ಬಘೀರ ಟ್ರೈಲರ್ ನೋಡಿದ್ರೆ ಪಕ್ಕಾ ಮಾಸ್ ಅಂತನ್ನಿಸುತ್ತೆ. ಆದ್ರೆ ಬಘೀರ ಮಾಸ್ ಜೊತೆ ಪ್ರೇಮ್ ಕಹಾನಿಗೂ ಹೇಳಿ ಮಾಡಿಸಿದ ಸಿನಿಮಾ ಅಂತ ಈಗ ರಿಲೀಸ್ ಆಗಿರೋ ಹಾಡು ಸಾರುತ್ತಿದೆ. ಕ್ಯೂಟ್ ಲವ್ ಸ್ಟೋರಿ ಕೂಡ ಇದ್ದು, ನಟಿ ರುಕ್ಮಿಣಿ ವಸಂತ-ಶ್ರೀಮುರಳಿ..
ಶ್ರೀಮುರಳಿ (Sri Murali) ಹಾಗೂ ರುಕ್ಮಿಣಿ ವಸಂತ್ (Rukmini Vasanth) ಜೋಡಿಯ ಸಿನಿಮಾ ಬಘೀರ. ಇದು ಪಕ್ಕಾ ಮಾಸ್ ಮಸಾಲ ಅಂತ ಟ್ರೈಲರ್ ನೋಡಿದವರು ಹೇಳುತ್ತಾರೆ. ಬಘೀರನ (Bagheera) ಟ್ರೈಲರ್ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ. ಆದ್ರೆ ಹೊಸ ವಿಷ್ಯಾ ಏನಪ್ಪ ಅಂದ್ರೆ ಬಘೀರನಲ್ಲಿ ಕ್ಯೂಟ್ ಲವ್ ಸ್ಟೋರಿ ಕೂಡ ಇದೆ. ಆ ಪ್ರೇಮ್ ಕಹಾನಿಯಲ್ಲಿ ಶ್ರೀಮುರಳಿ ರುಕ್ಮಿಣಿ ವಸಂತಾ ಸಿಕ್ಕಿಬಿದ್ದಿದ್ದಾರೆ.
ಬಘೀರ.. ಸ್ಯಾಂಡಲ್ವುಡ್ ಟಾಲಿವುಡ್ನಲ್ಲಿ ಭಾರಿ ಟಾಕ್ ಎಬ್ಬಿಸಿರೋ ಸಿನಿಮಾ. ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಂಬಾಳೆ ಪ್ರೊಡಕ್ಷನ್ ಸೇರಿ ಮೂರು ವರ್ಷದಿಂದ ಸಿದ್ಧಪಡಿಸಿರೋ ಚಿತ್ರ. ಯಶ್ ಜೊತೆ ಲಕ್ಕಿ ಸಿನಿಮಾ ಮಾಡಿ ಸ್ಟಾರ್ ಡೈರೆಕ್ಟರ್ ಆದ ಡಾಕ್ಟರ್ ಸೂರಿ ನಿರ್ದೇಶನದ ಸಿನಿಮಾ. ಈ ಚಿತ್ರದ ಟ್ರೈಲರ್ ಬಂದಿದ್ದೇ ಬಂದಿದ್ದು, ಬಘೀರ ಭರ್ಜರಿಯಾಗಿದ್ದಾನೆ ಅಂತ ಎಲ್ಲರೂ ಮಾತಾಡೋಕೆ ಶುರು ಮಾಡಿದ್ದಾರೆ. ಈಗ ಈ ಭರ್ಜರಿ ಬಘೀರನ ಹೊಸ ಹಾಡು ಬಂದಿದೆ.
undefined
ಕೆಜಿಎಫ್ ಹೆಸರು ಹೇಳಿ ಪ್ರಚಾರ ಮಾಡ್ತಿದ್ಯಾ ಪುಷ್ಪ-2 ತಂಡ: ಯಶ್ ಮೇಲೆ ಹೊಟ್ಟೆ ಉರಿನಾ?
