ಕನ್ನಡ ಚಿತ್ರರಂಗಕ್ಕೆ ಪೈರೆಸಿ‌ ಶಾಕ್..! ಕೋಟಿಗೊಬ್ಬ 3, ಸಲಗಕ್ಕೂ ಆತಂಕ

Suvarna News   | Asianet News
Published : Oct 13, 2021, 10:49 AM ISTUpdated : Oct 13, 2021, 12:13 PM IST
ಕನ್ನಡ ಚಿತ್ರರಂಗಕ್ಕೆ ಪೈರೆಸಿ‌ ಶಾಕ್..! ಕೋಟಿಗೊಬ್ಬ 3, ಸಲಗಕ್ಕೂ ಆತಂಕ

ಸಾರಾಂಶ

ಹೊಸ ಸಿನಿಮಾಗಳಿಗೆ ಪೈರಸಿ ಕಾಟ ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೆ ಪೈರಸಿಯದ್ದೇ ತಲೆನೋವು ಸಲಗ, ಕೋಟಿಗೊಬ್ಬ 3ಗೂ ತಟ್ಟಿದ ಬಿಸಿ

ಕೊರೋನ ಸಂಕಷ್ಟದಲ್ಲಿ ಇರುವ ಸ್ಯಾಂಡಲ್‌ವುಡ್‌ಗೆ ಕೊರೋನಾಗಿಂತಲೂ ಪೈರೆಸಿ ಕಳ್ಳರ ಕಾಟ ಹೆಚ್ಚಾಗಿದೆ. ಕೋಟಿ ಬಜೆಟ್‌ಗಳ ಸಿನಿಮಾ ಪೈರಸಿ ಕಾಟಕ್ಕೆ ಬೇಸತ್ತಿವೆ. ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಫೈರಸಿ ಆಗ್ತಿದೆ. ಇದು ಕೊರೋನಾ ಸಂದರ್ಭದಲ್ಲಿ ಹಲವು ಆತಂಕದ ಮಧ್ಯೆ ಥಿಯೇಟರ್ ತಲುಪಿದ ಸಿನಿಮಾಗೆ ದೊಡ್ಡ ಆತಂಕ.

ಟೆಲಿಗ್ರಾಂ ಮೂಲಕ ಕನ್ನಡ ಸಿನಿಮಾಗಳ ಥಿಯೇಟರ್ ಪ್ರಿಂಟ್ ಅನ್ನು ಅಪ್ಲೋಡ್ ಮಾಡಲಾಗುತ್ತಿದೆ. ಕೊರೋನ ಎರಡನೇ ಅಲೆ ಮುಗಿದ ನಂತರ ಬಂದ ಎಲ್ಲಾ ಕನ್ನಡ ಸಿನಿಮಾ ಪೈರಸಿ ಆಗಿರುವುದು ಚಿತ್ರರಂಗಕ್ಕೆ ತಲೆನೋವಾಗಿದೆ. ಯುವ ಸಿನಿಮಾಸ್ ಹೆಸರಲ್ಲಿ 20 ಕ್ಕೂ ಹೆಚ್ಚು ಸಿನಿಮಾಗಳ ಪೈರಸಿ ಆಗಿದೆ.

ಥೇಟರಲ್ಲೇ ಸಿನಿಮಾ ನೋಡ್ಬೇಕು ಅಂತಿದ್ದಾರೆ ಅಮ್ಮ: ಕಿಚ್ಚ ಜೊತೆ ಮಾತುಕತೆ

ಕಳೆದ ವಾರ ರಿಲೀಸ್ ಆದ ನಿನ್ನ ಸನಿಹಕೆ ಸಿನಿಮಾ ಕೂಡ ಪೈರಸಿ ಮಾಡಿದ್ದಾರೆ. ಕನ್ನಡದ ನಿನ್ನ ಸನಿಹಕೆ, ಯೋಗಿ ಅಭಿನಯದ ಲಂಕೆ, ಅಜಯ್ ರಾವ್ ನಟನೆಯ ಕೃಷ್ಣ ಟಾಕೀಸ್, ಚೇತನ್ ಚಂದ್ರ ನಟನೆಯ ಶಾರ್ದೂಲ ಸಿನಿಮಾ ಸೇರಿದಂತೆ ಒಟ್ಟು 20 ಸಿನಿಮಾಗಳು ಪೈರೆಸಿ ಆಗಿವೆ.

