೂಡ ಇದ್ದಾರೆ. ಡಾರ್ಲಿಂಗ್ ಕೃಷ್ಣನ ಪ್ರೀತಿಯಲ್ಲಿ ಬಿದ್ದು ಮದುವೆ ಆಗಿ ಸಂಸಾರ ನಡೆಸುತ್ತಿರೋ ಈ ಜೋಡಿ ಈಗ ಮನೆಗೆ ಮುದ್ದು ಕಂದನ ಬರಮಾಡಿ ಕೊಳ್ಳೋಕೆ ರೆಡಿಯಾಗಿದ್ದಾರೆ. ಹೀಗಾಗಿ ಈ ಜೋಡಿ ಫೋಟೋ ಶೂಟ್ ಮಾಡಿಸಿದ್ದು, ಫೋಟೋಗಳನ್ನ ಹಂಚಿಕೊಂಡು ನಮ್ಮನ್ನ ಆಶಿರ್ವಧಿಸಿ ಎಂದು ಬರೆದುಕೊಂಡಿದ್ದಾರೆ. 

ಮಾಲಾಶ್ರೀ-ರವಿಚಂದ್ರನ್ ಮಧ್ಯೆ 'ರಾಮಾಚಾರಿ' ವೇಳೆ ಯಾಕೆ ಸಮಸ್ಯೆ ಆಗಿತ್ತು, ಪರಿಹಾರ ಹೇಗಾಯ್ತು..?

ಇನ್ನು ಕಿರುತೆರೆಯಲ್ಲೂ ಬೇಬಿ ಬಂಪ್ ಜೋರಾಗಿದೆ. ಕಿರುತೆರೆ ನಟಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಕಡೆ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಚಿನ್ನು ಪಾತ್ರ ಮಾಡಿದ್ದ ಕವಿತಾ ಗೌಡ ಕೂಡಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇವರಿಬ್ಬರು  ಇನ್​ಸ್ಟಾಗ್ರಾಮ್ ಮೂಲಕ ಬೇಬಿ ಬಂಪ್ ಅಪ್ಡೇಟ್ಸ್ ಕೊಟ್ಟಿದ್ದಾರೆ. ಹೀಗಾಗಿ ಕನ್ನಡದ ಬಣ್ಣದ ಜಗತ್ತು ಈಗ ಬೇಬಿ ಸೀಸನ್​​ ಆಗಿದೆ. 

click me!