ಬಘೀರ ಟ್ರೈಲರ್ ನೋಡಿದ್ರೆ ಪಕ್ಕಾ ಮಾಸ್ ಸಿನಿಮಾ ಮಾಸ್ ಪ್ರೀಯರಿಗೆ ಹಬ್ಬ ಅಂತನ್ನಿಸುತ್ತೆ. ಆದ್ರೆ ಬಘೀರ ಮಾಸ್ ಜೊತೆ ಪ್ರೇಮ್ ಕಹಾನಿಗೂ ಹೇಳಿ ಮಾಡಿಸಿದ ಸಿನಿಮಾ ಅಂತ ಈಗ ರಿಲೀಸ್ ಆಗಿರೋ ಹಾಡು ಸಾರುತ್ತಿದೆ. ಬಘೀರನಲ್ಲಿ ಕ್ಯೂಟ್ ಲವ್ ಸ್ಟೋರಿ ಕೂಡ ಇದ್ದು, ನಟಿ ರುಕ್ಮಿಣಿ ವಸಂತ-ಶ್ರೀಮುರಳಿ ಮೌನ ಪ್ರೀತಿಯ ಮೋಡಿ ಮಾಡಿದ್ದಾರೆ. ಪ್ರಮೋದ್ ಮರವಂತೆ ಬರೆದಿರೋ ಈ ಹಾಡಿಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಮಾಡಿದ್ದಾರೆ. ಅಕ್ಟೋಬರ್ 31ಕ್ಕೆ ಬಘೀರ ಸಿನಿಮಾ ತೆರೆ ಮೇಲೆ ತೆರೆದುಕೊಳ್ಳುತ್ತಿದೆ.
ಉಗ್ರಂ ಬಳಿಕ ನಟ ಶ್ರೀ ಮುರಳಿ ಮತ್ತೆ ಮಿಂಚಿದ್ದು 'ಮಫ್ತಿ' ಸಿನಿಮಾದಲ್ಲಿ. ಅದರಲ್ಲಿ ನಟ ಶಿವರಾಜ್‌ಕುಮಾರ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ, ಶ್ರೀ ಮುರಳಿ ಅವರಿಗೆ ಅಗ್ನಿ ಪರೀಕ್ಷೆ ಕಾಲ ಎನ್ನಬಹುದು. ಕಾರಣ, ನಟ ಶ್ರೀ ಮುರಳಿ ಅವರು ಬಘೀರ ಚಿತ್ರಕ್ಕೆ ಬರೋಬ್ಬರಿ ಮೂರು ವರ್ಷ ವ್ಯಯಿಸಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಬಘೀರನಿಗಾಗಿ 'ಭಗೀರಥ' ಪ್ರಯತ್ನ ಎಂಬಂತೆ ಬೇರೆ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಪ್ರಶಾಂತ್ ನೀಲ್ ಕಥೆ ಮೇಲೆ ನಂಬಿಕೆಯಿಟ್ಟು ನಟ ಶ್ರೀ ಮುರಳಿ ಸಕಲವನ್ನೂ ಬಘೀರನಿಗೆ ಒಪ್ಪಿಸಿದ್ದಾರೆ.
'ಕಲಾಸಿಪಾಳ್ಯ' ಡೈರೆಕ್ಟರ್ ಹೀಗಂದ್ರು: ಎಲ್ಲರ ಮನೆ ದೋಸೆನೂ ತೂತೇರಿ, ಯಾಕೆ ಇದೆಲ್ಲಾ ಬೇಕು?
ಇದೀಗ ಬಘೀರ ಸಿನಿಮಾ ತೆರೆ ಮೇಲೆ ಬರುವ ಕಾಲ ಸನ್ನಿಹತವಾಗಿದೆ. ಮುಂದಿನ ವಾರ, ಅಂದರೆ ದೀಪಾವಳಿಗೆ (31 ಅಕ್ಟೋಬರ್ 2024) ಈ ಚಿತ್ರವು ತೆರೆ ಕಾಣಲಿದ್ದು, ಒಂದು ವಾರದಲ್ಲು ಬಘೀರನ ಭವಿಷ್ಯ ನಿರ್ಧಾರವಾಗಲಿದೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಟಿ ರುಕ್ಮಿಣಿ ವಸಂತ್ ಅವರಿಗೂ ಈ ಚಿತ್ರದ ಗೆಲವುದು ತುಂಬಾ ಮುಖ್ಯವಾಗಿದೆ. ಶ್ರೀ ಮುರಳಿ ಹಾಗು ರುಕ್ಮಿಣಿ ವಸಂತ್ ಅವರಿಬ್ಬರ ಅಭಿಮಾನಿಗಳು ಬಘೀರ ಚಿತ್ರದ ಗೆಲುವಿಗಾಗಿ ಪ್ತಾರ್ಥಿಸುತ್ತಿದ್ದಾರೆ. ಏನಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಿಬೇಕಿದೆ!