Gowli Teaser: ಹೊಸ ಗೆಟಪ್‌ನಲ್ಲಿ ಮಾಸ್ ಎಂಟ್ರಿ ಕೊಟ್ಟ ಶ್ರೀನಗರ ಕಿಟ್ಟಿ!

Suvarna News   | Asianet News
Published : Feb 03, 2022, 03:58 PM IST
Gowli Teaser: ಹೊಸ ಗೆಟಪ್‌ನಲ್ಲಿ ಮಾಸ್ ಎಂಟ್ರಿ ಕೊಟ್ಟ ಶ್ರೀನಗರ ಕಿಟ್ಟಿ!

ಸಾರಾಂಶ

ಮೊದಲ ಬಾರಿಗೆ ಶ್ರೀನಗರ ಕಿಟ್ಟಿ ತುಂಬಾ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೂರ ನಿರ್ದೇಶನದ 'ಗೌಳಿ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಸೋಹಮ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್​ನಲ್ಲಿ ರಘು ಸಿಂಗಮ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ಲವರ್‌ ಬಾಯ್‌ ಪಾತ್ರದ ಮುಖಾಂತರ ತನ್ನದೇ ಛಾಪು ಮೂಡಿಸಿದ್ದ ಶ್ರೀನಗರ ಕಿಟ್ಟಿ 'ಸಿಲಿಕಾನ್ ಸಿಟಿ' ಚಿತ್ರದ ಬಳಿಕ ಕೊಂಚ ಗ್ಯಾಪ್ ಪಡೆದಿದ್ದರು. ಹೀಗಿರುವಾಗಲೇ ಶ್ರೀನಗರ ಕಿಟ್ಟಿ (SriNagar Kitty) 'ಗೌಳಿ' (Gowli) ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು. ಈ ಚಿತ್ರದ ಮೂಲಕ ಕಿಟ್ಟಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡುತ್ತಿದ್ದಾರೆ ಎನ್ನುವುದು ಒಂದು ಕಾರಣವಾದರೆ, ಇದರಲ್ಲಿನ ಅವರ ಗೆಟಪ್ ತೀವ್ರ ಕುತೂಹಲವನ್ನು ಹುಟ್ಟುಹಾಕಿತ್ತು. ಇದೀಗ ಚಿತ್ರತಂಡ ಚಿತ್ರದ ಟೀಸರ್‌ನ್ನು (Teaser) ಬಿಡುಗಡೆ ಮಾಡಿದೆ. ಹಿಂದೆಂದೂ ಕಂಡಿರದ ಅವತಾರದಲ್ಲಿ ಕಿಟ್ಟಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬುಧವಾರವಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿನ ದೃಶ್ಯಾವಳಿಗಳು ಹಾಗೂ ಹಿನ್ನೆಲೆ ಸಂಗೀತ ನೋಡುಗರ ಗಮನ ಸೆಳೆದಿದೆ. ಖಡಕ್ ಸಂಭಾಷಣೆಯೊಂದಿಗೆ ಮಾಸ್ ದೃಶ್ಯಗಳೂ ಸಾಕಷ್ಟಿದ್ದು, ಕುಟುಂಬವೊಂದರ ಕತೆಯ ಝಲಕ್ ಟೀಸರ್​ನಲ್ಲಿದೆ. ರಘು ಸಿಂಗಮ್‌ (Raghu Singam) ನಿರ್ಮಿಸುತ್ತಿರುವ ಈ ಚಿತ್ರವನ್ನು ಸೂರ (Sura) ನಿರ್ದೇಶನ ಮಾಡುತ್ತಿದ್ದು, ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್, ಪ್ರೇಮ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್ ಸೇರಿದಂತೆ ಮೊದಲಾದ ತಾರೆಯರು ಚಿತ್ರದ ಟೀಸರ್ ವೀಕ್ಷಿಸಿ ಶ್ರೀನಗರ ಕಿಟ್ಟಿ ಹೊಸ ಗೆಟಪ್‌ಗೆ ಹಾಗೂ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. 

Gowli Movie: ರಗಡ್ ಲುಕ್‌ನಲ್ಲಿ ಶ್ರೀನಗರ ಕಿಟ್ಟಿ: ಫೆಬ್ರವರಿ 2ರಂದು ಚಿತ್ರದ ಟೀಸರ್ ರಿಲೀಸ್

ಸೋಹಮ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್​ನಲ್ಲಿ ರಘು ಸಿಂಗಮ್ ಚಿತ್ರವನ್ನು ನಿರ್ಮಿಸಿದ್ದು, ಶ್ರೀನಗರ ಕಿಟ್ಟಿಗೆ ಜತೆಯಾಗಿ ಪಾವನ ಗೌಡ (Paavana Gowda), ರಂಗಾಯಣ ರಘು ಮೊದಲಾದವರು ಕಾಣಿಸಿಕೊಂಡಿದ್ದಾರೆ. ಯಶ್‌ ಶೆಟ್ಟಿ (Yash Shetty) ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ (Sandeep Valluri) ಕ್ಯಾಮೆರಾ ಹಿಡಿಯುತ್ತಿದ್ದು, ಶಶಾಂಕ್‌ ಶೇಷಗಿರಿ (Shashank Sheshagiri) ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶರತ್ ಲೋಹಿತಾಶ್ವ, ಗೋವಿಂದೇ ಗೌಡ, ಕಾಕ್ರೋಚ್ ಸುಧಿ, ಗುರುದೇಶಪಾಂಡೆ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.



