ಕೆಜಿಎಫ್ ಹೆಸರು ಹೇಳಿ ಪ್ರಚಾರ ಮಾಡ್ತಿದ್ಯಾ ಪುಷ್ಪ-2 ತಂಡ: ಯಶ್ ಮೇಲೆ ಹೊಟ್ಟೆ ಉರಿನಾ?

By Shriram BhatFirst Published Oct 26, 2024, 11:32 AM IST
Highlights

ಕೆಜಿಎಫ್ ಬಂದಾಗ ಇಡೀ ಚಿತ್ರರಂಗವೇ ದಂಗಾಗಿತ್ತು. ಇಂದಿಗೂ ಕೆಜಿಎಫ್​​ ತರ ಸಿನಿಮಾ ಮಾಡಬೇಕು ಅಂತ ಪ್ರಯತ್ನಗಳು ನಡೀತಾನೆ ಇದೆ. ಇದರ ಮಧ್ಯೆ ಕೆಜಿಎಪ್​ಅನ್ನ ಹೀಯಾಳಿಸಿದ್ದು, ಆಡಿಕೊಂಡಿದ್ದು ಮಾತ್ರ ಪಕ್ಕದ ಆಂಧ್ರ ಸಿನಿ ಮೇಕರ್ಸ್​..

ಅದ್ಯಾಕೋ ಗೊತ್ತಿಲ್ಲ. ಟಾಲಿವುಡ್​ ಪುಷ್ಪರಾಜ್​​​ಗೆ ನಮ್ ಕೆಜಿಎಫ್​ ಮೇಲೇನೆ ಕಣ್ಣು. ಅದರಲ್ಲೂ ಕೆಜಿಎಫ್​ನ ರಾಕಿ ಅಂದ್ರೆ ಉರಿ ಉರಿ. ಹಿಂದೊಮ್ಮೆ ಕೆಜಿಎಫ್ ಗಿಂತ ಹತ್ತು ಪಟ್ಟು ಬೆಟರ್ ಪುಷ್ಪ ಸಿನಿಮಾ ಅಂತ ಹೇಳಿ ಮುಖಕ್ಕೆ ಕ್ಯಾಕರಿಸಿ ಉಗಿಸಿಕೊಂಡಿದ್ದ ಪುಷ್ಪ ತಂಡ ಈಗ ಮತ್ತೊಂದು ಹೊಸ ಖ್ಯಾತೆ ತೆಗೆದಿದೆ. ಆ ಕ್ಯಾತೆ ಏನು ಅಂತ ನೋಡಿದ್ರೆ ನೀವು ಅದಿನ್ನೆಲ್ಲೆಲ್ಲಿ ನಗುತ್ತಿರೋ ಗೊತ್ತಿಲ್ಲ. ಹಾಗಾದ್ರೆ ಏನದು.. ಜೆಸ್ಟ್ ಹ್ಯಾವ್ ಅ ಲುಕ್...​​​​

ಕನ್ನಡಿಗರು ವಿಶಾಲ ಹೃದಯದವರು. ಪರಭಾಷಾ ಸಿನಿಮಾಗಳನ್ನ ಮೆಚ್ಚಿ ಅಪ್ಪಿ ಅವರು ಕೇಳಿದಷ್ಟು ದುಡ್ಡು ಕೊಟ್ಟು ನೋಡುವವರು. ಹೀಗಂತ ನಾವ್ ಹೇಳ್ತಿಲ್ಲ. ಪರಭಾಷಾ ಸಿನಿಮಾ ಬಂದಾಗ ಆ ಚಿತ್ರದ ಟಿಕೆಟ್​ಗೆ ಕೊಡೋ ದುಡ್ಡ ನೋಡಿ ಕೆಲ ಅಪ್ಪಟ ಕನ್ನಡಿಗರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತಾರೆ. ಅವರ ಪೋಸ್ಟ್ ಏನು ಸುಳ್ಳಲ್ಲ ಬಿಡಿ. ಅದೇ ನಂಬಿಕೆ ಮೇಲೆ ಟಾಲಿವುಡ್​ನ ಪುಷ್ಪ ಕೂಡ ಕನ್ನಡ ಬಾಕ್ಸಾಫೀಸ್​ನ ಕಿಂಗ್ ಆಗುತ್ತೇನೆ ಅಂತ ನಂಬಿ ಕೂತಂತಿದೆ.  ಅದಕ್ಕೆ ಕಾರಣ ಕರ್ನಾಟಕದಲ್ಲಿ ನಾವು ಕೆಜಿಎಫ್​ ದಾಖಲೆಯನ್ನ ಮುರಿಯುತ್ತೇನೆ ಅಂದಿರೋ ಮಾತು..

Latest Videos

ಕರ್ನಾಟಕದಲ್ಲಿ 'KGF-2' ರೆಕಾರ್ಡ್ ಮುರಿತ್ತೀವಿ ಅಂತ ಮತ್ತೆ ಕೆಜಿಎಫ್​ ವಿರುದ್ಧ ಸಮರಕ್ಕೆ ನಿಂತ ಪುಷ್ಪ-2: ಹೌದು, ಪುಷ್ಪ2 ಡಿಸೆಂಬರ್​​ 5ಕ್ಕೆ ವರ್ಲ್ಡ್​ ವೈಡ್​ ರಿಲೀಸ್ ಆಗ್ತಿದೆ. ಈ ಸಿನಿಮಾ ಬ್ಯುಸಿನೆಸ್​ ಮಾರ್ಕೆಟ್​ ಮೇಲೆ ಕಣ್ಣಿಟ್ಟಿರೋದು ಕರ್ನಾಟಕದ ಮೇಲೆ. ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿರೋ ಲಕ್ಷ್ಮಿಕಾಂತ್ ರೆಡ್ಡಿ, ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈವರೆಗೆ ಕರ್ನಾಟಕದಲ್ಲಿ 'KGF-2' ದೊಡ್ಡದಾಗಿ ಬಿಡುಗಡೆಯಾಗಿ ದಾಖಲೆ ಬರೆದಿದೆ. 'ಪುಷ್ಪ-2' ಮೂಲಕ ಅದನ್ನು ಮೀರಿಸುತ್ತೇವೆ ಎಂದು ಹೇಳಿದ್ದಾರೆ. 