ಪೈರಸಿ ಗ್ಯಾಂಗ್ ವಿರುದ್ಧ ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಪೈರಸಿ ಮಾಡಿ ಅಪ್ಲೋಡ್ ಮಾಡಿರೋ ಯುವ ಮೂವೀಸ್ ವಿರುದ್ದ ಕನ್ನಡ ನಿರ್ಮಾಪಕರು ದೂರು ಸಲ್ಲಿಸಿದ್ದಾರೆ.

ಜಗಳ ಮಾಡ್ತೀನಿ, ಉಪ್ಪಿ ಜೊತೆ ಮಾತ್ರ ಇಲ್ಲ, ಲವ್ ಯೂ ಉಪ್ಪಿ ಎಂದ ಶಿವಣ್ಣ

ಶಾರ್ದೂಲ ಸಿನಿಮಾ ನಿರ್ಮಾಪಕ ರೋಹಿತ್ ಅವರು ದೂರು ಸಲ್ಲಿಸಿದ್ದು ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಎಲ್ಲ ಬೆಳವಣಿಗೆ ಮಧ್ಯೆ ಅ.14ರಂದು ಸ್ಟಾರ ನಟರ ಸಿನಿಮಾಗಳು ಬಿಡುಗಡೆಯಾಗಲಿವೆ. ಪೈರೆಸಿ ಕಾಟಕ್ಕೆ ಬಲಿಯಾಗುತ್ತವ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಎಂಬ ಆತಂಕ ಚಿತ್ರರಂಗದ್ದು.

ನಾಳೆ ಕನ್ನಡದ ಸಲಗ, ಹಾಗು ಕೋಟಿಗೊಬ್ಬ-3 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಪೈರೆಸಿ ತಡೆಯುವಂತೆ‌ ಗೃಹಸಚಿವರಿಗೆ ಮನವಿ ಮಾಡಿರೋ ನಿರ್ಮಾಪಕ ಸೂರಪ್ಪ ಬಾಬು ಸಿಸಿಬಿ ಕಮಿಷನರ್‌ಗೂ ಮನವಿ ಮಾಡಿದ್ದಾರೆ ಪೈರಸಿ ತಡೆಯುವಂತೆ ಮನವಿ ಮಾಡಿದ್ದಾರೆ.

ಸಲಗ ಚಿತ್ರತಂಡದಿಂದಲೂ ಪೈರೆಸಿ ವಿರುದ್ಧ ದೂರು ನೀಡಿದ್ದಾರೆ. ಆದರೂ ಸಿನಿಮಾಗಳು ಪೈರೆಸಿ ಆಗುತ್ತಿರೋದು ಕೋಟಿಗೊಬ್ಬ 3 ಹಾಗು ಸಲಗ ಚಿತ್ರತಂಡಕ್ಕೆ‌ ತಲೆನೋವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

YASH: 'ವಿಷಕಾರಿ' ಚಿತ್ರದಲ್ಲಿ ತಮ್ಮ ಇಮೇಜನ್ನೇ ಪಣಕ್ಕಿಟ್ಟ ಯಶ್..? ಕಾರಿನೊಳಗಿನ 'ಆ' ದೃಶ್ಯಕ್ಕೆ ಎದ್ದಿದೆ ಅಪಸ್ವರ..!
ರಿಷಬ್ ಶೆಟ್ಟಿ 'ಕಾಂತಾರ-1' ಆ ಕಪ್ಪು ಸುಂದರಿಯನ್ನು ಕನ್ನಡ ಮಣ್ಣಿಗೆ ತರುತ್ತಾ? ನನಸಾಗುತ್ತಾ ಹೊಂಬಾಳೆ ಕಸನು..?