'ಗೌಳಿ' ಜನಾಂಗ ಮಹಾರಾಷ್ಟ್ರದಿಂದ ವಲಸೆ ಬಂದವರು. ಸಿದ್ದಿ ಜನಾಂಗದಂತೆಯೇ ಶಿರಸಿ, ಯಲ್ಲಾಪುರ ಈ ಭಾಗದಲ್ಲಿ ಗೌಳಿ ಜನರೂ ಇದ್ದಾರೆ. ಅವರ ಮಾತೃಭಾಷೆ ಕನ್ನಡವಲ್ಲ. 'ಗೌಳಿ' ಚಿತ್ರ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿದೆ. ಆದರೆ ಆ ಘಟನೆಗಳು ನಡೆದಿರುವುದು ಬೇರೆಡೆ. ಅದನ್ನು ಗೌಳಿ ಜನಾಂಗದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ ಹಾಗೂ ಬಹಳ ದಿನಗಳ ನಂತರ ನಿಮ್ಮ ಪ್ರೀತಿಯ ಕಿಟ್ಟಿ ಕಾಣಿಸಿಕೊಳ್ಳಲಿದ್ದಾರೆ. 4 ವರ್ಷದ ನಂತರ ಕಿಟ್ಟಿ ಸ್ಯಾಂಡಲ್‌ವುಡ್ ಸವಾರಿ ಮಾಡಲಿದ್ದು, 'ಸಿಲಿಕಾನ್ ಸಿಟಿ' ನಂತರ ಈಗ 'ಗೌಳಿ' ಸಿನಿಮಾ ಮಾಡುತ್ತಿದ್ದಾರೆ. ಕೈಯಲ್ಲಿ ರಕ್ತಸಿಕ್ತ ಕೊಡಲಿ ಹಿಡಿದು ಹಿಂದೆಂದೂ ಕಾಣದ ಲುಕ್‌ನಲ್ಲಿ ತೆರೆಯ ಮೇಲೆ ಅಬ್ಬರಿಸಲಿದ್ದಾರೆ ಎಂದು ನಿರ್ದೇಶಕ ಸೂರ ಮಾಹಿತಿ ನೀಡಿದ್ದಾರೆ.

ಧಾರಾವಾಹಿ ನಿರ್ಮಾಣಕ್ಕಿಳಿದ ಶ್ರೀನಗರ ಕಿಟ್ಟಿ; ನಾಯಕಿಯ ಹುಡುಕಾಟದಲ್ಲಿ ಸೀರಿಯಲ್‌ ತಂಡ!

ಇನ್ನು 'ಗೌಳಿ' ಎಂಬ ಟೈಟಲ್‌ನಲ್ಲಿಯೇ ರಕ್ತಸಿಕ್ತ ಚಿತ್ರಣ ಕಾಣಬಹುದು. ಹಾಲು ಮಾರೋ ಹುಡುಗನ ಪಾತ್ರವನ್ನು ನಟ ಮಾಡಲಿದ್ದಾರೆ. 1960ರಲ್ಲಿ ಶಿವಮೊಗ್ಗದಲ್ಲಿ ನಡೆದ ಕಥೆಯನ್ನು ಈಗಿನ ಟ್ರೆಂಡ್‌ಗೆ ಸಿದ್ಧ ಮಾಡಿಕೊಂಡು 'ಗೌಳಿ' ಚಿತ್ರ ಸಿದ್ಧವಾಗಿದೆ. ನಾನು ಇಲ್ಲಿಯವರೆಗೂ ಮಾಡಿರುವ ಚಿತ್ರಗಳದ್ದೇ ಒಂದು ಹಂತವಾದರೆ, 'ಗೌಳಿ' ಚಿತ್ರದ್ದೇ ಮತ್ತೊಂದು ಹಂತ. ಈ ಚಿತ್ರದಲ್ಲಿನ ನನ್ನ ಪಾತ್ರದ ಲುಕ್ಕು, ಕತೆಯಲ್ಲಿ ಸಾಕಷ್ಟು ಹೊಸತನದಿಂದ ಕೂಡಿದೆ. ಪೂರ್ತಿ ಗಡ್ಡ ಬಿಟ್ಟು ಹೀಗೆ ನಾನು ಕಾಣಿಸಿಕೊಂಡಿದ್ದು, ಇದೇ ಮೊದಲು. ನಿರ್ದೇಶಕ ಸೂರ ನನ್ನನ್ನು ಹೊಸ ರೀತಿಯಲ್ಲಿ ಈ ಚಿತ್ರದ ಮೂಲಕ ತೋರಿಸುತ್ತಿದ್ದಾರೆ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