'ಮತ್ತಣ್ಣನ ಮಗ'ನಿಗೆ ಮುತ್ತುರಾಜ್ ಮಗ ಶಿವರಾಜ್‌ಕುಮಾರ್ ಬೆಂಬಲ; ಗೆಲ್ತಾರಾ ಪ್ರಣಂ ದೇವರಾಜ್ ?

ಲಕ್ಷ್ಮಿಕಾಂತ್ ರೆಡ್ಡಿ, ಪುಷ್ಪ2 ವಿತರಕ ಪುಷ್ಪ2 ವಿತರಕರ ಹೇಳಿಕೆಗೆ ಕನ್ನಡಿಗರ ಆಕ್ರೋಶ: ಈವರೆಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಬ್ಯುಸಿನೆಸ್ ಅಂದ್ರೆ 90 ಕೋಟಿ. 'KGF-2' ಸುಮಾರು 350 ಸಿಂಗಲ್ ಸ್ಕ್ರೀನ್‌ ಹಾಗೂ 80 ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಆಗಿತ್ತು. 'ಪುಷ್ಪ-2' ಒಟ್ಟು 500 ಸ್ಕ್ರೀನ್‌ ಹಾಕಬೇಕು ಅನ್ನೋದು ಪುಷ್ಪ2 ವಿತರಕರ ಪ್ಲಾನ್. ಕಂಡಿತ ಅದನ್ನು ಸಾಧಿಸಿ ತೋರಿಸುತ್ತೇವೆ ಅಂತ ಲಕ್ಷ್ಮಿಕಾಂತ್ ರೆಡ್ಡಿ ಹೇಳಿದ್ದಾರೆ. ಇದಕ್ಕೆ ಕನ್ನಡಿಗರು ಸೋಷಿಯಲ್​​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಜಿಎಫ್ ಹೆಸರು ಹೇಳಿ ಪ್ರಚಾರ ಮಾಡ್ತಿದ್ಯಾ ಪುಷ್ಪ ತಂಡ.? ಕೆಜಿಎಫ್ ಸಿನಿಮಾ ಸ್ಯಾಂಡಲ್​ವುಡ್​ನ ಪ್ರೈಡ್.. 1150 ಕೋಟಿ ಕಲೆಕ್ಷನ್ ಮಾಡಿದ ಕನ್ನಡದ ಸಿನಿಮಾ. ಕೆಜಿಎಫ್ ಬಂದಾಗ ಇಡೀ ಚಿತ್ರರಂಗವೇ ದಂಗಾಗಿತ್ತು. ಇಂದಿಗೂ ಕೆಜಿಎಫ್​​ ತರ ಸಿನಿಮಾ ಮಾಡಬೇಕು ಅಂತ ಪ್ರಯತ್ನಗಳು ನಡೀತಾನೆ ಇದೆ. ಇದರ ಮಧ್ಯೆ ಕೆಜಿಎಪ್​ಅನ್ನ ಹೀಯಾಳಿಸಿದ್ದು, ಆಡಿಕೊಂಡಿದ್ದು ಮಾತ್ರ ಪಕ್ಕದ ಆಂಧ್ರ ಸಿನಿ ಮೇಕರ್ಸ್​.. 

'ಕಲಾಸಿಪಾಳ್ಯ' ಡೈರೆಕ್ಟರ್‌ ಹೀಗಂದ್ರು: ಎಲ್ಲರ ಮನೆ ದೋಸೆನೂ ತೂತೇರಿ, ಯಾಕೆ ಇದೆಲ್ಲಾ ಬೇಕು?

ಕೆಜಿಎಫ್​​ ಏನ್ರಿ ಸಿನಿಮಾ.. ನಮ್ ಪುಷ್ಪ ಬರುತ್ತೆ ನೋಡಿ ಕೆಜಿಎಫ್​​ನ ಎಲ್ಲಾ ದಾಖಲೆ ಉಡೀಸ್ ಮಾಡುತ್ತೆ ಅಂತ ಉಚ್ಛರಿಸಿದ್ರು. ಇದು ಅಂದು ಕರ್ನಾಕಟದಲ್ಲಿ ಪುಷ್ಪ ಪ್ರಚಾರಕ್ಕೆ ವೇಧಿಕೆ ಮಾಡಿತ್ತು, ಈಗ್ಲೂ ಅದೇ ಸ್ಟ್ರ್ಯಾಟರ್ಜಿ ಇಟ್ಟುಕೊಂಡು ಕೆಜಿಎಫ್​​ಗೆ ಸವಾಲ್ ಎನ್ನುತ್ತಾ ಪುಷ್ಪ2 ಪ್ರಚಾರ ಮಾಡೋ ವಿಚಾರ ಮಾಡಿದಂತೆ ಕಾಣುತ್ತಿದೆ ಪುಷ್ಪ2 ತಂಡ.  

click me!