ಯಶ್ ಸೂಪರ್ ಸ್ಟಾರ್ ಅಲ್ಲವೇ ಅಲ್ಲ, ಇನ್ನೊಬ್ರು; ರಾಜಮೌಳಿ ಪ್ರಕಾರ ಮತ್ಯಾರು?

By Shriram Bhat  |  First Published Jan 9, 2025, 12:42 PM IST

ವಿಶ್ವವ್ಯಾಪಿ ಫೇಮಸ್ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರು ಯಾವಾಗಲೂ ತುಂಬಾ ತೂಕದ ಮಾತನ್ನೇ ಆಡುತ್ತಾರೆ. ಏನೇನೋ ಹೇಳಿ ಕಾಂಟ್ರೋವರ್ಸಿ ಮಾಡೋದು ರಾಜಮೌಳಿಯವರ ಸ್ವಭಾವವೇ ಅಲ್ಲ. ಆದರೆ, ಅವರು ನಟ ಯಶ್ ಬಗ್ಗೆ ಮಾತ್ರ 'ನಟ ಯಶ್ ಸೂಪರ್ ಸ್ಟಾರ್ ಅಲ್ಲ, ಇನ್ನೊಬ್ಬರು ನಿಜವಾದ ಸೂಪರ್ ಸ್ಟಾರ್' ಎಂದಿದ್ದಾರೆ. ಹಾಗಿದ್ದರೆ ..


ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಈಗ ಪ್ಯಾನ್‌ ಇಂಡಿಯಾ ಸ್ಟಾರ್ ಹಾಗೂ ಭಾರತದ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು ಎಂಬುದು ಇಡೀ ಜಗತ್ತಿಗೇ ಗೊತ್ತು. ಆದರೆ ಅದು ಜಗತ್ಪ್ರಸಿದ್ಧ ನಿರ್ದೇಶಕ ಎಸ್‌ಎಸ್‌ ರಾಜಮೌಳಿಗೆ (SS Rajamouli) ಗೊತ್ತಿಲ್ವಾ? ಈ ಪ್ರಶ್ನೆ ಏಳಲು ಕಾರಣ ಹಾಗೂ ಅದಕ್ಕೆ ಉತ್ತರ ಎರಡೂ ಈ ಸ್ಟೋರಿಯಲ್ಲೇ ಇದೆ, ಮಿಸ್ ಮಾಡದೇ ಕೊನೆ ತನಕ ನೋಡಿ.. ಕೆಜಿಎಫ್ ಸಿನಿಮಾ ಬಳಿಕ ಸ್ಯಾಂಡಲ್‌ವುಡ್ ನಟ ಯಶ್ ಅವರು ಹಾಲಿವುಡ್ ನಟರ ರೇಂಜ್‌ಗೆ ಬೆಳೆದಿದ್ದಾರೆ. ಆದರೂ ಅವರು ಸೂಪರ್ ಸ್ಟಾರ್ ಅಲ್ಲ ಅಂದಿದ್ದಾರೆ ರಾಜಮೌಳಿ. 

ಭಾರತದ ವಿಶ್ವವ್ಯಾಪಿ ಫೇಮಸ್ ನಟ ಎಸ್‌ಎಸ್‌ ರಾಜಮೌಳಿ ಅವರು ಯಾವಾಗಲೂ ತುಂಬಾ ತೂಕದ ಮಾತನ್ನೇ ಆಡುತ್ತಾರೆ. ಏನೇನೋ ಹೇಳಿ ಕಾಂಟ್ರೋವರ್ಸಿ ಮಾಡೋದು ರಾಜಮೌಳಿಯವರ ಸ್ವಭಾವವೇ ಅಲ್ಲ. ಆದರೆ, ಅವರು ನಟ ಯಶ್ ಬಗ್ಗೆ ಮಾತ್ರ 'ನಟ ಯಶ್ ಸೂಪರ್ ಸ್ಟಾರ್ ಅಲ್ಲ, ಇನ್ನೊಬ್ಬರು ನಿಜವಾದ ಸೂಪರ್ ಸ್ಟಾರ್' ಎಂದಿದ್ದಾರೆ. ಹಾಗಿದ್ದರೆ ಯಶ್ ಯಾಕೆ ಅಲ್ಲ, ಇನ್ನೊಬ್ಬರು ಯಾಕೆ ಹೌದು? ಇದಕ್ಕೆ ಸ್ವತಃ ರಾಜಮೌಳಿ ಕೊಟ್ಟ ಉತ್ತರ ಕೇಳಿದರೆ ನೀವು ಶಾಕ್‌, ಅಚ್ಚರಿ ಹಾಗೂ ಸತ್ಯದರ್ಶನ ಪಡೆದು ಧನ್ಯತಾಭಾವ ಅನುಭವಿಸುತ್ತೀರಿ. 

Tap to resize

Latest Videos

ಚೀನಾ 'ಬಾಂಬೂ' ಕಥೆ ಹೇಳಿ ನಟ ಯಶ್ ಸಮಾಜಕ್ಕೆ ಯಾವ ಸಂದೇಶ ಕೊಟ್ಟಿದ್ದಾರೆ?

ಈ ಬಗ್ಗೆ ಎಸ್‌ಎಸ್‌ ರಾಜಮೌಳಿ ಹೇಳಿದ್ದೇನು? 'ನಿಜವಾಗಿಯೂ ನಟ ಯಶ್ ಅವರು ಸೂಪರ್ ಸ್ಟಾರ್ ಅಲ್ಲ. ಅದಕ್ಕಿಂತ ದೊಡ್ಡ ವಿಚಾರ ಅಂದ್ರೆ ಮಗ ಸೂಪರ್ ಸ್ಟಾರ್ ಆಗಿದ್ರೂ ಕೂಡ ಅವರ ತಂದೆ ತನ್ನ ಕೆಲಸ ಬಿಡಲಿಲ್ಲ, ಅವರು ತಮ್ಮ ಡ್ರೈವರ್ ಕೆಲಸ ಕಂಟಿನ್ಯೂ ಮಾಡಿದ್ದಾರೆ. 'ನಾನು ಸಂಪಾದನೆ ಮಾಡ್ತಿದ್ದೇನೆ, ನನಗೆ ಒಳ್ಳೆಯ ಹೆಸರು ಇದೆ. ಈಗ ನೀವು ನಿಮ್ಮ ಕೆಲಸ ಬಿಟ್ಟುಬಿಡಿ' ಎಂದು ಯಶ್ ಹೇಳಿದ್ದಾರೆ. ಅದಕ್ಕೆ ನಟ ಯಶ್ ತಂದೆ 'ನಾನು ಡ್ರೈವರ್ ಆಗಿಯೇ ನಿನ್ನನ್ನು ಸೂಪರ್ ಸ್ಟಾರ್ ಮಾಡಿದ್ದೇನೆ. ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡ್ತೀನಿ' ಅಂತ ಹೇಳಿದ್ದಾರೆ. 

ಅದನ್ನು ತಿಳಿದಾಗ ನನಗೆ ಅನ್ನಿಸಿದ್ದು, 'ನಿಜವಾದ ಸೂಪರ್ ಸ್ಟಾರ್ ಯಶ್ ಅಲ್ಲ, ಅವರ ತಂದೆ' ಎಂದು ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿಯವರು ಹೇಳಿದ್ದಾರೆ. ಹೌದು, ಯಶ್ ತಂದೆಯ ಮಾತಿನಲ್ಲಿ ಸತ್ಯವಿದೆ, ಎಲ್ಲರಿಗೂ ಇರಲೇಬೇಕಾದ ಸ್ವಾಭಿಮಾನವೂ ಇದೆ. ಅವರು ಸೂಪರ್ ಸ್ಟಾರ್ ತಂದೆ ಆಗಿದ್ದರೂ ಕೂಡ ತನ್ನ ಕೆಲಸ ತಾವು ಮಾಡಬೇಕು ಎಂಬ ಅರಿವು ಇದೆ. ಅದನ್ನು ಅವರು ತಮ್ಮ ಮಗನಿಗೆ ಹೇಳಿದ್ದಾರೆ ಕೂಡ. ಅದನ್ನು ತಿಳಿದ ರಾಜಮೌಳಿ ಕೂಡ ಸರಿಯಾಗಿಯೇ ಹೇಳಿದ್ದಾರೆ, 'ಸೂಪರ್ ಸ್ಟಾರ್ ತಂದೆ ನಿಜವಾದ ಸೂಪರ್ ಸ್ಟಾರ್' ಎಂದು!

ಕನ್ನಡದ ನಟ ಯಶ್ ಫಾಲೋ ಮಾಡಿದ ಅಲ್ಲು ಅರ್ಜುನ್, ನೆಟ್ಟಿಗರ ಕಣ್ಣು ಕೆಂಪಾಗಿದ್ದೇಕೆ?

ನಿನ್ನೆ, ಅಂದರೆ ಜನವರಿ 8 ನಟ, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ರಾಜಮೌಳಿ ಈ ಹಳೆಯ ಹೇಳಿಕೆ ಸಾಕಷ್ಟು ವೈರಲ್ ಅಗಿದೆ. ಈ ಹೇಳಿಕೆ ಹಳೆಯದಾಗಿದ್ದರೂ ಇದು ನಿತ್ಯ ನಿರಂತರ ಹಾಗೂ ಸತ್ಯ ದರ್ಶನದಂತೆ ಯಾವತ್ತು ಪ್ರಸ್ತುತವಾಗಿಯೇ ಇರುತ್ತದೆ ಎನ್ನಬಹುದು. ಯಶ್ ಅದೆಷ್ಟೇ ಗ್ರೇಟ್ ಆದರೂ ಅವರ ತಂದೆ ಅದಕ್ಕಿಂತಲೂ ಹೆಚ್ಚು ಗ್ರೇಟ್ ಆಗಿಯೇ ನಿಲ್ಲುತ್ತಾರೆ. ಏಕೆಂದರೆ, ತಾವು 'ಮಗನ ಸಂಪಾದನೆಯಲ್ಲಿ ಬದುಕಬಾರದು ಎಂಬ ಅವರ ನಿಲುವು' ಎನ್ನಬಹುದು!

click me!