'ಮದಗಜ' ಲುಕ್‌ನಲ್ಲಿ ಶ್ರೀ ಮುರಳಿ: 2ನೇ ಟೀಸರ್ ರಿಲೀಸ್

Published : Oct 15, 2021, 01:06 PM ISTUpdated : Oct 15, 2021, 01:33 PM IST
'ಮದಗಜ' ಲುಕ್‌ನಲ್ಲಿ ಶ್ರೀ ಮುರಳಿ: 2ನೇ ಟೀಸರ್ ರಿಲೀಸ್

ಸಾರಾಂಶ

ಮದಗಜ ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಶ್ರೀಮುರಳಿ ಸಖತ್ ಲುಕ್‌ಗೆ ಅಭಿಮಾನಿಗಳು ಫಿದಾ

ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ನಿರ್ಮಾಣದ ಮತ್ತು ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀ ಮುರಳಿ (Srii Murali) ಅಭಿನಯದ 'ಮದಗಜ' (Madagaja) ಸಿನಿಮಾ ಈಗಾಗಲೇ ಪೋಸ್ಟರ್ (Poster) ಮತ್ತು ಫಸ್ಟ್ ಲುಕ್‌ನಿಂದ (First look) ಸದ್ದು ಮಾಡುತ್ತಿದೆ. ಅಲ್ಲದೇ  ಚಿತ್ರದ ಮೊದಲ ಟೀಸರ್ (Teaser) ಕೂಡಾ ಬಿಡುಗಡೆಯಾಗಿ ಚಿತ್ರರಸಿಕರ ಗಮನ ಸೆಳೆದಿತ್ತು. ಇದೀಗ ಚಿತ್ರತಂಡ ಚಿತ್ರದ ಎರಡನೇ ಟೀಸರ್ ಅನ್ನು ಆನಂದ್ ಯೂಟ್ಯೂಬ್ ಚಾನೆಲ್‌ನಲ್ಲಿ (YouTube) ಬಿಡುಗಡೆ ಮಾಡಿದೆ.

ಇನ್ನು ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಟೀಸರ್‌ನಲ್ಲಿ ಮುರಳಿ ಅವರ ಖಡಕ್ ಲುಕ್, ಪಂಚಿಂಗ್ ಡೈಲಾಗ್ಸ್  ಸೇರಿದಂತೆ ಭರ್ಜರಿ ಆಕ್ಷನ್‌ ಕಾಣಬಹುದಾಗಿದೆ. ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು (Jagapati Babu) ಅವರ ಟೆರರ್ ಲುಕ್ ನೋಡುಗರ ಮೈಜುಮ್ಮೆನಿಸುತ್ತದೆ. ಅಲ್ಲದೇ "ರಕ್ತ ಒಳಗಿನಿಂದ ಹರಿದರೆ ಸಂಬಂಧ, ಹೊರಗಿನಿಂದ ಹರಿಸಿದ್ರೆ ಕ್ರೌರ್ಯ' ಎಂದು ಡೈಲಾಗ್ ಹೊಡೆಯುವ ಮೂಲಕ ಆಕ್ಷನ್‌ ಲುಕ್‌ನಲ್ಲಿ ಮುರಳಿ ಅಬ್ಬರಿಸಿದ್ದಾರೆ.

"

'ಮದಗಜ' ಚಿತ್ರವು ಶ್ರೀ ಮುರಳಿ ಅವರ 22ನೇ ಸಿನಿಮಾವಾಗಿದ್ದು ಇದೊಂದು ಆಕ್ಷನ್‌ ಫ್ಯಾಮಿಲಿ ಎಂಟರ್‌ಟೇನರ್‌ ಚಿತ್ರ. 'ಮಫ್ತಿ' (Mufti) ಖ್ಯಾತಿಯ ನವೀನ್‌ ಕುಮಾರ್‌ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿದ್ದು, ಎಸ್.ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು (Jagapati Babu) ನಟಿಸಿದ್ದು, ಚಿಕ್ಕಣ್ಣ (Chikkanna), ಶಿವರಾಜ್ ಕೆ.ಆರ್. ಪೇಟೆ (Shivraj K.R.Pete) ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ.

ಈ ಸಿನಿಮಾದಲ್ಲಿ ವಾರಾಣಸಿ ಗ್ಯಾಂಗ್‌ಸ್ಟರ್‌ (Gangster) ಆಗಿ ಶ್ರೀಮುರಳಿ ನಟಿಸಿದ್ದು, 74 ದಿನಗಳ ಕಾಲ ಬೆಂಗಳೂರು, ಮೈಸೂರು, ಹೈದರಾಬಾದ್, ವಾರಾಣಸಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಹಾಗೂ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರ್‌ (Ravi Basrur) ಸಂಗೀತ ಚಿತ್ರಕ್ಕಿದೆ.

75 ದಿನಗಳಲ್ಲಿ 'ಮದಗಜ' ಸಿನಿಮಾ ಚಿತ್ರೀಕರಣ ಮುಗಿಸಿದ ಶ್ರೀಮುರಳಿ!

2019ರಲ್ಲಿ ತೆರೆಕಂಡ 'ಭರಾಟೆ' ಚಿತ್ರದ ನಂತರ ಶ್ರೀ ಮುರಳಿ ನಟನೆಯ ಯಾವ ಚಿತ್ರಗಳೂ ಬಿಡುಗಡೆಯಾಗಿಲ್ಲ. ಆದ್ದರಿಂದಲೇ 'ಮದಗಜ' ಚಿತ್ರಕ್ಕೆ ಅಪಾರ ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಮುರಳಿ ಎದುರಿಗೆ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳುವ ಪೋಸ್ಟರನ್ನು ಸಹ ಚಿತ್ರತಂಡ ಹಂಚಿಕೊಂಡಿತ್ತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!